ಸ್ಯಾಮ್‌ಸಂಗ್ ಗ್ಯಾಲಕ್ಸಿ M21s ಸ್ಮಾರ್ಟ್‌ಫೋನ್ ಅನಾವರಣ!
ಜನಪ್ರಿಯ ಸ್ಯಾಮ್‌ಸಂಗ್ ಸಂಸ್ಥೆಯು ತನ್ನ ಬಹುನಿರೀಕ್ಷಿತ ಗ್ಯಾಲಕ್ಸಿ M21s ಸ್ಮಾರ್ಟ್‌ಫೋನ್ ಅನ್ನು ದೇಶಿಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಗ್ಯಾಲಕ್ಸಿ M ಸರಣಿಯಲ್ಲಿ ಲಾಂಚ್ ಆಗಿರುವ ಈ ಸ್ಮಾರ್ಟ್‌ಫೋನ್ ಇತ್ತೀಚಿಗೆ ಬಿಡುಗಡೆ ಆಗಿರುವ ಗ್ಯಾಲಕ್ಸಿ F41 ಸ್ಮಾರ್ಟ್‌ಫೋನ್ ರೀಬ್ರ್ಯಾಂಡೆಂಡ್ ಆವೃತ್ತಿ ಎನ್ನಲಾಗಿದೆ. ಮುಖ್ಯವಾಗಿ ತ್ರಿವಳಿ ಕ್ಯಾಮೆರಾ ರಚನೆ, ಬಿಗ್ ಬ್ಯಾಟರಿ ಬಾಳಿಕೆಯನ್ನು ಪಡೆದಿರುವುದು ಈ ಫೋನಿನ ಪ್ರಮುಖ ಹೈಲೈಟ್ಸ್‌ಗಳಾಗಿವೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ M21s
ಹೌದು, ಸ್ಯಾಮ್‌ಸಂಗ್ ಕಂಪನಿಯು ಹೊಸದಾಗಿ ಗ್ಯಾಲಕ್ಸಿ M21s ಬ್ರೆಜಿಲ್‌ನಲ್ಲಿ ಬಿಡುಗಡೆ ಮಾಡಿದೆ. ಈ ಫೋನ್ 6,000mAh ಬ್ಯಾಟರಿ ಹೊಂದಿದ್ದು, ಮುಖ್ಯ ರಿಯರ್ ಕ್ಯಾಮೆರಾವು 64ಎಂಪಿ ಸೆನ್ಸಾರ್‌ನಲ್ಲಿದೆ. ಸೆಲ್ಫಿ ಕ್ಯಾಮೆರಾವು 32ಎಂಪಿ ಸೆನ್ಸಾರ್ ಸಾಮರ್ಥ್ಯದಲ್ಲಿದೆ ಹಾಗೆಯೇ ಸೂಪರ್ AMOLED ಮಾದರಿಯ ಡಿಸ್‌ಪ್ಲೇ ಲುಕ್ ಹೊಂದಿದೆ. ಇನ್ನುಳಿದಂತೆ ಸ್ಯಾಮ್‌ಸಂಗ್ ಗ್ಯಾಲಕ್ಸಿ M21s ಫೋನಿನ ಫೀಚರ್ಸ್‌ಗಳೆನು ಎಂಬುದನ್ನು ಮುಂದೆ ತಿಳಿಯೋಣ.

ಡಿಸ್‌ಪ್ಲೇ ರಚನೆ
ಸ್ಯಾಮ್‌ಸಂಗ್ ಗ್ಯಾಲಕ್ಸಿ M21s ಸ್ಮಾರ್ಟ್‌ಫೋನ್ 1080x2340 ಪಿಕ್ಸಲ್ ರೆಸಲ್ಯೂಶನ್ ಹೊಂದಿರುವ 6.4 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಜೊತೆಗೆ ಸೂಪರ್ AMOLED ಡಿಸ್‌ಪ್ಲೇ ಹೊಂದಿದೆ.

