ಭಾರತದಲ್ಲಿ 2 ಲಕ್ಷ ಮೀರಿದ ಸ್ಯಾಮ್‌ಸಂಗ್ ಗ್ಯಾಲಾಕ್ಸಿ J8 , J6 ಮಾರಾಟ..!
ಮಧ್ಯಮ ಸರಣಿ ಸ್ಮಾರ್ಟ್ ಫೋನ್ ಗಳ ಮಾರುಕಟ್ಟೆಯಲ್ಲಿ ಚೀನಾ ಮೂಲದ ಸ್ಮಾರ್ಟ್ ಫೋನ್ ಗಳ ಹಾವಳಿಯ ನಡುವೆಯೂ ಸ್ಯಾಮ್ ಸಂಗ್ ಹೊಸ ಸಾಧನೆಯೊಂದನ್ನು ಮಾಡಿದೆ. ಗ್ಯಾಲೆಕ್ಸಿ J8 ಮತ್ತು ಗ್ಯಾಲೆಕ್ಸಿ J6 ಸ್ಮಾರ್ಟ್ ಫೋನ್ ಅನ್ನು ಅತೀ ಹೆಚ್ಚು ಪ್ರಮಾಣದಲ್ಲಿ ಮಾರಾಟ ಮಾಡಿದೆ. ಗ್ಯಾಲೆಕ್ಸಿ J8 ಮತ್ತು ಗ್ಯಾಲೆಕ್ಸಿ J6 ಸ್ಮಾರ್ಟ್ ಫೋನ್ ಸುಮಾರು 2 ಮಿಲಿಯನ್ ಸಂಖ್ಯೆಯಲ್ಲಿ ಮಾರಾಟವಾಗಿದೆ ಎಂದು ಸ್ಯಾಮ್ ಸಂಗ್ ಇಂಡಿಯಾ ತಿಳಿಸಿದೆ.

ಜೂನ್ 28 ರಂದು ಗ್ಯಾಲೆಕ್ಸಿ J8 ಮತ್ತು ಮೇ 22 ರಂದು ಗ್ಯಾಲೆಕ್ಸಿ J6 ಸ್ಮಾರ್ಟ್ ಫೋನ್ ಅನ್ನು ಸ್ಯಾಮ್ ಸಂಗ್ ಭಾರತೀಯ ಮಾರುಕಟ್ಟೆಗೆ ಪರಿಚಯ ಮಾಡಿದ್ದು, ಇಷ್ಟು ಕಡಿಮೆ ಅವಧಿಯಲ್ಲಿ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಸ್ಮಾರ್ಟ್ ಫೋನ್ ಗಳನ್ನು ಮಾರಾಟ ಮಾಡಿದ್ದು, ಸ್ಯಾಮ್ ಸಂಗ್ ಪಾಲಿಗೆ ಇದ್ದು ದೊಡ್ಡ ಸಾಧನೆಯಾಗಿದೆ. ಅದರಲ್ಲಿಯೀ ಚೀನಾ ಸ್ಮಾರ್ಟ್ ಫೋನ್ ಗಳನ್ನು ಹಿಂದಿಕ್ಕುವಲ್ಲಿ ಪ್ರಮುಖ ಸಾಧನೆಯಾಗಿದೆ.
ಗ್ಯಾಲೆಕ್ಸಿ J8 ಮತ್ತು ಗ್ಯಾಲೆಕ್ಸಿ J6 ಸ್ಮಾರ್ಟ್ ಫೋನ್ ಬಳಕೆದಾರಿಗೆ ಸಾಕಷ್ಟು ದೊಡ್ಡ ಮಟ್ಟದಲ್ಲಿ ಹೊಸ ಆಯ್ಕೆಗಳನ್ನು ನೀಡಿತ್ತು ಎನ್ನಲಾಗಿದೆ. ಅಮೊಲೈಡ್ ಇನ್ಫಿನಿಟಿ ಡಿಸ್ ಪ್ಲೇಯನ್ನು ಹೊಂದಿದ್ದ ಈ ಸ್ಮಾರ್ಟ್ ಫೋನ್ ಗಳು ಬಳಕೆದಾರರಿಗೆ ಹೊಸ ಅನುಭವನ್ನು ನೀಡಿತ್ತು.
ಸ್ಯಾಮ್ ಸಂಗ್ ಗ್ಯಾಲೆಕ್ಸಿ J8 ಸ್ಮಾರ್ಟ್ ಪೋನ್ ರೂ.18990ಕ್ಕೆ ಮಾರಾಟ ವಾಗುತ್ತಿದೆ. ಇದೇ ಮಾದರಿಯಲ್ಲಿ ಗ್ಯಾಲೆಕ್ಸಿ J6 ಎರಡು ಆವೃತ್ತಿಗಳಲ್ಲಿ ಲಭ್ಯವಿದೆ. 64 GB ಮತ್ತು 32 GB ಕ್ರಮವಾಗಿ ರೂ.15,990 ಮತ್ತು ರೂ.13990ಕ್ಕೆ ಲಬ್ಯವಿದೆ ಎನ್ನಲಾಗಿದೆ. ಈ ಎರಡು ಸ್ಮಾರ್ಟ್ ಫೋ ನ್ ಗಳಲ್ಲಿ 18.5:9 ಅನುಪಾತದ ಡಿಸ್ ಪ್ಲೇಯನ್ನು ಕಾಣಬಹುದಾಗಿದ್ದು, ಬಳಕೆದಾರರಿಗೆ ದೊಡ್ಡ ಮಟ್ಟದ ಡಿಸ್ ಪ್ಲೇಯಲ್ಲಿ ವಿಡಿಯೋ ನೋಡುವ ಅನುಭವು ಉತ್ತಮವಾಗಿತ್ತು.

ಗ್ಯಾಲೆಕ್ಸಿ J8 ನ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಕಾಣಬಹುದಾಗಿತ್ತು, ಇದೇ ಮಾದರಿಯಲ್ಲಿ ಲೈವ್ ಫೋಕಸ್ ಆಯ್ಕೆಯನ್ನು ನೀಡಲಾಗಿತ್ತು. ಇದು ಉತ್ತಮವಾದ ಚಿತ್ರಗಳನ್ನು ತೆಗೆಯಲು ಸಹಾಯವನ್ನು ಮಾಡುತ್ತಿತ್ತು.
ಗ್ಯಾಲೆಕ್ಸಿ J ಸರಣಿಯ ಸ್ಮಾರ್ಟ್ಫೋನ್ ಗಳು ಮೇಕ್ ಫಾರ್ ಇಂಡಿಯಾ ಯೋಜನೆಯಲ್ಲಿ ನಿರ್ಮಾಣಗೊಂಡವು ಎನ್ನಲಾಗಿದ್ದು, ಈ ಹಿನ್ನಲೆಯಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಯಶಸ್ಸು ಸಾಧಿಸಿತ್ತು.


Click it and Unblock the Notifications








