Home
ಸುದ್ದಿಜಾಲ

ಶೀಘ್ರದಲ್ಲೇ Samsung Galaxy S25 Edge ಬಿಡುಗಡೆ: ಕ್ಯಾಮೆರಾ ವಿವರಗಳು ಸೋರಿಕೆ!

Samsung ಸಂಸ್ಥೆಯು ತನ್ನ ಬಹುನಿರೀಕ್ಷಿತ Galaxy S25 Edge ಸ್ಮಾರ್ಟ್‌ಫೋನ್ ಅನ್ನು ಶೀಘ್ರದಲ್ಲೇ ಮಾರುಕಟ್ಟೆಗೆ ಪರಿಚಯಿಸುವ ಸಾಧ್ಯತೆ ಇದೆ. ಈ ವರ್ಷದ ಜನವರಿಯಲ್ಲಿ ನಡೆದ Galaxy Unpacked ಕಾರ್ಯಕ್ರಮದಲ್ಲಿ ಈ ಫೋನ್‌ನ ಕುರಿತು ಮೊದಲ ಸುಳಿವು ನೀಡಲಾಗಿತ್ತು. ನಂತರ, MWC 2025 ರಲ್ಲಿ ಇದರ ವಿನ್ಯಾಸವನ್ನು ತೋರಿಸಲಾಯಿತಾದರೂ, ಫೋನ್ ಇನ್ನೂ ಅಧಿಕೃತವಾಗಿ ಬಿಡುಗಡೆಯಾಗಿರಲಿಲ್ಲ. ಆದರೆ, ಇತ್ತೀಚಿನ ಮಾಹಿತಿಗಳ ಪ್ರಕಾರ, ಈ ತಿಂಗಳಲ್ಲೇ ಈ Galaxy S25 Edge ಹ್ಯಾಂಡ್‌ಸೆಟ್ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ. ವಿಶೇಷವಾಗಿ, Galaxy S25 Edge ಉನ್ನತ ಮಾದರಿಯಾದ Galaxy S25 Ultra ದಲ್ಲಿರುವಂತಹ ಪ್ರಮುಖ ಕ್ಯಾಮೆರಾವನ್ನು ಹೊಂದಿರಬಹುದು ಎಂಬ ವರದಿಗಳು ಕುತೂಹಲ ಕೆರಳಿಸಿವೆ.

ಪ್ರಸಿದ್ಧ ಟಿಪ್‌ಸ್ಟರ್ ಇವಾನ್ ಬ್ಲಾಸ್ ಅವರು X (ಹಿಂದೆ ಟ್ವಿಟರ್) ನಲ್ಲಿ ಹಂಚಿಕೊಂಡಿರುವ ಚಿತ್ರವು Galaxy S25 Edge ನ ಬಿಡುಗಡೆಯ ಟೀಸರ್‌ನಂತೆ ಕಾಣುತ್ತಿದೆ. ಈ ಚಿತ್ರದ ಪ್ರಕಾರ, Galaxy S25 Edge ಫೋನ್ ಇದೇ ಮೇ 13 ರಂದು ಬಿಡುಗಡೆಯಾಗುವ ಸಾಧ್ಯತೆ ಇದೆ. ಚಿತ್ರದಲ್ಲಿ "Beyond Slim" ಎಂಬ ಟ್ಯಾಗ್‌ಲೈನ್ ಅನ್ನು ಗಮನಿಸಬಹುದು, ಇದು Galaxy S25 Edge ನ ಅತಿ ತೆಳುವಾದ ವಿನ್ಯಾಸವನ್ನು ಸೂಚಿಸುತ್ತದೆ. ಈ ವಿನ್ಯಾಸ ಮತ್ತು ಕ್ಯಾಮೆರಾ ವೈಶಿಷ್ಟ್ಯಗಳ ಮೂಲಕ Galaxy S25 Edge ಸಾಕಷ್ಟು ಗಮನ ಸೆಳೆಯುತ್ತಿದೆ. ಈ ಫೋನ್ ಅಲ್ಟ್ರಾ-ಥಿನ್ ಪ್ರೊಫೈಲ್‌ನೊಂದಿಗೆ ಮಾರುಕಟ್ಟೆಗೆ ಬರಲಿದೆ ಎಂದು ಹೇಳಲಾಗಿದೆ. ಈ ಹಿಂದೆಯೂ ಹಲವು ವದಂತಿಗಳು ಹಬ್ಬಿದ್ದವು ಎಂದು ನಾವಿಲ್ಲಿ ಗಮನಿಸಬಹುದು.

