Home
ಸುದ್ದಿಜಾಲ

ಕೇವಲ 7,499ರೂ. ಬೆಲೆಯಲ್ಲಿ ಹೊಸ ಸ್ಮಾರ್ಟ್‌ಫೋನ್‌ ಪರಿಚಯಿಸಿದ ಸ್ಯಾಮ್‌ಸಂಗ್‌!

ಸ್ಯಾಮ್‌ಸಂಗ್‌ ಕಂಪೆನಿಯ ಹೊಸ ಗ್ಯಾಲಕ್ಸಿ F04 ಸ್ಮಾರ್ಟ್‌ಫೋನ್‌ ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆಯಾಗಿದೆ. ಈ ಸ್ಮಾರ್ಟ್‌ಫೋನ್‌ ಬಜೆಟ್‌ ಬೆಲೆಯನ್ನು ಹೊಂದಿದ್ದು, ಪ್ಲಿಪ್‌ಕಾರ್ಟ್‌ನಲ್ಲಿ ಅನಾವರಣಗೊಳಿಸಲಾಗಿದೆ. ಇನ್ನು ಈ ಗ್ಯಾಲಕ್ಸಿ F04 ಫೋನ್‌ ಮೀಡಿಯಾ ಟೆಕ್ P35 ಪ್ರೊಸೆಸರ್ ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಜೇಡ್ ಪರ್ಪಲ್ ಮತ್ತು ಓಪಲ್ ಗ್ರೀನ್ ಕಲರ್‌ ಆಯ್ಕೆಗಳಲ್ಲಿ ಬರಲಿದೆ. ಈ ಸ್ಮಾರ್ಟ್‌ಫೋನ್‌ 4GB RAM ಮತ್ತು 64GB ಇನ್‌ಬಿಲ್ಟ್‌ ಸ್ಟೋರೇಜ್ ವೇರಿಯೆಂಟ್‌ ಆಯ್ಕೆಯಲ್ಲಿ ಲಭ್ಯವಾಗಲಿದೆ.

ಸ್ಯಾಮ್‌ಸಂಗ್‌

ಹೌದು, ಸ್ಯಾಮ್‌ಸಂಗ್‌ ಗ್ಯಾಲಕ್ಸಿ F04 ಸ್ಮಾರ್ಟ್‌ಫೋನ್‌ ಭಾರತದಲ್ಲಿ ಅನಾವರಣಗೊಂಡಿದೆ. ಈ ಸ್ಮಾರ್ಟ್‌ಫೋನ್‌ ಲಾಂಚ್‌ ಆಫರ್‌ನಲ್ಲಿ ಕೇವಲ 7,499ರೂ. ಬೆಲೆಯಲ್ಲಿ ದೊರೆಯಲಿದೆ. ಆಫರ್‌ ಮುಗಿದ ನಂತರ ಈ ಸ್ಮಾರ್ಟ್‌ಫೋನ್‌ 9,499ರೂ ಬೆಲೆಯಲ್ಲಿ ಮಾರಾಟವಾಗಲಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಇದೇ ಜನವರಿ 12ರಿಂದ ಸೇಲ್‌ ಆಗಲಿದೆ. ಈ ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಒಳಗೊಂಡಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್‌ ಯಾವೆಲ್ಲಾ ಫೀಚರ್ಸ್‌ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ

ಸ್ಯಾಮ್‌ಸಂಗ್‌ ಗ್ಯಾಲಕ್ಸಿ F04 ಸ್ಮಾರ್ಟ್‌ಫೋನ್‌ 6.5 ಇಂಚಿನ HD+ ಇನ್ಫಿನಿಟಿ-ವಿ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 1560 × 720 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದಿದೆ. ಇನ್ನು ಡಿಸ್‌ಪ್ಲೇ ಹೈ ಡೆಫಿನಿಷನ್‌ ವ್ಯೂವಿಂಗ್‌ ಎಕ್ಸ್‌ಪಿರಿಯನ್ಸ್‌ ಅನ್ನು ನೀಡಲಿದೆ. ಇದು ವಾಟರ್‌ಡ್ರಾಪ್ ನಾಚ್ ವಿನ್ಯಾಸ ಮತ್ತು ಸ್ಲಿಮ್ ಬೆಜೆಲ್‌ಗಳೊಂದಿಗೆ ಪ್ಯಾಕ್ ಮಾಡಲ್ಪಟ್ಟಿದೆ.

ಪ್ರೊಸೆಸರ್‌ ಯಾವುದು?

ಪ್ರೊಸೆಸರ್‌ ಯಾವುದು?

