ಬಂದಿದೆ ಸ್ಯಾಮ್ ಸಂಗ್ ಗ್ರಾಲೆಕ್ಸಿ J5: ವಿಶೇಷತೆಗಳ ಸಂಫೂರ್ಣ ಮಾಹಿತಿ..!!
ಸ್ಯಾಮ್ ಸಂಗ್ ಗ್ರಾಲೆಕ್ಸಿ J5 ಥೈಲ್ಯಾಂಡಿನಲ್ಲಿ ಸದ್ಯ ಲಾಂಚ್ ಆಗಿದ್ದು, ಇದರ ಬೆಲೆ ಸರಿ ಸುಮಾರು ರೂ.19,000 ಆಗಲಿದೆ. ಈ ಹಿಂದಿನ ಫೋನ್ ಗಿಂತಲೂ ಹೆಚ್ಚಿನ RAM ಮತ್ತು ಮೆಮೊರಿಯನ್ನು ನೀಡಲಾಗಿದೆ.
ಸ್ಯಾಮ್ ಸಂಗ್ ನೂತನವಾಗಿ ಗ್ರಾಲೆಕ್ಸಿ J ಸರಣಿಯ ಸ್ಮಾರ್ಟ್ ಫೋನ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಇದೇ ಸರಣಿಯಲ್ಲಿ ಗ್ರಾಲೆಕ್ಸಿ J5 ಪ್ರೋ ಸ್ಮಾರ್ಟ್ ಫೋನ್ ಅನ್ನು ಬಿಡುಗಡೆ ಮಾಡಿದೆ. ಗ್ರಾಲೆಕ್ಸಿ J5 ಸ್ಮಾರ್ಟ್ ಫೋನಿನ ಮುಂದುವರೆದ ಭಾಗ ಇದಾಗಿದೆ.

ಸದ್ಯ ಸ್ಯಾಮ್ ಸಂಗ್ ಗ್ರಾಲೆಕ್ಸಿ J5 ಥೈಲ್ಯಾಂಡಿನಲ್ಲಿ ಸದ್ಯ ಲಾಂಚ್ ಆಗಿದ್ದು, ಇದರ ಬೆಲೆ ಸರಿ ಸುಮಾರು ರೂ.19,000 ಆಗಲಿದೆ. ಈ ಹಿಂದಿನ ಫೋನ್ ಗಿಂತಲೂ ಹೆಚ್ಚಿನ RAM ಮತ್ತು ಮೆಮೊರಿಯನ್ನು ನೀಡಲಾಗಿದೆ.
ಕೇವಲ RAM ಮತ್ತು ಸ್ಟೋರೆಜ್ ಮಾತ್ರವಲ್ಲದೇ ವಿನ್ಯಾಸದಲ್ಲಿಯೂ ಹೆಚ್ಚಿನ ಅಭಿವೃದ್ಧಿಯನ್ನು ಕಾಣಬಹುದಾಗಿದೆ. ಗ್ರಾಲೆಕ್ಸಿ J5 ಫೋನಿ ಫಾರ್ಪರ್ಮೆನ್ಸ್ ಸಹ ಉತ್ತಮವಾಗಿದೆ ಎನ್ನಲಾಗಿದೆ. ಮೆಟಾಲಿಕ್ ಡಿಸೈನ್ ಹೊಂದಿದ್ದು, ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ಹೌಮ್ ಬಟನ್ ನಲ್ಲಿ ಕಾಣಬಹುದಾಗಿದೆ.
VoLTE ಸಫೋರ್ಟ್ ಮಾಡಲಿದೆ. ಡ್ಯುಯಲ್ ಸಿಮ್ ಕಾರ್ಡ್ ಕಾಣಬಹುದಾಗಿದೆ. ಅಲ್ಲದೇ ಈ ಪೋನಿನಲ್ಲಿ 5.2 ಇಂಚಿನ HD ಸುಪರ್ ಅಮೊಲೈಡ್ ಡಿಸ್ ಪ್ಲೇ, 1.6 GHz ಏಕ್ಸ್ ನೋಸ್ 7870 ಆಕ್ಟಾ ಕೋರ್ ಪ್ರೋಸೆಸರ್ ಮತ್ತು ಮೆಲ್ T830 GPU ಕಾಣಬಹುದು. ಅಲ್ಲದೇ 3GB RAM ಮತ್ತು 32GB ಇಂಟರ್ನಲ್ ಮೆಮೊರಿಯನ್ನು ಹೊಂದಿದೆ. 256 GB ಮೆಮೊರಿಯನ್ನು ವಿಸ್ತರಿಸಿಕೊಳ್ಳಬಹುದಾಗಿದೆ.
ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ ಗ್ರಾಲೆಕ್ಸಿ J5 ಪ್ರೋ ನಲ್ಲಿ 13 MP ಕ್ಯಾಮೆರಾವನ್ನು ಕಾಣಬಹುದಾಗಿದೆ. ಮುಂಭಾಗದಲ್ಲಿಯೂ 13 MP ಕ್ಯಾಮೆರಾವನ್ನು ನೋಡಬಹುದಾಗಿದೆ.
ಈ ಸ್ಮಾರ್ಟ್ ಫೋನಿನಲ್ಲಿ 3000mAh ಬ್ಯಾಟರಿಯನ್ನು ಕಾಣಬಹುದಾಗಿದೆ. ಅಲ್ಲದೇ ಆಂಡ್ರಾಯ್ಡ್ 7.0 ನ್ಯಾಗಾ ಹೊಂದಿದೆ. 4G VoLET, Wi-Fi, ಬ್ಲೂಟೂತ್ ಮುಂತಾದವುಗಳನ್ನು ಕಾಣಬಹುದಾಗಿದೆ.


Click it and Unblock the Notifications








