Home
ಸುದ್ದಿಜಾಲ

ಭಾರತದ ಮಾರುಕಟ್ಟೆಗೆ ಸ್ಯಾಮ್‌ಸಂಗ್‌ ಗ್ಯಾಲಕ್ಸಿ S20 + BTS ಸ್ಮಾರ್ಟ್‌ಫೋನ್‌ ಎಂಟ್ರಿ!

ಸ್ಮಾರ್ಟ್‌ಫೋನ್‌ ದಿಗ್ಗಜ ಸ್ಯಾಮ್‌ಸಂಗ್‌ ಕಂಪೆನಿ ತನ್ನ ಭಿನ್ನ ಮಾದರಿಯ ಸ್ಮಾರ್ಟ್‌ಫೋನ್‌ಗಳಿಂದ ಗುರುತಿಸಿಕೊಂಡಿದೆ. ಈಗಾಗಲೇ ಹಲವು ವೈವಿಧ್ಯಮಯ ಸ್ಮಾರ್ಟ್‌ಫೋನ್‌ಗಳನ್ನ ಪರಿಚಯಿಸಿ ಸೈ ಎನಿಸಿಕೊಂಡಿರುವ ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್‌ ಪ್ರಿಯರ ನೆಚ್ಚಿನ ಆಯ್ಕೆಗಳಲ್ಲಿ ಒಂದಾಗಿದೆ. ಸದ್ಯ ಇದೀಗ ಸ್ಯಾಮ್‌ಸಂಗ್‌ ಕಂಪೆನಿ ತನ್ನ ಮತ್ತೊಂದು ಹೊಸ ಮಾದರಿಯ ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಿದೆ.

ಸ್ಯಾಮ್‌ಸಂಗ್‌

ಹೌದು, ಸ್ಯಾಮ್‌ಸಂಗ್‌ ಕಂಪೆನಿ ತನ್ನ ಹೊಸ ಗ್ಯಾಲಕ್ಸಿ S20+BTS ಆವೃತ್ತಿಯ ಸ್ಮಾರ್ಟ್‌ಫೋನ್‌ ಅನ್ನು ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ.ಜೊತೆಗೆ ಸ್ಯಾಮ್‌ಸಂಗ್ ಗ್ಯಾಲಕ್ಸಿ ಬಡ್ಸ್‌ + BTS ಆವೃತ್ತಿಯನ್ನು ಸಹ ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ. ಇನ್ನು ಗ್ಯಾಲಕ್ಸಿ ಎಸ್ 20 + ಮತ್ತು ಗ್ಯಾಲಕ್ಸಿ ಬಡ್ಸ್ + BTS ಆವೃತ್ತಿಗಳು ಮೂಲ ಆವೃತ್ತಿಯಲ್ಲಿನ ವ್ಯತ್ಯಾಸಗಳನ್ನು ಹೊಂದಿಲ್ಲ. ಆದಾಗ್ಯೂ, ಗ್ಯಾಲಕ್ಸಿ ಎಸ್ 20 + BTS ಚಾಸಿಸ್ ಮತ್ತು ಗ್ಯಾಲಕ್ಸಿ ಬಡ್ಸ್ + ಬಿಟಿಎಸ್ ಆವೃತ್ತಿಯಲ್ಲಿ ಬ್ಯಾಂಡ್‌ನ ಲೋಗೊವನ್ನು ಹೊಂದಿರಲಿದೆ ಎನ್ನಲಾಗಿದೆ. ಅಷ್ಟಕ್ಕೂ ಈ ಸ್ಮಾರ್ಟ್‌ಫೋನ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿರಿ.

ಡಿಸ್‌ಪ್ಲೇ

ಡಿಸ್‌ಪ್ಲೇ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 20 + ಬಿಟಿಎಸ್ ಆವೃತ್ತಿಯ ಸ್ಮಾರ್ಟ್‌ಫೋನ್‌ ಸ್ಯಾಮ್‌ಸಂಗ್ ಗ್ಯಾಲಕ್ಸಿ S20 + ಸ್ಮಾರ್ಟ್‌ಫೋನ್‌ 6.7-ಇಂಚಿನ ಡಿಸ್‌ಪ್ಲೇಯನ್ನ ಹೊಂದಿದೆ. ಇನ್ನು ಈ ಡಿಸ್‌ಪ್ಲೇ ಇನ್ಫಿನಿಟಿ-ಒ ಡೈನಾಮಿಕ್ ಅಮೋಲೆಡ್ 2x ಡಿಸ್‌ಪ್ಲೇ ಆಗಿದ್ದು, ಉತ್ತಮ ವಿನ್ಯಾಸವನ್ನ ಒಳಗೊಂಡಿದೆ. ಇದಲ್ಲದೆ ಬಳಕೆದಾರರಿಗೆ ವೀಡಿಯೋ ಕರೆಗಳು ಹಾಗೂ ವೀಡಿಯೋ ವೀಕ್ಷಣೆಯಲ್ಲಿ ಉತ್ತಮ ಅನುಭವ ನಿಡುವ ಯೋಗ್ಯವಾದ ಡಿಸ್‌ಪ್ಲೇ ಮಾದರಿಯನ್ನ ಹೊಂದಿದೆ.

