Home
ಸುದ್ದಿಜಾಲ

ಸ್ಯಾಮ್‌ಸಂಗ್‌ 'ಗ್ಯಾಲಕ್ಸಿS20' ಸ್ಮಾರ್ಟ್‌ಫೋನ್‌ನ ಫೀಚರ್ಸ್‌ ಬಹಿರಂಗ!

ಸ್ಮಾರ್ಟ್‌ಫೋನ್‌ ದಿಗ್ಗಜ ಸ್ಯಾಮ್‌ಸಂಗ್‌ ಕಂಪೆನಿ ತನ್ನ ಹೊಸ ಆವೃತ್ತಿಯ ಸ್ಮಾರ್ಟ್‌ಫೋನ್‌ ಗ್ಯಾಲಕ್ಸಿ S20 ಸರಣಿಯ ಸ್ಮಾರ್ಟ್‌ಫೋನ್‌ಗಳನ್ನ ಬಿಡುಗಡೆ ಮಾಡೋದಕ್ಕೆ ಸಿದ್ದತೆ ನಡೆಸ್ತಿದೆ. ಈ ನಡುವೆ ಈ ಹೊಸ ಆವೃತ್ತಿಯ ಸ್ಮಾರ್ಟ್‌ಫೋನ್‌ ಫೀಚರ್ಸ್‌ಗಳೇನು ಅನ್ನೊ ಮಾಹಿತಿ ಆನ್‌ಲೈನ್‌ನಲ್ಲಿ ಲೀಕ್‌ ಆಗಿದೆ. ಸದ್ಯ ಲೀಕ್‌ ಮಾಹಿತಿ ಪ್ರಕಾರ S20 ಸರಣಿಯ ಸ್ಮಾರ್ಟ್‌ಫೋನ್‌ಗಳು ಟಾಪ್ ಎಂಡ್ ಮಾದರಿಯ ಸ್ಮಾರ್ಟ್‌ಫೋನ್‌ಗಳಾಗಿವೆ ಎಂದು ಹೇಳಲಾಗ್ತಿದೆ.

ಹೌದು

ಹೌದು, ಸ್ಯಾಮ್‌ಸಂಗ್‌ ಕಂಪೆನಿ ಗ್ಯಾಲಕ್ಸಿ S20 ಸರಣಿಯಲ್ಲಿ ಗ್ಯಾಲಕ್ಸಿ ಎಸ್ 20, ಎಸ್ 20 + ಮತ್ತು ಎಸ್ 20 ಅಲ್ಟ್ರಾ ಸ್ಮಾರ್ಟ್‌ಫೋನ್‌ಗಳನ್ನ ಬಿಡುಗಡೆ ಮಾಡಲಿದೆ. ಸದ್ಯ ಲೀಕ್‌ ಮಾಹಿತಿಯ ಪ್ರಕಾರ ಈ ಸ್ಮಾರ್ಟ್‌ಫೋನ್‌ಗಳು 120Hz ಡಿಸ್ಪ್ಲೇ, ಅಲ್ಟ್ರಾಸಾನಿಕ್ ಅಂಡರ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಹೊಂದಿರಲಿದೆ ಅನ್ನೊ ಮಾಹಿತಿ ಲೀಕ್‌ ಆಗಿದೆ. ಗ್ಯಾಲಕ್ಸಿ ಎಸ್ 20 ಅಲ್ಟ್ರಾ ಸ್ಟ್ಯಾಂಡರ್ಡ್ 12GB ಮತ್ತು128GB, ಹಾಗೂ 16 RAM ಮತ್ತು 256GB ಶೇಖರಣಾ ಸಾಮರ್ಥ್ಯದ ವೇರಿಯೆಂಟ್‌ ಆಯ್ಕೆಯಲ್ಲಿ ಲಭ್ಯವಾಗಲಿದೆ ಅಂತಾ ಹೇಳಲಾಗ್ತಿದೆ. ಲೀಕ್‌ ಮಾಹಿತಿ ಪ್ರಕಾರ ಸ್ಯಾಮ್‌ಸಂಗ್‌ ಗ್ಯಾಲಕ್ಸಿ S20 ಸ್ಮಾರ್ಟ್‌ಫೋನ್‌ ಫಿಚರ್ಸ್‌ಗಳೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಯೋಣ ಬನ್ನಿರಿ

