ಅಮೆಜಾನ್ ಪ್ರೈಮ್ ಡೇ ಸೇಲ್: ಗ್ಯಾಲಕ್ಸಿ ನೋಟ್ 8 ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಭಾರೀ ಕಡಿತ
ಮುಂದಿನ ವಾರ ಅಮೇಜಾನ್ ಪ್ರೈಮ್ ಡೇ ಸೇಲ್ ಗೆ ಮುಹೂರ್ತ ಫಿಕ್ಸ್ ಆಗಿದೆ. ಕಂಪೆನಿಯು ಸುಮಾರು 36 ತಾಸುಗಳ ಭರ್ಜರಿ ರಿಯಾಯಿತಿ ಸೇಲ್ ನಡೆಸುತ್ತಿದ್ದು ಸ್ಮಾರ್ಟ್ ಫೋನ್, ಆಕ್ಸಸರೀಸ್ ಗಳು, ಮನೆ ಬಳಕೆ ವಸ್ತುಗಳು, ಫ್ಯಾಷನ್ ಮತ್ತು ಇತರೆ ಹಲವಾರು ವಸ್ತುಗಳ ಮೇಲೆ ಆಫರ್ ಲಭ್ಯವಿದೆ.
ಆಫರ್ ಗಳ ಜೊತೆಗೆ ಅಮೇಜಾನ್ ನಲ್ಲಿ ಕೆಲವು ಎಕ್ಸ್ ಕ್ಲೂಸೀವ್ ಸೇಲ್, ಬ್ಲಾಕ್ ಬಸ್ಟರ್ ವೀಡಿಯೋ ಸೇಲ್ ಮತ್ತು ಉತ್ಯುತ್ತಮ ಡೀಲ್ ಗಳೂಕೂಡ ನಡೆಯುತ್ತಿದೆ. ಆಪ್ ಮತ್ತು ವೆಬ್ ಸೈಟ್ ಎರಡರ ಮೂಲಕವೂ ಕೂಡ ಗ್ರಾಹಕರು ಇದರ ಉಪಯೋಗ ಪಡೆಯುವ ನಿಟ್ಟಿನಲ್ಲಿ ಕೆಲವು ಆಫರ್ ಗಳ ವಿವರವನ್ನು ಕಂಪೆನಿ ಪ್ರಕಟ ಪಡಿಸಿದೆ.

ಅಂತಹ ಪ್ರಮುಖ ಆಫರ್ ಗಳಲ್ಲಿ ಒಂದೆನಿಸಿರುವುದು ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 8 ನ ಬೆಲೆಯಲ್ಲಿನ ಇಳಿಕೆ, ಹೌದು. ಸದ್ಯ ಈ ಡಿವೈಸ್ ನ ಬೆಲೆ ಅಮೇಜಾನ್ ನಲ್ಲಿ 55,900 ರುಪಾಯಿಗಳು.ಆದರೆ ಪ್ರೈಮ್ ಡೇ ಸೇಲ್ ನಲ್ಲಿ ಅಮೇಜಾನ್ ಈ ಫೋನಿನ ಮೇಲೆ 10,000 ರುಪಾಯಿ ವರೆಗಿನ ಎಕ್ಸ್ ಚೇಂಜ್ ಆಫರ್ ನೀಡುತ್ತಿದೆ. ಅಂದರೆ ಅರ್ಹ ಖರೀದಿದಾರರಿಗೆ ಈ ಫೋನಿನ ಬೆಲೆ ಕೇವಲ 45,900 ಆಗಲಿದೆ. ಆದರೆ ಈ ಆಫರ್ ಕೇವಲ ಪ್ರೈಮ್ ಸದಸ್ಯರಿಗೆ ಮಾತ್ರ ಲಭ್ಯವಿರುತ್ತದೆ.
