Home
ಸುದ್ದಿಜಾಲ

ಸ್ಯಾಮ್‌ಸಂಗ್‌ ಗ್ಯಾಲಕ್ಸಿ M31 ಸ್ಮಾರ್ಟ್‌ಫೋನ್‌ ಲಾಂಚ್‌!..6,000mAh ಬ್ಯಾಟರಿ!

ಸ್ಮಾರ್ಟ್‌ಫೋನ್‌ ವಲಯದಲ್ಲಿ ದಿಗ್ಗಜ ಎನಿಸಿಕೊಂಡಿರುವ ಸ್ಯಾಮ್‌ಸಂಗ್‌ ಕಂಪೆನಿ ತನ್ನ M ಆವೃತ್ತಿಯಲ್ಲಿ ಹೊಸ ಸ್ಮಾರ್ಟ್‌ಫೋನ್‌ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಇತ್ತೀಚಿನ ವರ್ಷಗಳಲ್ಲಿ Mಸೀರಿಸ್‌ನಲ್ಲಿ M30 ಹಾಗೂ M30s ಸ್ಮಾರ್ಟ್‌ಫೋನ್‌ಗಳನ್ನ ಬಿಡುಗಡೆ ಮಾಡಿ ಸಂಚಲನ ಸೃಷ್ಟಿಸಿದ್ದ ಸ್ಯಾಮ್‌ಸಂಗ್. ಈ ಬಾರಿ ಕ್ವಾಡ್ ರಿಯರ್ ಕ್ಯಾಮೆರಾ ಸೆಟ್‌ಅಪ್‌ ಹೊಂದಿರುವ ಹೊಸ ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಿದೆ.

ಹೌದು

ಹೌದು, ಸ್ಮಾರ್ಟ್‌ಫೋನ್‌ ದಿಗ್ಗಜ ಸ್ಯಾಮ್‌ಸಂಗ್‌ ಕಂಪೆನಿ ತನ್ನ ಹೊಸ ಗ್ಯಾಲಕ್ಸಿ M31 ಸ್ಮಾರ್ಟ್‌ಫೋನ್‌ ಅನ್ನು ಮಾರುಕಟ್ಟೆಗೆ ಲಾಂಚ್‌ ಮಾಡಿದೆ. ಈ ಸ್ಮಾರ್ಟ್‌ಫೋನ್‌ ಹಿಂದಿನ M ಸರಣಿಯ ಸ್ಮಾರ್ಟ್‌ಫೋನ್‌ಗಳ ಹೋಲಿಕೆಯನ್ನ ಒಳಗೊಂಡಿದ್ದರು ಸಹ ಫೀಚರ್ಸ್‌ಗಳಲ್ಲಿ ಭಿನ್ನತೆಯನ್ನ ಹೊಂದಿದೆ. ಅಲ್ಲದೆ ಗ್ಯಾಲಕ್ಸಿ M31 ಸ್ಮಾರ್ಟ್‌ಫೋನ್‌ ಗ್ರೇಡಿಯಂಟ್ ಬ್ಯಾಕ್ ವಿನ್ಯಾಸ ಮತ್ತು ವಾಟರ್‌ಡ್ರಾಪ್- ನಾಚ್‌ ಶೈಲಿಯ ಡಿಸ್‌ಪ್ಲೇಯನ್ನು ಒಳಗೊಂಡಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಯಾವೆಲ್ಲಾ ಫೀಚರ್ಸ್‌ಗಳನ್ನ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ನೋಡಿ.

ಡಿಸ್‌ಪ್ಲೇ

ಡಿಸ್‌ಪ್ಲೇ

ಈ ಸ್ಮಾರ್ಟ್‌ಫೋನ್‌ 1080x2340 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಹೊಂದಿರುವ 6.4 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಇನ್‌ಫಿನಿಟಿ ಯು ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ ಸೂಪರ್‌ ಅಮೋಲ್ಡ್‌ಸ್ಕ್ರೀನ್‌ ಹೊಂದಿದ್ದು, 19.5:9 ಡಿಸ್‌ಪ್ಲೇ ಅನುಪಾತವನ್ನು ಒಳಗೊಂಡಿದೆ. ಇದಲ್ಲದೆ ಈ ಡಿಸ್‌ಪ್ಲೇ ವಾಟರ್‌ಡ್ರಾಪ್‌ ನಾಚ್‌ ಶೈಲಿಯ ವಿನ್ಯಾಸವನ್ನು ಹೊಂದಿದ್ದು ವಿಡಿಯೋ ವೀಕ್ಷಣೆಯಲ್ಲಿ ಉತ್ತಮ ಅನುಭವ ನೀಡಲಿದೆ. ಅಲ್ಲದೆ ಉತ್ತಮ ವಿಡಿಯೋ ಕರೆಗಳ ಅನುಭವ ಸಿಗಲಿದೆ.