ಡಿಸ್‌ಪ್ಲೇ

ಡಿಸ್‌ಪ್ಲೇ

ಗ್ಯಾಲಕ್ಸಿ S20 ಆವೃತ್ತಿಯ ಸ್ಮಾರ್ಟ್‌ಫೋನ್‌ಗಳು 3200 x 1440 ಪಿಕ್ಸೆಲ್‌ ರೆಸಲ್ಯೂಶನ್‌ ಹೊಂದಿರುವ, 6.2 ಇಂಚಿನ ಡಿಸ್‌ಪ್ಲೇ ಹೊಂದಿರಲಿವೆ. ಇನ್ನು ಗ್ಯಾಲಕ್ಸಿ ಎಸ್ 20 + 6.9 ಇಂಚಿನ ಡಿಸ್‌ಪ್ಲೇ ಹೊಂದಿದ್ದರೆ, ಗ್ಯಾಲಕ್ಸಿ ಎಸ್ 20 ಅಲ್ಟ್ರಾ 6.7 ಇಂಚಿನ ಡಿಸ್‌ಪ್ಲೇ ಯನ್ನ ಹೊಂದಿರಲಿದೆ ಎಂದು ನಿರೀಕ್ಷಿಸಲಾಗಿದೆ. ಅಲ್ಲದೆ ಗ್ಯಾಲಕ್ಸಿ ಎಸ್ 20, ಎಸ್ 20 + ಮತ್ತು ಎಸ್ 20 ಅಲ್ಟ್ರಾ ಸ್ಮಾರ್ಟ್‌ಫೋನ್‌ಗಳು ಹೆಚ್ಚಿನ ರಿಪ್ರೇಶ್‌ ರೇಟ್‌ ಹೊಂದಿದ್ದು ಬ್ರೈಟ್‌ನೆಶ್‌ ನೀಟ್‌ಗಳು ಹೆಚ್ಚಿನ ಮಟ್ಟದಲ್ಲಿ ಇರಲಿದೆ.

ಪ್ರೊಸೆಸರ್‌

ಪ್ರೊಸೆಸರ್‌

ಇನ್ನು ಗ್ಯಾಲಕ್ಸಿ ಎಸ್ 20, ಎಸ್ 20 + ಮತ್ತು ಎಸ್ 20 ಅಲ್ಟ್ರಾ ಸ್ಮಾರ್ಟ್‌ಫೋನ್‌ಗಳು ಸ್ನಾಪ್ಡ್ರಾಗನ್ 865 SoC ಪ್ರೊಸೆಸರ್‌ ಹೊಂದಿದೆ, ಅಲ್ಲದೆ ಭಾರತದಲ್ಲಿ ಎಕ್ಸಿನೋಸ್ ಚಿಪ್‌ಸೆಟ್‌ ಹೊಂದಿರಲಿದ್ದು. ಅಂಡ್ರಾಯ್ಡ್9 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಜೊತೆಗೆ ಗ್ಯಾಲಕ್ಸಿ ಎಸ್ 20 + ಸ್ಮಾರ್ಟ್‌ಫೋನ್‌ಗಳು ಎಲ್ಪಿಡಿಡಿಆರ್ 5 RAM ಅನ್ನು ಹೊಂದಿರಲಿದ್ದು,12GB ಮತ್ತು128GB, ಹಾಗೂ 16 RAM ಮತ್ತು 256GB ಶೇಖರಣಾ ಸಾಮರ್ಥ್ಯದ ವೇರಿಯೆಂಟ್‌ ಆಯ್ಕೆಯಲ್ಲಿ ಲಭ್ಯವಾಗಲಿದೆ.

