Home
ಸುದ್ದಿಜಾಲ

Samsung:ಗ್ಯಾಲಕ್ಸಿ S24 ಸರಣಿ ಅನಾವರಣಕ್ಕೆ ಕೌಂಟ್‌ ಡೌನ್‌ ಶುರು! ನಿರೀಕ್ಷೆ ಏನು?

ಸ್ಯಾಮ್‌ಸಂಗ್‌ ಕಂಪೆನಿಯ ಬಹು ನಿರೀಕ್ಷಿತ Samsung Galaxy Unpacked ಈವೆಂಟ್‌ ಇಂದು ಕ್ಯಾಲಿಪೋರ್ನಿಯಾದ ಸ್ಯಾನ್‌ಜೋಸ್‌ನಲ್ಲಿ ನಡೆಯಲಿದೆ. ಭಾರತೀಯ ಕಾಲಮಾನ ರಾತ್ರಿ 11:30pmಕ್ಕೆ ಕಾರ್ಯಕ್ರಮ ಜರುಗಲಿದೆ. ಈ ಈವೆಂಟ್‌ನಲ್ಲಿ ಸ್ಯಾಮ್‌ಸಂಗ್‌ ಗ್ಯಾಲಕ್ಸಿ S24 ಸರಣಿಯನ್ನು ಬಿಡುಗಡೆ ಮಾಡುವುದು ಪಕ್ಕಾ ಆಗಿದೆ.

ಹೌದು, ಸ್ಯಾಮ್‌ಸಂಗ್‌ ಗ್ಯಾಲಕ್ಸಿ S24 ಸರಣಿ ಇಂದು ರಾತ್ರಿ ಬಿಡುಗಡೆ ಆಗಲಿದೆ. ಈ ಸರಣಿಯಲ್ಲಿ ಗ್ಯಾಲಕ್ಸಿ S24, ಗ್ಯಾಲಕ್ಸಿ S24 ಪ್ಲಸ್‌, ಗ್ಯಾಲಕ್ಸಿ S24 ಅಲ್ಟ್ರಾ ಸ್ಮಾರ್ಟ್‌ಫೋನ್‌ಗಳು ಬಿಡುಗಡೆ ಆಗಲಿದೆ. ಈ ಸ್ಮಾರ್ಟ್‌ಫೋನ್‌ಗಳ ನಿರೀಕ್ಷಿತ ಫೀಚರ್ಸ್‌ ಈಗಾಗಲೇ ಬಹಿರಂಗವಾಗಿರುವುದರಿಂದ ಟೆಕ್‌ ವಲಯದ ಕಣ್ಣು ಇದೀಗ ಲಾಂಚ್‌ ಈವೆಂಟ್‌ ಮೇಲೆ ಬಿದ್ದಿದೆ. ಹಾಗಾದ್ರೆ ಗ್ಯಾಲಕ್ಸಿ S24 ಸರಣಿಯಲ್ಲಿ ಎನೆಲ್ಲಾ ನಿರೀಕ್ಷೆ ಇಡಲಾಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

Samsung:ಗ್ಯಾಲಕ್ಸಿ S24 ಸರಣಿ ಅನಾವರಣಕ್ಕೆ ಕೌಂಟ್‌ ಡೌನ್‌ ಶುರು! ನಿರೀಕ್ಷೆ ಏನು?

ಗ್ಯಾಲಕ್ಸಿ S24 ಲಾಂಚ್‌ ಈವೆಂಟ್ ಯಾವಾಗ?
ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಅನ್‌ಪ್ಯಾಕ್ಡ ಈವೆಂಟ್ ಇಂದು (ಜ. 17) ರಾತ್ರಿ 11:30ಕ್ಕೆ ನಡೆಯಲಿದೆ. ಕ್ಯಾಲಿಫೋರ್ನಿಯಾದ ಸ್ಯಾನ್ ಜೋಸ್‌ನಲ್ಲಿ ಲಾಂಚ್‌ ಈವೆಂಟ್‌ ನಡೆಯಲಿದೆ. ಲಾಂಚ್‌ ಈವೆಂಟ್‌ ಅನ್ನು ಯುಟ್ಯೂಬ್‌ ಲೈವ್-ಸ್ಟ್ರೀಮಿಂಗ್ ಮೂಲಕ ಕೂಡ ವೀಕ್ಷಿಸಬಹುದಾಗಿದೆ. ಇಲ್ಲವೇ ಸ್ಯಾಮ್‌ಸಂಗ್‌ನ ವೆಬ್‌ಸೈಟ್‌ ಮೂಲಕ ಕೂಡ ಲೈವ್‌ಸ್ಟ್ರೀಮ್ ವೀಕ್ಷಿಸಲು ಅದರ ಸೊಶೀಯಲ್‌ ಮೀಡಿಯಾ ಹ್ಯಾಂಡಲ್‌ಗಳನ್ನು ಅನುಸರಿಸಬಹುದು.