ಪ್ರೊಸೆಸರ್‌

ಪ್ರೊಸೆಸರ್‌

ಸ್ಯಾಮ್‌ಸಂಗ್‌ ಗ್ಯಾಲಕ್ಸಿ M31 ಸ್ಮಾರ್ಟ್‌ಫೋನ್‌ ಸ್ಯಾಮ್‌ಸಂಗ್‌ exynos 9611 SoC ಪ್ರೊಸೆಸರ್‌ ಹೊಂದಿದ್ದು, ಆಂಡ್ರಾಯ್ಡ್‌10 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಇದಲ್ಲದೆ 6GB RAM ಮತ್ತು 64GB ಶೇಖರಣಾ ಸಾಮರ್ಥ್ಯ ಹಾಗೂ 6GB RAM ಮತ್ತು 128GB ಸಾಮರ್ಥ್ಯ ಹೊಂದಿರುವ ವೆರಿಯೆಂಟ್‌ ಆಯ್ಕೆಯಲ್ಲಿ ಈ ಸ್ಮಾರ್ಟ್‌ಫೋನ್‌ ಲಭ್ಯವಾಗಲಿದ್ದು, ಮೆಮೊರಿ ಕಾರ್ಡ ಮೂಲಕ 512GB ವರೆಗೆ ಶೇಖರಣಾ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.

ಕ್ಯಾಮೆರಾ ವಿನ್ಯಾಸ

ಕ್ಯಾಮೆರಾ ವಿನ್ಯಾಸ

ಈ ಸ್ಮಾರ್ಟ್‌ಫೋನ್‌ ಕ್ವಾಡ್‌ ರಿಯರ್‌ ಕ್ಯಾಮೆರಾ ಸೆಟ್‌ಆಪ್‌ ಹೊಂದಿದ್ದು, ಮುಖ್ಯ ಕ್ಯಾಮೆರಾ 64 ಮೆಗಾ ಪಿಕ್ಸೆಲ್‌ ಸ್ಯಾಮ್‌ಸಂಗ್ ISOCELL ಬ್ರೈಟ್‌ GW1 ಸೆನ್ಸಾರ್‌ ಜೊತೆಗೆ f/ 1.8 ಲೆನ್ಸ್ ಅನ್ನು ಒಳಗೊಂಡಿದೆ. ಎರಡನೇ ಕ್ಯಾಮೆರಾ 8 ಮೆಗಾ ಪಿಕ್ಸೆಲ್‌ ಸೆನ್ಸಾರ್ f/ 2.2 ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಅನ್ನು ಹೊಂದಿದೆ, ಮೂರು ಮತ್ತು ನಾಲ್ಕನೇ ಕ್ಯಾಮೆರಾ 5 ಮೆಗಾಪಿಕ್ಸೆಲ್ ಮ್ಯಾಕ್ರೋ ಶೂಟರ್ ಮತ್ತು ಡೆಪ್ತ್‌ ಸೆನ್ಸಾರ್‌ ಅನ್ನು ಒಳಗೊಂಡಿವೆ. ಇದಲ್ಲದೆ 32 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಹೊಂದಿರುವ ಸೆಲ್ಫಿ ಕ್ಯಾಮೆರಾವನ್ನು ಸಹ ನೀಡಲಾಗಿದೆ. ಇನ್ನು ಈ ಕ್ಯಾಮೆರಾಗಳಲ್ಲಿ ನೈಟ್ ಮೋಡ್, ಸೂಪರ್ ಸ್ಟೆಡಿ ಮೋಡ್ ಮತ್ತು ಸೂಪರ್ ಸ್ಲೊ-ಮೊ ಫೀಚರ್ಸ್‌ ಅನ್ನು ನೀಡಲಾಗಿದೆ.

