Home
ಸುದ್ದಿಜಾಲ

ಭಾರತದಲ್ಲಿ ಸ್ಯಾಮ್‌ಸಂಗ್‌ ಗ್ಯಾಲಕ್ಸಿ M11 ಸ್ಮಾರ್ಟ್‌ಫೋನ್‌ ಬೆಲೆ ಕಡಿತ!

ದಕ್ಷಿಣ ಕೊರಿಯಾ ಮೂಲದ ಸ್ಯಾಮ್‌ಸಂಗ್ ಸಂಸ್ಥೆಯು ಈಗಾಗಲೇ ಗ್ಯಾಲಕ್ಸಿ M ಸರಣಿಯಲ್ಲಿ ಹಲವು ಬಜೆಟ್‌ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿದೆ. ಸದ್ಯ ಇದೀಗ ಕಳೆದ ವರ್ಷವಷ್ಟೇ ಭಾರತದಲ್ಲಿ ಲಾಂಚ್‌ ಮಾಡಿದ್ದ ಗ್ಯಾಲಕ್ಸಿ M11 ಸ್ಮಾರ್ಟ್‌ಫೋನ್ ಬೆಲೆಯನ್ನು ಕಡಿತ ಮಾಡಿದೆ. ಈ ಸ್ಮಾರ್ಟ್‌ಫೋನ್ ತ್ರಿವಳಿ ಕ್ಯಾಮೆರಾ ಸೆಟ್‌ಅಪ್‌ ಹೊಂದಿದ್ದು, 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ.

ಸ್ಮಾರ್ಟ್‌ಫೋನ್‌

ಹೌದು, ಸ್ಮಾರ್ಟ್‌ಫೋನ್‌ ದೈತ್ಯ ಸ್ಯಾಮ್‌ಸಂಗ್‌ ತನ್ನ ಗ್ಯಾಲಕ್ಸಿ M11 ಬೆಲೆಯಲ್ಲಿ 1,000, ರೂ ಕಡಿತ ಮಾಡಿದ್ದು, 11,999 ರೂ ಮೂಲ ಬೆಲೆಯ ಗ್ಯಾಲಕ್ಸಿ M11 ಸ್ಮಾರ್ಟ್‌ಫೋನ್‌ ಇದೀಗ ಕೇವಲ 10,999 ರೂ ಗೆ ಲಭ್ಯವಾಗಲಿದೆ. ಇದು ಪಂಚ್‌- ಹೋಲ್ ಡಿಸ್‌ಪ್ಲೇಯನ್ನು ಹೊಂದಿದ್ದು, ಇದು ಡಾಲ್ಬಿ ಅಟ್ಮೋಸ್ ಆಡಿಯೊ ಬೆಂಬಲವನ್ನು ಸಹ ಒಳಗೊಂಡಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಡಿಸ್‌ಪ್ಲೇ ರಚನೆ

ಡಿಸ್‌ಪ್ಲೇ ರಚನೆ

ಗ್ಯಾಲಕ್ಸಿ M11 ಸ್ಮಾರ್ಟ್‌ಫೋನ್‌ 720 x 1560 ಪಿಕ್ಸಲ್‌ ರೆಸಲ್ಯೂಶನ್‌ ಹೊಂದಿರುವ 6.4 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಜೊತೆಗೆ ಪಂಚ್ ಹೋಲ್ ಡಿಸ್‌ಪ್ಲೇ ಮಾದರಿಯನ್ನು ಹೊಂದಿದೆ. ಈ ಫೋನಿನ 161.4x76.3x9.0mm ಸುತ್ತಳತೆಯನ್ನು ಪಡೆದಿದ್ದು, 197ಗ್ರಾಂ ತೂಕವನ್ನು ಹೊಂದಿದೆ. ಸ್ಕ್ರೀನ್‌ ರಕ್ಷಣೆಗಾಗಿ ಗೊರಿಲ್ಲಾ ಗ್ಲಾಸ್ ಇರುವ ಬಗ್ಗೆ ಮಾಹಿತಿ ಇಲ್ಲ.

