Home
ಸುದ್ದಿಜಾಲ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಬುಕ್ ಗೋ ಮತ್ತು ಬುಕ್ ಗೋ 5G ಲ್ಯಾಪ್‌ಟಾಪ್‌ ಬಿಡುಗಡೆ!

ಜನಪ್ರಿಯ ಸ್ಯಾಮ್‌ಸಂಗ್‌ ಕಂಪೆನಿ ಟೆಕ್‌ ವಲಯದ ದೈತ್ಯ ಎನಿಸಿಕೊಂಡಿದೆ. ಸ್ಮಾರ್ಟ್‌ಫೋನ್‌ ಮಾತ್ರವಲ್ಲದೆ, ಸ್ಮಾರ್ಟ್‌ಟಿವಿ, ಲ್ಯಾಪ್‌ಟಾಪ್‌, ಸೇರಿದಂತೆ ಹಲವು ವಲಯಗಳಲ್ಲಿ ತನ್ನ ಪ್ರಸಿದ್ಧಿಯನ್ನು ಸಾಧಿಸಿದೆ. ಸದ್ಯ ಇದೀಗ ಹೊಸ ಸ್ಯಾಮ್‌ಸಂಗ್ ಗ್ಯಾಲಕ್ಸಿ ಬುಕ್ ಗೋ ಮತ್ತು ಗ್ಯಾಲಕ್ಸಿ ಬುಕ್ ಗೋ 5G ಲ್ಯಾಪ್‌ಟಾಪ್‌ಗಳನ್ನು ಲಾಂಚ್‌ ಮಾಡಿದೆ. ಈ ಲ್ಯಾಪ್‌ಟಾಪ್‌ಗಳು ಆಲ್‌ವೇಸ್‌ ಆನ್‌, ಆಲ್‌ವೇಸ್‌ ಕನೆಕ್ಟೆಡ್‌ ಮಾದರಿಯ ಲ್ಯಾಪ್‌ಟಾಪ್‌ಗಳಾಗಿವೆ.

ಸ್ಯಾಮ್‌ಸಂಗ್‌

ಹೌದು, ಸ್ಯಾಮ್‌ಸಂಗ್‌ ಸಂಸ್ಥೆ ಹೊಸ ಸ್ಯಾಮ್‌ಸಂಗ್ ಗ್ಯಾಲಕ್ಸಿ ಬುಕ್ ಗೋ ಮತ್ತು ಗ್ಯಾಲಕ್ಸಿ ಬುಕ್ ಗೋ 5G ಲ್ಯಾಪ್‌ಟಾಪ್‌ಗಳನ್ನು ಅನಾರಣಗೊಳಿಸಿದೆ. ಈ ಹೊಸ ಲ್ಯಾಪ್‌ಟಾಪ್‌ಗಳು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ SoC ಪ್ರೊಸೆಸರ್‌ ಹೊಂದಿದ್ದು, ಮೈಕ್ರೋಸಾಫ್ಟ್ ವಿಂಡೋಸ್ 10 ನಲ್ಲಿ ಕಾರ್ಯನಿರ್ವಹಿಸುತ್ತವೆ. ಅಲ್ಲದೆ ಸ್ಯಾಮ್‌ಸಂಗ್ ಗ್ಯಾಲಕ್ಸಿ ಬುಕ್ ಗೋ ಮತ್ತು ಗ್ಯಾಲಕ್ಸಿ ಬುಕ್ ಗೋ 5G ಸಹ 180 ಡಿಗ್ರಿ ಮಡಿಸುವ ಹಿಂಜ್ ಹೊಂದಿವೆ. ಹಾಗಾದ್ರೆ ಈ ಲ್ಯಾಪ್‌ಟಾಪ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸ್ಯಾಮ್‌ಸಂಗ್