ಕುತೂಹಲ ಹೆಚ್ಚಿಸಿದೆ AI ಫೀಚರ್ಸ್‌!
ಸ್ಯಾಮ್‌ಸಂಗ್‌ ತನ್ನ ಗ್ಯಾಲಕ್ಸಿ S24 ಸರಣಿಯಲ್ಲಿ ವಿಶೇಷವಾಗಿ AI ಫೀಚರ್ಸ್‌ಗಳನ್ನು ಪರಿಚಯಿಸಲಿದೆ ಎಂದು ವರದಿಯಾಗಿದೆ. ತನ್ನ ಡಿವೈಸ್‌ಗಳಲ್ಲಿ AI- ಚಾಲಿತ ಕಾರ್ಯಗಳನ್ನು ಸಂಯೋಜಿಸುವ ಮೂಲಕ Pixel 8 ಗೆ ಪ್ರತಿಸ್ಪರ್ಧಿಯಾಗಲಿದೆ ಎಂದು ಹೇಳಲಾಗಿದೆ. ಅಂದರೆ ಮ್ಯಾಜಿಕ್ ಎಡಿಟರ್ ಅನ್ನು ಹೋಲುವ ಫೀಚರ್ಸ್‌ಗಳನ್ನು ಸೇರ್ಫಡೆ ಮಾಡಲಿದೆ ಎನ್ನಲಾಗಿದೆ. ಅಲ್ಲದೆ AI ನಿಂದ ಸುಗಮಗೊಳಿಸಲಾದ ಫೋನ್ ಕರೆಗಳ ರಿಯಲ್‌ ಟೈಂ ಅನುವಾದವು ಕೂಡ ಇದರ ಮತ್ತೊಂದು ಬೆಟರ್‌ ಫೀಚರ್ಸ್‌ ಆಗಿದೆ.

Samsung:ಗ್ಯಾಲಕ್ಸಿ S24 ಸರಣಿ ಅನಾವರಣಕ್ಕೆ ಕೌಂಟ್‌ ಡೌನ್‌ ಶುರು! ನಿರೀಕ್ಷೆ ಏನು?

ಲಾಂಗರ್‌ ಸಾಫ್ಟ್‌ವೇರ್ ಸಪೊರ್ಟ್‌ ಬೆಂಬಲ
ಇನ್ನು ಆಂಡ್ರಾಯ್ಡ್‌ ಹೆಡ್‌ಲೈನ್ಸ್‌ನ ರಿಪೋರ್ಟ್‌ ಪ್ರಕಾರ, ಗ್ಯಾಲಕ್ಸಿ S24 ಸರಣಿಯು 7 ವರ್ಷಗಳ ಸಾಫ್ಟ್‌ವೇರ್ ಮತ್ತು OS ಅಪ್‌ಗ್ರೇಡ್‌ಗಳಿಗೆ ಬೆಂಬಲವನ್ನು ಪಡೆಯಲಿದೆ. ಅಂದರೆ ಪ್ರಮುಖ ಸ್ಮಾರ್ಟ್‌ಫೋನ್‌ಗಳು Android ಆವೃತ್ತಿ 21 ವರೆಗೆ ಅಪ್ಡೇಟ್‌ ಪಡೆದಯುವ ಅರ್ಹತೆ ಇರಲಿದೆ. ಇದರೊಂದಿಗೆ ಸ್ಯಾಮ್‌ಸಂಗ್‌ ಕಮಪೆನಿ ನಾಲ್ಕು ವರ್ಷಗಳ ಪ್ರಮುಖ OS ನವೀಕರಣಗಳನ್ನು ಭರವಸೆ ನೀಡಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S24 ಫೀಚರ್ಸ್‌ ಹೇಗಿರಲಿದೆ?
ಸ್ಯಾಮ್‌ಸಂಗ್‌ ಗ್ಯಾಲಕ್ಸಿ S24 ಸ್ಮಾರ್ಟ್‌ಪೋನ್‌ 6.2 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡೈನಾಮಿಕ್ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿರಲಿದೆ ಎಂದು ನಿರೀಕ್ಷಿಸಲಾಗಿದೆ. ಈ ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟಪ್‌ನೊಂದಿಗೆ ಬರಲಿದ್ದು, 50MP ಸೆನ್ಸಾರ್‌ ಮೇನ್‌ ಕ್ಯಾಮೆರಾ ಇರಲಿದೆ. ಎರಡನೇ ಕ್ಯಾಮೆರಾ 12MP ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 10MP ಟೆಲಿಫೋಟೋ ಲೆನ್ಸ್‌ನೊಂದಿಗೆ ಬರಲಿದೆ. ಜೊತೆಗೆ 4,000 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರಲಿದ್ದು, 25W ವೈರ್ಡ್ ಚಾರ್ಜರ್ ಮತ್ತು 15W ವೈರ್‌ಲೆಸ್ ಚಾರ್ಜರ್‌ ನಿರೀಕ್ಷಿಸಲಾಗಿದೆ.