ಕ್ಯಾಮೆರಾ

ಕ್ಯಾಮೆರಾ

ಗ್ಯಾಲಕ್ಸಿ ಎಸ್ 20 ಮತ್ತು ಎಸ್ 20 + ಸ್ಮಾರ್ಟ್‌ಫೋನ್‌ಗಳು ಕ್ವಾಡ್‌ ಕ್ಯಾಮೆರಾ ಸೆಟ್‌ಆಪ್‌ ಹೊಂದಿರಲಿದ್ದು, ಮುಖ್ಯ ಕ್ಯಾಮೆರಾ 108MP, ಎರಡನೇ ಕ್ಯಾಮೆರಾ 48MP ಮೂರನೇ ಕ್ಯಾಮೆರಾ 10x optical, ನಾಲ್ಕನೇ ಕ್ಯಾಮೆರಾ 12MP ಅಲ್ಟ್ರಾ ವೈಡ್‌ ಆಂಗಲ್‌ ಲೆನ್ಸ್‌ ಹೊಂದಿರಲಿದೆ ಎಂದು ಅಂದಾಜಿಸಲಾಗಿದೆ. ಅಲ್ಲದೆ ಈ ಕ್ಯಾಮೆರಾಗಳಲ್ಲಿ ಟೆಲಿಫೋಟೋ ಲೆನ್ಸ್, ಮತ್ತು ಟೊಎಫ್ ಸೆನ್ಸಾರ್ ಕೂಡ ನೀಡಲಾಗಿದೆ.

ಬ್ಯಾಟರಿ ಮತ್ತು ಇತರೆ

ಬ್ಯಾಟರಿ ಮತ್ತು ಇತರೆ

ಗ್ಯಾಲಕ್ಸಿ ಎಸ್‌20 ಸರಣಿಯ ಸ್ಮಾರ್ಟ್‌ಫೋನ್‌ಗಳು 5,000mah ಬ್ಯಾಟರಿ ಪ್ಯಾಕ್‌ ಆಪ್‌ ಅನ್ನು ಹೊಂದಿದ್ದು, 45W ವೇಗದ ಚಾರ್ಜಿಂಗ್ ಸಾಮರ್ಥ್ಯವನ್ನು ಹೊಂದಿದೆ. ಇದಲ್ಲದೆ, ಎಸ್ 20 ಯ ಎಲ್ಲಾ ಸ್ಮಾರ್ಟ್‌ಫೋನ್‌ಗಳು ಮೈಕ್ರೊ ಎಸ್ಡಿ ಕಾರ್ಡ್ ಸ್ಲಾಟ್ ಅನ್ನು ಸಹ ಹೊಂದಿವೆ. ಅಲ್ಲದೆ ಫಿಂಗರ್‌ಪ್ರಿಂಟ್‌ ಸೆನ್ಸಾರ್‌ ಕೂಡ ನೀಡಲಾಗಿದ್ದು ಡಿಸ್‌ಪ್ಲೇ ರೆಸಲ್ಯೂಶನ್‌ 120hg ಇರೋದು ಗ್ರಾಹಕರಲ್ಲಿ ನಿರೀಕ್ಷೆ ದುಪ್ಪಟ್ಟು ಆಗುವಂತೆ ಮಾಡಿದೆ.

Best Mobiles in India

English summary
Samsung Galaxy S20 series is just a few weeks away. With the February 11 Galaxy Unpacked event just around the corner, there is not much left to the imagination. The entire Galaxy S20 series has been heavily leaked and rumors are beginning to solidify. We already know that there will be three editions of the Galaxy S20. These are the 6.2-inch Galaxy S20, a 6.7-inch Galaxy S20+ and a 6.9-inch Galaxy S20 Ultra.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+