Home
ಸುದ್ದಿಜಾಲ

Samsung: 128GB ಸ್ಟೋರೇಜ್‌ ಆಯ್ಕೆಯ ಈ ಫೋನ್‌ ಬೆಲೆ ಇದೀಗ 10,000ರೂ ಇಳಿಕೆ!

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S24 ಸರಣಿ ಬಿಡುಗಡೆಗೆ ದಿನಾಂಕ ಈಗಾಗಲೇ ನಿಗದಿಯಾಗಿದೆ. ಇದೇ ಸಮಯದಲ್ಲಿ ಸ್ಯಾಮ್‌ಸಂಗ್‌ ಗ್ಯಾಲಕ್ಸಿ S23 ಸ್ಮಾರ್ಟ್‌ಫೋನ್‌ ಭಾರಿ ಬೆಲೆ ಕಡಿತವನ್ನು ಪಡೆದುಕೊಂಡಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಈ ಸ್ಮಾರ್ಟ್‌ಫೋನ್‌ ಬರೋಬ್ಬರಿ 10,000ರೂ ಫ್ಲಾಟ್ ರಿಯಾಯಿತಿಯನ್ನು ಪಡೆದಿದೆ. ಈ ಮೂಲಕ ಟೆಕ್‌ ವಲಯದಲ್ಲಿ ಭಾರಿ ಸಂಚಲನ ಕ್ರಿಯೆಟ್‌ ಮಾಡಿದೆ.

ಹೌದು, ಸ್ಯಾಮ್‌ಸಂಗ್‌ ಗ್ಯಾಲಕ್ಸಿ S23 ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ ಇಳಿಕೆಯಾಗಿದೆ. ಗ್ಯಾಲಕ್ಸಿ S24 ಫೋನ್‌ ಬಿಡುಗಡೆ ಆಗುವ ಮುನ್ನವೇ ಗ್ಯಾಲಕ್ಸಿ S23 ಬೆಲೆ ಇಳಿಕೆ ಮೊಬೈಲ್‌ ಪ್ರಿಯರನ್ನು ಅಚ್ಚರಿಗೆ ದೂಡಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ವೇಗದ ಚಾರ್ಜಿಂಗ್‌, ಬಿಗ್‌ ಬ್ಯಾಟರಿ ಹಾಗೂ ಉತ್ತಮ ಗೇಮಿಂಗ್‌ ಅನುಭವವನ್ನು ಒದಗಿಸಲಿದೆ. ಹಾಗಾದ್ರೆ Samsung Galaxy S23 ಸ್ಮಾರ್ಟ್‌ಫೋನ್‌ ಇದೀಗ ಯಾವ ಬೆಲೆಯಲ್ಲಿ ಮಾರಾಟವಾಗುತ್ತಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

Samsung: 128GB ಸ್ಟೋರೇಜ್‌ ಆಯ್ಕೆಯ ಈ ಫೋನ್‌ ಬೆಲೆ ಇದೀಗ 10,000ರೂ ಇಳಿಕೆ!

Samsung Galaxy S23 ಬೆಲೆ ಕಡಿತ
Samsung Galaxy S23 ಸ್ಮಾರ್ಟ್‌ಫೋನ್‌ ಫ್ಲಿಪ್‌ಕಾರ್ಟ್‌ನಲ್ಲಿ ಬರೋಬ್ಬರಿ 10,000ರೂ ಫ್ಲಾಟ್‌ ರಿಯಾಯಿತಿ ಪಡೆದುಕೊಂಡಿದೆ. ಇದರಿಂದ ಸ್ಮಾರ್ಟ್‌ಫೋನ್‌ನ 128GB ಸ್ಟೋರೇಜ್ ಆಯ್ಕೆಯು ನಿಮಗೆ ಕೇವಲ 64,999ರೂ ಬೆಲೆಗೆ ದೊರೆಯಲಿದೆ. ಇದರೊಂದಿಗೆ ವಿವಿಧ ಬ್ಯಾಂಕ್‌ ಆಫರ್‌ಗಳು ಕೂಡ ದೊರೆಯುತ್ತಿದ್ದು, ಇನ್ನಷ್ಟು ಕಡಿಮೆ ಬೆಲೆಯಲ್ಲಿಯೇ ಈ ಸ್ಮಾರ್ಟ್‌ಫೋನ್‌ ಖರೀದಿಸಬಹುದಾಗಿದೆ.

