Home
ಸುದ್ದಿಜಾಲ

ಸ್ಯಾಮ್‌ಸಂಗ್‌ನ ಈ ಸ್ಮಾರ್ಟ್‌ಫೋನ್‌ ಮೇಲೆ ಬರೋಬ್ಬರಿ 45% ಡಿಸ್ಕೌಂಟ್‌! ಕೂಡಲೇ ಖರೀದಿಸಿ!

ಸ್ಯಾಮ್‌ಸಂಗ್‌ ಕಂಪೆನಿ ಪರಿಚಯಿಸಿರುವ ಜನಪ್ರಿಯ ಫೋನ್‌ಗಳಲ್ಲಿ ಗ್ಯಾಲಕ್ಸಿ M13 ಕೂಡ ಒಂದಾಗಿದೆ. ಬಿಡುಗಡೆ ಆದ ದಿನದಿಂದಲೂ ಇಲ್ಲಿಯವರೆಗೆ ಬೇಡಿಕೆ ಉಳಿಸಿಕೊಂಡಿರುವ ಈ ಸ್ಮಾರ್ಟ್‌ಫೋನ್‌ ಇದೀಗ ಅಮೆಜಾನ್‌ನಲ್ಲಿ ಬಿಗ್‌ ಡಿಸ್ಕೌಂಟ್‌ ಪಡೆದುಕೊಂಡಿದೆ. ಈ ಸ್ಮಾರ್ಟ್‌ಫೋನ್‌ನ 4GB RAM ಮತ್ತು 64GB ಸ್ಟೋರೇಜ್‌ ಆಯ್ಕೆಯ ಮೇಲೆ ಈ ಡಿಸ್ಕೌಂಟ್ ಅನ್ವಯವಾಗಲಿದೆ.

ಹೌದು, ಸ್ಯಾಮ್‌ಸಂಗ್‌ ಗ್ಯಾಲಕ್ಸಿ M13 ಸ್ಮಾರ್ಟ್‌ಫೋನ್‌ ಮೇಲೆ ಅಮೆಜಾನ್‌ ಭಾರಿ ರಿಯಾಯಿತಿ ಘೋಷಣೆ ಮಾಡಿದೆ. ಇದರಿಂದ ಗ್ಯಾಲಕ್ಸಿ M13 ಸ್ಮಾರ್ಟ್‌ಫೋನ್‌ ಖರೀದಿಸುವವರಿಗೆ ಇದು ಬೆಸ್ಟ್‌ ಟೈಂ ಎನಿಸಿಕೊಂಡಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಎಕ್ಸಿನೋಸ್‌ 850 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗಾದ್ರೆ ಈ ಸ್ಮಾರ್ಟ್‌ಫೋನ್‌ ಮೇಲೆ ಅಮೆಜಾನ್‌ ನೀಡುತ್ತಿರುವ ಡಿಸ್ಕೌಂಟ್‌ ಎಷ್ಟಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸ್ಯಾಮ್‌ಸಂಗ್‌ನ ಈ ಫೋನ್‌ ಮೇಲೆ ಬರೋಬ್ಬರಿ 45% ಡಿಸ್ಕೌಂಟ್‌! ಕೂಡಲೇ ಖರೀದಿಸಿ!

ಸ್ಯಾಮ್‌ಸಂಗ್‌ ಗ್ಯಾಲಕ್ಸಿ M13 ಮೇಲೆ ಡಿಸ್ಕೌಂಟ್‌ ಎಷ್ಟಿದೆ?
ಸ್ಯಾಮ್‌ಸಂಗ್‌ ಗ್ಯಾಲಕ್ಸಿ M13 ಸ್ಮಾರ್ಟ್‌ಫೋನ್‌ ಅನ್ನು ಅಮೆಜಾನ್‌ ತಾಣದಲ್ಲಿ 14,999ರೂ ಬೆಲೆಗೆ ಪಟ್ಟಿ ಮಾಡಲಾಗಿದೆ. ಆದರೆ ಅಮೆಜಾನ್‌ ಈ ಸ್ಮಾರ್ಟ್‌ಫೋನ್‌ ಮೇಲೆ 45% ಡಿಸ್ಕೌಂಟ್‌ ನೀಡುತ್ತಿರುವುದರಿಂದ ಇದನ್ನು ಕೇವಲ 8,199ರೂ ಬೆಲೆಗೆ ಖರೀದಿಸಬಹುದಾಗಿದೆ. ಈ ಡಿಸ್ಕೌಂಟ್‌ ಸ್ಮಾರ್ಟ್‌ಫೋನ್‌ನ 4GB RAM ಮತ್ತು 64GB ಸ್ಟೋರೇಜ್‌ ಆಯ್ಕೆಗೆ ಅನ್ವಯಿಸಲಿದೆ. ಇದನ್ನು ನೀವು ಆಕ್ವಾ ಗ್ರೀನ್ ಕಲರ್‌ ಆಯ್ಕೆಯಲ್ಲಿ ಖರೀದಿಸಬಹುದು. ಇದಲ್ಲದೆ ಬ್ಯಾಂಕ್‌ ಆಫರ್‌ ಕೂಡ ಲಭ್ಯವಾಗಲಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ M13 ಫೀಚರ್ಸ್‌ ಹೇಗಿದೆ?
ಸ್ಯಾಮ್‌ಸಂಗ್‌ ಗ್ಯಾಲಕ್ಸಿ M13 ಸ್ಮಾರ್ಟ್‌ಫೋನ್‌ 6.6 ಇಂಚಿನ ಫುಲ್‌ HD+ LCD ಡಿಸ್‌ಪ್ಲೇಯನ್ನು ಹೊಂದಿದೆ. ಇದು 1080 x 2408 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇನ್ನು ಡಿಸ್‌ಪ್ಲೇ 20:9 ರಚನೆಯ ಅನುಪಾತದಲ್ಲಿ ಬರಲಿದ್ದು, 480 ನಿಟ್ಸ್‌ ಬ್ರೈಟ್‌ನೆಸ್‌ ಅನ್ನು ನೀಡಲಿದೆ. ಇದು ಗೊರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್‌ ಅನ್ನು ಹೊಂದಿದೆ.

