ಸ್ಯಾಮ್ ಸಂಗ್ ಗ್ಯಾಲೆಕ್ಸಿ J7 ಸ್ಮಾರ್ಟ್ ಫೋನ್ ಬೆಲೆಯಲ್ಲಿ ಭಾರೀ ಕಡಿತ..!
ಈ ಸ್ಮಾರ್ಟ್ ಫೋನ್ ಬೆಲೆ ಇನಷ್ಟು ಕಡಿಮೆಯಾಗಿದ್ದು, 16GB ಆವೃತ್ತಿಯೂ ರೂ 9,990ಕ್ಕೆ ಹಾಗೂ 32 GB ಆವೃತ್ತಿಯೂ ರೂ. 11,990ಕ್ಕೆ ಮಾರಾಟವಾಗುತ್ತಿದೆ ಎನ್ನಲಾಗಿದೆ.
ಭಾರತೀಯ ಮಾರುಕಟ್ಟೆಯಲ್ಲಿ ಡಿಸೆಂಬರ್ 2017ರಲ್ಲಿ ಬಿಡುಗಡೆಯಾಗಿದ್ದ ಸ್ಯಾಮ್ ಸಂಗ್ ಗ್ಯಾಲೆಕ್ಸಿ J7 ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಈಗಾಗಲೇ ಹೊಸ ಅಲೆಯನ್ನು ಸೃಷ್ಟಿಸಿದೆ. ಈ ಸ್ಮಾರ್ಟ್ ಫೋನ್ 32 GB ಯೂ ರೂ. 12,990ಕ್ಕೆ ಮಾರಾಟವಾಗುತ್ತಿದ್ದು, ಇದೇ ಮಾದರಿಯಲ್ಲಿ 16GB ಆವೃತ್ತಿಯೂ ರೂ. 11,490ಕ್ಕೆ ಸೇಲ್ ಆಗುತ್ತಿತ್ತು. ಸದ್ಯ ಸ್ಮಾರ್ಟ್ ಫೋನ್ ಬೆಲೆಯೂ ಇನಷ್ಟು ಕಡಿಮೆಯಾಗಿದೆ ಎನ್ನಲಾಗಿದೆ.

ಈ ಸ್ಮಾರ್ಟ್ ಫೋನ್ ಬೆಲೆ ಇನಷ್ಟು ಕಡಿಮೆಯಾಗಿದ್ದು, 16GB ಆವೃತ್ತಿಯೂ ರೂ 9,990ಕ್ಕೆ ಹಾಗೂ 32 GB ಆವೃತ್ತಿಯೂ ರೂ. 11,990ಕ್ಕೆ ಮಾರಾಟವಾಗುತ್ತಿದೆ ಎನ್ನಲಾಗಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯನ್ನು ಸೃಷ್ಟಿಸಿಕೊಂಡಿರುವ ಈ ಫೋನ್ ಬೆಲೆ ಕಡಿಮೆಯಾಗಿರುವುದರಿಂದ ಇನಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಲಿದೆ.
ಇದಲ್ಲದೇ ಸ್ಯಾಮ್ ಸಂಗ್ ಗ್ಯಾಲೆಕ್ಸಿ J7 ಸ್ಮಾರ್ಟ್ ಫೋನ್ ವೊಡಫೋನ್ ಕ್ಯಾಷ್ ಬ್ಯಾಕ್ ಆಫರ್ ನೊಂದಿಗೆ ಲಭ್ಯವಿದ್ದು, ವೊಡಫೋನ್ ನೊಂದಿಗೆ ಈ ಸ್ಮಾರ್ಟ್ ಫೋನ್ ಖರೀದಿ ಮಾಡಿದರೆ ರೂ.1500 ಕ್ಯಾಷ್ ಬ್ಯಾಕ್ ದೊರೆಯಲಿದೆ. ಇದು ವೊಡಾಫೋನ್ ಬಳಕೆದಾರರಿಗೆ ಮಾತ್ರವೇ ಎಕ್ಸ್ ಕ್ಲೂಸಿವ್ ಆಗಿ ದೊರೆಯುತ್ತಿರುವುದು ಎನ್ನಲಾಗಿದೆ.
ಈ ಕ್ಯಾಷ್ ಬ್ಯಾಕ್ ಲಾಭವನ್ನು ಪಡೆಯುವ ಸಲುವಾಗಿ ವೊಡಾಫೋನ್ ಗ್ರಾಹಕರು ಈ ಫೋನಿನಲ್ಲಿ 24 ತಿಂಗಳ ಕಾಲ ರೀಚಾರ್ಜ್ ಮಾಡಿಕೊಳ್ಳಬೇಕಾಗಿದೆ. ಪ್ರತಿ ತಿಂಗಳು ರೂ. 198ಕ್ಕೆ ರಿಚಾರ್ಜ್ ಮಾಡಿಸಬೇಕಾಗಿದ್ದು, ಪ್ರತಿ ನಿತ್ಯ 1.4GB ಡೇಟಾ ಬಳಕೆಗೆ ದೊರೆಯಲಿದೆ ಎನ್ನಲಾಗಿದೆ. ಅಲ್ಲದೇ ಪ್ರತಿ ನಿತ್ಯ 100SMS ಕಳುಹಿಸಬಹುದಾಗಿದ್ದು, ಅಲ್ಲದೇ ಉಚಿತ ಕರೆಗಳನ್ನು ಮಾಡುವ ಅವಕಾಶ ಪಡೆದುಕೊಳ್ಳಲಿದ್ದಾರೆ.
ಈಗಾಗಲೇ ಮಾರುಕಟ್ಟೆಯಲ್ಲಿ ಸ್ಯಾಮ್ ಸಂಗ್ ಗ್ಯಾಲೆಕ್ಸಿ J7 ಸ್ಮಾರ್ಟ್ ಫೋನ್ ಮಾದರಿಯಲ್ಲಿ ಸಾಕಷ್ಟು ಸ್ಮಾರ್ಟ್ ಫೋನ್ ಗಳು ಲಭ್ಯವಿದ್ದು, ಈ ಹಿನ್ನಲೆಯಲ್ಲಿ ಮಾರುಕಟ್ಟೆಯಲ್ಲಿ ಹೆಚ್ಚಿನ ಬಳಕೆದಾರರನ್ನು ಸೆಳೆಯಲು ಈ ಕ್ಯಾಷ್ ಬ್ಯಾಕ್ ಆಫರ್ ಅನ್ನು ನೀಡಿರುವುದು ಮತ್ತೆ ಈ ಸ್ಮಾರ್ಟ್ ಫೋನ್ ಮಾರಾಟ ಹೆಚ್ಚಾಗಲಿದೆ ಎನ್ನಲಾಗಿದೆ.


Click it and Unblock the Notifications








