ಇಂದು ಸ್ಯಾಮ್‌ಸಂಗ್ ಗ್ಯಾಲಕ್ಸಿ F22 ಸ್ಮಾರ್ಟ್‌ಫೋನ್ ಫಸ್ಟ್ ಸೇಲ್!
ಸ್ಯಾಮ್‌ಸಂಗ್ ಕಂಪೆನಿ ಇತ್ತೀಚಿಗಷ್ಟೆ ಬಿಡುಗಡೆ ಮಾಡಿರುವ ಹೊಸ ಗ್ಯಾಲಕ್ಸಿ F22 ಸ್ಮಾರ್ಟ್‌ಫೋನ್ ಆಕರ್ಷಕ ಫೀಚರ್ಸ್‌ಗಳಿಂದ ಗ್ರಾಹಕರನ್ನು ಸೆಳೆದಿದೆ. ಈ ಸ್ಮಾರ್ಟ್‌ಫೋನ್ ಇಂದು(ಜುಲೈ 13) ಮಧ್ಯಾಹ್ನ 12 ಗಂಟೆಗೆ ಫ್ಲಿಪ್ಕಾರ್ಟ್ ಮತ್ತು ಸ್ಯಾಮ್‌ಸಂಗ್ ಇಂಡಿಯಾ ಆನ್‌ಲೈನ್ ಸ್ಟೋರ್ (ಸ್ಯಾಮ್‌ಸಂಗ್.ಕಾಮ್) ಮೂಲಕ ಮಾರಾಟವಾಗಲಿದೆ. ಇನ್ನು ಈ ಸ್ಮಾರ್ಟ್‌ಫೋನ್ ಆರಂಭಿಕ ವೇರಿಯೆಂಟ್ ಬೆಲೆ 12,499 ರೂ. ಆಗಿದೆ.

ಹೌದು, ಸ್ಯಾಮ್‌ಸಂಗ್ ಗ್ಯಾಲಕ್ಸಿ F22 ಇಂದು (ಜುಲೈ 13) ಮಧ್ಯಾಹ್ನ 12 ಗಂಟೆಗೆ ಮಂಗಳವಾರ ಭಾರತದಲ್ಲಿ ಮಾರಾಟಕ್ಕೆ ಸಿದ್ಧವಾಗಿದೆ. ಇನ್ನು ಈ ಹೊಸ ಸ್ಮಾರ್ಟ್‌ಫೋನ್ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದು 6,000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಡಿಸ್‌ಪ್ಲೇ ರಚನೆ
ಸ್ಯಾಮ್‌ಸಂಗ್ ಗ್ಯಾಲಕ್ಸಿ F22 ಸ್ಮಾರ್ಟ್‌ಫೋನ್ 700x1,600 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.4-ಇಂಚಿನ ಹೆಚ್‌ಡಿ + ಡಿಸ್‌ಪ್ಲೇಯನ್ನು ಹೊಂದಿದೆ. ಸ್ಯಾಮೋಲ್ಡ್ ಇನ್ಫಿನಿಟಿ-ಯು ಡಿಸ್‌ಪ್ಲೇ ಆಗಿದ್ದು, 90Hz ರಿಫ್ರೆಶ್ ರೇಟ್ ಅನ್ನು ಪಡೆದುಕೊಂಡಿದೆ.

ಪ್ರೊಸೆಸರ್
ಇದು ಮೀಡಿಯಾ ಟೆಕ್ ಹಿಲಿಯೊ G80 SoC ಪ್ರೊಸೆಸರ್ ಬಲವನ್ನು ಪಡೆದುಕೊಂಡಿದೆ. ಇದು ಆಂಡ್ರಾಯ್ಡ್ 11 ಆಧಾರಿತ ಒನ್ ಯುಐ 3.1 ನಲ್ಲಿ ಕಾರ್ಯನಿರ್ವಹಿಸುತ್ತದೆ. ಹಾಗೆಯೇ 6GB RAM ಮತ್ತು 128GB ಇಂಟರ್ ಸ್ಟೋರೇಜ್ ಅನ್ನು ಹೊಂದಿದೆ. ಇದಲ್ಲದೆ ಮೈಕ್ರೊ ಎಸ್‌ಡಿ ಕಾರ್ಡ್ ಸ್ಲಾಟ್ ಮೂಲಕ 1TB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.

