ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 8 ಕ್ಕೆ 13,000 ರುಪಾಯಿ ಇಳಿಕೆ
ಕಳೆದ ವರ್ಷದ ಸ್ಯಾಮ್ ಸಂಗ್ ನ ಫ್ಲ್ಯಾಗ್ ಶಿಪ್ ಸ್ಮಾರ್ಟ್ ಫೋನ್ ಆಗಿರುವ ಗ್ಯಾಲಕ್ಸಿ ನೋಟ್ 8 ರ ಬೆಲೆಯಲ್ಲಿ ಮತ್ತೊಮ್ಮೆ ಇಳಿಕೆಯಾಗಿದೆ. 67,900 ರುಪಾಯಿ ಬೆಲೆಗೆ ಈ ಸ್ಮಾರ್ಟ್ ಫೋನ್ ಬಿಡುಗಡೆಯಾಗಿತ್ತು. ಮೊದಲ ಬಾರಿಗೆ ಅಗಸ್ಟ್ ನಲ್ಲಿ 12,000 ರುಪಾಯಿ ಬೆಲೆಯನ್ನು ಇಳಿಕೆ ಮಾಡಲಾಗಿತ್ತು. ಇದೀಗ ಮತ್ತೊಮ್ಮೆ ಈ ಡಿವೈಸ್ ನ ಬೆಲೆಯಲ್ಲಿ ಇಳಿಕೆಯಾಗಿದ್ದು ಬರೋಬ್ಬರಿ 13,000 ರುಪಾಯಿ ಇಳಿಕೆಯಾಗಿದೆ.ಅಂದರೆ ಗ್ರಾಹಕರು ಇದೀಗ ಈ ಸ್ಮಾರ್ಟ್ ಫೋನ್ ನ್ನು ಬೆಲೆ ಇಳಿಕೆಯ ನಂತರ ಕೇವಲ 42,900 ರುಪಾಯಿಗೆ ಖರೀದಿಸಬಹುದಾದ ಅವಕಾಶವಿದೆ.

ಆನ್ ಲೈನ್ ಮತ್ತು ಆಫ್ ಲೈನ್ ಎರಡೂ ಚಾನಲ್ ಗಳಲ್ಲಿ ಈ ಬೆಲೆ ಇಳಿಕೆಯು ಲಭ್ಯವಾಗುತ್ತದೆ. ಕಂಪೆನಿಯು ಮಾಸಿಕ ಇಎಂಐ ಆಯ್ಕೆಯನ್ನು ಕೂಡ ನೀಡುತ್ತಿದ್ದು ಪ್ರಾರಂಭಿಕ ಕಂತು 3628 ರುಪಾಯಿ ಬೆಲೆಗೆ ಖರೀದಿಸಬಹುದು. ಒಂದು ವೇಳೆ ಗ್ರಾಹಕರು ಪೇಟಿಎಂ ಬಳಸಿ ಪಾವತಿ ಮಾಡಿದ್ದಲ್ಲಿ ಹೆಚ್ಚುವರಿ 1,000 ರುಪಾಯಿ ಕ್ಯಾಷ್ ಬ್ಯಾಕ್ ಸೌಲಭ್ಯ ಕೂಡ ಲಭ್ಯವಾಗುತ್ತದೆ.
ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 8ನ ವೈಶಿಷ್ಟ್ಯತೆಗಳು:
ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 8 6.3-ಇಂಚಿನ ಕ್ವಾಡ್ HD+ ಸೂಪರ್ AMOLED ಡಿಸ್ಪ್ಲೇ ಇನ್ಫಿನಿಟಿ ಜೊತೆಗೆ 1440x2960 ಪಿಕ್ಸಲ್ ರೆಸಲ್ಯೂಷನ್ ನ್ನು ಹೊಂದಿದೆ. ಈ ಸ್ಮಾರ್ಟ್ ಫೋನ್ ಆಂಡ್ರಾಯ್ಡ್ 7.1.1 Nougat ಆಪರೇಟಿಂಗ್ ಸಿಸ್ಟಮ್ ನ್ನು ಹೊಂದಿದ್ದು ಆಂಡ್ರಾಯ್ಡ್ ಓರಿಯೋ ಅಪ್ ಡೇಟ್ ನ್ನು ಹೊಂದಿಲ್ಲ. ಇದು ಕಂಪೆನಿಯ ಸ್ವಂತ 10nm Exynos 8895 ಪ್ರೊಸೆಸರ್ ಜೊತೆಗೆ 6GB RAM ನ್ನು ಹೊಂದಿದೆ. ಇದರಲ್ಲಿ 64GB ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆ ಇದ್ದು ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 256ಜಿಬಿ ವರೆಗೆ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶವಿದೆ.
