Samsung Galaxy S 26 Ultra ಸ್ಮಾರ್ಟ್‌ಫೋನ್‌ನಲ್ಲಿ ಪೋಲಾರ್ ಐಡಿ ಅಳವಡಿಕೆ ! ಏನಿದು ಪೋಲಾರ್ ಐಡಿ ?
ಸ್ಮಾರ್ಟ್‌ಫೋನ್‌ಗಳ (Smartphones) ವಿಭಾಗದಲ್ಲಿ ವಿಶೇಷ ಬೇಡಿಕೆ ಹೊಂದಿರುವ ಸ್ಯಾಮ್‌ಸಂಗ್ ತನ್ನ ಗ್ರಾಹಕರಿಗಾಗಿ ಅನುಕೂಲವಾಗಲೆಂದು ಮೊಬೈಲ್ ಬಳಕೆನ್ನು ಸರಳವಾಗಿಸಲು ತನ್ನ ಸ್ಮಾರ್ಟ್‌ಫೋನ್‌ಗಳಿಗೆ ಆಗಾಗ ಹೊಸ ಹೊಸ ಅಪ್ಡೇಟ್‌ಗಳನ್ನು ತರುತ್ತಲೇ ಇರುವುದನ್ನು ನೋಡಿದ್ದೇವೆ. ಇದೀಗ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 26 ಅಲ್ಟ್ರಾ (Samsung Galaxy S 26 Ultra) ಸ್ಮಾರ್ಟ್‌ಫೋನ್ ಜೊತೆಗೆ ನೂತನ ನೂತನ 'ಮುಖ ಗುರುತಿಸುವಿಕೆ' (facial recognition) ಎಂಬ ನೂತನ ತಂತ್ರಜ್ಞಾನ ಒಂದನ್ನು ಪರಿಚಯಿಸಲಿದೆ ಎಂಬ ಅಂಶ ಸದ್ದು ಮಾಡುತ್ತಿದೆ ಹಾಗಾದ್ರೆ ಬನ್ನಿ ಏನಿದು ಹೊಸ ಮುಖ ಗುರುತಿಸುವಿಕೆ ತಂತ್ರಜ್ಞಾನ ಎಂಬುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.
ಟಿಪ್‌ಸ್ಟರ್ ಪ್ರಕಾರ, ಪ್ರಸ್ತುತ ಸ್ಯಾಮ್‌ಸಂಗ್‌ನ ಪ್ರಮುಖ ಸ್ಮಾರ್ಟ್‌ಫೋನ್‌ಗಳು (smartphones) ಫೇಸ್ ಐಡಿಗೆ ಯಾವುದೇ ಪ್ರತ್ಯೇಕ ಸೆನ್ಸಾರ್ ಅನ್ನು ಹೊಂದಿಲ್ಲ, ಆಪಲ್‌ನ ಫೇಸ್ ಐಡಿಗೆ ಹೋಲಿಸಿದರೆ ಸ್ಯಾಮ್‌ಸಂಗ್ ಟ್ರೂಡೆಪ್ತ್ ಕ್ಯಾಮೆರಾ ಮತ್ತು ಹೆಚ್ಚುವರಿ ಸೆನ್ಸಾರ್‌ಗಳಿಂದ ಚಾಲಿತವಾಗಿದೆ. ಸುಮಾರು 8 ವರ್ಷಗಳಿಂದ ಸ್ಯಾಮ್‌ಸಂಗ್‌ನ ಈ ಫೇಸ್ ಐಡಿ ತನ್ನ ಸಾಧನಗಳಲ್ಲಿ ಮುಖ ಗುರುತಿಸುವಿಕೆ ತಂತ್ರಜ್ಞಾನವು ಒಂದು ಉತ್ತಮ ಮಾನದಂಡವಾಗಿ ಉಳಿದಿದೆ. ಆದರೆ ಈ ಫೇಸ್ ರೆಕಗ್ನೈಸೇಶನ್ ಶೀಘ್ರದಲ್ಲೇ ಬದಲಾಗಬಹುದು. ಮುಂಬರುವ ಗ್ಯಾಲಕ್ಸಿ ಎಸ್ 26 ಅಲ್ಟ್ರಾದಲ್ಲಿ ನೂತನ ಫೇಸ್ ಐಡಿ ಕಾರ್ಯನಿರ್ವಹಿಸಲಿದೆ ಎಂದು ಟಿಪ್‌ಸ್ಟರ್ ಮಾಹಿತಿ ನೀಡಿದೆ ಎಂದು ಹೇಳಲಾಗುತ್ತಿದೆ.

Samsung Galaxy S25 Ultra ಅಥವಾ Galaxy S26 Ultra ಸ್ಮಾರ್ಟ್‌ಫೋನ್‌ನಲ್ಲಿ ಪೋಲಾರ್ ಐಡಿ ಫೀಚರ್ಸ್ ಹೊಂದಿರಬಹುದು:
ಟಿಪ್‌ಸ್ಟರ್ ಹೈಝಾಕಿ ರ್ಯುಹೆಯ್ (Haizaki Ryouhei) ಅವರ X ಪೋಸ್ಟ್ ಪ್ರಕಾರ, ಸ್ಯಾಮ್‌ಸಂಗ್ 'ಪೋಲಾರ್ ಐಡಿ' (PolarID) ಎಂಬ ನೂತನ ಮುಖ ಗುರುತಿಸುವಿಕೆ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುತ್ತಿರಬಹುದು ಎಂದು ಹೇಳಿದ್ದಾರೆ. ಅವರ ಪ್ರಕಾರ, ತಂತ್ರಜ್ಞಾನವು ಪ್ರಿ ಮಾರ್ಕೆಟ್ ಹಂತವನ್ನು ತಲುಪಿದೆ ಅಂದರೆ ಇದು ಸ್ಮಾರ್ಟ್‌ಫೋನ್‌ಗಳೊಂದಿಗೆ ಆಗಮಿಸಲು ಸಿದ್ಧವಾಗಿದೆ ಎಂದಿದ್ದಾರೆ.
