Home
ಸುದ್ದಿಜಾಲ

Galaxy S25 Edge ರಿಲೀಸ್ ಎಫೆಕ್ಟ್‌: Galaxy S25 ಮೇಲೆ ಹೊಸ ಆಫರ್ಸ್!

Samsung ಮೊನ್ನೆಯಷ್ಟೇ ತನ್ನ ಅತ್ಯಾಧುನಿಕ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ Galaxy S25 Edge ಬಿಡುಗಡೆ ಮಾಡಿದ ನಂತರ, ಇತ್ತ Galaxy S25 ಗಾಗಿ ಭಾರತೀಯ ಮಾರುಕಟ್ಟೆಯಲ್ಲಿ ಆಕರ್ಷಕ ರಿಯಾಯಿತಿಗಳನ್ನು ಘೋಷಿಸಿದೆ. ಗ್ರಾಹಕರು ಈ ಪ್ರೀಮಿಯಂ ಸಾಧನವನ್ನು ಅದರ ಸಾಮಾನ್ಯ ಮಾರಾಟ ಬೆಲೆಗಿಂತ ಗಮನಾರ್ಹವಾಗಿ ಕಡಿಮೆ ದರದಲ್ಲಿ ಖರೀದಿಸಲು Samsung ಅವಕಾಶ ಕಲ್ಪಿಸಿದ್ದು, HDFC ಬ್ಯಾಂಕ್ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಹೊಂದಿರುವವರಿಗೆ ನೇರ ಖರೀದಿಯ ಮೇಲೆ ರೂ. 10,000 ತಕ್ಷಣದ ಕ್ಯಾಶ್‌ಬ್ಯಾಕ್ ಲಭ್ಯವಿದೆ. ಇದರೊಂದಿಗೆ, ತಮ್ಮ ಹಳೆಯ ಸ್ಮಾರ್ಟ್‌ಫೋನ್‌ಗಳನ್ನು ವಿನಿಮಯ ಮಾಡಲು ಬಯಸುವ ಗ್ರಾಹಕರಿಗೆ ಹೆಚ್ಚುವರಿಯಾಗಿ ರೂ. 10,000 ವರೆಗಿನ ಅಪ್‌ಗ್ರೇಡ್ ಬೋನಸ್ ಅನ್ನು Samsung ನೀಡುತ್ತಿದೆ. ಈ ಎರಡು ಕೊಡುಗೆಗಳನ್ನು ಒಟ್ಟಗೂಡಿಸಿದರೆ Samsung Galaxy S25 ಅನ್ನು ಕೇವಲ ರೂ. 63,999 ರ ಪರಿಣಾಮಕಾರಿ ಬೆಲೆಯಲ್ಲಿ ಖರೀದಿಸಬಹುದು ಎಂದು ಕಂಪೆನಿ ತಿಳಿಸಿದೆ.

ಭಾರತದಲ್ಲಿ Samsung Galaxy S25 ರ ಮೂಲ ಬೆಲೆಯು 12GB RAM ಮತ್ತು 128GB ಸಂಗ್ರಹಣೆಯ ಮಾದರಿಗೆ ರೂ. 74,999 ರಿಂದ ಪ್ರಾರಂಭವಾಗುತ್ತದೆ. ಆದರೆ, Samsung ನೀಡಿರುವ ರೂ. 11,000 ವರೆಗಿನ ಅಪ್‌ಗ್ರೇಡ್ ಬೋನಸ್ ಈ ಬೆಲೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಈ ಕೊಡುಗೆ ಕೇವಲ 12GB + 128GB ಕಾನ್ಫಿಗರೇಶನ್‌ಗೆ ಮಾತ್ರ ಅನ್ವಯಿಸುತ್ತದೆ ಎಂದು ಕಂಪೆನಿಯು ತಿಳಿಸಿದೆ. ವಿನಿಮಯದ ಅಂತಿಮ ಮೊತ್ತವು ನಿಮ್ಮ ಹಳೆಯ ಫೋನಿನ ತಯಾರಿಕೆ, ಮಾದರಿ ಮತ್ತು ಅದರ ಸ್ಥಿತಿಯ ಮೇಲೆ ಅವಲಂಬಿತವಾಗಿರುತ್ತದೆ. ಅಲ್ಲದೆ, ಈ ವಿನಿಮಯ ಕೊಡುಗೆ ನಿಮ್ಮ ಪ್ರದೇಶದಲ್ಲಿ ಲಭ್ಯವಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಮುಖ್ಯ. ಒಂದು ವೇಳೆ ನೀವು ಯಾವುದೇ ಹಳೆಯ ಫೋನ್ ಅನ್ನು ವಿನಿಮಯ ಮಾಡಿಕೊಳ್ಳಲು ಇಚ್ಛಿಸದಿದ್ದರೆ, ನಿಮಗೆ ರೂ. 10,000 ಮೌಲ್ಯದ ನೇರ ಬ್ಯಾಂಕ್ ಕ್ಯಾಶ್‌ಬ್ಯಾಕ್ ಪಡೆಯುವ ಆಯ್ಕೆಯೂ ಇದೆ.