ಸ್ಯಾಮ್‌ಸಂಗ್‌ ಗ್ಯಾಲಕ್ಸಿ F04 ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ P35 ಪ್ರೊಸೆಸರ್ ವೇಗವನ್ನು ಹೊಂದಿದೆ. ಇದು ಆಂಡ್ರಾಯ್ಡ್ 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಜೊತೆಗೆ 2 ವರ್ಷಗಳ ಓಎಸ್ ಅಪ್‌ಗ್ರೇಡ್ ಅನ್ನು ನೀಡುವುದಾಗಿ ಸ್ಯಾಮ್‌ಸಂಗ್‌ ಕಂಪೆನಿ ಭರವಸೆ ನೀಡಿದೆ. ಹಾಗೆಯೇ 4GB RAM ಮತ್ತು 64GB ಇಂಟರ್‌ ಸ್ಟೋರೇಜ್‌ ಅನ್ನು ಹೊಂದಿದೆ. ಇದಲ್ಲದೆ ವರ್ಚುವಲ್ RAM ಸಹಾಯದಿಂದ 8GB RAM ವರೆಗೆ ವಿಸ್ತರಿಸಬಹುದು. ಜೊತೆಗೆ ಮೆಮೊರಿ ಕಾರ್ಡ್‌ ಮೂಲಕ 1TB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.

ಕ್ಯಾಮೆರಾ ಸೆಟ್‌ಅಪ್‌ ಎಷ್ಟಿದೆ?

ಕ್ಯಾಮೆರಾ ಸೆಟ್‌ಅಪ್‌ ಎಷ್ಟಿದೆ?

ಸ್ಯಾಮ್‌ಸಂಗ್‌ ಗ್ಯಾಲಕ್ಸಿ F04 ಸ್ಮಾರ್ಟ್‌ಫೋನ್ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸೆಲ್‌ ಸೆನ್ಸಾರ್‌ ಹೊಂದಿದೆ. ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಇದಲ್ಲದೆ ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ 5 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. ಇನ್ನು ಹಿಂಭಾಗದ ಕ್ಯಾಮೆರಾ ಸಿಸ್ಟಮ್ ಅನ್ನು ಎಲ್ಇಡಿ ಫ್ಲ್ಯಾಷ್‌ನೊಂದಿಗೆ ಜೋಡಿಸಲಾಗಿದೆ.

ಬ್ಯಾಟರಿ ಮತ್ತು ಇತರೆ

ಬ್ಯಾಟರಿ ಮತ್ತು ಇತರೆ

ಸ್ಯಾಮ್‌ಸಂಗ್‌ ಗ್ಯಾಲಕ್ಸಿ F04 ಸ್ಮಾರ್ಟ್‌ಫೋನ್ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇದು ವೇಗದ ಚಾರ್ಜಿಂಗ್‌ ಬೆಂಬಲಿಸುವುದರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್‌, ವೈಫೈ, ಹಾಟ್‌ಸ್ಪಾಟ್‌, ಹೆಚ್‌ಡಿಎಂಐ ಪೋರ್ಟ್‌, ಹೆಡ್‌ಫೋನ್‌ ಜ್ಯಾಕ್‌ ಅನ್ನು ಬೆಂಬಲಿಸಲಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಸ್ಯಾಮ್‌ಸಂಗ್‌ ಗ್ಯಾಲಕ್ಸಿ F04 ಸ್ಮಾರ್ಟ್‌ಫೋನ್ ಲಾಂಚ್‌ ಆಫರ್‌ನಲ್ಲಿ 7,499 ರೂ.ಬೆಲೆಯಲ್ಲಿ ದೊರೆಯಲಿದೆ. ಆದರೆ ಈ ಲಾಂಚ್‌ ಆಫರ್‌ ಬೆಲೆಯು ಸೀಮಿತ ಅವಧಿಗೆ ಮಾತ್ರ ಮಾನ್ಯವಾಗಿರಲಿದೆ. ಲಾಂಚ್‌ ಆಫರ್ ಮುಗಿದ ನಂತರ ಇದರ ಬೆಲೆ 9,499ರೂ. ಆಗಿರಲಿದೆ. ಇನ್ನು ಈ ಫೋನ್‌ ಇದೇ ಜನವರಿ 12ರಿಂದ ಸೇಲ್‌ ಆಗಲಿದೆ. ಈ ಫೋನ್‌ ಜೇಡ್ ಪರ್ಪಲ್ ಮತ್ತು ಓಪಲ್ ಗ್ರೀನ್ ಕಲರ್‌ ಆಯ್ಕೆಗಳಲ್ಲಿ ಬರಲಿದೆ.

Best Mobiles in India

English summary
Samsung Galaxy F04 with MediaTek P35 processor launched in India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+