ಭಾರತದಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ F23 5G ಸ್ಮಾರ್ಟ್‌ಫೋನ್ ಬಿಡುಗಡೆ! ವಿಶೇಷತೆ ಏನು?
ಸ್ಮಾರ್ಟ್‌ಫೋನ್ ದೈತ್ಯ ಸ್ಯಾಮ್‌ಸಂಗ್ ಕಂಪೆನಿ ತನ್ನ ವೈವಿಧ್ಯಮಯ ಸ್ಮಾರ್ಟ್‌ಫೋನ್‌ಗಳಿಗೆ ಹೆಸರುವಾಸಿಯಾಗಿದೆ. ಈಗಾಗಲೇ ಗ್ಯಾಲಕ್ಸಿ ಎಂ, ಗ್ಯಾಲಕ್ಸಿ ಎಫ್, ಗ್ಯಾಲಕ್ಸಿ ಎಸ್, ಗ್ಯಾಲಕ್ಸಿ ಎ ಸರಣಿಯಲ್ಲಿ ಅನೇಕ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡಿದೆ. ಸದ್ಯ ಇದೀಗ ತನ್ನ ಗ್ಯಾಲಕ್ಸಿ ಎಫ್ ಸಿರೀಸ್‌ನಲ್ಲಿ ಹೊಸ ಗ್ಯಾಲಕ್ಸಿ F23 5G ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿದೆ. ಇದು ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 750G SoC ಪ್ರೊಸೆಸರ್ ಹೊಂದಿದೆ.

ಹೌದು, ಸ್ಯಾಮ್‌ಸಂಗ್ ಕಂಪೆನಿ ಭಾರತದಲ್ಲಿ ಹೊಸ ಸ್ಯಾಮ್‌ಸಂಗ್ ಗ್ಯಾಲಕ್ಸಿ F23 5G ಫೋನ್ ಲಾಂಚ್ ಮಾಡಿದೆ. ಈ ಸ್ಮಾರ್ಟ್‌ಫೋನ್‌ನಲ್ಲಿ ಸೌಂಡ್ ಫೋಕಸ್ ಎಂಬ ಫೀಚರ್ಸ್ ಅನ್ನು ಫ್ರೀ ಲೋಡ್ ಮಾಡಲಾಗಿದೆ. ಇದು ಆಂಬಿಯೆಂಟ್ ನಾಯ್ಸ್ ಅನ್ನು ಕಡಿಮೆ ಮಾಡಲು ಮತ್ತು ಕರೆಗಳನ್ನು ಮಾಡುವಾಗ ವಾಯ್ಸ್ ಅನ್ನು ಆಂಪ್ಲಿಪೈ ಮಾಡಲು ಸಹಾಯ ಮಾಡುತ್ತದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನಿನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ
ಸ್ಯಾಮ್‌ಸಂಗ್ ಗ್ಯಾಲಕ್ಸಿ F23 5G ಸ್ಮಾರ್ಟ್‌ಫೋನ್ 6.6 ಇಂಚಿನ ಫುಲ್ ಹೆಚ್‌ಡಿ + ಇನ್ಫಿನಿಟಿ-ಯು ಡಿಸ್‌ಪ್ಲೇ ಹೊಂದಿದೆ. ಇನ್ನು ಈ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್ ಅನ್ನು ಒಳಗೊಂಡಿದೆ.

ಪ್ರೊಸೆಸರ್ ಯಾವುದು?
ಈ ಸ್ಮಾರ್ಟ್‌ಫೋನ್ ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 750G SoC ಪ್ರೊಸೆಸರ್ ಬಲವನ್ನು ಪಡೆದಿದೆ. ಇದು ಆಂಡ್ರಾಯ್ಡ್ 12 ನಲ್ಲಿ ಒಂದು UI 4.1 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 6GB RAM ಮತ್ತು 128GB ಇಂಟರ್ ಸ್ಟೋರೇಜ್ ಅನ್ನು ಹೊಂದಿದೆ. ಇದಲ್ಲದೆ 6GB ವರ್ಚುವಲ್ RAM ವಿಸ್ತರಣೆಯ ಬೆಂಬಲವೂ ಇದೆ. ಇದರೊಂದಿಗೆ ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ 1TB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುವುದಕ್ಕೆ ಅವಕಾಶವನ್ನು ಒಳಗೊಂಡಿದೆ.