ಕ್ಯಾಮೆರಾ ವಿಶೇಷ
ಇನ್ನು ಈ ಸ್ಮಾರ್ಟ್‌ಫೋನ್ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾ, ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಮತ್ತು ನಾಲ್ಕನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಅನ್ನು ಒಳಗೊಂಡಿದೆ. ಇದಲ್ಲದೆ 13 ಮೆಗಾಪಿಕ್ಸೆಲ್ ಸೆನ್ಸಾರ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

ಬ್ಯಾಟರಿ ಮತ್ತು ಇತರೆ
ಸ್ಯಾಮ್‌ಸಂಗ್ ಗ್ಯಾಲಕ್ಸಿ F22 ಸ್ಮಾರ್ಟ್‌ಫೋನ್ 6,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 25W ಫಾಸ್ಟ್ ಚಾರ್ಜಿಂಗ್ ಬೆಂಬಲಿಸಲಿದೆ. ಆದಾಗ್ಯೂ, ಸ್ಯಾಮ್‌ಸಂಗ್ ಬಾಕ್ಸ್ ಒಳಗೆ 15W ಚಾರ್ಜರ್ ಅನ್ನು ಬಂಡಲ್ ಮಾಡುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 4ಜಿ ಎಲ್ ಟಿಇ, ಬ್ಲೂಟೂತ್ ವಿ 5, ಎನ್ಎಫ್‌ಸಿ ಯನ್ನು ಹೊಂದಿದೆ. ಜೊತೆಗೆ ಸೈಡ್-ಮೌಂಟೆಡ್ ಫಿಂಗರ್ಪ್ರಿಂಟ್ ಸೆನ್ಸರ್ ಮತ್ತು ಫೇಸ್ ಅನ್ಲಾಕ್ ಬೆಂಬಲವಿದೆ. ಇದು ಸ್ಯಾಮ್‌ಸಂಗ್ ಪೇ ಮಿನಿ ಅನ್ನು ಬೆಂಬಲಿಸುತ್ತದೆ.

ಬೆಲೆ ಮತ್ತು ಲಭ್ಯತೆ
ಇನ್ನು ಭಾರತದಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ F22 ಸ್ಮಾರ್ಟ್‌ಫೋನ್ 4GB RAM + 64 GB ಶೇಖರಣಾ ರೂಪಾಂತರಕ್ಕೆ 12,499 ರೂ. ಮತ್ತು 6GB RAM + 128GB ಸ್ಟೋರೇಜ್ ಮಾದರಿಯ ಬೆಲೆ 14,999.ರೂ. ಆಗಿದೆ. ಇನ್ನು ಈ ಎರಡೂ ಆಯ್ಕೆಗಳು ಡೆನಿಮ್ ಬ್ಲ್ಯಾಕ್ ಮತ್ತು ಡೆನಿಮ್ ಬ್ಲೂ ಎಂಬ ಎರಡು ಬಣ್ಣಗಳಲ್ಲಿ ಬರುತ್ತವೆ. ಇನ್ನು ಈ ಸ್ಮಾರ್ಟ್‌ಫೋನ್ ಫ್ಲಿಪ್‌ಕಾರ್ಟ್‌ನಲ್ಲಿ ಪರಿಚಯಾತ್ಮಕ ಕೊಡುಗೆಗಳ ಭಾಗವಾಗಿ ಪ್ರಿಪೇಯ್ಡ್ ವಹಿವಾಟುಗಳಿಗೆ 1,000 ರಿಯಾಯಿತಿ ದೊರೆಯಲಿದೆ.


Click it and Unblock the Notifications