ಗ್ಯಾಲಕ್ಸಿ S24 ಬಿಡುಗಡೆ ಹೊಸ್ತಿಲಲ್ಲಿ ಗ್ಯಾಲಕ್ಸಿ S23 ಖರೀದಿಸುವುದು ಸೂಕ್ತವೇ?
ಈ ಪ್ರಶ್ನೆಗೆ ಸೂಕ್ತ ಉತ್ತರ ಗ್ರಾಹಕರ ಅವಶ್ಯಕತೆ ಎಂದು ಹೇಳಬಹುದು. ಗ್ರಾಹಕರ ಅವಶ್ಯಕತೆಗಳ ಅವಲಂಬನೆಯ ಆಧಾರದ ಮೇಲೆ ಯಾವ ಸ್ಮಾರ್ಟ್‌ಫೋನ್‌ ಉತ್ತಮ ಎಂದು ಆಯ್ಕೆ ಮಾಡಬಹುದು. ಸ್ಯಾಮ್‌ಸಂಗ್‌ ಗ್ಯಾಲಕ್ಸಿ S23 ಸ್ಮಾರ್ಟ್‌ಫೋನ್‌ ಬಿಡುಗಡೆ ಆಗಿ ಒಂದು ವರ್ಷ ಆಗಿದೆಯಾದರೂ ಆದರೆ ಡಿಮ್ಯಾಂಡ್‌ ಮಾತ್ರ ಕೊಂಚವೂ ಕಡಿಮೆ ಆಗಿಲ್ಲ. ಇದಕ್ಕೆ ಮುಖ್ಯ ಕಾರಣ ಸ್ಮಾರ್ಟ್‌ಫೋನ್‌ನ ಡಿಸೈನ್‌, ಕ್ಯಾಮೆರಾ ಫೀಚರ್ಸ್‌ ಹಾಗೂ ಡಿಸ್‌ಪ್ಲೇ ವಿನ್ಯಾಸ ಎಂದು ಹೇಳಬಹುದು. ಇದೇ ಕಾರಣಕ್ಕೆ ಗ್ಯಾಲಕ್ಸಿ S23 ಫೋನ್‌ ಖರೀದಿಸುವುದರಿಂದ ತೊಂದರೆಯೇನಿಲ್ಲ.

Samsung: 128GB ಸ್ಟೋರೇಜ್‌ ಆಯ್ಕೆಯ ಈ ಫೋನ್‌ ಬೆಲೆ ಇದೀಗ 10,000ರೂ ಇಳಿಕೆ!

