ಸ್ಯಾಮ್ ಸಂಗ್ ಗ್ಯಾಲೆಕ್ಸಿ C7 ಪ್ರೋ ಸ್ಮಾರ್ಟ್ ಫೋನ್ ಬೆಲೆಯಲ್ಲಿ ಭಾರೀ ಕಡಿತ..!
ಸೌಥ್ ಕೋರಿಯಾ ಮೂಲಕದ ಟೆಕ್ ದೈತ್ಯ, ಸ್ಯಾಮ್ ಸಂಗ್ ಮಾರುಕಟ್ಟೆಯಲ್ಲಿ ಕಳೆದ ವರ್ಷ ಲಾಂಚ್ ಮಾಡಿದ ಗ್ಯಾಲೆಕ್ಸಿ C7 ಪ್ರೋ ಸ್ಮಾರ್ಟ್ ಫೋನಿನ ಬೆಲೆಯಲ್ಲಿ ಭಾರೀ ಕಡಿತವನ್ನು ಮಾಡಿದೆ. ಅಮೆಜಾನ್ ನಲ್ಲಿ ಮಾತ್ರವೇ ಲಭ್ಯವಿದ್ದ ಗ್ಯಾಲೆಕ್ಸಿ C7 ಪ್ರೋ ಸ್ಮಾರ್ಟ್ ಫೋನ್ ರೂ.27990ಕ್ಕೆ ಮಾರಾಟವಾಗುತ್ತಿತ್ತು. ಸದ್ಯ ಈ ಸ್ಮಾರ್ಟ್ ಫೋನ್ ರೂ.21,990ಕ್ಕೆ ದೊರೆಯಲಿದೆ.

ಸ್ಯಾಮ್ ಸಂಗ್ ಗ್ಯಾಲೆಕ್ಸಿ C7 ಪ್ರೋ ಸ್ಮಾರ್ಟ್ ಫೋನ್ ಬೆಲೆಯಲ್ಲಿ ರೂ.6000 ಕಡಿತವನ್ನು ಮಾಡಲಾಗಿದೆ. ರೂ.21900ಕ್ಕೆ ಮಾರಾಟ ಮಾಡುತ್ತಿದೆ. ಇದೊಂದು ಮಧ್ಯಮ ಸರಣಿಯ ಸ್ಮಾರ್ಟ್ ಫೋನ್ ಆಗಿದ್ದು, ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿರುವ ಹಲವು ಸ್ಮಾರ್ಟ್ ಫೋನ್ ಗಳಿಗೆ ಸೆಡ್ಡು ಹೊಡೆಯಲಿದೆ ಎಂದು ಅಂದಾಜಿಸಲಾಗಿದೆ.
ಸ್ಯಾಮ್ ಸಂಗ್ ಗ್ಯಾಲೆಕ್ಸಿ C7 ಪ್ರೋ ಸ್ಮಾರ್ಟ್ ಫೋನ್ ವಿಶೇಷತೆ:
ಸ್ಯಾಮ್ ಸಂಗ್ ಗ್ಯಾಲೆಕ್ಸಿ C7 ಪ್ರೋ ಸ್ಮಾರ್ಟ್ ಫೋನಿನಲ್ಲಿ ಮೆಟಲ್ ಬಾಡಿಯನ್ನು ಕಾಣಬಹುದಾಗಿದ್ದು, 2.5D ಕರ್ವಡ್ ಗ್ಲಾಸ್ ವಿನ್ಯಾಸದೊಂದಿಗೆ 5.7 ಇಂಚಿನ ಡಿಸ್ ಪ್ಲೇಯನ್ನು ಇದರಲ್ಲಿ ಅಳವಡಿಸಲಾಗಿದೆ. ಅಲ್ಲದೇ ಇದು ಫುಲ್ ಹೆಚ್ ಡಿ ಗುಣಮಟ್ಟದಿಂದ ಕೂಡಿದೆ. ಸ್ಯಾಮ್ ಸಂಗ್ ಗ್ಯಾಲೆಕ್ಸಿ C7 ಸ್ಮಾರ್ಟ್ ಫೋನಿನಲ್ಲಿ ಸ್ನಾಪ್ ಡ್ರಾಗನ್ 626 ಆಕ್ಟಾ ಕೋರ್ ಪ್ರೋಸೆಸರ್ ನೊಂದಿಗೆ 4GB RAM ಮತ್ತು 64GB ಇಂಟರ್ನಲ್ ಮೆಮೊರಿಯನ್ನು ಕಾಣಬಹುದಾಗಿದೆ.
ಇದಲ್ಲದೇ ಮೆಮೊರಿ ಕಾರ್ಡ್ ಹಾಕಿಕೊಳ್ಳುವ ಮೂಲಕ 256GBವರೆಗೂ ಮೆಮೊರಿಯನ್ನು ವಿಸ್ತರಿಸಿಕೊಳ್ಳಬಹದಾಗಿದೆ. ಇದಲ್ಲದೇ ಸ್ಯಾಮ್ ಸಂಗ್ ಗ್ಯಾಲೆಕ್ಸಿ C7 ಹಿಂಭಾಗದಲ್ಲಿ 16 ಎಂಪಿ ಕ್ಯಾಮೆರಾವನ್ನು ನೀಡಲಾಗಿದ್ದು, LED ಫ್ಲಾಷ್ ಲೈಟ್ ಸಹ ದೆ. ಮುಂಭಾಗದಲ್ಲಿಯೂ 16 ಎಂಪಿ ಸೆಲ್ಪಿ ಕ್ಯಾಮೆರಾವನ್ನು ನೀಡಲಾಗಿದೆ.

ಆಂಡ್ರಾಯ್ಡ್ 6.0 ದಲ್ಲಿ ಕಾರ್ಯನಿರ್ವಹಿಸುವ ಸ್ಯಾಮ್ ಸಂಗ್ ಗ್ಯಾಲೆಕ್ಸಿ C7 ಪ್ರೊ ಸ್ಮಾರ್ಟ್ ಫೋನಿನಲ್ಲಿ 3300mAh ಬ್ಯಾಟರಿಯನ್ನು ಅಳವಡಿಸಲಾಗಿದೆ. ಮತ್ತು ಸ್ಯಾಮ್ ಸಂಗ್ ಪೇಯನ್ನು ಸಫೋರ್ಟ್ ಮಾಡಲಿದೆ. 4G LTE ಮತ್ತು VoLTE ಎರಡನ್ನು ಹೊಂದಿದೆ. ಅಲ್ಲದೇ USB ಟೈಪ್ C ಚಾರ್ಜಿಂಗ್ ಹೊಂದಿದೆ.


Click it and Unblock the Notifications