ಸ್ಯಾಮ್‌ಸಂಗ್‌ನ ಸ್ಯಾಮ್‌ಸಂಗ್ ಗ್ಯಾಲಕ್ಸಿ ಬುಕ್ ಗೋ ಮತ್ತು ಗ್ಯಾಲಕ್ಸಿ ಬುಕ್ ಗೋ 5G ಲ್ಯಾಪ್‌ಟಾಪ್‌ಗಳಲ್ಲಿ ಡಾಲ್ಬಿ ಅಟ್ಮೋಸ್ ಬೆಂಬಲ ಮತ್ತು ಮೈಕ್ರೋಸಾಫ್ಟ್ ಯುವರ್ ಫೋನ್ ಅಪ್ಲಿಕೇಶನ್ ಅನ್ನು ಮೊದಲೇ ಲೋಡ್ ಮಾಡಿದೆ. ಈ ಹೊಸ ಲ್ಯಾಪ್‌ಟಾಪ್‌ಗಳು ಜನಪ್ರಿಯ Chromebooks ನೊಂದಿಗೆ ಸ್ಪರ್ಧಿಸಲು ವಿನ್ಯಾಸಗೊಳಿಸಲಾಗಿದೆ. ಅಲ್ಲದೆ ತಮ್ಮ ದೂರಸ್ಥ ಕೆಲಸ ಮತ್ತು ಅಧ್ಯಯನದ ಅವಶ್ಯಕತೆಗಳನ್ನು ಪೂರೈಸಲು ಕಂಪ್ಯೂಟರ್ ಅನ್ನು ಹುಡುಕುವ ಜನರನ್ನು ಗುರಿಯಾಗಿರಿಸಿಕೊಂಡು ರೂಪಿಸಲಾಗಿದೆ.

ಸ್ಯಾಮ್‌ಸಂಗ್‌

ಇನ್ನು ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಬುಕ್ ಗೋ ಮತ್ತು ಗ್ಯಾಲಕ್ಸಿ ಬುಕ್ ಗೋ 5G ಎರಡೂ ಕೂಡ ಮಿಲಿಟರಿ ದರ್ಜೆಯ, ಎಂಐಎಲ್-ಎಸ್ಟಿಡಿ -810 ಜಿ ಪರೀಕ್ಷೆಗಳಲ್ಲಿ ಪಾಸ್‌ ಆಗಿವೆ ಎಂದು ಹೇಳಲಾಗಿದೆ. ಈ ಲ್ಯಾಪ್‌ಟಾಪ್‌ಗಳು 1,920x1,080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 14 ಇಂಚಿನ ಫುಲ್‌ ಹೆಚ್‌ಡಿ ಟಿಎಫ್‌ಟಿ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಸ್ಯಾಮ್‌ಸಂಗ್ ಗ್ಯಾಲಕ್ಸಿ ಬುಕ್ ಗೋ ಲ್ಯಾಪ್‌ಟಾಪ್‌ ಅನ್ನು ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 7C ಜನ್ 2 SoC ಪ್ರೊಸೆಸರ್‌ನಿಂದ ನಿಯಂತ್ರಿಸಲಾಗುತ್ತದೆ. ಇದು 4GB ಮತ್ತು 8GB RAM ಆಯ್ಕೆಗಳನ್ನು ಹೊಂದಿದೆ. ಜೊತೆಗೆ ಗ್ಯಾಲಕ್ಸಿ ಬುಕ್ ಗೋ 5G ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8CX ಜನ್ 2 5Gನಿಂದ ನಿಯಂತ್ರಸಲಾಗುತ್ತದೆ.