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S23 ಫೀಚರ್ಸ್‌ ಹೇಗಿದೆ?
ಸ್ಯಾಮ್‌ಸಂಗ್‌ ಗ್ಯಾಲಕ್ಸಿ S23 ಸ್ಮಾರ್ಟ್‌ಫೋನ್‌ 6.1 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡೈನಾಮಿಕ್‌ ಅಮೋಲೆಡ್‌ 2X ಡಿಸ್‌ಪ್ಲೇ ಹೊಂದಿದೆ. ಇನ್ನು ಡಿಸ್‌ಪ್ಲೇ 120Hz ರಿಫ್ರೆಶ್‌ ರೇಟ್‌ ಬೆಂಬಲಿಸಲಿದ್ದು, 48Hz ತನಕ ರಿಫ್ರೆಶ್‌ ರೇಟ್‌ ಅನ್ನು ಇಳಿಸಬಹುದಾಗಿದೆ. ಜೊತೆಗೆ ಡಿಸ್‌ಪ್ಲೇಯು ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ಪ್ರೊಟೆಕ್ಷನ್‌ ಹೊಂದಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S23 ಪ್ರೊಸೆಸರ್‌ ಯಾವುದು?
ಸ್ಯಾಮ್‌ಸಂಗ್‌ ಗ್ಯಾಲಕ್ಸಿ S23 ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 8 Gen 2 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಆಂಡ್ರಾಯ್ಡ್‌ 13 ಬೆಂಬಲದೊಂದಿಗೆ ರನ್‌ ಆಗಲಿದೆ. ಇದು ಸ್ಯಾಮ್‌ಸಂಗ್ ಕಾರ್ಟೆಕ್ಸ್ X2, ಕಾರ್ಟೆಕ್ಸ್ A710 ಮತ್ತು ಕಾರ್ಟೆಕ್ಸ್ A510 ಲೇಔಟ್‌ನೊಂದಿಗೆ ಆಕ್ಟಾ-ಕೋರ್ ಸಿಪಿಯು ಅನ್ನು ಹೊಂದಿದೆ. ಹಾಗೆಯೇ 8GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಹೊಂದಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S23 ಕ್ಯಾಮೆರಾ ಸೆಟಪ್‌
ಸ್ಯಾಮ್‌ಸಂಗ್‌ ಗ್ಯಾಲಕ್ಸಿ S23 ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿದೆ. ಎರಡನೇ ಕ್ಯಾಮೆರಾ 12 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಆಂಗಲ್ ಮತ್ತು ಮೂರನೇ ಕ್ಯಾಮೆರಾ 10 ಮೆಗಾಪಿಕ್ಸೆಲ್ ಟೆಲಿಫೋಟೋ ಲೆನ್ಸ್‌ ಅನ್ನು ಹೊಂದಿದೆ. ಇದಲ್ಲದೆ 12 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಇದರ ಮೂಲಕ ಸೆಕೆಂಡಿಗೆ 30 ಫ್ರೇಮ್‌ಗಳಲ್ಲಿ 8K ವೀಡಿಯೊ ರೆಕಾರ್ಡಿಂಗ್ ಮಾಡಬಹುದಾಗಿದೆ.

Samsung: 128GB ಸ್ಟೋರೇಜ್‌ ಆಯ್ಕೆಯ ಈ ಫೋನ್‌ ಬೆಲೆ ಇದೀಗ 10,000ರೂ ಇಳಿಕೆ!

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S23 ಬ್ಯಾಟರಿ ಮತ್ತು ಇತರೆ
ಸ್ಯಾಮ್‌ಸಂಗ್‌ ಗ್ಯಾಲಕ್ಸಿ S23 ಸ್ಮಾರ್ಟ್‌ಫೋನ್‌ 3,900mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 25W ವೈರ್ಡ್ ಚಾರ್ಜಿಂಗ್ ಮತ್ತು 15W ವಾಯರ್‌ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇದರ ಮೂಲಕ ಬ್ಯಾಟರಿಯನ್ನು ಕೇವಲ 30 ನಿಮಿಷಗಳಲ್ಲಿ 50% ಚಾರ್ಜಿಂಗ್‌ ಮಾಡಬಹುದು ಎಂದು ಸ್ಯಾಮ್‌ಸಂಗ್‌ ಕಂಪೆನಿ ಹೇಳಿಕೊಂಡಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 6E, ಬ್ಲೂಟೂತ್ 5.3, Wi-Fi ಡೈರೆಕ್ಟ್ ಮತ್ತು USB ಟೈಪ್-C ಪೋರ್ಟ್ ಅನ್ನು ಬೆಂಬಲಿಸಲಿದೆ.

Best Mobiles in India

English summary
Samsung Galaxy S23 price drops by Rs 10,000 in Flipkart: Details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+