Home
ಸುದ್ದಿಜಾಲ

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಫಿಟ್‌ 3 ವಾಚ್‌ ಫೀಚರ್ಸ್‌ ಬಹಿರಂಗ: ಡಿಸೈನ್‌ ಹೇಗಿದೆ?

ಸ್ಯಾಮ್‌ಸಂಗ್‌ ಕಂಪೆನಿ ಸ್ಮಾರ್ಟ್‌ಫೋನ್‌ಗಳಿಗೆ ಮಾತ್ರವಲ್ಲ ಸ್ಮಾರ್ಟ್‌ವಾಚ್‌ಗಳಲ್ಲಿಯೂ ಕೂಡ ಸೈ ಎನಿಸಿಕೊಂಡಿದೆ. ಇದೀಗ ಅದೇ ಹಾದಿಯಲ್ಲಿ Samsung Galaxy Fit 3 ಸ್ಮಾರ್ಟ್‌ವಾಚ್‌ ಎಂಟ್ರಿಗೆ ಸಿದ್ದವಾಗಿದೆ. ಈ ಸ್ಮಾರ್ಟ್‌ವಾಚ್‌ ಇದೀಗ ಆನ್‌ಲೈನ್‌ ವೆಬ್‌ಸೈಟ್‌ ಒಂದರಲ್ಲಿ ಕಾಣಿಸಿಕೊಂಡಿದ್ದು, ಫೀಚರ್ಸ್‌ಗಳು ವೈರಲ್‌ ಆಗಿದೆ.

ಹೌದು, ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಫಿಟ್‌ 3 ಸ್ಮಾರ್ಟ್‌ವಾಚ್‌ ಫೀಚರ್ಸ್‌ ಆನ್‌ಲೈನ್‌ನಲ್ಲಿ ಬಹಿರಂಗವಾಗಿದೆ. ಇದನ್ನು ಸ್ಯಾಮ್‌ಸಂಗ್‌ UAE ಇ-ಸ್ಟೋರ್‌ನಲ್ಲಿ ಪಟ್ಟಿ ಮಾಡಲಾಗಿದೆ. ಇದು ಗಾಢ ಬೂದು, ಗುಲಾಬಿ ಮತ್ತು ಬಿಳಿ ಬಣ್ಣದ ಆಯ್ಕೆಗಳಲ್ಲಿ ಪಟ್ಟಿ ಮಾಡಲಾಗಿದೆ. ಇನ್ನು ಈ ಸ್ಮಾರ್ಟ್‌ವಾಚ್‌ 100 ಕ್ಕೂ ಹೆಚ್ಚು ವರ್ಕ್‌ಔಟ್ ಮೋಡ್‌ಗಳೊಂದಿಗೆ ಬರಲಿದೆ. ಹಾಗಾದ್ರೆ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಫಿಟ್‌ 3 ಸ್ಮಾರ್ಟ್‌ವಾಚ್‌ ಫೀಚರ್ಸ್‌ ನಿರೀಕ್ಷೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಫಿಟ್‌ 3 ವಾಚ್‌ ಫೀಚರ್ಸ್‌ ಬಹಿರಂಗ: ಡಿಸೈನ್‌ ಹೇಗಿದೆ?

ಸ್ಯಾಮ್‌ಸಂಗ್‌ ಗ್ಯಾಲಕ್ಸಿ 3 ಫೀಚರ್ಸ್‌ ಹೇಗಿದೆ?
ಸ್ಯಾಮ್‌ಸಂಗ್‌ ಗ್ಯಾಲಕ್ಸಿ 3 ಸ್ಮಾರ್ಟ್‌ವಾಚ್‌ 1.6 ಇಂಚಿನ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇಯು 256 x 402 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದಿದೆ. ಇನ್ನು ಡಿಸ್‌ಪ್ಲೇಯು 1.1 ಇಂಚಿನ ಅಮೋಲೆಡ್‌ ಸ್ಕ್ರಿನ್‌ಗಿಂತ ಗಣನೀಯವಾಗಿ ದೊಡ್ಡದಾಗಿದೆ. ಜೊತೆಗೆ ಈ ಮಾದರಿಯು ಹಳೆಯ ಮಾದರಿಯ ಪಾಲಿಕಾರ್ಬೊನೇಟ್ ಚಾಸಿಸ್‌ಗೆ ವಿರುದ್ಧವಾಗಿ ಅಲ್ಯೂಮಿನಿಯಂನಿಂದ ಮಾಡಲ್ಪಟ್ಟಿದೆ.

ಇನ್ನು ಈ ಸ್ಮಾರ್ಟ್‌ವಾಚ್‌ ತ್ವರಿತ-ಬಿಡುಗಡೆ ಬಟನ್ ಅನ್ನು ಪಡೆಯಲಿದ್ದು, ಬ್ಯಾಂಡ್‌ಗಳ ಸುಲಭ ಬದಲಾವಣೆಗೆ ಸಹಾಯ ಮಾಡುತ್ತದೆ. ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಫಿಟ್‌ 3 ವಾಚ್‌ 5ATM ನೀರಿನ ಪ್ರತಿರೋಧವನ್ನು ಬೆಂಬಲಿಸಲಿದ್ದು, ಧೂಳು ಮತ್ತು ಸ್ಪ್ಲಾಶ್ನಿಂದ ರಕ್ಷಣೆ ನೀಡುವುದಕ್ಕಾಗಿ IP68 ರೇಟಿಂಗ್ ಅನ್ನು ಹೊಂದಿದೆ. ಇದು ಆಂಡ್ರಾಯ್ಡ್ 10.0 ಮತ್ತು ಇತ್ತೀಚಿನ ಆಪರೇಟಿಂಗ್‌ ಸಿಸ್ಟಂನಲ್ಲಿ ಚಾಲನೆಯಲ್ಲಿರುವ ಸ್ಮಾರ್ಟ್‌ಫೋನ್‌ಗಳೊಂದಿಗೆ ಹೊಂದಿಕೊಳ್ಳುತ್ತದೆ. ಇದು 16MB RAM ಮತ್ತು 256MB ಇಂಟರ್‌ ಸ್ಟೋರೇಜ್‌ನೊಂದಿಗೆ ಬರಲಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಫಿಟ್‌ 3 ವಾಚ್‌ ಫೀಚರ್ಸ್‌ ಬಹಿರಂಗ: ಡಿಸೈನ್‌ ಹೇಗಿದೆ?

