ಇತ್ತೀಚಿಗೆ ಲಾಂಚ್ ಆಗಿದ್ದ ಸ್ಯಾಮ್‌ಸಂಗ್‌ನ ಈ ಫೋನ್ ಇದೀಗ ಭಾರಿ ಡಿಸ್ಕೌಂಟ್‌ನಲ್ಲಿ ಲಭ್ಯ!
ಅಮೆಜಾನ್ ತಾಣದಲ್ಲಿ ಇತ್ತೀಚಿಗೆ ಬಿಡುಗಡೆಯಾದ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರಿ ಡಿಸ್ಕೌಂಟ್ ಲಭ್ಯವಾಗ್ತಿದೆ. ಅದರಲ್ಲೂ ಇದೇ ತಿಂಗಳು ಎಂಟ್ರಿ ನೀಡಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ಸ್ಯಾಮ್‌ಸಂಗ್ ಗ್ಯಾಲಕ್ಸಿ S23 FE ನಿರೀಕ್ಷೆಗೂ ಮೀರಿದ ರಿಯಾಯಿತಿಯನ್ನು ಪಡೆದುಕೊಂಡಿದೆ. ಫ್ಲೋಟಿಂಗ್ ಕ್ಯಾಮೆರಾ ಸಿಸ್ಟಂ ಹೊಂದಿರುವುದು ಈ ಫೋನ್‌ನ ಮೇನ್ ಹೈಲೈಟ್ ಆಗಿದೆ.
ಹೌದು, ಸ್ಯಾಮ್‌ಸಂಗ್ ಗ್ಯಾಲಕ್ಸಿ S23 FE ಸ್ಮಾರ್ಟ್‌ಫೋನ್ ಅಮೆಜಾನ್ ಸೇಲ್‌ನಲ್ಲಿ 25% ಡಿಸ್ಕೌಂಟ್ ಪಡೆದಿದೆ. ಇದರಿಂದ ಕೆಲವೇ ದಿನಗಳ ಹಿಂದೆ ಬಿಡುಗಡೆಯಾದ ಸ್ಮಾರ್ಟ್‌ಫೋನ್ ಇದೀಗ ರಿಯಾಯಿತಿ ದರದಲ್ಲಿ ದೊರೆಯಲಿದೆ. ಡಿಸ್ಕೌಂಟ್ ನಂತರ ಈ ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಭಾರಿ ಇಳಿಕೆಯಾಗಿದೆ. ಹಾಗಾದ್ರೆ 25% ಡಿಸ್ಕೌಂಟ್ ನಂತರ ಗ್ಯಾಲಕ್ಸಿ S23 FE ಸ್ಮಾರ್ಟ್‌ಫೋನ್‌ನ ಬೆಲೆ ಎಷ್ಟಿದೆ? ಈ ಸ್ಮಾರ್ಟ್‌ಫೋನ್ ಫೀಚರ್ಸ್ ಹೇಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಡಿಸ್ಕೌಂಟ್ ನಂತರದ ಬೆಲೆ ಎಷ್ಟು?
ಸ್ಯಾಮ್‌ಸಂಗ್ ಗ್ಯಾಲಕ್ಸಿ S23 FE ಸ್ಮಾರ್ಟ್‌ಫೋನ್ ಅಮೆಜಾನ್‌ನಲ್ಲಿ 25% ಡಿಸ್ಕೌಂಟ್ ಪಡೆದುಕೊಂಡ ನಂತರ ಇದರ ಬೆಲೆಯಲ್ಲಿ ಇಳಿಕೆಯಾಗಿದೆ. ಸದ್ಯ ಈ ಸ್ಮಾರ್ಟ್‌ಫೋನ್ ಅಮೆಜಾನ್‌ನಲ್ಲಿ 79,999ರೂ ಬೆಲೆಯಲ್ಲಿ ಪಟ್ಟಿಮಾಡಲಾಗಿದ್ದು, ರಿಯಾಯಿತಿಯ ನಂತರ ಕೇವಲ 59,999ರೂ ಬೆಲೆಗೆ ಈ ಸ್ಮಾರ್ಟ್‌ಫೋನ್ ಖರೀದಿಗೆ ಲಭ್ಯವಾಗ್ತಿದೆ. ಇದಲ್ಲದೆ ICICI ಬ್ಯಾಂಕ್ ಕ್ರೆಡಿಟ್ ಕಾರ್ಡ್ EMI Trxn ನಲ್ಲಿ 1000ರೂ ವರೆಗೆ ಕೂಡ ರಿಯಾಯಿತಿ ಸಿಗಲಿದೆ. ಇದರಿಂದ ಸ್ಮಾರ್ಟ್‌ಫೋನ್ ಬೆಲೆ ಇನ್ನಷ್ಟು ಕಡಿಮೆಯಾಗಲಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ S23 FE ಡಿಸ್‌ಪ್ಲೇ ಹೇಗಿದೆ?