ಟಿಪ್‌ಸ್ಟರ್ ಪ್ರಕಾರ, ಪೋಲಾರ್ ಐಡಿಗೆ ಮುಖ ಗುರುತಿಸುವಿಕೆಗಾಗಿ ಪ್ರತ್ಯೇಕ ಸೆನ್ಸಾರ್‌ನ ಅಗತ್ಯವಿಲ್ಲ, ಬದಲಿಗೆ ಇದು ಸ್ಯಾಮ್ಸಂಗ್ LSI ಸಾಮರ್ಥ್ಯಗಳೊಂದಿಗೆ ಕೋರ್ ಸೆಮಿ ಕಂಡಕ್ಟರ್‌ಗಳನ್ನು ವಿನ್ಯಾಸಗೊಳಿಸುವ ವಿಭಾಗದಲ್ಲಿ ಸ್ನಾಪ್‌ಡ್ರಾಗನ್ ಚಿಪ್ಸೆಟ್ ಅನ್ನು ಅವಲಂಬಿಸಿರಲಿದೆ. ಇದಲ್ಲದೆ, ಹೆಚ್ಚುವರಿ ಸೆನ್ಸಾರ್ ಸೇರಿಸುವ ಅಗತ್ಯವಿಲ್ಲದೇ ಸ್ಯಾಮ್‌ಸಂಗ್ ತನ್ನ ಮೊಬೈಲ್‌ಗೆ ಪಂಚ್ ಹೋಲ್ ವಿನ್ಯಾಸವನ್ನೇ ಇರಿಸಿಕೊಳ್ಳಲು ಅನುಮತಿಸುತ್ತದೆ.
ಇದನ್ನು ISOCELL Vizion 931 ಎಂದು ಸಹ ಕರೆಯಬಹುದಾಗಿದೆ. ನಿಖರವಾದ ಚಲನೆಯ ಟ್ರ್ಯಾಕಿಂಗ್ ಅನ್ನು ಒದಗಿಸುವ ಜಾಗತಿಕ ಶಟರ್ ಇಮೇಜ್ ಸೆನ್ಸಾರ್ ಉತ್ಪಾದನೆಗೆ ಸಿದ್ಧವಾಗಿರಬಹುದು ಮತ್ತು Galaxy S25 ಅಲ್ಟ್ರಾದಲ್ಲಿ ಬಳಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. Face ID ಗಿಂತ PolarID ಇನ್ನೂ ಹೆಚ್ಚು ಸುರಕ್ಷಿತವಾಗಿದೆ ಎಂದು Ryouhei ಹೇಳಿಕೊಂಡಿದ್ದಾರೆ, ಇದು ಇತರ ಮುಖ ಗುರುತಿಸುವಿಕೆ ತಂತ್ರಜ್ಞಾನಗಳಿಗಿಂತ ಉತ್ತಮವಾಗಿದೆ ಎಂದು ಒತ್ತಿ ಹೇಳಿದ್ದಾರೆ.
ಆದರೆ ಸಾಯರ್ ಗ್ಯಾಲೋಕ್ಸ್ ಎಂಬ ಹೆಸರಿನ ಮತ್ತೋರ್ವ ಟಿಪ್‌ಸ್ಟರ್ ಈ ಮಾಹಿತಿಯನ್ನು ವಿರೋಧಿಸಿದ್ದಾರೆ. ತಂತ್ರಜ್ಞಾನವು ಇನ್ನೂ ಸಿದ್ಧವಾಗಿಲ್ಲ ಮತ್ತು Samsung Galaxy S26 Ultra ದಲ್ಲಿ ಮಾತ್ರ ಇದನ್ನು ಸೇರಿಸಬಹುದಾಗಿದೆ, ಇದು 2026 ರ ಆರಂಭದಲ್ಲಿ ಪ್ರಾರಂಭವಾಗುವ ಸಾಧ್ಯತೆ ಇದೆ ಎಂದು ಊಹಿಸಿದ್ದಾರೆ. ಕಾರಣವೇನೆಂದರೆ, ಸ್ಯಾಮ್‌ಸಂಗ್ ನಿಧಾನವಾಗಿ ಆಪಲ್ ಅನ್ನು ಅನುಕರಿಸಲು ಆವಿಷ್ಕರಿಸುತ್ತಿದೆ ಮತ್ತು ಇದನ್ನು ಖಚಿತಪಡಿಸಲು ಅವರು S25U ಬದಲಿಗೆ S24U ನಲ್ಲಿ 50MP 3x ಮಾಡಲು ಸಾಧ್ಯವಾಗಿದೆ ಮತ್ತು ಈ ಕೆಲಸವನ್ನು ಹಣ ಉಳಿಸುವ ಸಲುವಾಗಿ ಮಾಡಲಾಗುತ್ತಿದೆ ಎಂದು ತೋರುತ್ತಿದೆ ಎಂದು ಎಕ್ಸ್ ಪೋಸ್ಟ್ ಒಂದರಲ್ಲಿ ಟಿಪ್‌ಸ್ಟರ್ ಹೇಳಿಕೊಂಡಿದ್ದಾರೆ.


Click it and Unblock the Notifications








