ಗುಮಿಯ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಕೇಂದ್ರವನ್ನು ನೋಡಬನ್ನಿ

Written By:

ಸ್ಯಾಮ್‌ಸಂಗ್ ಗ್ಯಾಲಕ್ಸಿ ಫೋನ್‌ಗಳು ಮಾರುಕಟ್ಟೆಯಲ್ಲಿ ತಮ್ಮ ಕರಾಮತ್ತನ್ನು ತೋರಿಸಿರುವಂತವುಗಳು. ಹಾಗಿದ್ದರೆ ಅವುಗಳ ಉತ್ಪನ್ನದ ಬಗೆಗಿನ ಕುತೂಹಲ ನಮ್ಮಲ್ಲುಂಟಾಗುವುದು ಸಹಜವೇ...

ಹಾಗಿದ್ದರೆ ಇಂದಿನ ಲೇಖನದಲ್ಲಿ ನಾವು ಸ್ಮಾಮ್‌ಸಂಗ್ ಗ್ಲಾಲಕ್ಸಿ ಕಂಪೆನಿಯ ಒಳನೋಟವನ್ನು ನಿಮಗೆ ತೋರಿಸಲಿದ್ದೇವೆ. ಸ್ಯಾಮ್‌ಸಂಗ್‌ನ ಗ್ಯಾಲಕ್ಸಿಯ ಕಂಪೆನಿ ಗುಮಿ ದಕ್ಷಿಣ ಕೊರಿಯಾದಲ್ಲಿದೆ. ಇದು ಉತ್ಪನ್ನವನ್ನು ತಯಾರಿಸುವ ಕೇಂದ್ರ, ಅದರ ಕಾಲೇಜು ನೋಡಲೆರಡೂ ಕಣ್ಣುಗಳೇ ಸಾಲದು. ಫೋನ್ ತಯಾರಿಕಾ ಸಂಸ್ಥೆ ಸ್ವಚ್ಛತೆಯನ್ನು ಅಷ್ಟು ಕಟ್ಟುನಿಟ್ಟಿನಿಂದ ಪಾಲಿಸಿದೆ ಎಂದೇ ಹೇಳಬಹುದು.

ಹಾಗಿದ್ದರೆ ವಿವರವಾದ ಇನ್ನಷ್ಟು ಮಾಹಿತಿಯನ್ನು ಈ ಲೇಖನದಲ್ಲಿ ಕೊಡಲು ನಾವೂ ಉತ್ಸುಕರಾಗಿದ್ದೇವೆ. ಚಿತ್ರದ ಮೂಲಕ ನಾವು ತೋರಿಸಲಿರುವ ಫ್ಯಾಕ್ಟ್ರಿಯ ನೋಟ ನಿಮ್ಮನ್ನು ಪುಳಕಿತಗೊಳಿಸುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕಚೇರಿ

#1

ದಕ್ಷಿಣ ಕೊರಿಯಾದ ಗುಮಿ ಎಂಬ ನಗರದಲ್ಲಿರುವ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಕಚೇರಿ ಮನಸೆಳೆಯುವಂತಿದೆ. ಕೊಂಚ ಹಿರಿದಾದ ವಿಸ್ತೀರ್ಣದಲ್ಲಿ ಇದನ್ನು ನಿರ್ಮಿಸಲಾಗಿದ್ದು ಎಲ್ಲಾ ಸೌಲಭ್ಯಗಳನ್ನು ಒಳಗೊಂಡಿದೆ.

ಸ್ಯಾಮ್‌ಸಂಗ್ ಲ್ಯಾಬ್

#2

ಸ್ವಚ್ಛ ಹಾಗೂ ಸುಂದರವಾದ ಲ್ಯಾಬ್ ಅನ್ನು ಒಳಗೊಂಡಿರುವ ಸ್ಯಾಮ್‌ಸಂಗ್ ಗ್ಯಾಲಕ್ಸಿ ಫ್ಯಾಕ್ಟ್ರಿ ತನ್ನದೇ ನಿಯಮಗಳನ್ನು ಹಾಕಿಕೊಂಡಿದೆ. ಇದನ್ನು ನೋಡ ಬರುವ ಭೇಟಿಗಾರರು ಅವರು ನೀಡುವ ವಿಶೇಷ ಚಪ್ಪಲಿಯನ್ನೇ ಧರಿಸಿಕೊಂಡೇ ಒಳಗೆ ಅಡಿ ಇಡಬೇಕು. ಒಂದು ರೀತಿಯಲ್ಲಿ ಆಸ್ಪತ್ರೆ ವಾತಾವರಣವನ್ನುಂಟು ಮಾಡಿದಂತೆ ಎಂದೂ ಕೂಡ ಹೇಳಬಹುದು.