ಸ್ಯಾಮ್‌ಸಂಗ್ ಗ್ಯಾಲಕ್ಸಿ S23 FE ಸ್ಮಾರ್ಟ್‌ಫೋನ್ 6.4 ಇಂಚಿನ ಡೈನಾಮಿಕ್ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಡಿಸ್‌ಪ್ಲೇ 1080 x 2340 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದೆ. ಇದು 83.2% ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಪಡೆದುಕೊಂಡಿದೆ. ಜೊತೆಗೆ ಈ ಡಿಸ್‌ಪ್ಲೇ 19.5:9 ರಚನೆಯ ಅನುಪಾತವನ್ನು ಒಳಗೊಂಡಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ S23 FE ಪ್ರೊಸೆಸರ್ ಯಾವುದು?
ಸ್ಯಾಮ್‌ಸಂಗ್ ಗ್ಯಾಲಕ್ಸಿ S23 FE ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 Gen 1 SoC ಪ್ರೊಸೆಸರ್ ಹೊಮದಿದ್ದು, ಆಂಡ್ರಾಯ್ಡ್ 14 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಈ ಸ್ಮಾರ್ಟ್‌ಫೋನ್ 8GB RAM + 128GB ಇಂಟರ್ ಸ್ಟೋರೇಜ್ ಸಾಮರ್ಥ್ಯದಲ್ಲಿ ಲಭ್ಯವಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ S23 FE ಕ್ಯಾಮೆರಾ ವಿಶೇಷ
ಸ್ಯಾಮ್‌ಸಂಗ್ ಗ್ಯಾಲಕ್ಸಿ S23 FE ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಹೊಂದಿದೆ. ಇದು ಫ್ಲೋಟಿಂಗ್ ಕ್ಯಾಮೆರಾ ಸಿಸ್ಟಮ್ ಅನ್ನು ಪಡೆದಿದೆ. ಇನ್ನು ಫೋನ್‌ನ ಪ್ರೈಮೆರಿ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 12 ಮೆಗಾಪಿಕ್ಸೆಲ್ ಸೆನ್ಸಾರ್ ಅಲ್ಟ್ರಾವೈಡ್ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಟೆಲಿಫೋಟೋ ಲೆನ್ಸ್ ಹೊಂದಿದೆ. ಇದಲ್ಲದೆ 10 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ S23 FE ಬ್ಯಾಟರಿ ಮತ್ತು ಇತರೆ
ಸ್ಯಾಮ್‌ಸಂಗ್ ಗ್ಯಾಲಕ್ಸಿ S23 FE ಸ್ಮಾರ್ಟ್‌ಫೋನ್ 4,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಯುಎಸ್‌ಬಿ ಟೈಪ್-ಸಿ ಪೋರ್ಟ್ ಮೂಲಕ 25W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲವನ್ನು ಹೊಂದಿದೆ. 30 ನಿಮಿಷಗಳಲ್ಲಿ ಫೋನ್ ಅನ್ನು ಶೂನ್ಯದಿಂದ 50% ಚಾರ್ಜಿಂಗ್ ಮಾಡಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ Wi-Fi, GPS, NFC ಮತ್ತು ಬ್ಲೂಟೂತ್ 5.3 ಸಂಪರ್ಕವನ್ನು ಸಹ ಬೆಂಬಲಿಸುತ್ತದೆ. ಈ ಸ್ಮಾರ್ಟ್‌ಫೋನ್ ಕ್ರೀಮ್, ಗ್ರ್ಯಾಫೈಟ್, ಮಿಂಟ್ ಮತ್ತು ಪರ್ಪಲ್ ಬಣ್ಣದ ಆಯ್ಕೆಗಳಲ್ಲಿ ನೀಡಲಾಗುತ್ತದೆ.


Click it and Unblock the Notifications








