ಅಮೆಜಾನ್ ಪ್ರೈಮ್ ಡೇ ಸೇಲ್: ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 8 ಬೆಲೆ ಕೇವಲ 38,333 ರೂ...!
ಅಮೇಜಾನ್ ಪ್ರೈಮ್ ಡೇ ಸೇಲ್ ಆರಂಭಗೊಂಡಾಯ್ತು. ಗ್ರಾಹಕರಿಗೆ ಕೊಡುಗೆಗಳ ಸುರಿಮಳೆಯೂ ಆಗಿದೆ. ಅಂತಹ ಬೆಸ್ಟ್ ಆಫರ್ ಗಳ ಪಟ್ಟಿಯಲ್ಲಿ ಇದೂ ಕೂಡ ಒಂದು. ಹಲವಾರು ಸ್ಯಾಮ್ ಸಂಗ್ ಪ್ರೊಡಕ್ಟ್ ಗಳ ಮೇಲೆ ಭಾರೀ ರಿಯಾಯಿತಿ ಇದ್ದು ಕೆಲವರ ಪಾಲಿನ ಕನಸಿನ ಮೊಬೈಲ್ ಎಂದೆನಿಸುವ ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 8 ನ ಬೆಲೆಯಲ್ಲಿ ಹೆಚ್ಚುಕಡಿಮೆ 18,000 ರುಪಾಯಿ ರಿಯಾಯಿತಿ ಲಭ್ಯವಾಗುತ್ತಿದೆ.
ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 8 ಒಂದು ಅತ್ಯತ್ತುಮವಾದ ಸ್ಮಾರ್ಟ್ ಫೋನ್ ಆಗಿದ್ದು ಉತ್ತಮ ಡಿಸ್ಪ್ಲೇ, ಕ್ಯಾಮರಾ ಮತ್ತು ಇತರೆ ವೈಶಿಷ್ಟ್ಯೆತೆಗಳನ್ನು ಹೊಂದಿರುವ ಸ್ಯಾಮ್ ಸಂಗ್ ಕಂಪೆನಿಯ ಫೋನ್ ಗಳಲ್ಲಿ ಒಂದೆನಿಸಿದೆ. ಅದೇ ಕಾರಣಕ್ಕೆ ಇಂದಿಗೂ ಕೂಡ ಈ ಮೊಬೈಲ್ ಗೆ ಗ್ರಾಹಕರ ಬಳಕ ಇದೆ. ಆದರೆ 56,000 ರುಪಾಯಿಯ ಈ ಫೋನ್ ಕೆಲವರ ಕೈಗೆ ಕನಸೇ ಆಗಿರಬಹುದು.

ಒಂದು ವರ್ಷದ ಮುನ್ನ ಬಿಡುಗಡೆಗೊಂಡಿದ್ದ ಈ ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 8 ಗೆ ಈಗ ಬೆಲೆ ಇಳಿಕೆಯಾಗಿದೆ ಎಂದು ಹೇಳಿದರೆ ಖಂಡಿತ ಅದನ್ನು ಇಷ್ಟ ಪಡುವ ಗ್ರಾಹಕನಿಗೆ ಅದೆಷ್ಟು ಪರಮಾನಂದ ಆಗುತ್ತದೋ ತಿಳಿಯದು.. ಹೌದು ಸ್ಯಾಮ್ ಸಂಗ್ ಗ್ಯಾಲಕ್ಸಿ 8 ಈಗ ನಿಮ್ಮ ಕೈಗೆ ಕೇವಲ 41,990 ರುಪಾಯಿಗೆ ಲಭ್ಯವಾಗುತ್ತದೆ.
ಅಮೇಜಾನ್ ನ ಪ್ರೈಮ್ ಸದಸ್ಯತ್ವ ಹೊಂದಿರುವವರು ನೋಟ್ 89 ನ್ನು 41,990 ರುಪಾಯಿಗೆ ಅಮೇಜಾನ್ ಪ್ರೈಮ್ ಡೇ ಸೇಲ್ ನಲ್ಲಿ ಪಡೆದುಕೊಳ್ಳಬಹುದು( ಅದು ಇಂದು ಮಧ್ಯಾಹ್ನ 12 ಗಂಟೆಯಿಂದ ಆರಂಭವಾಗಿದ್ದು ಜುಲೈ 18,2018 ಮಧ್ಯರಾತ್ರಿವರೆಗೂ ಇರಲಿದೆ). ಹಾಗಾದ್ರೆ ಗ್ಯಾಲಕ್ಸಿ ನೋಟ್ 9 ನ್ನು 41,990 ರುಪಾಯಿಗೆ ಪಡೆದುಕೊಳ್ಳುವುದು ಹೇಗೆ ಎಂಬ ವಿವರ ಇಲ್ಲಿದೆ ನೋಡಿ.