ಡುಯಲ್ ಸಿಮ್ ಸ್ಮಾರ್ಟ್ ಫೋನ್ ನೋಟ್ ಸಿರೀಸ್ ಗಳಲ್ಲೇ ಪ್ರಥಮವಾಗಿದ್ದು ಡುಯಲ್ ಹಿಂಭಾಗದ ಕ್ಯಾಮರಾ ಸೆಟ್ ಅಪ್ ನ್ನು ಹೊಂದಿದೆ. ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 8 ಎರಡು 12MP ಸೆನ್ಸರ್ ನ್ನು ಹೊಂದಿದ್ದು ಅದರಲ್ಲಿ ಒಂದು ವೈಡ್ ಆಂಗಲ್ ಲೆನ್ಸ್ ಜೊತೆಗೆ f/1.7 ಅಪರ್ಚರ್ ನ್ನು ಹೊಂದಿದೆ ಮತ್ತು ಎರಡನೆಯದ್ದು ಟೆಲಿಫೋಟೋ ಝೂಮ್ ಲೆನ್ಸ್ ಜೊತೆಗೆ f/2.4 ಅಪರ್ಚರ್ ನ್ನು ಹೊಂದಿದೆ.
ಮುಂಭಾಗದಲ್ಲಿ 8MP ಸೆಲ್ಫೀ ಶೂಟರ್ ಜೊತೆಗೆ f/1.7 ಅಪರ್ಚರ್ ನ್ನುಹೊಂದಿದೆ. ಕಂಪೆನಿಯು ತಿಳಿಸುವಂತೆ ಎರಡೂ ಕ್ಯಾಮರಾವು ಕೂಡ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಷನ್ ನ್ನು ಹೊಂದಿದೆ. ಇದರ ಜೊತೆಗೆ ಕ್ಯಾಮರಾವು ಡುಯಲ್ ಕ್ಯಾಪ್ಚರ್ ಮೋಡ್ ನ್ನು ಮುಂಭಾಗ ಮತ್ತು ಹಿಂಭಾಗ ಎರಡಕ್ಕೂ ಹೊಂದಿದೆ. ಎರಡೂ ಇಮೇಜ್ ಗಳನ್ನು ಬಳಕೆದಾರರು ಸೇವ್ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.
ಫಿಂಗರ್ ಪ್ರಿಂಟ್ ಸೆನ್ಸರ್ ನೊಂದಿಗೆ ಬರುವ ಈ ಫೋನ್ ಐರಿಸ್ ಸ್ಕ್ಯಾನರ್ ಮತ್ತು ಫೇಶಿಯಲ್ ರೆಕಗ್ನಿಷನ್ ತಂತ್ರಜ್ಞಾನವನ್ನು ಹೊಂದಿದೆ.ಸ್ಯಾಮ್ ಸಂಗ್ ಪೇ ಗೆ ಕೂಡ ಇದು ಬೆಂಬಲ ನೀಡುತ್ತದೆ.
ಈ ಸ್ಮಾರ್ಟ್ ಫೋನ್ ಎಸ್-ಪೆನ್ ಗೂ ಬೆಂಬಲ ನೀಡುತ್ತದೆ ಮತ್ತು ಕಂಪೆನಿಯ ಸ್ವಂತ ಅಸಿಸ್ಟೆಂಟ್ ಆಗಿರುವ ಬಿಕ್ಸ್ಬೈಗೂ ಕೂಡ ಬೆಂಬಲವಿದೆ. ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 8 3300mAh ಬ್ಯಾಟರಿಯನ್ನು ಹೊಂದಿದ್ದು 22 ತಾಸುಗಳು ಟಾಕ್ ಟೈಮ್ ನ್ನು ಆಫರ್ ಮಾಡುತ್ತದೆ.


Click it and Unblock the Notifications