ಪ್ರೊಸೆಸರ್‌ ಬಲ

ಪ್ರೊಸೆಸರ್‌ ಬಲ

ಗ್ಯಾಲಕ್ಸಿ M11 ಸ್ಮಾರ್ಟ್‌ಫೋನ್‌ 1.8GHz ವೇಗದ ಸಾಮರ್ಥ್ಯದೊಂದಿಗೆ ಸ್ನ್ಯಾಪ್‌ಡ್ರಾಗನ್ 450 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಅಲ್ಲದೆ ಆಂಡ್ರಾಯ್ಡ್‌ 10 ಓಎಸ್ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಎಸ್‌ಡಿ ಕಾರ್ಡ್‌ ಮೂಲಕ ಬಾಹ್ಯ ಮೆಮೊರಿ ವಿಸ್ತರಿಸಲು ಅವಕಾಶ ಇದೆ.

ಕ್ಯಾಮೆರಾ ರಚನೆ

ಕ್ಯಾಮೆರಾ ರಚನೆ

ಗ್ಯಾಲಕ್ಸಿ M11 ಸ್ಮಾರ್ಟ್‌ಫೋನ್‌ ತ್ರಿವಳಿ ರಿಯರ್‌ ಕ್ಯಾಮೆರಾ ಸೆಟ್‌ಆಪ್‌ ಹೊಂದಿದ್ದು, ಮುಖ್ಯ ಕ್ಯಾಮೆರಾ 13ಎಂಪಿ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಸೆಕೆಂಡರಿ ಕ್ಯಾಮೆರಾವು 5ಎಂಪಿ ಸೆನ್ಸಾರ್ ಸಾಮರ್ಥ್ಯದಲ್ಲಿದ್ದು, ಇನ್ನು ತೃತೀಯ ಕ್ಯಾಮೆರಾವು 2ಎಂಪಿ ಸೆನ್ಸಾರ್ ಬಲವನ್ನು ಪಡೆದಿದೆ. ಇದರೊಂದಿಗೆ ಸೆಲ್ಫಿಗಾಗಿ 8ಎಂಪಿ ಸೆನ್ಸಾರ್ ಕ್ಯಾಮೆರಾ ಒದಗಿಸಲಾಗಿದೆ. ಜೊತೆಗೆ ಎಡಿಟಿಂಗ್ ಆಯ್ಕೆಗಳು ಇವೆ.

ಬ್ಯಾಟರಿ ಮತ್ತು ಇತರೆ

ಬ್ಯಾಟರಿ ಮತ್ತು ಇತರೆ

ಗ್ಯಾಲಕ್ಸಿ M11 ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ ಅಪ್ ಸಾಮರ್ಥ್ಯವನ್ನು ಪಡೆದಿದೆ. ಇದರೊಂದಿಗೆ 15W ಸಾಮರ್ಥ್ಯದ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ನೀಡಿದೆ. ಇದರೊಂದಿಗೆ 4G VoLTE, ವೈಫೈ, ಬ್ಲೂಟತ್, ಜಿಪಿಎಸ್ ಆಡಿಯೊ ಜಾಕ್ ಸೇರಿದಂತೆ ಇತ್ತೀಚಿನ ಅಗತ್ಯ ಫೀಚರ್ಸ್‌ಗಳನ್ನು ಒಳಗೊಂಡಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಭಾರತದಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ 11 ಬೆಲೆ ಈಗ 4GB RAM + 64GB ಶೇಖರಣಾ ರೂಪಾಂತರಕ್ಕೆ 10,999 ರೂ. ಆಗಿದೆ. ಇತ್ತೀಚಿನ ಪರಿಷ್ಕೃತ ಬೆಲೆಗಳನ್ನು ದೇಶದ ಆಫ್‌ಲೈನ್ ಮತ್ತು ಆನ್‌ಲೈನ್ ಚಾನೆಲ್‌ಗಳ ಮೂಲಕ ಹೊರತರಲಾಗುತ್ತಿದೆ. ಸ್ಯಾಮ್‌ಸಂಗ್ ಇಂಡಿಯಾ ಆನ್‌ಲೈನ್ ಸ್ಟೋರ್ ಸಹ ಹೊಸ ಬೆಲೆಯಲ್ಲಿ ಖರೀದಿಸಲು ಅವಕಾಶ ನೀಡಿದೆ.

Best Mobiles in India

English summary
Samsung Galaxy M11 Gets A Permanent Price Cut In India.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+