Samsung:ಗ್ಯಾಲಕ್ಸಿ S24 ಸರಣಿ ಅನಾವರಣಕ್ಕೆ ಕೌಂಟ್‌ ಡೌನ್‌ ಶುರು! ನಿರೀಕ್ಷೆ ಏನು?

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S24+ ವಿಶೇಷತೆ ಏನಿರಲಿದೆ?
ಸ್ಯಾಮ್‌ಸಂಗ್‌ ಗ್ಯಾಲಕ್ಸಿ S24+ ಸ್ಮಾರ್ಟ್‌ಫೋನ್‌ 6.7 ಇಂಚಿನ ಡೈನಾಮಿಕ್ AMOLED ಡಿಸ್ಪ್ಲೇಯನ್ನು ಹೊಂದಿರಲಿದೆ. ಈ ಫೋನ್‌ ಕೂಡ ಟ್ರಿಪಲ್‌ ರಿಯರ್‌ ಕ್ಯಾಮೆರಾದೊಂದಿಗೆ ಬರಲಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50MP ಸೆನ್ಸಾರ್‌ ಇರಲಿದೆ. ಇನ್ನು ಗ್ಯಾಲಕ್ಸಿ S24+ ಸ್ಮಾರ್ಟ್‌ಫೋನ್‌ 4,900mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 45W ವೈರ್ಡ್ ಚಾರ್ಜಿಂಗ್ ಮತ್ತು 15W ವೈರ್‌ಲೆಸ್ ಚಾರ್ಜಿಂಗ್‌ಗೆ ಬೆಂಬಲಿಸಲಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S24 ಅಲ್ಟ್ರಾ ವಿಶೇಷತೆ ಏನಿರಬಹುದು?
ಸ್ಯಾಮ್‌ಸಂಗ್‌ ಗ್ಯಾಲಕ್ಸಿ S24 ಅಲ್ಟ್ರಾ ಸ್ಮಾರ್ಟ್‌ಫೋನ್‌ 6.8 ಇಂಚಿನ QHD + ಡೈನಾಮಿಕ್ AMOLED ಡಿಸ್ಪ್ಲೇಯನ್ನು ಹೊಂದಿದೆ. ಇದು ಕ್ವಾಡ್‌ ರಿಯರ್‌ ಕ್ಯಾಮೆರಾ ಸೆಟಪ್‌ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 200MP ಸೆನ್ಸಾರ್‌ ಇರಲಿದೆ. ಎರಡನೇ ಕ್ಯಾಮೆರಾ 50 MP ಸೆನ್ಸಾರ್‌ ಇದ್ದು, ಮೂರನೇ ಕ್ಯಾಮೆರಾ 10MP ಸೆನ್ಸಾರ್‌ ಹೊಂದಿದೆ. ನಾಲ್ಕನೇ ಕ್ಯಾಮೆರಾ 120° ಫೀಲ್ಡ್ ಆಫ್ ವ್ಯೂ ಜೊತೆಗೆ 12MP ಅಲ್ಟ್ರಾ ವೈಡ್-ಆಂಗಲ್ ಕ್ಯಾಮೆರಾ ಸೆನ್ಸಾರ್ ಇರಲಿದೆ ಎಂದು ನಿರೀಕ್ಷಿಸಲಾಗಿದೆ.

Best Mobiles in India

English summary
Samsung Galaxy S24 series to launch in India Today Night: Expeted Specs Detail in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+