Home
ಸುದ್ದಿಜಾಲ

Samsung: ಭಾರಿ ಸದ್ದು ಮಾಡಿದ್ದ ಈ ಫೋನ್‌ ಮೇಲೆ ಇದೀಗ ಬಿಗ್‌ ಡಿಸ್ಕೌಂಟ್‌!..128GB ಸ್ಟೋರೇಜ್‌ ಆಯ್ಕೆ!

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S23 ಸ್ಮಾರ್ಟ್‌ಫೋನ್‌ ಬಿಡುಗಡೆ ಆದ ದಿನದಿಂದಲೂ ತನ್ನ ಬೇಡಿಕೆಯನ್ನು ಉಳಿಸಿಕೊಂಡಿದೆ. ಈ ವರ್ಷ ಅತಿ ಹೆಚ್ಚು ಸದ್ದು ಮಾಡಿದ ಸ್ಮಾರ್ಟ್‌ಫೋನ್‌ಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ತನ್ನ ಪ್ರೀಮಿಯಂ ಫೀಚರ್ಸ್‌ಗಳಿಂದ ಸೈ ಎನಿಸಿಕೊಂಡಿರುವ ಈ ಸ್ಮಾರ್ಟ್‌ಫೋನ್‌ ಇದೀಗ ಅಮೆಜಾನ್‌ನಲ್ಲಿ ಭಾರಿ ರಿಯಾಯಿತಿಯನ್ನು ಪಡೆದುಕೊಂಡಿದೆ.

ಹೌದು, ಸ್ಯಾಮ್‌ಸಂಗ್‌ ಗ್ಯಾಲಕ್ಸಿ S23 ಸ್ಮಾರ್ಟ್‌ಫೋನ್‌ ಅಮೆಜಾನ್‌ ತಾಣದಲ್ಲಿ ವಿಶೇಷ ರಿಯಾಯಿತಿಯನ್ನು ಪಡೆದುಕೊಂಡಿದೆ. ಈ ಮೂಲಕ ಇಯರ್‌ ಎಂಡ್‌ ಟೈಂನಲ್ಲಿ ಮೊಬೈಲ್‌ ಪ್ರಿಯರಿಗೆ ಸಿಹಿ ಸುದ್ದಿಯನ್ನು ನೀಡಿದೆ. ಹೊಸ ವರ್ಷಕ್ಕೂ ಮುನ್ನ ಅತ್ಯುತ್ತಮ ಫೋನ್‌ ಖರೀದಿಸುವವರಿಗೆ ಇದು ಉತ್ತಮ ಆಯ್ಕೆಯಾಗಿದೆ. ಹಾಗಾದ್ರೆ ಸ್ಯಾಮ್‌ಸಂಗ್‌ ಗ್ಯಾಲಕ್ಸಿ S23 ಸ್ಮಾರ್ಟ್‌ಫೋನ್‌ ಮೇಲೆ ಅಮೆಜಾನ್‌ ನೀಡುತ್ತಿರುವ ಡಿಸ್ಕೌಂಟ್‌ ಎಷ್ಟಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

Samsung: ಭಾರಿ ಸದ್ದು ಮಾಡಿದ್ದ ಈ ಫೋನ್‌ ಮೇಲೆ ಇದೀಗ ಬಿಗ್‌ ಡಿಸ್ಕೌಂಟ್‌!

ಡಿಸ್ಕೌಂಟ್‌ ಎಷ್ಟು?
ಸ್ಯಾಮ್‌ಸಂಗ್‌ ಗ್ಯಾಲಕ್ಸಿ S23 ಸ್ಮಾರ್ಟ್‌ಫೋನ್‌ ಅನ್ನು ಪ್ರಸ್ತುತ ಅಮೆಜಾನ್‌ ತಾಣದಲ್ಲಿ 89,999ರೂ ಬೆಲೆಗೆ ಪಟ್ಟಿ ಮಾಡಲಾಗಿದೆ. ಈ ಸ್ಮಾರ್ಟ್‌ಫೋನ್‌ ಮೇಲೆ ಬರೋಬ್ಬರಿ 17% ಡಿಸ್ಕೌಂಟ್‌ ನೀಡುತ್ತಿರುವುದರಿಂದ ಇದರ ಬೆಲೆ 74,999ರೂ ಗಳಿಗೆ ಇಳಿಕೆಯಾಗಿದೆ. ಇದಲ್ಲದೆ ವಿವಿಧ ಬ್ಯಾಂಕ್‌ ಕಾರ್ಡ್‌ಗಳ ಮೂಲಕ ಖರೀದಿಸಿದರೆ ವಿಶೇಷ ರಿಯಾಯಿತಿ ಲಭ್ಯವಾಗಲಿದೆ. ಇದರಿಂದ ಸ್ಮಾರ್ಟ್‌ಫೋನ್‌ ಅನ್ನು ಇನ್ನಷ್ಟು ಕಡಿಮೆ ಬೆಲೆಗೆ ಖರೀದಿಸುವುದಕ್ಕೆ ಅವಕಾಶ ಸಿಗಲಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S23 ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ
ಸ್ಯಾಮ್‌ಸಂಗ್‌ ಗ್ಯಾಲಕ್ಸಿ S23 ಸ್ಮಾರ್ಟ್‌ಫೋನ್‌ 6.1 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡೈನಾಮಿಕ್‌ ಅಮೋಲೆಡ್‌ 2X ಡಿಸ್‌ಪ್ಲೇ ಹೊಂದಿದೆ. ಇನ್ನು ಡಿಸ್‌ಪ್ಲೇ 120Hz ರಿಫ್ರೆಶ್‌ ರೇಟ್‌ ಬೆಂಬಲಿಸಲಿದ್ದು, 48Hz ತನಕ ರಿಫ್ರೆಶ್‌ ರೇಟ್‌ ಅನ್ನು ಇಳಿಸಬಹುದಾಗಿದೆ. ಜೊತೆಗೆ ಡಿಸ್‌ಪ್ಲೇಯು ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ಪ್ರೊಟೆಕ್ಷನ್‌ ಹೊಂದಿದೆ.

