ಡ್ಯುಯಲ್ ಕ್ಯಾಮೆರಾದ ಸ್ಯಾಮ್‌ಸಂಗ್ ಗ್ಯಾಲಾಕ್ಷಿ ಜೆ 8 ಇಂದು ಮಾರುಕಟ್ಟೆಗೆ!!!
ಭಾರತೀಯ ಮಾರುಕಟ್ಟೆಯಲ್ಲಿ ಸಾಕಷ್ಟು ಮಧ್ಯಮ ಸರಣಿಯ ಸ್ಮಾರ್ಟ್ ಫೋನ್ ಗಳನ್ನು ಕಾಣಬಹುದಾಗಿದ್ದು, ಇದೇ ಮಾದರಿಯಲ್ಲಿ ಸ್ಯಾಮ್ ಸಂಗ್ ಮತ್ತೊಂದು ಮಧ್ಯಮ ಸರಣಿಯ ಸ್ಮಾರ್ಟ್ ಫೋನ್ ಅನ್ನು ಲಾಂಚ್ ಮಾಡಲು ಮುಂದಾಗಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಗ್ಯಾಲೆಕ್ಸಿ J ಸರಣಿಗೆ ಹೊಸದೊಂದು ಸ್ಮಾರ್ಟ್ ಫೋನ್ ಆಡ್ ಆಗುವ ಸನಿಹದಲ್ಲಿದೆ.
ಸ್ಯಾಮ್ ಸಂಗ್ ಗ್ಯಾಲೆಕ್ಸಿ J8 ಸ್ಮಾರ್ಟ್ ಫೋನ್ ಶೀಘ್ರವೇ ಮಾರುಕಟ್ಟೆಯನ್ನು ಪ್ರವೇಶಿಸಲಿದ್ದು, ಜೂನ್ 28ರಂದು ಲಾಂಚ್ ಆಗಲಿದೆ ಎನ್ನಲಾಗಿದೆ. ಜುಲೈ 20ರ ನಂತರದಲ್ಲಿ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದೆ. ಈ ಹಿನ್ನಲೆಯಲ್ಲಿ ಸ್ಯಾಮ್ ಸಂಗ್ ಗ್ಯಾಲೆಕ್ಸಿ J8 ಸ್ಮಾರ್ಟ್ ಫೋನ್ ಕುರಿತು ಮಾಹಿತಿಯೂ ಇಲ್ಲಿದೆ.

ಸ್ಯಾಮ್ ಸಂಗ್ ಗ್ಯಾಲೆಕ್ಸಿ J8 ಸ್ಮಾರ್ಟ್ ಫೋನಿನ ವಿಶೇಷತೆ:
ಸ್ಯಾಮ್ ಸಂಗ್ ಗ್ಯಾಲೆಕ್ಸಿ J8 ಸ್ಮಾರ್ಟ್ ಫೋನಿನಲ್ಲಿ ಡ್ಯುಯಲ್ ಹಿಂಬದಿ ಕ್ಯಾಮೆರಾವನ್ನು ಕಾಣಬಹುದಾಗಿದ್ದು, ಇದು 16 MP ಮತ್ತು 5 MP ಕ್ಯಾಮೆರಾಗಳನ್ನು ಹೊಂದಿದ್ದು, ಉತ್ತಮವಾದ ಚಿತ್ರಗಳನ್ನು ಸೆರೆಹಿಡಿಯುವಲ್ಲಿ ಇದು ಸಹಾಯಕಾರಿಯಾಗಿದೆ. ಅಲ್ಲದೇ ಮುಂಭಾಗದಲ್ಲಿ 16 MP ಕ್ಯಾಮೆರಾವನ್ನು ಸಹ ಅಳವಡಿಸಲಾಗಿದೆ. ಇದರೊಂದಿಗೆ LED ಫ್ಲಾಷ್ ಲೈಟ್ ಅನ್ನು ಕಾಣಬಹುದು.
ಇದಲ್ಲದೇ ಸ್ಯಾಮ್ ಸಂಗ್ ಗ್ಯಾಲೆಕ್ಸಿ J8 ಸ್ಮಾರ್ಟ್ ಫೋನಿನಲ್ಲಿ ಕ್ವಾಲ್ಕಮ್ ಸ್ನಾಪ್ ಡ್ರಾಗನ್ 450 ಪ್ರೋಸೆಸರ್ ಅನ್ನು ಕಾಣಬಹುದಾಗಿದ್ದು, ಇದರೊಂದಿಗೆ 4 GB RAM ಮತ್ತು 64 GB ಇಂಟರ್ನಲ್ ಮೆಮೊರಿಯನ್ನು ನೀಡಲಾಗಿದೆ. ಇದು ವೇಗದ ಕಾರ್ಯಚರಣೆಗೆ ಸಹಾಯವನ್ನು ಮಾಡಲಿದೆ. ಜೊತೆಗೆ 256 GB ವರೆಗೂ ಮೆಮೊರಿಯನ್ನು ವಿಸ್ತರಿಸಿಕೊಳ್ಳುವ ಅವಕಾಶವನ್ನು ಸಹ ಮಾಡಿಕೊಡಲಾಗಿದೆ.

18.5:9 ಅನುಪಾತದ 6 ಇಂಚಿನ ಡಿಸ್ ಪ್ಲೇಯನ್ನು ಹೊಂದಿರುವ ಸ್ಯಾಮ್ ಸಂಗ್ ಗ್ಯಾಲೆಕ್ಸಿ J8 ಸ್ಮಾರ್ಟ್ ಫೋನ್ HD + ಗುಣಮಟ್ಟದ ವಿಡಿಯೋಗಳನ್ನು ಉತ್ತಮವಾಗಿ ಪ್ರಸಾರವನ್ನು ಮಾಡಲಿದೆ.
ಸ್ಯಾಮ್ ಸಂಗ್ ಗ್ಯಾಲೆಕ್ಸಿ J8 ಸ್ಮಾರ್ಟ್ ಫೋನ್ ಬ್ಲೂ, ಬ್ಲಾಕ್, ಗೋಲ್ಡ್ ಬಣ್ಣಗಳಲ್ಲಿ ಮಾರಾಟವಾಗಲಿದ್ದು, ರೂ. 18,990ಕ್ಕೆ ಲಭ್ಯವಿರಲಿದೆ. ಇದಲ್ಲದೇ ICICI ಬ್ಯಾಂಕ್ ಕಾರ್ಡು ದಾರರು ಸ್ಯಾಮ್ ಸಂಗ್ ಗ್ಯಾಲೆಕ್ಸಿ J8 ಸ್ಮಾರ್ಟ್ ಫೋನಿನ ಬೆಲೆಯ ಮೇಲೆ ರೂ. 1500 ರ ವರೆಗೂ ಕ್ಯಾಷ್ ಬ್ಯಾಕ್ ಅನ್ನು ಪಡೆದುಕೊಳ್ಳಬಹುದಾಗಿದೆ.


Click it and Unblock the Notifications