ಪ್ರೊಸೆಸರ್ ಬಲ
ಗ್ಯಾಲಕ್ಸಿ M21s ಸ್ಮಾರ್ಟ್‌ಫೋನ್ ಸಂಸ್ಥೆಯ ಆಕ್ಟಾ ಕೋರ್ exynos 9611 SoC ಪ್ರೊಸೆಸರ್ ಹೊಂದಿದ್ದು, ಆಂಡ್ರಾಯ್ಡ್ 10 ಓಎಸ್ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಜೊತೆಗೆ 4GB RAM + 64GB ಸ್ಟೋರೇಜ್ ಆಯ್ಕೆ ಪಡೆದಿದೆ. ಎಸ್‌ಡಿ ಕಾರ್ಡ್ ಮೂಲಕ ಬಾಹ್ಯ ಮೆಮೊರಿ ವಿಸ್ತರಿಸಲು ಅವಕಾಶ ಇದೆ.

ಕ್ಯಾಮೆರಾ ವಿನ್ಯಾಸ
ಗ್ಯಾಲಕ್ಸಿ M21s ಸ್ಮಾರ್ಟ್‌ಫೋನ್ ತ್ರಿವಳಿ ರಿಯರ್ ಕ್ಯಾಮೆರಾ ಸೆಟ್‌ಆಪ್ ಹೊಂದಿದ್ದು, ಮುಖ್ಯ ಕ್ಯಾಮೆರಾ 64ಎಂಪಿ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಸೆಕೆಂಡರಿ ಕ್ಯಾಮೆರಾವು 8ಎಂಪಿ ಸೆನ್ಸಾರ್ ಸಾಮರ್ಥ್ಯದಲ್ಲಿದ್ದು, ಇನ್ನು ತೃತೀಯ ಕ್ಯಾಮೆರಾವು 5ಎಂಪಿ ಸೆನ್ಸಾರ್ ಬಲವನ್ನು ಪಡೆದಿದೆ. ಇದರೊಂದಿಗೆ ಸೆಲ್ಫಿಗಾಗಿ 32ಎಂಪಿ ಸೆನ್ಸಾರ್ ಕ್ಯಾಮೆರಾ ಒದಗಿಸಲಾಗಿದೆ.

ಬ್ಯಾಟರಿ ಮತ್ತು ಇತರೆ
ಗ್ಯಾಲಕ್ಸಿ M21s ಸ್ಮಾರ್ಟ್‌ಫೋನ್ 6,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್ ಅಪ್ ಸಾಮರ್ಥ್ಯವನ್ನು ಪಡೆದಿದೆ. ಇದರೊಂದಿಗೆ 15W ಸಾಮರ್ಥ್ಯದ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ನೀಡಿದೆ. ಇದರೊಂದಿಗೆ 4G VoLTE, ವೈಫೈ, ಬ್ಲೂಟತ್, ಜಿಪಿಎಸ್, 3.5mm ಆಡಿಯೊ ಜಾಕ್ ಸೇರಿದಂತೆ ಇತ್ತೀಚಿನ ಅಗತ್ಯ ಫೀಚರ್ಸ್‌ಗಳನ್ನು ಒಳಗೊಂಡಿದೆ.

ಬೆಲೆ ಮತ್ತು ಲಭ್ಯತೆ
ಹೊಸ ಸ್ಯಾಮ್‌ಸಂಗ್ ಗ್ಯಾಲಕ್ಸಿ M21s ಸ್ಮಾರ್ಟ್‌ಫೋನ್ ಬೇಸ್ ವೇರಿಯಂಟ್ ಬೆಲೆಯು ಬ್ರೆಜಿಲ್‌ನಲ್ಲಿ BRL 1,529 (ಭಾರತದಲ್ಲಿ ಅಂದಾಜು 20,500ರೂ.) ಬ್ಲೂ ಮತ್ತು ಬ್ಲ್ಯಾಕ್ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಾಗಲಿದೆ.


Click it and Unblock the Notifications