ಕ್ಯಾಮೆರಾ ವಿಶೇಷ
ಇನ್ನು ಈ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್‌ನೊಂದಿಗೆ ಬರುತ್ತದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸ್ಯಾಮ್‌ಸಂಗ್ ISOCELL JN1 ಸೆನ್ಸಾರ್, ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಶೂಟರ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಶೂಟರ್ ಅನ್ನು ಸಹ ಒಳಗೊಂಡಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

ಬ್ಯಾಟರಿ ಮತ್ತು ಇತರೆ
ಸ್ಯಾಮ್‌ಸಂಗ್ ಗ್ಯಾಲಕ್ಸಿ F23 5G ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 25W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಜೊತೆಗೆ ಬ್ಯಾಟರಿ ದಕ್ಷತೆಯನ್ನು ಹೆಚ್ಚಿಸಲು ಹೇಳಲಾದ ಅಡಾಪ್ಟಿವ್ ಪವರ್ ಸೇವಿಂಗ್ ತಂತ್ರಜ್ಞಾನವನ್ನು ಫೋನ್ ಒಳಗೊಂಡಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi, ಬ್ಲೂಟೂತ್, GPS/ A-GPS, NFC, USB Type-C, ಮತ್ತು 3.5mm ಹೆಡ್‌ಫೋನ್ ಜ್ಯಾಕ್ ಅನ್ನು ಬೆಂಬಲಿಸಲಿದೆ. ಇದಲ್ಲದೆ NFC ಯಲ್ಲಿ ಸ್ಯಾಮ್‌ಸಂಗ್ ಪೇ ಬೆಂಬಲವನ್ನು ಕೂಡ ಒಳಗೊಂಡಿದೆ.

ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ F23 5G ಸ್ಮಾರ್ಟ್‌ಫೋನ್ ಬೇಸ್ ಮಾಡೆಲ್ 4GB RAM + 128GB ಸ್ಟೋರೇಜ್ ರೂಪಾಂತರಕ್ಕೆ 17,499ರೂ ಬೆಲೆ ಹೊಂದಿದೆ. ಹಾಗೆಯೇ 6GB + 128GB ಮಾದರಿಯು 18,499ರೂ. ಬೆಲೆ ಹೊಂದಿದೆ. ಇನ್ನು ಈ ಫೋನ್ ಆಕ್ವಾ ಬ್ಲೂ ಮತ್ತು ಫಾರೆಸ್ಟ್ ಗ್ರೀನ್ ಎಂಬ ಎರಡು ಬಣ್ಣಗಳ ಆಯ್ಕೆಗಳಲ್ಲಿ ಬರಲಿದೆ. ಇನ್ನು ಸ್ಯಾಮ್‌ಸಂಗ್ ಗ್ಯಾಲಕ್ಸಿ F23 5G ಫೋನ್ ಫ್ಲಿಪ್‌ಕಾರ್ಟ್, ಸ್ಯಾಮ್‌ಸಂಗ್.ಕಾಮ್ ಮೂಲಕ ಮಾರಾಟವಾಗಲಿದೆ. ಇದು ಇದೇ ಮಾರ್ಚ್ 16 ರಂದು ಮಧ್ಯಾಹ್ನ 12 ಗಂಟೆಗೆ (ಮಧ್ಯಾಹ್ನ) ಸೇಲ್ ಆರಂಭಿಸಲಿದೆ.

ಆಫರ್ ಏನು?
ಸ್ಯಾಮ್‌ಸಂಗ್ ಗ್ಯಾಲಕ್ಸಿ F23 5G ಸ್ಮಾರ್ಟ್‌ಫೋನ್ ಲಾಂಚ್ ಆಫರ್‌ನಲ್ಲಿ ICICI ಬ್ಯಾಂಕ್ ಕಾರ್ಡ್‌ಗಳನ್ನು ಬಳಸುವ ಗ್ರಾಹಕರಿಗೆ 1,000 ತ್ವರಿತ ಕ್ಯಾಶ್‌ಬ್ಯಾಕ್ ಸಿಗಲಿದೆ. ಜೊತೆಗೆ ಎರಡು ತಿಂಗಳ ಯೂಟ್ಯೂಬ್ ಪ್ರೀಮಿಯಂ ಚಂದಾದಾರಿಕೆ ಕೂಡ ಸಿಗಲಿದೆ. ಇದಲ್ಲದೆ ಲಾಂಚ್ ಆಫರ್‌ನಲ್ಲಿ 4GB + 128GB ಮಾದರಿಗೆ 15,999ರೂ. ಮತ್ತು 6GB + 128GB ಆಯ್ಕೆಗೆ 16,999ರೂ.ಬೆಲೆಯಲ್ಲಿ ಬರಲಿದೆ. ಲಾಂಚ್ ಆಫರ್ ಎಲ್ಲಿಯವರೆಗೆ ಲಭ್ಯವಿರಲಿದೆ ಎಂಬ ವಿವರಗಳನ್ನು ಇನ್ನೂ ಪ್ರಕಟಿಸಲಾಗಿಲ್ಲ.


Click it and Unblock the Notifications