ಇದರ ಜೊತೆಗೆ ಅಮೇಜಾನ್ ಕ್ಯಾಷ್ ಬ್ಯಾಕ್ ಆಫರ್ ಕೂಡ ನೀಡುತ್ತಿದೆ. ಹೆಚ್ ಡಿಎಫ್ ಸಿ ಬ್ಯಾಂಕಿನ ಕ್ರೆಡಿಟ್ ಕಾರ್ಡ್ ಇಲ್ಲವೇ ಡೆಬಿಟ್ ಕಾರ್ಡ್ ಮೂಲಕ ಖರೀದಿ ಮಾಡುವ ಗ್ರಾಹಕರಿಗೆ 4,000 ರುಪಾಯಿಯ ಕ್ಯಾಷ್ ಬ್ಯಾಕ್ ದೊರೆಯಲಿದೆ. ಇನ್ನು 9 ತಿಂಗಳ ಇಎಂಐ ಆಯ್ಕೆ ಕೂಡ ಇದೆ. ಒಂದು ವೇಳೆ ನಿಮಗೂ ಕೂಡ ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 8 ಖರೀದಿಸಬೇಕು ಎಂಬ ಹಂಬಲವಿದ್ದರೆ ಜುಲೇ 16 ರಂದು ಅಮೇಜಾನ್ ಗೆ ಲಾಗಿನ್ ಆದ್ರೆ ಆಯಿತು.
ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 8 ನ್ನು ಹೊರತು ಪಡಿಸಿ ಕಂಪೆನಿಯು ಇತರೆ 200 ವಸ್ತುಗಳ ಮೇಲೆ ಭರ್ಜರಿ ರಿಯಾಯಿತಿಯನ್ನು ನೀಡುತ್ತಿದೆ. ಅದರಲ್ಲಿ ಹೆಚ್ ಪಿ, ಒನ ಪ್ಲಸ್, Acer , ಜಿಎಪಿ, ಮಾರ್ಕ್ಸ್ & ಸ್ಪೆನ್ಸರ್, ನೋಸ್ಚ್ ಹೀಗೆ ಹಲವು ಕಂಪೆನಿಗಳು ಸೇರಿಕೊಂಡಿವೆ. ಫೈಯರ್ ಟಿವಿ ಸ್ಟಿಕ್, ಕಿಂಡಲ್ ಓಯಸಿಸ್, ಕಿಂಡಲ್ ಪೇಪರ್ ವೈಟ್ ಮತ್ತು ಅಮೇಜಾನ್ ಈಕೋ ಮೇಲೂ ಕೂಡ ಹಲವು ರಿಯಾಯಿತಿಯನ್ನು ಅಮೇಜಾನ್ ನೀಡುತ್ತಿದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 8 ನ ವೈಶಿಷ್ಟ್ಯತೆಗಳ ಬಗ್ಗೆ ಪುನಃ ನಿಮಗೆ ನೆನಪಿಸಬೇಕು ಎಂದರೆ ಇದರಲ್ಲಿ 6.3 ಇಂಚಿನ QHD+ AMOLED ಡಿಸ್ಪ್ಲೇ ಇದ್ದು 1440 x 2960 ಪಿಕ್ಸಲ್ ಮತ್ತು 18.5.9ಅನುಪಾತವನ್ನು ಹೊಂದಿದೆ. ಇದು ಕಂಪೆನಿಯ ಸ್ವಂತ ಆಕ್ಟಾ-ಕೋರ್ - Exynos 8895 ಪ್ರೊಸೆಸರ್ ನ್ನು ಹೊಂದಿದ್ದು ಇದು 6ಜಿಬಿ ಮೆಮೊರಿ ಮತ್ತು 64ಜಿಬಿ ಇಂಟರ್ನಲ್ ಸ್ಟೋರೇಜ್ ನೊಂದಿಗೆ ಪೇರ್ ಆಗಿದೆ. ಈ ಹ್ಯಾಂಡ್ ಸೆಟ್ ನಲ್ಲಿ ಡುಯಲ್ ಹಿಂಭಾಗದ ಕ್ಯಾಮರಾವಿದ್ದು ಎರಡೂ ಕೂಡ 12 ಎಂಪಿ ಸಾಮರ್ಥ್ಯ ಹೊಂದಿದೆ. ಸೆಲ್ಫೀ ಕ್ಯಾಮರಾವು 8 ಎಂಪಿ ಕೆಪಾಸಿಟಿಯನ್ನು ಹೊಂದಿದೆ. ಈ ಡಿವೈಸ್ ಆಂಡ್ರಾಯ್ಡ್ 8.0 ಓರಿಯೋ ಆಪರೇಟಿಂಗ್ ಸಿಸ್ಟಮ್ ಮುಖಾಂತರ ರನ್ ಆಗುತ್ತದೆ ಜೊತೆಗೆ 3300 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ.


Click it and Unblock the Notifications