ಪ್ರೊಸೆಸರ್‌

ಪ್ರೊಸೆಸರ್‌

ಇನ್ನು ಈ ಸ್ಮಾರ್ಟ್‌ಫೋನ್‌ ಇನ್ನು ಈ ಸ್ಮಾರ್ಟ್‌ಫೋನ್‌ ಸ್ಯಾಮ್‌ಸಂಗ್ ಎಕ್ಸಿನೋಸ್ 990 ಪ್ರೊಸೆಸರ್‌ ವೇಗವನ್ನು ಪಡೆದುಕೊಂಡಿದ್ದು, ಆಂಡ್ರಾಯ್ಡ್‌ 10 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೇಯೇ ಈ ಸ್ಮಾರ್ಟ್‌ಫೋನ್‌ 8GB RAM ಮತ್ತು 12GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನ ಹೊಂದಿದೆ. ಇದಲ್ಲದೆ ಸಂಗ್ರಹ ಸಮರ್ಥ್ಯವನ್ನ ಮೆಮೊರಿ ಕಾರ್ಡ್‌ ಮೂಲಕ ವಿಸ್ತರಿಸಿಕೊಳ್ಳುವ ಅವಕಾಶವನ್ನ ಸಹ ನೀಡಲಾಗಿದೆ.

ಕ್ಯಾಮೆರಾ ವಿನ್ಯಾಸ

ಕ್ಯಾಮೆರಾ ವಿನ್ಯಾಸ

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S20+ ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್‌ ಸೆನ್ಸಾರ್‌, ಎರಡನೇ ಕ್ಯಾಮೆರಾ 12 ಮೆಗಾಪಿಕ್ಸೆಲ್‌ ಸೆನ್ಸಾರ್‌,ಮೂರನೇ ಕ್ಯಾಮೆರಾ 12 ಮೆಗಾಪಿಕ್ಸೆಲ್‌ ಸೆನ್ಸಾರ್‌ ಕ್ಯಾಮೆರಾವನ್ನು ಹೊಂದಿದೆ. ಜೊತೆಗೆ 10 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ನೀಡಲಾಗಿದೆ.

ಬ್ಯಾಟರಿ ಮತ್ತು ಇತರೆ

ಬ್ಯಾಟರಿ ಮತ್ತು ಇತರೆ

ಇನ್ನು ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್ 20 + 4,500 mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್‌ ಅನ್ನು ಹೊಂದಿದ್ದು, ವೇಗದ ಚಾರ್ಜಿಂಗ್‌ ಬೆಂಬಲದ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್‌, ವೈಫೈ, ಹಾಟ್‌ಸ್ಪಾಟ್‌, ಅನ್ನು ಬೆಂಬಲಿಸಲಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 20 + ಬಿಟಿಎಸ್ ಆವೃತ್ತಿ ಬೆಲೆ ರೂ. 87,999, ಆಗಿದ್ದು, ಸ್ಯಾಮ್‌ಸಂಗ್ ಗ್ಯಾಲಕ್ಸಿ ಬಡ್ಸ್ + ಬಿಟಿಎಸ್ ಆವೃತ್ತಿ 14,990 ರೂ. ಬೆಲೆಯನ್ನ ಹೊಂದಿದೆ.ಇನ್ನು ಈ ಸ್ಮಾರ್ಟ್‌ಫೋನ್‌ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 20 + ಇದೇಜುಲೈ 10 ರಿಂದ ಸೀಮಿತ ಪ್ರಮಾಣದಲ್ಲಿ ಖರೀದಿಸಲು ಲಭ್ಯವಿರುತ್ತದೆ. ಅಲ್ಲದೆ ಸ್ಯಾಮ್‌ಸಂಗ್ ತನ್ನ ಎಲ್ಲಾ ಚಾನೆಲ್‌ಗಳ ಮೂಲಕ ಗ್ಯಾಲಕ್ಸಿ ಎಸ್ 20 ಅಲ್ಟ್ರಾ ಕ್ಲೌಡ್ ವೈಟ್ ಮಾದರಿಯನ್ನು ಮಾರಾಟ ಮಾಡಲಿದ್ದು, ಗ್ಯಾಲಕ್ಸಿ ಎಸ್ 20 + ಬಿಟಿಎಸ್ ಆವೃತ್ತಿ ಮತ್ತು ಗ್ಯಾಲಕ್ಸಿ ಬಡ್ಸ್ + ಬಿಟಿಎಸ್ ಆವೃತ್ತಿ ಸ್ಯಾಮ್‌ಸಂಗ್ ಎಕ್ಸ್‌ಕ್ಲೂಸಿವ್ ಸ್ಟೋರ್‌ಗಳು ಮತ್ತು ದೇಶದ ಸ್ಯಾಮ್‌ಸಂಗ್ ಇಂಡಿಯಾ ಆನ್‌ಲೈನ್ ಸ್ಟೋರ್ ಮೂಲಕ ಲಭ್ಯವಾಗಲಿದೆ.

Best Mobiles in India

English summary
Samsung Galaxy S20+ BTS Edition has been launched in India, alongside the Galaxy Buds+ BTS Edition.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+