ಲ್ಯಾಪ್‌ಟಾಪ್‌ಗಳು

ಈ ಲ್ಯಾಪ್‌ಟಾಪ್‌ಗಳು 180 ಡಿಗ್ರಿ ಹಿಂಜ್ ಹೊಂದಿದ್ದು ಸ್ಲಿಮ್ ಬೆಜೆಲ್‌ಗಳೊಂದಿಗೆ ಬರುತ್ತವೆ. ಗ್ಯಾಲಕ್ಸಿ ಬುಕ್ ಗೋ-ಸರಣಿಯು ಮೈಕ್ರೋಸಾಫ್ಟ್ ನಿಮ್ಮ ಫೋನ್ ಅಪ್ಲಿಕೇಶನ್ ಅನ್ನು ಮೊದಲೇ ಸ್ಥಾಪಿಸಲಾಗಿದೆ. ಇದು ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಲ್ಯಾಪ್‌ಟಾಪ್‌ಗಳಿಗೆ ಸಿಂಕ್ ಮಾಡಲು ನಿಮಗೆ ಅನುಮತಿಸುತ್ತದೆ. ಕಂಪನಿಯು ಸ್ಯಾಮ್‌ಸಂಗ್ ಟಿವಿ ಪ್ಲಸ್ ಸೇವೆಯನ್ನು ಸಂಯೋಜಿಸಿದೆ, ಅದರ ಐಕಾನ್ ವಿಂಡೋಸ್ ಮೆನುವಿನಲ್ಲಿದೆ. ಇನ್ನು ಸ್ಯಾಮ್‌ಸಂಗ್ ಗ್ಯಾಲಕ್ಸಿ ಬುಕ್ ಗೋ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಎಲ್‌ಟಿಇ, ವೈ-ಫೈ, ಬ್ಲೂಟೂತ್ ವಿ 5.1, ಎರಡು ಯುಎಸ್‌ಬಿ ಟೈಪ್-ಸಿ ಪೋರ್ಟ್‌ಗಳು, ಯುಎಸ್‌ಬಿ 2.0 ಪೋರ್ಟ್ ಮತ್ತು 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಸೇರಿವೆ.

ಸ್ಯಾಮ್‌ಸಂಗ್

ಇನ್ನು ಸ್ಯಾಮ್‌ಸಂಗ್ ಗ್ಯಾಲಕ್ಸಿ ಬುಕ್ ಗೋ 720p ಎಚ್‌ಡಿ ವೆಬ್‌ಕ್ಯಾಮ್ ಮತ್ತು ಡಿಜಿಟಲ್ ಮೈಕ್ರೊಫೋನ್ ಹೊಂದಿದೆ. ಇದು 42.3Wh ಬ್ಯಾಟರಿಯೊಂದಿಗೆ ಬರುತ್ತದೆ, ಇದು 25W ಯುಎಸ್ಬಿ ಟೈಪ್-ಸಿ ಫಾಸ್ಟ್ ಚಾರ್ಜರ್ ಮೂಲಕ ವೇಗವಾಗಿ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಸದ್ಯ ವೈ-ಫೈ ಮಾತ್ರ ರೂಪಾಂತರಕ್ಕಾಗಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ಬುಕ್ ಗೋ ಬೆಲೆ $349 (ಸರಿಸುಮಾರು 25,500 ರೂ.) ನಿಂದ ಪ್ರಾರಂಭವಾಗುತ್ತದೆ. ಲ್ಯಾಪ್‌ಟಾಪ್‌ನ ಎಲ್‌ಟಿಇ ಆವೃತ್ತಿಯೂ ಸಹ ಇದೆ, ಅದು ಇನ್ನೂ ಅಧಿಕೃತ ಬೆಲೆಯನ್ನು ಸ್ವೀಕರಿಸಿಲ್ಲ. ಸ್ಯಾಮ್‌ಸಂಗ್ ಗ್ಯಾಲಕ್ಸಿ ಬುಕ್ ಗೋ ಜೂನ್‌ನಿಂದ ಆಯ್ದ ಮಾರುಕಟ್ಟೆಗಳಲ್ಲಿ ಮಾರಾಟವಾಗಲಿದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ ಬುಕ್ ಗೋ 5G ಯ ಬೆಲೆ ಮತ್ತು ಲಭ್ಯತೆಯ ವಿವರಗಳನ್ನು ಇನ್ನೂ ಪ್ರಕಟಿಸಲಾಗಿಲ್ಲ.

Best Mobiles in India

English summary
Samsung Galaxy Book Go and Galaxy Book Go 5G were unveiled on Thursday, June 3 as the company's ‘always-on, always-connected' laptops.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+