ಸ್ಯಾಮ್‌ಸಂಗ್‌ನ ಈ ಫೋನ್‌ ಮೇಲೆ ಬರೋಬ್ಬರಿ 45% ಡಿಸ್ಕೌಂಟ್‌! ಕೂಡಲೇ ಖರೀದಿಸಿ!

ಸ್ಯಾಮ್‌ಸಂಗ್‌ ಗ್ಯಾಲಕ್ಸಿ M13 ಪ್ರೊಸೆಸರ್‌ ಯಾವುದು?
ಸ್ಯಾಮ್‌ಸಂಗ್‌ ಗ್ಯಾಲಕ್ಸಿ M13 ಸ್ಮಾರ್ಟ್‌ಫೋನ್‌ ಎಕ್ಸಿನೋಸ್‌ 850 SoC ಪ್ರೊಸೆಸರ್‌ ವೇಗವನ್ನು ಹೊಂದಿದೆ. ಇದು ಆಂಡ್ರಾಯ್ಡ್ 12.0-ಆಧಾರಿತ ಒನ್‌ UI 4 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 6GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಅನ್ನು ಹೊಂದಿದೆ. ಇದರಲ್ಲಿ ಸ್ಯಾಮ್‌ಸಂಗ್‌ RAM ಪ್ಲಸ್ ಫೀಚರ್ಸ್‌ ಮೂಲಕ RAM ಅನ್ನು 12GB ವರೆಗೆ ವಿಸ್ತರಿಸಬಹುದು. ಇದಲ್ಲದೆ ಮೈಕ್ರೊ ಎಸ್‌ಡಿ ಕಾರ್ಡ್‌ ಮೂಲಕ 1TB ವರೆಗೆ ಸ್ಟೋರೇಜ್‌ ಅನ್ನು ವಿಸ್ತರಿಸಬಹುದಾಗಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ M13 ಕ್ಯಾಮೆರಾ ಸೆಟ್‌ಅಪ್‌
ಸ್ಯಾಮ್‌ಸಂಗ್‌ ಗ್ಯಾಲಕ್ಸಿ M13 ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮೆರಾ 5 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್‌ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಹೊಂದಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಕೂಡ ನೀಡಲಾಗಿದೆ.

ಸ್ಯಾಮ್‌ಸಂಗ್‌ನ ಈ ಫೋನ್‌ ಮೇಲೆ ಬರೋಬ್ಬರಿ 45% ಡಿಸ್ಕೌಂಟ್‌! ಕೂಡಲೇ ಖರೀದಿಸಿ!

ಸ್ಯಾಮ್‌ಸಂಗ್‌ ಗ್ಯಾಲಕ್ಸಿ M13 ಬ್ಯಾಟರಿ ಮತ್ತು ಇತರೆ
ಸ್ಯಾಮ್‌ಸಂಗ್‌ ಗ್ಯಾಲಕ್ಸಿ M13 ಸ್ಮಾರ್ಟ್‌ಫೋನ್‌ 6,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 15W ವೇಗದ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈಫೈ, 4G LTE ಮತ್ತು USB ಟೈಪ್-ಸಿ ಪೋರ್ಟ್ ಅನ್ನು ಒಳಗೊಂಡಿದೆ. ಈ ಫೋನ್‌ ಕೂಡ AI ಪವರ್ ಮ್ಯಾನೇಜ್‌ಮೆಂಟ್ ಅನ್ನು ಕೂಡ ನೀಡಲಾಗಿದ್ದು, ನೀವು ಮೂರು ದಿನಗಳವರೆಗೆ ಬಳಸದ ಅಪ್ಲಿಕೇಶನ್‌ಗಳನ್ನು ಸ್ಲಿಪ್‌ಮೋಡ್‌ಗೆ ತಳ್ಳುತ್ತದೆ. ಇದರಿಂದ ಬ್ಯಾಟರಿ ಸೇವ್‌ ಆಗಲಿದೆ.

Best Mobiles in India

English summary
Samsung Galaxy M13 Smartphone Gets 45% Discount in Amazon: Details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+