Home
ಸುದ್ದಿಜಾಲ

ಭಾರತಕ್ಕೆ ಎಂಟ್ರಿ ಕೊಟ್ಟ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಫಿಟ್‌ 3 ಫಿಟ್‌ನೆಸ್ ಟ್ರ್ಯಾಕರ್: ಬೆಲೆ ಎಷ್ಟು

ಸ್ಯಾಮ್‌ಸಂಗ್‌ ಕಂಪೆನಿ ಭಾರತದಲ್ಲಿ ಹೊಸ Samsung Galaxy Fit 3 ಫಿಟ್‌ನೆಸ್ ಟ್ರ್ಯಾಕರ್ ಅನ್ನು ಬಿಡುಗಡೆ ಮಾಡಿದೆ. ಈ ಫಿಟ್‌ನೆಸ್ ಟ್ರ್ಯಾಕರ್ 208mAh ಬ್ಯಾಟರಿಯೊಂದಿಗೆ 1.6-ಇಂಚಿನ AMOLED ಡಿಸ್‌ಪ್ಲೇಯನ್ನು ಹೊಂದಿದೆ. ಜೊತೆಗೆ FreeRTOS-ಆಧಾರಿತ ಆಪರೇಟಿಂಗ್ ಸಿಸ್ಟಮ್‌ನೊಂದಿಗೆ ಬರಲಿದೆ.

ಹೌದು, Samsung Galaxy Fit 3 ಭಾರತದ ಮಾರುಕಟ್ಟೆಗೆ ಎಂಟ್ರಿ ನೀಡಿದೆ. ಇದು 100 ಕ್ಕೂ ಹೆಚ್ಚು ವಾಚ್‌ಫೇಸ್‌ಗಳೊಂದಿಗೆ ಫ್ರೀ ಲೋಡ್ ಆಗಲಿದೆ. ಇನ್ನು ಈ ಫಿಟ್‌ನೆಸ್ ಟ್ರ್ಯಾಕರ್ 16MB RAM ಮತ್ತು 256MB ಸ್ಟೋರೇಜ್‌ ಅನ್ನು ಹೊಂದಿದೆ. ಇದು ಸ್ಯಾಮ್‌ಸಂಗ್ ಹೆಲ್ತ್‌ ಅಪ್ಲಿಕೇಶನ್ ಮೂಲಕ ಸಮಗ್ರ ಆರೋಗ್ಯ, ಫಿಟ್‌ನೆಸ್, ಹೃದಯ ಬಡಿತ, ರಕ್ತದ ಆಮ್ಲಜನಕ ಮತ್ತು ಒತ್ತಡದ ಮೇಲ್ವಿಚಾರಣೆಯನ್ನು ನೀಡುತ್ತದೆ. ಹಾಗಾದ್ರೆ ಹೊಸ Samsung Galaxy Fit 3 ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಭಾರತಕ್ಕೆ ಎಂಟ್ರಿ ಕೊಟ್ಟ  ಗ್ಯಾಲಕ್ಸಿ ಫಿಟ್‌ 3 ಫಿಟ್‌ನೆಸ್ ಟ್ರ್ಯಾಕರ್

Samsung Galaxy Fit 3 ಫೀಚರ್ಸ್‌ ಹೇಗಿದೆ?
Samsung Galaxy Fit 3 ಸ್ಮಾರ್ಟ್‌ವಾಚ್‌ 1.6 ಇಂಚಿನ AMOLED ಡಿಸ್‌ಪ್ಲೇಯನ್ನು ಹೊಂದಿದೆ. ಇದು 2.5D ಕರ್ವ್ಡ್ ಗ್ಲಾಸ್ ಮತ್ತು 256 × 402 ಪಿಕ್ಸೆಲ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಜೊತೆಗೆ 100ಕ್ಕೂ ಹೆಚ್ಚು ವಾಚ್‌ಫೇಸ್‌ಗಳೊಂದಿಗೆ ಫ್ರೀ ಲೋಡ್ ಆಗಲಿದೆ. ಇನ್ನು ಈ ಫಿಟ್‌ನೆಸ್ ಟ್ರ್ಯಾಕರ್ 16MB RAM ಮತ್ತು 256MB ಸ್ಟೋರೇಜ್‌ ಅನ್ನು ಹೊಂದಿದೆ. ಅಲ್ಲದೆ FreeRTOS-ಆಧಾರಿತ ಆಪರೇಟಿಂಗ್ ಸಿಸ್ಟಮ್‌ನೊಂದಿಗೆ ರನ್‌ ಆಗಲಿದೆ.