ಬ್ಯಾಟರಿ ಮತ್ತು ಇತರೆ

ಬ್ಯಾಟರಿ ಮತ್ತು ಇತರೆ

ಸ್ಯಾಮ್‌ಸಂಗ್ ಗ್ಯಾಲಕ್ಸಿ m31 ಸ್ಮಾರ್ಟ್‌ಫೋನ್‌ 6,000mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಆಪ್‌ ಅನ್ನು ಹೊಂದಿದ್ದು, ಒಂದೇ ಚಾರ್ಜ್‌ನಲ್ಲಿ 26 ಗಂಟೆಗಳ ವೀಡಿಯೊ ಪ್ಲೇಬ್ಯಾಕ್ ಹಾಗೂ 119 ಗಂಟೆಗಳ ಮ್ಯೂಸಿಕ್‌ ಪ್ಲೇಬ್ಯಾಕ್ ಅನ್ನು ನೀಡಲಿದೆ. ಅಲ್ಲದೆ ಇದು 15W ವೇಗದ ಚಾರ್ಜಿಂಗ್‌ಅನ್ನು ಬೆಂಬಲಿಸಲಿದೆ. ಇನ್ನಿ ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G VOLTE, ವೈ-ಫೈ, ಬ್ಲೂಟೂತ್, ಜಿಪಿಎಸ್, ಯುಎಸ್‌ಬಿ ಟೈಪ್-ಸಿ, ಮತ್ತು 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಅನ್ನು ಬೆಂಬಲಿಸಲಿದೆ.

ಬೆಲೆ

ಬೆಲೆ

ಇನ್ನು ಸ್ಯಾಮ್‌ಸಂಗ್ ಗ್ಯಾಲಕ್ಸಿ M31 64GB ಶೇಖರಣಾ ಸಾಮರ್ಥ್ಯದ ಸ್ಮಾರ್ಟ್‌ಫೋನ್‌ ಬೆಲೆ 15,999 ರೂ, ಹಾಗೂ 128GB ಶೇಖರಣಾ ಸಾಮರ್ಥ್ಯದ ಆಯ್ಕೆಯ ಸ್ಮಾರ್ಟ್‌ಫೋನ್‌ ಬೆಲೆ 16,999 ರೂ. ಆಗಿದೆ. ಸದ್ಯ ಮಾರಾಟದ ಪ್ರಾರಂಭಿಕ ಹಂತದಲ್ಲಿ 1,000 ರೂ ಆಫರ್‌ ನೀಡಿದ್ದು ರೂ. 14,999.ಗೆ ಖರೀದಿಸಬಹುದಾಗಿದ್ದು, ಈ ಆಫರ್‌ ಎಷ್ಟು ದಿನಗಳವರೆಗೆ ಲಭ್ಯವಾಗಲಿದೆ ಅನ್ನುವುದರ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.

ಲಭ್ಯತೆ

ಲಭ್ಯತೆ

ಸದ್ಯ ಸ್ಯಾಮ್‌ಸಂಗ್ ಗ್ಯಾಲಕ್ಸಿ M31ಎರಡು ವೆರಿಯೆಂಟ್‌ ಆಯ್ಕೆಯ ಸ್ಮಾರ್ಟ್‌ಫೋನ್‌ಗಳು ಓಷನ್ ಬ್ಲೂ ಮತ್ತು ಸ್ಪೇಸ್ ಬ್ಲ್ಯಾಕ್ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಾಗಲಿವೆ. ಅಲ್ಲದೆ ಈ ಸ್ಮಾರ್ಟ್‌ಫೋನ್‌ಗಳು ಅಮೆಜಾನ್, ಸ್ಯಾಮ್ಸಂಗ್ ಇಂಡಿಯಾ ಆನ್‌ಲೈನ್ ಸ್ಟೋರ್, ಮತ್ತು ಪ್ರಮುಖ ಸ್ಮಾರ್ಟ್‌ಫೋನ್‌ ಮಾರಾಟ ಮಳಿಗೆಗಳಲ್ಲಿ ಮಾರ್ಚ್ 5, ಮಧ್ಯಾಹ್ನ 12 ಗಂಟೆಯ ನಂತರ ಭಾರತದಲ್ಲಿ ಮಾರಾಟವಾಗಲಿದೆ.

Best Mobiles in India

English summary
Samsung Galaxy M31 will go on sale in India starting March 5, and has been priced starting Rs. 15,999.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+