ಸ್ಯಾಮ್ಸಂಗ್‌ ಗ್ಯಾಲಾಕ್ಸಿ ಪ್ರಿಮಿಯರ್‌ ಜಿಟಿ-I9260 ಬರಲಿದೆ

Posted By: Vijeth

ಸ್ಯಾಮ್ಸಂಗ್‌ ಗ್ಯಾಲಾಕ್ಸಿ ಪ್ರಿಮಿಯರ್‌ ಜಿಟಿ-I9260 ಬರಲಿದೆ
ದಕ್ಷಿಣ ಕೊರಿಯಾ ಮೂಲದ ತಾಂತ್ರಿಕ ಸರಕುಗಳ ತಯಾರಿಕೆಯ ದಿಗ್ಗಜ ಸಂಸ್ಥೆಯಾದಂತಹ ಸ್ಯಾಮ್ಸಂಗ್‌ ಇತ್ತೀಚೆಗಷ್ಟೇ ತನ್ನಯ ನೂತನ ಗ್ಯಾಲಾಕ್ಸಿ ನೋಟ್‌ 2, ಗ್ಯಾಲಾಕ್ಸಿ ಎಸ್‌3 ಹಾಗೂ ಗ್ಯಾಲಾಕ್ಸಿ ಎಸ್‌3 ಮಿನಿ ಸ್ಮಾರ್ಟ್‌ಫೋನ್ಸ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿ ಭಾರೀ ಸುದ್ಧಿಯಲ್ಲಿತ್ತು. ಅಂದಹಾಗೆ ಸಂಸ್ಥೆಯು ಇದೀಗ ಮತ್ತೆ ಸುದ್ಧಿಯಲ್ಲಿದ್ದು ತನ್ನಯ ನೂತನ ಗ್ಯಾಲಾಕ್ಸೀ ಪ್ರಿಮಿಯರ್‌ I9260 ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಲಿದೆ ಎಂಬ ವದಂತಿ ಎಲ್ಲೆಡೆ ಹಬ್ಬಿದೆ.

ಈ ಹಿಂದೆ ಮೊಬೈಲ್‌ಗೀಕ್ಸ್‌ ವರದಿ ಮಾಡಿದ್ದಂತೆ ಸ್ಯಾಮ್ಸಂಗ್‌ನ ನೂತನ ಸ್ಮಾರ್ಟ್‌ಫೋನ್‌ ಬಹುತೇಕ ಗ್ಯಾಲಾಕ್ಸಿ ಎಸ್‌ 3 ಯ ವಿನ್ಯಾಸ ಹೊಂದಿದೆ ಎಂದು ಕೆಲ ಫೋಟೋಗಳನ್ನೂ ಕೂಡ ಬಹಿರಂಗ ಪಡಿಸಿತ್ತು. ಇದಲ್ಲದೆ ವರದಿಗಳ ಪ್ರಕಾರ ಗ್ಯಾಲಾಕ್ಸಿ ಪ್ರಿಮಿಯರ್‌ ನಲ್ಲಿ ಆಂಡ್ರಾಯ್ಡ್‌ ಜೆಲ್ಲಿಬೀನ್‌ ಓಎಸ್‌ ನೊಂದಿಗೆ 4.65 ಇಂಚಿನ ಸೂಪರ್‌ AMOLED ದರ್ಶಕ ಹಾಗೂ 1280 x 720 ಪಿಕ್ಸೆಲ್‌ ರೆಸೆಲ್ಯೂಷನ್‌, 1.5GHz ಡ್ಯುಯೆಲ್‌ ಕೋರ್‌ ARM ಕಾರ್ಟೆಕ್ಸ್‌ A9 ಪ್ರೊಸೆಸರ್‌, ಹಿಂಬದಿಯ 8MP ಕ್ಯಾಮೆರಾ, 2MP ನ ಮುಂಬದಿಯ ಕ್ಯಾಮೆರಾ, 1GB RAM, 8GB/16GB ಆಂತರಿಕ ಸ್ಟೋರೇಜ್‌, ಮೈಕ್ರೋ ಎಸ್‌ಡಿ ಕಾರ್ಡ್‌ ಸ್ಲಾಟ್‌ ಮೂಲಕ 32GB ವರೆಗೆ ಮೆಮೊರಿ ವಿಸ್ತರಣೆ. ಅಲ್ಲದೆ ಹೆಚ್ಚುವರಿಯಾಗಿ Wi-Fi, ಬ್ಲೂಟೂತ್‌ 4.0, NFC, DLNA, 3G ಹಾಗೂ ಮೈಕ್ರೋ USB 2.0 ಹೊಂದಿದೆ.

GLಬೆನ್ಚಮಾರ್ಕ್ಸನ ವರದಿಗಳ ಪ್ರಕಾರ ಗ್ಯಾಲಾಕ್ಸಿ ಪ್ರಿಮಿಯರ್‌ I9260 ಸ್ಮಾರ್ಟ್‌ಫೋನ್‌ನಲ್ಲಿ ಪವರ್‌VR SGX 544 GPU, ಹೊಂದಿದ್ದು ಇತ್ತೀಚೆಗೆ ಆಪಲ್‌ ಚಿಪ್‌ಸೆಟ್‌ನಲ್ಲಿ ಬಳಸಲಾಗುದ್ದ SGZ543 GPU ನಂತೆಯೇ ಇದೆ ಎಂದು ತಿಳಿಸಲಾಗಿದೆ. ಇದಲ್ಲದೆ ನೂತನ ಸ್ಮಾರ್ಟ್‌ಫೋನ್‌ 68.1 mm x 133.97 mm ಸುತ್ತಳತೆಯನ್ನು ಹೊಂದಿದೆ ಎಂದು ವರದಿಗಳು ತಿಳಿಸಿವೆ. ವರ್ಷಾಂತ್ಯಕ್ಕೆ ಮಾರುಕಗೆ ಬರಲಿರವ ಈ ನೂತನ ಸ್ಮಾರ್ಟ್‌ಫೋನ್‌ ಸುಮಾರು 480 ಯೂರೋಸ್‌ (ಸುಮಾರು ರೂ. 38,000) ದರದಲ್ಲಲಿ ಲಭ್ಯವಾಗಲಿದೆ ಎಂದು ಅಂದಾಜಿಸಲಾಗಿದೆ.

Read In English...

ಭಾರತದಲ್ಲಿ ಗ್ಯಾಲಾಕ್ಸಿ ಎಸ್‌3 ಮಿನಿ ಬಿಡುಗಡೆ

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot