Home
ಸುದ್ದಿಜಾಲ

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S24 ಅಲ್ಟ್ರಾ ಫೋನ್‌ ಬಿಗ್‌ ಅಪ್ಡೇಟ್‌: ಪ್ರತಿಸ್ಪರ್ಧಿಗಳಿಗೆ ನಡುಕ ಶುರು!

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S24 ಸರಣಿ ಬಿಡುಗಡೆಗೂ ಮುನ್ನವೇ ಸಾಕಷ್ಟು ಟ್ರೆಂಡ್‌ ಕ್ರಿಯೆಟ್‌ ಮಾಡಿದೆ. ಈಗಾಗಲೇ ಗ್ಯಾಲಕ್ಸಿ S ಸರಣಿಯ ಸ್ಮಾರ್ಟ್‌ಫೋನ್‌ಗಳಲ್ಲಿ "ಅಲ್ಟ್ರಾ" ರೂಪಾಂತರಗಳು ಸಿಕ್ಕಾಪಟ್ಟೆ ಸದ್ದು ಮಾಡಿವೆ. ಇದೇ ಹಾದಿಯಲ್ಲಿ ಗ್ಯಾಲಕ್ಸಿ S24 ಅಲ್ಟ್ರಾ ಕೂಡ ಸಂಚಲನ ಮೂಡಿಸಿದೆ. ಅದರಲ್ಲೂ ಸ್ಯಾಮ್‌ಸಂಗ್‌ ಗ್ಯಾಲಕ್ಸಿ S24 ಸ್ಮಾರ್ಟ್‌ಫೋನ್‌ ಹಿಂದೆಂದಿಗಿಂತಲೂ ಉತ್ಕೃಷ್ಟವಾದ ಟೆಕ್ನಾಲಜಿಯೊಂದಿಗೆ ಬರಲಿದೆ ಎನ್ನಲಾಗಿದೆ.

ಹೌದು, ಸ್ಯಾಮ್‌ಸಂಗ್‌ ಗ್ಯಾಲಕ್ಸಿ S24 ಅಲ್ಟ್ರಾ (Samsung Galaxy S24 Ultra) ರೂಪಾಂತರವು ತಾಂತ್ರಿಕವಾಗಿ ಸಾಕಷ್ಟು ಶ್ರೀಮಂತವಾಗಿರಲಿದೆ. ಇದೇ ಜನವರಿ 17 ರಂದು ಬಿಡುಗಡೆ ಆಗಲಿರುವ ಈ ಸ್ಮಾರ್ಟ್‌ಫೋನ್‌ ಫೀಚರ್ಸ್‌ಗಳು ಹೊಸದೊಂದು ಲೋಕಕ್ಕೆ ಕರೆದೊಯ್ಯುವ ಸೂಚನೆ ನೀಡಿದೆ. ಹಾಗಾದ್ರೆ ಸ್ಯಾಮ್‌ಸಂಗ್‌ ಗ್ಯಾಲಕ್ಸಿ S24 ಅಲ್ಟ್ರಾ ಸ್ಮಾರ್ಟ್‌ಫೋನ್‌ನಲ್ಲಿ ಏನೆಲ್ಲಾ ಫೀಚರ್ಸ್‌ ನಿರೀಕ್ಷಿಸಬಹುದು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗ್ಯಾಲಕ್ಸಿ S24 ಅಲ್ಟ್ರಾ ಫೋನ್‌ ಬಿಗ್‌ ಅಪ್ಡೇಟ್‌:ಪ್ರತಿಸ್ಪರ್ಧಿಗಳಿಗೆ ನಡುಕ ಶುರು

ಇರಲಿದೆ ''ಗ್ಯಾಲಕ್ಸಿ AI"
2023 ರಲ್ಲಿ AI ಟೆಕ್ನಾಲಜಿ ಸಾಕಷ್ಟು ಸದ್ದು ಮಾಡಿತ್ತು, ಇದೀಗ ಅದೇ ಹಾದಿಯಲ್ಲಿ ಗ್ಯಾಲಕ್ಸಿ S24 ಅಲ್ಟ್ರಾ ಸ್ಮಾರ್ಟ್‌ಫೋನ್‌ನಲ್ಲಿ ಗ್ಯಾಲಕ್ಸಿ ಎಐ ಅನ್ನು ಪರಿಚಯಿಸಲಿದೆ. ಅಂದರೆ ಸ್ಯಾಮ್‌ಸಂಗ್ ಆನ್-ಡಿವೈಸ್ ಜನರೇಟಿವ್ AI ತಂತ್ರಜ್ಞಾನದ ಇನ್ನೂ ಕೆಲವು ಬಳಕೆಯ ಸಂದರ್ಭಗಳನ್ನು ನೀಡುವ ಸಾಧ್ಯತೆಯಿದೆ. ಇದು ರಿಯಲ್‌ ಟೈಂ ಧ್ವನಿ ಅನುವಾದ, ವರ್ಧಿತ ಬಿಕ್ಸ್‌ಬಿ (ಅಂತಿಮವಾಗಿ) ಮತ್ತು ಆಪ್ಟಿಮೈಸ್ ಮಾಡಿದ ಸ್ಮಾರ್ಟ್‌ಫೋನ್ ಕಾರ್ಯಕ್ಷಮತೆಗಾಗಿ AI ಬೆಂಬಲಿತ ವಾಲ್‌ಪೇಪರ್ ಜನರೇಟರ್‌ನಂತಹ ಫೀಚರ್ಸ್‌ಗಳನ್ನು ಸೇರ್ಪಡೆ ಮಾಡುವ ನಿರೀಕ್ಷೆಯಿದೆ.

ಇದಲ್ಲದೆ ಸ್ಯಾಮ್‌ಸಂಗ್‌ ಗ್ಯಾಲಕ್ಸಿ S24 ಅಲ್ಟ್ರಾ ದಲ್ಲಿ "AI ಜೂಮ್" ಅನ್ನು ಸಹ ನೀಡಲಿದೆ. ಈಗಾಗಲೇ ಸ್ಯಾಮ್‌ಸಂಗ್‌ ಅಲ್ಟ್ರಾ ಸರಣಿಯ ಸ್ಮಾರ್ಟ್‌ಫೋನ್‌ಗಳು ತಮ್ಮ ಝೂಮಿಂಗ್ ಪರಾಕ್ರಮಕ್ಕೆ ಹೆಸರುವಾಸಿಯಾಗಿದೆ. ಇದೀಗ ಗ್ಯಾಲಕ್ಸಿ S24 ಅಲ್ಟ್ರಾದಲ್ಲಿ ಉತ್ಪಾದಕ AI ಅನ್ನು ಬಳಸಿಕೊಂಡು ವಿಷಯವನ್ನು ಅಚ್ಚುಕಟ್ಟಾಗಿ ಮರುನಿರ್ಮಾಣ ಮಾಡಲಿದೆ. ಈ ಮೂಲಕ ಝೂಮ್ ಮಾಡುವ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಲಿದೆ. ಇದಕ್ಕಾಗಿ ಕಂಪನಿಯು ಹಾರ್ಡ್‌ವೇರ್, ಸಾಫ್ಟ್‌ವೇರ್ ಮತ್ತು AI ಯ ಶಕ್ತಿಯನ್ನು ಸಂಯೋಜಿಸುತ್ತಿದೆ ಎನ್ನಲಾಗಿದೆ.

ಗ್ಯಾಲಕ್ಸಿ S24 ಅಲ್ಟ್ರಾ ಫೋನ್‌ ಬಿಗ್‌ ಅಪ್ಡೇಟ್‌:ಪ್ರತಿಸ್ಪರ್ಧಿಗಳಿಗೆ ನಡುಕ ಶುರು

ಇದರ ಮುನ್ಸೂಚನೆ ಎಂಬಂತೆ ಸ್ಯಾಮ್‌ಸಂಗ್‌ ಗ್ಯಾಲಕ್ಸಿ S24 ಅಲ್ಟ್ರಾ ಸ್ಮಾರ್ಟ್‌ಫೋನ್‌ ಮುಖ್ಯ ಕ್ಯಾಮೆರಾ 200 MP ಸೆನ್ಸಾರ್‌ ಇರಲಿದೆ ಎನ್ನಲಾಗಿದೆ. ಎರಡನೇ ಕ್ಯಾಮೆರಾ 12 MP ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್, 3x ಆಪ್ಟಿಕಲ್ ಜೂಮ್ ಲೆನ್ಸ್, 5x 50 MP ಪೆರಿಸ್ಕೋಪ್ ಜೂಮ್ ಲೆನ್ಸ್ ಹೊಂದಿರಲಿದೆ. ಜೊತೆಗೆ ಮುರನೇ ಕ್ಯಾಮೆರಾ 12 MP ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿರುತ್ತದೆ ಎಂದು ಅಂದಾಜಿಸಲಾಗಿದೆ.

ಇನ್ನು ಈ ಸ್ಮಾರ್ಟ್‌ಫೋನ್‌ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವ ಅತ್ಯುತ್ತಮ ಆಂಡ್ರಾಯ್ಡ್‌ ಫೋನ್‌ಗಳ ಸಾಲಿಗೆ ಸೇರುವುದು ಪಕ್ಕಾ ಆಗಿದೆ. ಏಕೆಂದರೆ ಈ ಫೋನ್‌ ಸ್ನಾಪ್‌ಡ್ರಾಗನ್ 8 Gen 3 SoC ನಿಂದ ಚಾಲಿತವಾಗಿದೆ ಎಂದು ದೃಢಪಡಿಸಲಾಗಿದೆ. ಇದು ಆನ್-ಡಿವೈಸ್ ಜನರೇಟಿವ್ AI ಸಾಮರ್ಥ್ಯವನ್ನು ಹೊಂದಿರುವ ಮೊದಲ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಪ್ರೊಸೆಸರ್‌ಗಳಲ್ಲಿ ಒಂದಾಗಿದೆ ಎಂದು ವರದಿಯಾಗಿದೆ.

ಗ್ಯಾಲಕ್ಸಿ S24 ಅಲ್ಟ್ರಾ ಫೋನ್‌ ಬಿಗ್‌ ಅಪ್ಡೇಟ್‌:ಪ್ರತಿಸ್ಪರ್ಧಿಗಳಿಗೆ ನಡುಕ ಶುರು

ಹೆಚ್ಚಿನ ಪ್ರೀಮಿಯಂ ಫೋನ್‌
ಐಫೋನ್ 15 ಪ್ರೊ ಪ್ರಸ್ತುತ ಅತ್ಯಂತ ಪ್ರೀಮಿಯಂ ಸ್ಮಾರ್ಟ್‌ಫೋನ್ ಎಂಬ ಖ್ಯಾತಿಯನ್ನು ಹೊಂದಿದೆ. ಇದಕ್ಕೆ ಪೈಪೋಟಿ ನೀಡುವ ಸಾಮರ್ಥ್ಯವನ್ನು ಗ್ಯಾಲಕ್ಸಿ S24 ಅಲ್ಟ್ರಾ ಫೋನ್‌ ಹೊಂದಿರಲಿದೆ ಎನ್ನಲಾಗಿದೆ. ಇದಕ್ಕಾಗಿಯೇ ಸ್ಯಾಮ್‌ಸಂಗ್ ಅಲ್ಯೂಮಿನಿಯಂನಿಂದ ಟೈಟಾನಿಯಂ ವಿನ್ಯಾಸಕ್ಕೆ ಹೋಗುತ್ತಿದೆ, ಇದು ಐಫೋನ್ 15 ಪ್ರೊ ಮ್ಯಾಕ್ಸ್‌ನಂತೆಯೇ ಅದೇ ಪ್ರೀಮಿಯಂ ಸ್ಥಿತಿಯನ್ನು ಪಡೆಯುವ ನಿರೀಕ್ಷೆಯಿದೆ. ಇದರಿಂದ ಆಪಲ್ ಮಾಡಿದಂತೆ ಸ್ಯಾಮ್‌ಸಂಗ್ ಯಾವುದೇ ತೂಕ ಕಡಿತದಿಂದ ಪ್ರಯೋಜನ ಪಡೆಯದಿದ್ದರೂ, ಅಲ್ಯೂಮಿನಿಯಂ ಟೈಟಾನಿಯಂಗಿಂತ ಹಗುರವಾಗಿರುತ್ತದೆ.

ಇದೇ ಕಾರಣಕ್ಕೆ ಸ್ಯಾಮ್‌ಸಂಗ್ ಫ್ಲಾಟ್ ಪ್ಯಾನೆಲ್ ಡಿಸ್‌ಪ್ಲೇಯನ್ನು ಆರಿಸಿಕೊಂಡಿದೆ ಎಂದು ಅಂದಾಜಿಸಲಾಗಿದೆ. ಇದು ಸ್ಮಾರ್ಟ್‌ಫೋನ್ ಪ್ರವೃತ್ತಿಯಲ್ಲಿ ಭಾರಿ ಬದಲಾವಣೆಯನ್ನು ಗುರುತಿಸಿದೆ. ಇದು ಸುಧಾರಿತ ಅಲ್ಟ್ರಾ-ಸಾನಿಕ್ ಫಿಂಗರ್‌ಪ್ರಿಂಟ್ ಸೆನ್ಸಾರ್‌ ಅನ್ನು ಪ್ಯಾಕ್ ಮಾಡುವ ನಿರೀಕ್ಷೆಯಿದೆ.

Best Mobiles in India

English summary
Samsung Galaxy S24 Ultra: Samsung is likely to offer more use cases of generative AI technology
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+