ಮುಂಬರಲಿರುವ ಸ್ಯಾಮ್‌ಸಂಗ್ ಗ್ಯಾಲಕ್ಸಿ ಕೋರ್ 2 ಕುರಿತ ವದಂತಿ
ಗ್ಯಾಲಕ್ಸಿ ಕೋರ್ ಸ್ಮಾರ್ಟ್‌ಫೋನ್‌ಗಳನ್ನು ಈಗಾಗಲೇ ಲಾಂಚ್ ಮಾಡಿರುವ ಸೌತ್ ಕೊರಿಯಾದ ಸ್ಮಾರ್ಟ್‌ಫೋನ್ ದಿಗ್ಗಜ ಇನ್ನೊಂದು ಡಿವೈಸ್ ಅನ್ನು ಹೊರತರುವ ಹುನ್ನಾರದಲ್ಲಿದೆ. ಈ ಡಿವೈಸ್ ಕೂಡ ಒಂದೇ ರೀತಿಯ ಹೆಸರನ್ನು ಪಡೆದಿದೆ ಎಂಬುದು ಸುದ್ದಿ ಮೂಲಗಳು ತಿಳಿಸಿವೆ. ಇದರ ಮಾಡೆಲ್ ಹೆಸರು SM-G355H ಆಗಿದೆ.
ಹಿಂದಿನ ಗ್ಯಾಲಕ್ಸಿ ಕೋರ್ ಡಿವೈಸ್‌ಗಳಿಗೆ ಹೋಲಿಸಿದಾಗ ಇದರ ವೈಶಿಷ್ಟ್ಯಗಳು, ಅಂಶಗಳು ಎಲ್ಲಾ ಒಂದೇ ಆಗಿದ್ದು ಇದರ ಎಲ್‌ಟಿಇ ಸಂಪರ್ಕವು ಒಂದೇ ಒಂದು ಆಗಿದ್ದು ಉಳಿದವು 3 ಜಿ ಬೆಂಬಲದೊಂದಿಗೆ ಹೊರಬಂದವುಗಳಾಗಿವೆ.

ಈಗಾಗಲೇ ಇದರ ಚಿತ್ರವನ್ನು ಹೊರತಂದಿರುವ ರಶಿಯನ್ ವೆಬ್‌ಸೈಟ್ ಗ್ಯಾಲಕ್ಸಿ ಕೋರ್ 2 ಒಂದು ಮಧ್ಯಮ ಶ್ರೇಣಿಯ ಹ್ಯಾಂಡ್‌ಸೆಟ್ ಆಗಿದ್ದು ಡ್ಯುಯೆಲ್ ಸಿಮ್ ಬೆಂಬಲ ಇದಕ್ಕಿದೆ. 4.5-ಇಂಚಿನ WVGA ( 480 x 800 ಪಿಕ್ಸೆಲ್) ಡಿಸ್‌ಪ್ಲೇ ಕ್ವಾಡ್‌ಕೋರ್ ಚಿಪ್‌ಸೆಟ್ 1.2GHz ನೊಂದಿಗೆ ಅಳವಡಿಕೆಯಾಗಿದ್ದು 512MB ರ್‌ಯಾಮ್ ಇದರ ವಿಶೇಷತೆಯಾಗಿದೆ. ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್ ಕೂಡ ಈ ಫೋನ್‌ನಲ್ಲಿದೆ.
5- ಮೆಗಾಪಿಕ್ಸೆಲ್ ಕ್ಯಾಮೆರಾ ಎಲ್‌ಇಡಿ ಫ್ಲ್ಯಾಶ್ ಮತ್ತು ವೀಡಿಯೋ ರೆಕಾರ್ಡಿಂಗ್ ಸಾಮರ್ಥ್ಯ ಇದಕ್ಕಿದೆ. 4GB ಸಂಗ್ರಹಣೆ ಸಾಮರರ್ಥ್ಯ ಹೆಚ್ಚಿನ ಸ್ಮಾಮ್‌ಸಂಗ್ ಫೋನ್‌ಗಿದ್ದು ಮೈಕ್ರೋಕಾರ್ಡ್ ಬೆಂಬಲದೊಂದಿಗೆ ಇದರ ಮೆಮೊರಿಯನ್ನು ವಿಸ್ತರಿಸಬಹುದಾಗಿದೆ. The ಗ್ಯಾಲಕ್ಸಿ ಕೋರ್ 2 ರಷ್ಯಾದಲ್ಲಿ ಅಂದರೆ (ಭಾರತೀಯಕಾಲಮಾನ ಮೇ 20) ರಂದು ಬರುವ ನಿರೀಕ್ಷೆ ಇದೆ. ಇದರ ಅಂದಾಜು ಬೆಲೆ ರೂ 16,797 ಆಗಿದೆ.


Click it and Unblock the Notifications