ಉದಾಹರಣೆಗೆ ನೀವು ಶಿಯೋಮಿ ರೆಡ್ಮಿ ನೋಟ್ 3 ಮೊಬೈಲ್ ನ್ನು ಎಕ್ಸ್ ಚೇಂಜ್ ಮಾಡುತ್ತಿದ್ದೀರಿ ಎಂದು ಭಾವಿಸೋಣ, ಆಗ ಅದಕ್ಕೆ ನಿಮಗೆ ಮರುಮಾರಾಟ ಬೆಲೆ 2567+ 10,000 ನಿಮ್ಮ ಸ್ಮಾರ್ಟ್ ಫೋನ್ ಲೆ ಲಭ್ಯವಾಗುತ್ತದೆ. ಆಗ ಗ್ಯಾಲಕ್ಸಿ ನೋಟ್ 8 ಬೆಲೆ ನಿಮಗೆ 42,333 ಆಗಲಿದೆ. ನಂತರ ನೀವು ಹೆಚ್ ಡಿಎಫ್ ಸಿ ಕ್ರೆಡಿಟ್ ಕಾರ್ಡ್ ಬಳಸಿ ಇಎಮ್ಐ ಆಯ್ಕೆ ಬಳಸದೇ ಖರೀದಿಸಿದರೆ ಹೆಚ್ಚುವರಿ 4000 ಕ್ಯಾಷ್ ಬ್ಯಾಕ್ ಲಭ್ಯವಾಗುತ್ತದೆ. ಆಗ ನೀವು ಖರೀದಿಸುವ ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 8 ಬೆಲೆ 38,333 ರುಪಾಯಿ ಆಗಲಿದೆ.
ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 8 ನ ವೈಶಿಷ್ಟ್ಯತೆಗಳು:
ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 8 ನಲ್ಲಿ ದೊಡ್ಡದಾದ ಮತ್ತು ಪ್ರಕಾಶಮಾನವಾದ 6.3 ಇಂಚಿನ OLED ಡಿಸ್ಪ್ಲೇ ಇದ್ದು, ಗೋರಿಲ್ಲಾ ಗ್ಲಾಸ್ 5 ನಿಂದ ಮೇಲ್ಬಾಗದಲ್ಲಿ ರಕ್ಷಣೆ ಇದೆ. ಈ ಸ್ಮಾರ್ಟ್ ಫೋನ್ Exynos 8895 ಆಕ್ಟ್-ಕೋರ-ಚಿಪ್ ಸೆಟ್ ನಿಂದ ರನ್ ಆಗುತ್ತದೆ ಮತ್ತು 6 ಜಿಬಿ ಮೆಮೊರಿ ಮತ್ತು 64 ಜಿಬಿ ಸ್ಟೋರೇಜ್ ಅವಕಾಶ ಹೊಂದಿದೆ. ಎಸ್ ಡಿ ಕಾರ್ಡ್ ಮೂಲಕ ಹೆಚ್ಚುವರಿ ಸ್ಟೋರೇಜ್ ನ್ನು ಪಡೆಯಬಹುದು.

ಕ್ಯಾಮರಾ ವಿಚಾರಕ್ಕೆ ಬಂದರೆ, ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 8 ಡುಯಲ್ ಕ್ಯಾಮರಾ ಸೆಟ್ ಅಪ್ ನ್ನು ಹೊಂದಿದ್ದು ಟೆಲಿಫೋಟೋ ಲೆನ್ಸ್ ಹೊಂದಿದೆ. ಇದು 2x ಆಪ್ಟಿಕಲ್ ಝೂಮ್ ಮತ್ತು ಬೊಕೆಷ್ ಎಫೆಕ್ಟ್ ನೀಡುತ್ತದೆ. ಸದ್ಯ ಈ ಫೋನ್ ಆಂಡ್ರಾಯ್ಡ್ 8 ಓರಿಯೋ ಮೂಲಕ ರನ್ ಆಗುತ್ತದೆ ಮತ್ತು 2019 ರಲ್ಲಿ ಆಂಡ್ರಾಯ್ಡ್ ಪಿ ಗೆ ಅಪ್ ಡೇಟ್ ಆಗಲಿದೆ.
ಫಾಸ್ಟ್ ಚಾರ್ಜಿಂಗ್ ವೈಶಿಷ್ಟ್ಯ ಇದರಲ್ಲಿ ಇದ್ದು, ವಯರ್ ಲೆಸ್ ಚಾರ್ಜಿಂಗ್ ವೈಶಿಷ್ಟ್ಯವೂ ಇದೆ 3300 mAh ನ ಬ್ಯಾಟರಿಯನ್ನು ಇದು ಹೊಂದಿದೆ ಮತ್ತು ಎಸ್-ಪೆನ್ ಇದ್ದು ಇದು ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 8 ನ ಹೈಲೆಟ್ ಆಗಿದೆ. ಒಟ್ಟಾರೆ ಸ್ಯಾಮ್ ಸಂಗ್ ಹೆಚ್ಚು ಪ್ರಸಿದ್ಧ ಪೋನ್ ಗಳಲ್ಲಿ ಇದೂ ಕೂಡ ಒಂದೆನಿಸಿದ್ದು, ಈಗ ಅತ್ಯಂತ ಕಡಿಮೆ ಬೆಲೆಗೆ ಖರೀದಿಸುವ ಅವಕಾಶವಿದೆ.


Click it and Unblock the Notifications