ಈ ಸೋರಿಕೆಯು ಈ ಹಿಂದೆ ಪ್ರಕಟಿಸಲಾಗಿದ್ದ ಬಿಡುಗಡೆ ದಿನಾಂಕದ ಮಾಹಿತಿಯನ್ನು ಪುಷ್ಟೀಕರಿಸುತ್ತದೆ. ಅದರ ಪ್ರಕಾರ, ಮೇ 13 ಫೋನ್‌ನ ಚೊಚ್ಚಲ ಬಿಡುಗಡೆಗೆ ಪ್ರಮುಖ ದಿನಾಂಕವಾಗಿದೆ. ಆದಾಗ್ಯೂ, ಇದು ಆರಂಭದಲ್ಲಿ ಎಲ್ಲ ಪ್ರದೇಶಗಳಲ್ಲೂ ಲಭ್ಯವಾಗದಿರಬಹುದು. ವರದಿಗಳ ಪ್ರಕಾರ, Samsung Galaxy S25 Edge ಸ್ಮಾರ್ಟ್‌ಫೋನ್ ಮೊದಲು ಚೀನಾ ಮತ್ತು ದಕ್ಷಿಣ ಕೊರಿಯಾದಲ್ಲಿ ಮೇ 23 ರಂದು ಮಾರಾಟಕ್ಕೆ ಬರಬಹುದು. ನಂತರ, ಅಮೆರಿಕ ಸಂಯುಕ್ತ ಸಂಸ್ಥಾನ ಮತ್ತು ಇತರ ಮಾರುಕಟ್ಟೆಗಳಲ್ಲಿ ಮೇ 30 ರಂದು ಲಭ್ಯವಾಗುವ ಸಾಧ್ಯತೆ ಇದೆ. ಫೋನ್ ಮೇ 14 ರಿಂದ ಮೇ 20 ರವರೆಗೆ ಪೂರ್ವ-ಬುಕಿಂಗ್‌ಗೆ ಲಭ್ಯವಿರುತ್ತದೆ ಎಂದು ಅಂದಾಜಿಸಲಾಗಿದೆ. ಆದರೆ, ಕಂಪೆನಿಯಿಂದ ಈ ಕುರಿತಂತೆ ಯಾವುದೇ ಅಧಿಕೃತ ಮಾಹಿತಿ ಈ ವರೆಗೂ ಹೊರಬಿದ್ದಿಲ್ಲ.

ಶೀಘ್ರದಲ್ಲೇ Samsung Galaxy S25 Edge ಬಿಡುಗಡೆ: ಕ್ಯಾಮೆರಾ ವಿವರಗಳು ಸೋರಿಕೆ!

ಇನ್ನು ಕ್ಯಾಮೆರಾ ವಿಶೇಷಣಗಳ ಕುರಿತು ಹೇಳುವುದಾದರೆ, Galaxy S25 Edge ಸ್ಮಾರ್ಟ್‌ಫೋನ್ ತನ್ನ ಸೆಲ್ಫಿ ಕ್ಯಾಮೆರಾವನ್ನು Galaxy S25 ಸರಣಿಯ ಇತರ ಮಾದರಿಗಳೊಂದಿಗೆ ಹಂಚಿಕೊಳ್ಳಬಹುದು ಎಂಬ ವರದಿಗಳ ಬೆನ್ನಲ್ಲೇ, ಈ ಫೋನಿನ ಹಿಂಬದಿಯ ಕ್ಯಾಮೆರಾಗಳ ವಿವರಗಳು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿವೆ. SammyGuru ವರದಿಗಳ ಪ್ರಕಾರ, ಈ ಫೋನ್ Galaxy S25 Ultra ದಲ್ಲಿರುವಂತಹ 200 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾವನ್ನು ಹೊಂದಿರಲಿದೆ. Samsung ನ ಉನ್ನತ ಶ್ರೇಣಿಯ ಸ್ಮಾರ್ಟ್‌ಫೋನ್‌ನಲ್ಲಿರುವ ಈ ಮುಖ್ಯ ಕ್ಯಾಮೆರಾ 1/1.3-ಇಂಚಿನ ಸೆನ್ಸಾರ್ ಅನ್ನು ಹೊಂದಿದ್ದು, 2x ಇನ್-ಸೆನ್ಸರ್ ಜೂಮ್, ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಮತ್ತು f/1.7 ಅಪರ್ಚರ್ ಅನ್ನು ನೀಡುತ್ತದೆ.

ಇದರೊಂದಿಗೆ, ಈ Galaxy S25 Edge ಸ್ಮಾರ್ಟ್‌ಫೋನ್ 12 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್ ಅನ್ನು ಸಹ ಹೊಂದಿರಲಿದೆ ಎಂದು ವರದಿಯಾಗಿದೆ. ಇದು ಮುಖ್ಯ ಕ್ಯಾಮೆರಾದೊಂದಿಗೆ ಸೇರಿ ಹಿಂಭಾಗದ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಪೂರ್ಣಗೊಳಿಸುತ್ತದೆ. ಇದು 1/2.55-ಇಂಚಿನ ಸೆನ್ಸಾರ್ ಆಗಿರಬಹುದು ಎಂದು ಹೇಳಲಾಗಿದ್ದು, ಇದು ಬೇಸ್ ಮಾಡೆಲ್ Galaxy S25 ನಲ್ಲಿರುವ ಅಲ್ಟ್ರಾ-ವೈಡ್ ಲೆನ್ಸ್‌ನಂತೆಯೇ ಇರಲಿದೆ. Samsung ಈಗಾಗಲೇ Galaxy S25 Edge ನ ವಿನ್ಯಾಸವನ್ನು ಬಹಿರಂಗಪಡಿಸಿದ್ದು, ಹಿಂಭಾಗದಲ್ಲಿ ಉದ್ದನೆಯ ಆಕಾರದ ಕ್ಯಾಮೆರಾ ಮಾಡ್ಯೂಲ್‌ನಲ್ಲಿ ಲಂಬವಾಗಿ ಜೋಡಿಸಲಾದ ಲೆನ್ಸ್‌ಗಳು ಮತ್ತು LED ಫ್ಲ್ಯಾಷ್ ಅನ್ನು ನಾವು ಕಾಣಬಹುದು. ಈ ಕುರಿಂತೆ ಮತ್ತಷ್ಟು ಮಾಹಿತಿಗಾಗಿ ನಾವು ಕೂಡ ಎದುರುನೋಡುತ್ತಿದ್ದೇವೆ.

Best Mobiles in India

English summary
Samsung Galaxy S25 Edge is expected to launch in the US and other markets a week later, on May 30. Pre-orders for the phone are anticipated to be open from May 14 to May 20.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+