Galaxy Fit 3ವಾಚ್‌ 100 ಕ್ಕೂ ಹೆಚ್ಚು ವರ್ಕ್‌ಔಟ್ ಮೋಡ್‌ಗಳನ್ನು ಒಳಗೊಂಡಿದ್ದು, ಸ್ಲೀಪ್ ಟ್ರ್ಯಾಕರ್ ಅನ್ನು ಹೊಂದಿದೆ. ಇದರಲ್ಲಿ ಪ್ರಮುಖವಾಗಿ ಸ್ಟೆಪ್ಸ್‌, ಹೃದಯ ಬಡಿತ ಮತ್ತು ರಕ್ತದ ಆಮ್ಲಜನಕದ ಮಟ್ಟವನ್ನು ಅಳೆಯಬಹುದು. ಜೊತೆಗೆ ಡೇಟಾವನ್ನು Samsung Health ಅಪ್ಲಿಕೇಶನ್‌ನೊಂದಿಗೆ ಸಿಂಕ್ ಮಾಡಬಹುದು. ಇದರ ಇಂಟರ್‌ ಬಾರೋಮೀಟರ್‌ ಕುಸಿತವನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ ಎಂದು ಹೇಳಲಾಗಿದೆ.

ಇನ್ನು ತುರ್ತು ಸಂದರ್ಭಗಳಲ್ಲಿ, ತಮ್ಮ ತುರ್ತು ಸಂಪರ್ಕಗಳಿಗೆ ತಿಳಿಸಲು ವಾಚ್ ದೇಹದ ಬಲಭಾಗದಲ್ಲಿರುವ ಹೋಮ್ ಬಟನ್ ಅನ್ನು ಐದು ಬಾರಿ ಒತ್ತಬಹುದು. ಅಲ್ಲದೆ ಸಹಾಯಕ್ಕಾಗಿ ಪೂರ್ವ-ನೋಂದಾಯಿತ ವೈದ್ಯಕೀಯ ಮಾಹಿತಿಯನ್ನು ಪ್ರದರ್ಶಿಸುವ ಲಾಕ್ ಸ್ಕ್ರೀನ್ ಮೂಲಕ ನಿರ್ದೇಶನ ನೀಡಬಹುದಾಗಿದೆ. ಈ ವಾಚ್‌ 208mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಸಿಂಗಲ್‌ ಚಾರ್ಜ್‌ನಲ್ಲಿ 13 ದಿನಗಳವರೆಗೆ ಬ್ಯಾಟರಿ ಅವಧಿಯನ್ನು ನೀಡಲಿದೆ. ಅಲ್ಲದೆ ಶೂನ್ಯದಿಂದ 65 ಪ್ರತಿಶತದವರೆಗೆ ಚಾರ್ಜ್ ಮಾಡಲು 30 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ ಎಂದು ಹೇಳಲಾಗುತ್ತದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಫಿಟ್‌ 3 ವಾಚ್‌ ಫೀಚರ್ಸ್‌ ಬಹಿರಂಗ: ಡಿಸೈನ್‌ ಹೇಗಿದೆ?

ಈ ಸ್ಮಾರ್ಟ್ ವಾಚ್ ಬ್ಲೂಟೂತ್ 5.3 ಅನ್ನು ಬೆಂಬಲಿಸಲಿದೆ, ಆದರೆ GPS ಅನ್ನು ಒಳಗೊಂಡಿಲ್ಲ. ಇದು ಬ್ಯಾಂಡ್‌ನೊಂದಿಗೆ 36.8g ತೂಕವನ್ನು ಹೊಂದಿದ್ದು, ಇದರ ಬಾಡಿ ಕೇವಲ 18.5g ತೂಕವನ್ನು ಹೊಂದಿದೆ. ಇನ್ನು ಸ್ಮಾರ್ಟ್‌ವಾಚ್‌ನ ಬೆಲೆ ವಿವರಗಳು ಆನ್‌ಲೈನ್‌ನಲ್ಲಿ ಇನ್ನು ಸಹ ಬಹಿರಂಗವಾಗಿಲ್ಲ. ಅಲ್ಲದೆ ಇದರ ಲಭ್ಯತೆಯ ವಿವರಗಳು ಕೂಡ ಕಾಣಿಸಿಕೊಂಡಿಲ್ಲ. ಆದರೆ ಈ ಬ್ಯಾಂಡ್‌ಗಳನ್ನು ಪ್ರತ್ಯೇಕವಾಗಿ ಮಾರಾಟ ಮಾಡಲಾಗುತ್ತದೆ ಎಂದು ಕಂಪೆನಿಯು ಹೇಳಿಕೊಂಡಿದೆ.

Best Mobiles in India

English summary
Samsung Galaxy Fit 3 Smartwatch Listed on Company Site: Features Revealed
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+