ಸಿಬ್ಬಂದಿ ಲಾಂಜ್

#3

ಬೇಸ್‌ಮೆಂಟ್‌ನಲ್ಲಿ ಸಿಬ್ಬಂದಿಗಾಗಿ ಲಾಂಜ್ ಅನ್ನು ಹೊಂದಿರುವ ಕಂಪೆನಿ ಲೈಬ್ರರಿ ಹಾಗೂ ವೀಡಿಯೋ ಗೇಮ್ಸ್ ಆಟವಾಡುವ ಸ್ಥಳವನ್ನು ಹೊಂದಿದೆ. ಅದರ ನಂತರ ತರಗತಿಗಳು ಹಾಗೂ ಕಾರ್ಯಾಗಾರ ನಡೆಸಲು ವ್ಯವಸ್ಥೆ ಇದ್ದು ಅಲ್ಲಿನ ಶಿಸ್ತು ನಮ್ಮ ಮನಸ್ಸನ್ನು ಕದಿಯುತ್ತದೆ.

ವಿಹಂಗಮ ನೋಟ

#4

ಗುಮಿ ದಕ್ಷಿಣ ಕೊರಿಯಾದ ಕೇಂದ್ರ ಬಿಂದು ಎಂದೇ ಹೇಳಬಹುದು. ಇಲ್ಲಿ ದೊಡ್ಡ ಶಾಪಿಂಗ್ ಮಾಲ್‌ಗಳು ಕಣ್ಮನ ಸೆಳೆಯುವಂತಿದ್ದು ಎಲ್‌ಜಿ ಯ ಶೋರೂಮ್ ಅನ್ನು ಕೂಡ ನಗರ ಹೊಂದಿದೆ. ಹೆಚ್ಚಾಗಿ ಈ ಸಂಸ್ಥೆಯಲ್ಲಿ ಮಹಿಳೆಯರೇ ಕಾರ್ಯ ನಿರ್ವಹಿಸುತ್ತಿದ್ದು ಅದಕ್ಕೆ ತಕ್ಕದಾದ ಪರಿಣಿತಿಯನ್ನು ಪಡೆದುಕೊಂಡಿದ್ದಾರೆ.

ಪರಿಶೋಧನೆ

#5

ಸಂಸ್ಥೆಯು ಬೇರೆ ಬೇರೆ ಪರಿಶೋಧನೆಗೆ ಬೇರೆ ಬೇರೆ ಕೋಣೆಗಳನ್ನು ಹೊಂದಿದೆ. ಫೋನ್‌ಗಳನ್ನು ಪರಿಶೀಲಿಸುವುದು ಅದರ ಪ್ರತಿಯೊಂದು ಹಂತವನ್ನೂ ಕುರಿತು ಅಧ್ಯಯನ ನಡೆಸುವುದು ಇವೇ ಮೊದಲಾದ ಕೆಲಸಗಳನ್ನು ಈ ಸಂಸ್ಥೆ ಹೊಂದಿದೆ. ಒಟ್ಟಾರೆ ಫೋನ್ ಮಾರುಕಟ್ಟೆಗೆ ಬರುವ ಮುಂಚೆ ಹಲವಾರು ಪರೀಕ್ಷೆಗಳಿಗೆ ಒಳಪಡುವುದು ನಿರ್ಬಂಧವಾಗಿದೆ.

ಫೋನ್ ಪರಿಶೀಲನೆ

#6

ಫೋನ್‌ನ ತಾಂತ್ರಿಕ ಸಮಸ್ಯೆಗಳನ್ನು ಪರಿಶೀಲಿಸಿದ ನಂತರ ಅದರ ಪ್ಯಾನೆಲ್ ಬಣ್ಣ ವಿನ್ಯಾಸವನ್ನು ಚೆಕ್ ಮಾಡುವುದು ಇಲ್ಲಿ ನಡೆಯುತ್ತದೆ. ಸ್ಯಾಮ್‌ಸಂಗ್ ವಿಶ್ವದೆಲ್ಲೆಡೆ ತನ್ನ ಸಂಸ್ಥೆಗಳನ್ನು ಹೊಂದಿದ್ದು ಗುಮಿ ಅದರಲ್ಲಿ ಒಂದಾಗಿದೆ. ಕೆಲವು ಪರಿಶೀಲನೆಗಳನ್ನು ಮಾಡುವ ಕಾರ್ಯ ಮಾತ್ರ ಇಲ್ಲಿ ನಡೆಯುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot