ಸ್ಯಾಮ್‌ಸಂಗ್ ಗ್ಯಾಲಕ್ಸಿ ರಿಂಗ್ ಬಗ್ಗೆ ಹೆಚ್ಚಾಯ್ತು ನಿರೀಕ್ಷೆ? ಬಿಡುಗಡೆ ಯಾವಾಗ?
ಟೆಕ್ ವಲಯದಲ್ಲಿ ಸ್ಮಾರ್ಟ್‌ವಾಚ್‌ಗಳಿಗೆ ಸೆಡ್ಡು ಹೊಡೆಯುವ ಹಾದಿಯಲ್ಲಿ ಸ್ಮಾರ್ಟ್ ರಿಂಗ್‌ಗಳು ಸಾಕಷ್ಟು ಸದ್ದು ಮಾಡುತ್ತಿವೆ. ಈಗಾಗಲೇ ಪ್ರಮುಖ ಬ್ರ್ಯಾಂಡ್‌ಗಳು ತಮ್ಮ ಹೊಸ ಸ್ಮಾರ್ಟ್ ರಿಂಗ್‌ಗಳನ್ನು ಪರಿಚಯಿಸಿ ಹೊಸ ಸಂಚಲನವನ್ನು ಮೂಡಿಸಿವೆ. ಇದೇ ಹಾದಿಯಲ್ಲಿ ಸ್ಯಾಮ್‌ಸಂಗ್ ಕಂಪೆನಿ ಕೂಡ ಸಾಗಿದ್ದು, ಸದ್ಯದಲ್ಲೇ ಗ್ಯಾಲಕ್ಸಿ ರಿಂಗ್ ಪರಿಚಯಿಸಲು ತಯಾರಿ ನಡೆಸಿದೆ.
ಹೌದು, ಸ್ಯಾಮ್‌ಸಂಗ್ ಕಂಪೆನಿ ಗ್ಯಾಲಕ್ಸಿ ರಿಂಗ್ ಪರಿಚಯಿಸುವ ವಿಚಾರ ಈಗಾಗಲೇ ಸುದ್ದಿಯಾಗಿದೆ. ಆದರೆ ಸ್ಯಾಮ್‌ಸಂಗ್ ಗ್ಯಾಲಕ್ಸಿ ರಿಂಗ್ ಯಾವಾಗ ಮಾರುಕಟ್ಟೆಗೆ ಎಂಟ್ರಿ ನೀಡಲಿದೆ ಅನ್ನೊ ವಿಚಾರ ಇದೀಗ ಮತ್ತೆ ಮುನ್ನಲೆಗೆ ಬಂದಿದೆ. ನಾಯ್ಸ್ ಲೂನಾ ರಿಂಗ್, ಬೋಟ್ ಸಂಸ್ಥೆಯ ಸ್ಮಾರ್ಟ್ ರಿಂಗ್‌ಗಳ ಹಾವಳಿ ಹೆಚ್ಚಾಗುತ್ತಿದ್ದ ಹಾಗೇ ಸ್ಯಾಮ್‌ಸಂಗ್ ಗ್ಯಾಲಕ್ಸಿ ರಿಂಗ್ ಬಗ್ಗೆ ಹೆಚ್ಚಿನ ಚರ್ಚೆ ನಡೆಯುತ್ತಿದೆ. ಹಾಗಾದ್ರೆ ಸ್ಯಾಮ್‌ಸಂಗ್ ಗ್ಯಾಲಕ್ಸಿ ರಿಂಗ್ ಯಾವಾಗ ಮಾರುಕಟ್ಟೆಗೆ ಎಂಟ್ರಿ ನೀಡಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ರಿಂಗ್ ಬಗ್ಗೆ ಸಾಕಷ್ಟು ವದಂತಿಗಳು ಹರಿದಾಡಿವೆ. ಅದರಂತೆ ಸ್ಯಾಮ್‌ಸಂಗ್ ಸ್ಮಾರ್ಟ್ ರಿಂಗ್ ಇದೇ ವರ್ಷದ ಅಂತಿಮ ದಿನಗಳಲ್ಲಿ ಬರಲಿದೆ ಎಂದು ಒಂದು ಕಡೆಯಾದರೆ, ಜನವರಿ 2024 ರ ಆರಂಭದ ದಿನಗಳಲ್ಲಿ ಬರಲಿದೆ ಎಂದು ಹೇಳಲಾಗಿದೆ. ಇದರ ನಡುವೆ ಗ್ಯಾಲಕ್ಸಿ ರಿಂಗ್ ಅನ್ನು 2024 ರ ಕೊನೆಯಲ್ಲಿ ಅಥವಾ 2025 ರ ಆರಂಭದವರೆಗೆ ಪರಿಚಯಿಸುವುದಿಲ್ಲ ಎಂಬ ಸುದ್ದಿ ಇದೀಗ ಟೆಕ್ ವಲಯದಲ್ಲಿ ಹರಿದಾಡಲು ಶುರುಮಾಡಿದೆ.
ಇತ್ತೀಚಿನ ವರದಿಯ ಪ್ರಕಾರ, ಸ್ಯಾಮ್‌ಸಂಗ್ ಕಂಪೆನಿ ಹೊಸ ಗ್ಯಾಲಕ್ಸಿ Z ಫೋಲ್ಡ್ 6 ಜೊತೆಗೆ ಗ್ಯಾಲಕ್ಸಿ ರಿಂಗ್ ಬಿಡುಗಡೆ ಮಾಡಲು ಪ್ಲ್ಯಾನ್ ಮಾಡಿದೆ. ಅದರಂತೆ ಇದು ಆಗಸ್ಟ್, ಸೆಪ್ಟೆಂಬರ್, ಅಥವಾ ಅಕ್ಟೋಬರ್ 2024 ರಲ್ಲಿ ಆಗಮಿಸುವ ನಿರೀಕ್ಷೆಯಿದೆ. ಒಂದು ವೇಳೆ ಈ ಸಮಯದಲ್ಲಿ ಸ್ಮಾರ್ಟ್ ರಿಂಗ್ ಪರಿಚಯಿಸುವುದು ಸಾಧ್ಯವಾಗದಿದ್ದರೆ ಇದನ್ನು 2025 ರ ಆರಂಭದಲ್ಲಿ ಬಿಡುಗಡೆ ಮಾಡುವ ಸಾಧ್ಯತೆಯೂ ಇದೆ ಎಂದು ವರದಿಯಾಗಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ ರಿಂಗ್ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗುತ್ತಿರುವುದಕ್ಕೆ ಕಾರಣವು ಕೂಡ ಬಹಿರಂಗವಾಗಿದೆ. ಏಕೆಂದರೆ ಸ್ಯಾಮ್‌ಸಂಗ್ ಸ್ಮಾರ್ಟ್ ರಿಂಗ್‌ನಲ್ಲಿ ಹಲವು ರೀತಿಯ ಹೆಲ್ತ್ ಫೀಚರ್ಸ್‌ಗಳನ್ನು ನೀಡುವ ಸಾದ್ಯತೆಯಿದೆ. ಇದಕ್ಕಾಗಿ ಗ್ಯಾಲಕ್ಸಿ ರಿಂಗ್ ಡಿವೈಸ್ ವೈದ್ಯಕೀಯ ಅನುಮೋದನೆಯನ್ನು ಪಡೆಯಲು ಪರಿಗಣಿಸುತ್ತಿರುವುದರಿಂದ ಬಿಡುಗಡೆ ದಿನಾಂಕ ಇನ್ನು ಕೂಡ ಅಂತಿಮವಾಗಿಲ್ಲ ಎನ್ನಲಾಗಿದೆ. ಈ ಸ್ಮಾರ್ಟ್ ರಿಂಗ್ ನಿಮ್ಮ ಹೃದಯಬಡಿತವನ್ನು ಕೂಡ ಟ್ರ್ಯಾಕ್ ಮಾಡಲಿದ್ದು, ತೆಗೆದುಕೊಳ್ಳಲಾದ ರೀಡಿಂಗ್‌ಗಳಿಗೆ ಇದು ನಿಯಂತ್ರಕ ಅನುಮೋದನೆಯ ಅಗತ್ಯವಿರುತ್ತದೆ ಎನ್ನಲಾಗಿದೆ.
ಇದೇ ಕಾರಣಕ್ಕೆ ಸ್ಯಾಮ್‌ಸಂಗ್ ಗ್ಯಾಲಕ್ಸಿ ರಿಂಗ್ ವೈದ್ಯಕೀಯ ಅನುಮೋದನೆ ಪಡೆದುಕೊಳ್ಳುವುದಕ್ಕೆ ಸಾಮಾನ್ಯವಾಗಿ ಏಳರಿಂದ ಎಂಟು ತಿಂಗಳುಗಳನ್ನು ತೆಗೆದುಕೊಳ್ಳುತ್ತದೆ. ಆದರಿಂದ ವೈದ್ಯಕೀಯ ಅನುಮೋದನೆಯನ್ನು ಪಡೆಯುವುದು ಹೆಚ್ಚುವರಿ 10 ರಿಂದ 12 ತಿಂಗಳುಗಳಾಗುವ ಸಾಧ್ಯತೆಯಿದೆ. ಈ ಎಲ್ಲಾ ಪ್ರಕ್ರಿಯೆಗಳನ್ನು ಪರಿಗಣಿಸಿದರೆ ಈ ಸ್ಮಾರ್ಟ್‌ರಿಂಗ್ 2025ರಲ್ಲಿ ಬಿಡುಗಡೆ ಆಗುವ ನಿರೀಕ್ಷೆಯಿದೆ.
ಸ್ಯಾಮ್‌ಸಂಗ್ ಕಂಪೆನಿ ಗ್ಯಾಲಕ್ಸಿ ಸ್ಮಾರ್ಟ್ ರಿಂಗ್‌ನ ಒಂದು ಮಾದರಿಯನ್ನು ಮಾತ್ರ ಅಭಿವೃದ್ಧಿಪಡಿಸುತ್ತಿದೆ ಎಂದು ಹೇಳಿದೆ. ಇದು ನಾಲ್ಕು ಗಾತ್ರಗಳಲ್ಲಿ ಬರುವ ನಿರೀಕ್ಷೆಯಿದ್ದು, ಬಿಡುಗಡೆ ಮಾಡಲು ಸ್ವಲ್ಪ ಸಮಯ ತೆಗೆದುಕೊಂಡರೂ ಸ್ಯಾಮ್‌ಸಂಗ್ ಶೀಘ್ರದಲ್ಲೇ ಲಾಂಚ್ ಡೇಟ್ ಘೋಷಿಸುವ ಸಾಧ್ಯತೆಯಿದೆ.
ಇತ್ತೀಚಿಗೆ ನಾಯ್ಸ್ ಕಂಪೆನಿ ನಾಯ್ಸ್ ಲೂನಾ ರಿಂಗ್ ಪರಿಚಯಿಸಿದೆ. ಈ ಸ್ಮಾರ್ಟ್ ರಿಂಗ್ ಇನ್‌ಫ್ರಾರೆಡ್ ಫೋಟೋಪ್ಲೆಥಿಸ್ಮೋಗ್ರಫಿ (PPG) ಸೆನ್ಸಾರ್‌ಗಳು, ಸ್ಕಿನ್ ಟೆಂಪ್‌ರೇಚರ್ ಸೆನ್ಸಾರ್‌ಗಳು ಮತ್ತು 3 ಆಕ್ಸಿಸ್ ಅಕ್ಸಿಲೆರೊಮೀಟರ್‌ನಂತಹ ಅಡ್ವಾನ್ಸ್ ಸೆನ್ಸಾರ್‌ಗಳನ್ನು ಹೊಂದಿದೆ. ಇದಲ್ಲದೆ ಬಳಕೆದಾರರು ಬೆರಳಿನಿಂದ ಆಪ್ಟಿಕಲ್ ಸೆನ್ಸಾರ್‌ಗಳ ಜೋಡಣೆಯನ್ನು ಖಚಿತಪಡಿಸಿಕೊಳ್ಳುವುದಕ್ಕೆ ಅವಕಾಶ ನೀಡಿದೆ. ಇದಕ್ಕಾಗಿ ಮೂರು ಉಬ್ಬುಗಳ ಜೊತೆಗೆ ಮೂರು ಎಲ್ಇಡಿಗಳು ಮತ್ತು ಎರಡು ಪಿಡಿಗಳನ್ನು ಸಂಯೋಜಿಸುವ ಆಪ್ಟೋಮೆಕಾನಿಕಲ್ ವಿನ್ಯಾಸವನ್ನು ಬಳಸಿದೆ.


Click it and Unblock the Notifications