Samsung: ಭಾರಿ ಸದ್ದು ಮಾಡಿದ್ದ ಈ ಫೋನ್‌ ಮೇಲೆ ಇದೀಗ ಬಿಗ್‌ ಡಿಸ್ಕೌಂಟ್‌!

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S23 ಪ್ರೊಸೆಸರ್‌ ಕಾರ್ಯವೈಖರಿ ಏನು?
ಸ್ಯಾಮ್‌ಸಂಗ್‌ ಗ್ಯಾಲಕ್ಸಿ S23 ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 8 Gen 2 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಆಂಡ್ರಾಯ್ಡ್‌ 13 ಬೆಂಬಲದೊಂದಿಗೆ ರನ್‌ ಆಗಲಿದೆ. ಇದು ಸ್ಯಾಮ್‌ಸಂಗ್ ಕಾರ್ಟೆಕ್ಸ್ X2, ಕಾರ್ಟೆಕ್ಸ್ A710 ಮತ್ತು ಕಾರ್ಟೆಕ್ಸ್ A510 ಲೇಔಟ್‌ನೊಂದಿಗೆ ಆಕ್ಟಾ-ಕೋರ್ ಸಿಪಿಯು ಅನ್ನು ಹೊಂದಿದೆ. ಹಾಗೆಯೇ 8GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಹೊಂದಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S23 ಕ್ಯಾಮೆರಾ ಸೆಟಪ್‌ ಏನಿದೆ?
ಸ್ಯಾಮ್‌ಸಂಗ್‌ ಗ್ಯಾಲಕ್ಸಿ S23 ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿದೆ. ಎರಡನೇ ಕ್ಯಾಮೆರಾ 12 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಆಂಗಲ್ ಮತ್ತು ಮೂರನೇ ಕ್ಯಾಮೆರಾ 10 ಮೆಗಾಪಿಕ್ಸೆಲ್ ಟೆಲಿಫೋಟೋ ಲೆನ್ಸ್‌ ಅನ್ನು ಹೊಂದಿದೆ. ಇದಲ್ಲದೆ 12 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಇದರ ಮೂಲಕ ಸೆಕೆಂಡಿಗೆ 30 ಫ್ರೇಮ್‌ಗಳಲ್ಲಿ 8K ವೀಡಿಯೊ ರೆಕಾರ್ಡಿಂಗ್ ಮಾಡಬಹುದಾಗಿದೆ.

Samsung: ಭಾರಿ ಸದ್ದು ಮಾಡಿದ್ದ ಈ ಫೋನ್‌ ಮೇಲೆ ಇದೀಗ ಬಿಗ್‌ ಡಿಸ್ಕೌಂಟ್‌!

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S23 ಬ್ಯಾಟರಿ ಮತ್ತು ಇತರೆ
ಸ್ಯಾಮ್‌ಸಂಗ್‌ ಗ್ಯಾಲಕ್ಸ S23 ಸ್ಮಾರ್ಟ್‌ಫೋನ್‌ 3,900mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 25W ವೈರ್ಡ್ ಚಾರ್ಜಿಂಗ್ ಮತ್ತು 15W ವಾಯರ್‌ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇದರ ಮೂಲಕ ಬ್ಯಾಟರಿಯನ್ನು ಕೇವಲ 30 ನಿಮಿಷಗಳಲ್ಲಿ 50% ಚಾರ್ಜಿಂಗ್‌ ಮಾಡಬಹುದು ಎಂದು ಸ್ಯಾಮ್‌ಸಂಗ್‌ ಕಂಪೆನಿ ಹೇಳಿಕೊಂಡಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 6E, ಬ್ಲೂಟೂತ್ 5.3, Wi-Fi ಡೈರೆಕ್ಟ್ ಮತ್ತು USB ಟೈಪ್-C ಪೋರ್ಟ್ ಅನ್ನು ಬೆಂಬಲಿಸಲಿದೆ.

Best Mobiles in India

English summary
Samsung Galaxy S23 5G Gets Massive Discount In Amazon
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+