ಇನ್ನು ಸ್ಯಾಮ್‌ಸಂಗ್‌ನ ಈ ಫಿಟ್‌ನೆಸ್ ಟ್ರ್ಯಾಕರ್ ಅಕ್ಸೆಲೆರೊಮೀಟರ್, ಬ್ಯಾರೋಮೀಟರ್, ಗೈರೊ ಸೆನ್ಸಾರ್, ಆಪ್ಟಿಕಲ್ ಹೃದಯ ಬಡಿತ ಸೆನ್ಸಾರ್‌ ಮತ್ತು ಲೈಟ್‌ ಸೆನ್ಸಾರ್‌ ಅನ್ನು ಹೊಂದಿದೆ. ಇದು ಸ್ಯಾಮ್‌ಸಂಗ್ ಹೆಲ್ತ್‌ ಅಪ್ಲಿಕೇಶನ್ ಮೂಲಕ ಸಮಗ್ರ ಆರೋಗ್ಯ, ಫಿಟ್‌ನೆಸ್, ಹೃದಯ ಬಡಿತ, ರಕ್ತದ ಆಮ್ಲಜನಕ ಮತ್ತು ಒತ್ತಡದ ಮೇಲ್ವಿಚಾರಣೆಯನ್ನು ನೀಡುತ್ತದೆ. ಇನ್ನು ಈ ಫಿಟ್‌ನೆಸ್‌ ಟ್ರ್ಯಾಕರ್‌ ರನ್ನಿಂಗ್, ಸ್ವಿಮ್ಮಿಂಗ್‌, ಎಲಿಪ್ಟಿಕಲ್, ರೋಯಿಂಗ್ ಮೆಷಿನ್ ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ 100 ಕ್ಕೂ ಹೆಚ್ಚು ವರ್ಕ್‌ಔಟ್‌ಗಳನ್ನು ಗುರುತಿಸಬಹುದು.

ಇದು ಅಧಿಸೂಚನೆ ಎಚ್ಚರಿಕೆಗಳು, ಕ್ಯಾಮರಾ ಕಂಟ್ರೋಲ್‌, ಮ್ಯೂಸಿಕ್‌ ಕಂಟ್ರೋಲ್‌ ಮತ್ತು ಟೆಕ್ಸ್ಟ್‌ ಮೆಸೇಜ್‌ ರಿಪ್ಲೇಗಳಂತಹ ಸ್ಮಾರ್ಟ್ ಫೀಚರ್ಸ್‌ಗಳನ್ನು ನೀಡಲಿದೆ. ಫಾಲ್ ಡಿಟೆಕ್ಷನ್ ಫೀಚರ್ ಮತ್ತು SOS ಫೀಚರ್ ಕೂಡ ಒಳಗೊಂಡಿದೆ. ಪವರ್ ಬಟನ್ ಅನ್ನು ಐದು ಬಾರಿ ಒತ್ತುವ ಮೂಲಕ ಬಳಕೆದಾರರ ಸ್ಥಳವನ್ನು ಎಮರ್ಜೆನ್ಸಿಗಳಿಗೆ ಕಳುಹಿಸುವ ಮೂಲಕ SOS ವೈಶಿಷ್ಟ್ಯವನ್ನು ಪ್ರಚೋದಿಸಬಹುದು.

ಭಾರತಕ್ಕೆ ಎಂಟ್ರಿ ಕೊಟ್ಟ  ಗ್ಯಾಲಕ್ಸಿ ಫಿಟ್‌ 3 ಫಿಟ್‌ನೆಸ್ ಟ್ರ್ಯಾಕರ್

Samsung Galaxy Fit 3 ಸ್ಮಾರ್ಟ್‌ವಾಚ್‌ 208mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 13 ದಿನಗಳ ಬ್ಯಾಟರಿ ಬಾಳಿಕೆಯನ್ನು ನೀಡಲಿದೆ. ಇನ್ನು ಈ ಫಿಟ್‌ನೆಸ್ ಟ್ರ್ಯಾಕರ್ ಚಾರ್ಜಿಂಗ್‌ಗಾಗಿ POGO ಪಿನ್‌ಗಳನ್ನು ಅವಲಂಬಿಸಿದೆ. ಅಲ್ಲದೆ ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದ್ದು, ಸುಮಾರು 30 ನಿಮಿಷಗಳಲ್ಲಿ 0 ರಿಂದ 65% ವರೆಗೆ ಚಾರ್ಜಿಂಗ್‌ ಮಾಡಲಿದೆ. ಇದು ಯುಎಸ್‌ಬಿ ಟೈಪ್-ಸಿ ಮ್ಯಾಗ್ನೆಟಿಕ್ ಚಾರ್ಜಿಂಗ್ ಕೇಬಲ್ ಮತ್ತು 25W ಫಾಸ್ಟ್ ಚಾರ್ಜಿಂಗ್ ಅಡಾಪ್ಟರ್ ಅನ್ನು ಒಳಗೊಂಡಿದೆ.

Samsung Galaxy Fit 3 ಭಾರತದಲ್ಲಿ ಬೆಲೆ ಮತ್ತು ಲಭ್ಯತೆ
Samsung Galaxy Fit 3 ಭಾರತದಲ್ಲಿ ಲಾಂಚ್‌ ಆಫರ್‌ನಲ್ಲಿ 4,999ರೂ. ಬೆಲೆಯನ್ನು ಹೊಂದಿದೆ. ಇನ್ನು ಈ ಕಂಪನಿಯು ಬ್ಯಾಂಕ್ ವಹಿವಾಟಿನ ಮೇಲೆ ಫ್ಲಾಟ್ 500ರೂ ತ್ವರಿತ ಕ್ಯಾಶ್‌ಬ್ಯಾಕ್ ಕೂಡ ಸಿಗಲಿದೆ. ಇದನ್ನು ಸ್ಯಾಮ್‌ಸಂಗ್ ಸ್ಟೋರ್ ಮತ್ತು ಪ್ರಮುಖ ಆನ್‌ಲೈನ್ ಮತ್ತು ಆಫ್‌ಲೈನ್ ಚಿಲ್ಲರೆ ಅಂಗಡಿಗಳ ಮೂಲಕ ಖರೀದಿಸಬಹುದಾಗಿದೆ.

Best Mobiles in India

English summary
Samsung Galaxy Fit 3 fitness tracker Launched in India: Price Details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+