'ಗ್ಯಾಲಾಕ್ಸಿ ಎಂ' ಸರಣಿ ಫೋನ್‌ಗಳ ಬೆಲೆ ಇಳಿಕೆ!...ಸ್ಯಾಮ್‌ಸಂಗ್ ಪ್ರಿಯರು ಖುಷ್!
ಭಾರತದ ಬಜೆಟ್ ಮೊಬೈಲ್ ಮಾರುಕಟ್ಟೆಯಲ್ಲಿ ಸ್ಯಾಮ್‌ಸಂಗ್ ಕಂಪೆನಿಗೆ ಮರುಜೀವ ನೀಡಿರುವ ಎಂ ಸರಣಿ ಸ್ಮಾರ್ಟ್‌ಫೋನ್‌ಗಳ ಬೆಲೆ ಇಳಿಕೆ ಮಾಡಲಾಗಿದೆ. ಸ್ಯಾಮ್‌ಸಂಗ್ ಇತ್ತೀಚೆಗೆ ಪರಿಚಯಿಸಿರುವ ಗ್ಯಾಲಕ್ಸಿ M30 ಸೇರಿದಂತೆ, ಗ್ಯಾಲಕ್ಸಿ ಎಂ ಸರಣಿಯಲ್ಲಿ ಪರಿಚಯಿಸಿದ್ದ ಮೊದಲೆರಡು ಫೋನ್‌ಗಳಾದ ಗ್ಯಾಲಕ್ಸಿ M20 ಮತ್ತು ಗ್ಯಾಲಕ್ಸಿ M10 ಬೆಲೆಗಳು ಸಹ ಇಳಿಕೆಯಾಗಿವೆ.

ಅಮೆಜಾನ್ ಇಂಡಿಯಾದಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ-ಸೀರೀಸ್ ಫೋನ್‌ಗಳಲ್ಲಿ ಮಾರಾಟವನ್ನು ನಡೆಸುತ್ತಿದ್ದು, ಇದರ ಭಾಗವಾಗಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ 20, ಗ್ಯಾಲಕ್ಸಿ ಎಂ 10 ಮತ್ತು ಗ್ಯಾಲಕ್ಸಿ ಎಂ30 ಸ್ಮಾರ್ಟ್‌ಪೋನ್‌ಗಳ ಮೇಲೆ ರಿಯಾಯಿತಿ ಸಿಕ್ಕಿದೆ. ಇದರ ಜೊತೆಗೆ ನೋ ಕಾಸ್ಟ್ ಇಎಂಐ ಹಾಗೂ 7,800ರೂ. ಗಳವರೆಗೆ ಎಕ್ಸ್‌ಚೇಂಜ್ ಡಿಸ್ಕೌಂಟ್ ಅನ್ನು ನೀಡಲಾಗಿದೆ.
ಬೆಲೆ ಕಡಿತದಿಂದಾಗಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ 30 ಸ್ಮಾರ್ಟ್‌ಫೋನಿನ ಎರಡೂ ಶೇಖರಣಾ ರೂಪಾಂತರದ ಫೋನ್‌ಗಳ ಮೇಲೂ 1,000 ರೂ. ಡಿಸ್ಕೌಂಟ್ಸ್ ನೀಡಲಾಗಿದ್ದು, 4 ಜಿಬಿ RAM + 64 ಜಿಬಿ ಸ್ಟೋರೇಜ್ ರೂಪಾಂತರವು ಅಮೆಜಾನ್‌ನಲ್ಲಿ 13,990 ರೂಪಾಯಿಗಳಿಗೆ ಖರೀದಿಗೆ ಲಭ್ಯವಿದೆ. ಈ ಮೊದಲು ಈ ಸ್ಮಾರ್ಟ್‌ಪೋನ್ ಮೂಲ ಬೆಲೆ 14,990 ರೂಪಾಯಿಗಳಾಗಿತ್ತು.

ಇನ್ನು ಗ್ಯಾಲಕ್ಸಿ ಎಂ 20 ಇದೀಗ ಕೇವಲ ₹ 9,990 ರೂ. ಗಳಿಗೆ ಲಭ್ಯವಿದೆ , 3 ಜಿಬಿ RAM + 32 ಜಿಬಿ ರೂಪಾಂತರದ ಈ ಫೋನ್ ಬೆಲೆ ಮೊದಲು 10,990 ರೂ.ಗಳಾಗಿದ್ದವು. ಹಾಗೆಯೇ 4 ಜಿಬಿ ರ್ಯಾಮ್ + 64 ಜಿಬಿ ಸ್ಟೋರೇಜ್ ರೂಪಾಂತರವು ಪ್ರಸ್ತುತ 11,990 ರೂಪಾಯಿಗಳಿಗೆ ಖರೀದಿಗೆ ಲಭ್ಯವಿದೆ. ಈ ಮೊದಲು ಈ ಫೋನ್ 12,990 ರೂ. ಗಳ ಬೆಲೆಯನ್ನು ಹೊಂದಿತ್ತು.
ಈ ಮೊದಲು 8,990 ರೂ.ಗಳ ಬೆಲೆಯನ್ನು ಹೊಂದಿದ್ದ ಗ್ಯಾಲಕ್ಸಿ ಎಂ 10 ಸ್ಮಾರ್ಟ್‌ಫೋನಿನ 3 ಜಿಬಿ ರ್ಯಾಮ್ + 32 ಜಿಬಿ ಸ್ಟೋರೇಜ್ ರೂಪಾಂತರದ ಪೋನ್ ಬೆಲೆ ಇದೀಗ 7,990 ರೂ. ಗಳಾಗಿವೆ. ವೆಚ್ಚವಿಲ್ಲದ ಇಎಂಐ ಮತ್ತು ಐಸಿಐಸಿಐ ಬ್ಯಾಂಕ್ ಗ್ರಾಹಕರಿಗೆ 1,500 ರೂ.ವೆಗಿನ ತ್ವರಿತ ರಿಯಾಯಿತಿಯನ್ನು ಹೊಂದಿರುವ ಈ ಡೀಲ್ ಸ್ಯಾಮ್‌ಸಂಗ್ ಪ್ರಿಯರನ್ನು ಆಕರ್ಷಿಸಿದೆ.


Click it and Unblock the Notifications