Galaxy S25 Edge ರಿಲೀಸ್ ಎಫೆಕ್ಟ್‌: Galaxy S25 ಮೇಲೆ ಹೊಸ ಆಫರ್ಸ್!

ಇದರ ಜೊತೆಗೆ, Samsung HDFC ಬ್ಯಾಂಕ್ ಕಾರ್ಡ್‌ದಾರರಿಗೆ ಒಂಬತ್ತು ತಿಂಗಳ ಅವಧಿಗೆ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದ EMI (ಸಮಾನ ಮಾಸಿಕ ಕಂತು) ಆಯ್ಕೆಯೊಂದಿಗೆ ರೂ. 8,000 ಕ್ಯಾಶ್‌ಬ್ಯಾಕ್ ಅನ್ನು ಸಹ ನೀಡುತ್ತಿದೆ. ಅಲ್ಲದೆ, NBFC ಗ್ರಾಹಕರು 24 ತಿಂಗಳ ಯಾವುದೇ ವೆಚ್ಚವಿಲ್ಲದ EMI ಯೋಜನೆಯ ಮೂಲಕ Samsung Galaxy S25 ಅನ್ನು ಖರೀದಿಸಬಹುದು .Samsung ಈ ಎಲ್ಲಾ ಆಫರ್‌ಗಳು Samsung.com, ಪ್ರಮುಖ ಆನ್‌ಲೈನ್ ಮಾರಾಟ ವೇದಿಕೆಗಳು ಮತ್ತು ದೇಶಾದ್ಯಂತವಿರುವ ಎಲ್ಲಾ ಅಧಿಕೃತ Samsung ಮಳಿಗೆಗಳಲ್ಲಿ ಲಭ್ಯವಿರುತ್ತವೆ ಎಂದು ಸ್ಪಷ್ಟಪಡಿಸಿದೆ. ಈ ಕೊಡುಗೆಗಳು ಸೀಮಿತ ಅವಧಿಗೆ ಮಾತ್ರ ಇರಬಹುದು, ಆಸಕ್ತ ಖರೀದಿದಾರರು ಆದಷ್ಟು ಬೇಗ ಇದರ ಲಾಭ ಪಡೆಯಲು ಸೂಚಿಸಲಾಗಿದೆ. ಒಂದು ವೆಳೆ ನೀವು ಕೂಡ Samsung Galaxy S25 ಸ್ಮಾರ್ಟ್‌ಫೋನನ್ನು ಖರೀದಿಸಲು ಇಚ್ಚಿಸಿದರೆ, ಈ ಸ್ಮಾರ್ಟ್‌ಫೋನಿನ ಪ್ರಮುಖ ಫೀಚರ್ಸ್ ಮಾಹಿತಿಯನ್ನು ಈ ಮುಂದೆ ಓದಿ ತಿಳಿಯಿರಿ.

Samsung Galaxy S25 ವೈಶಿಷ್ಟ್ಯಗಳು,
Samsung Galaxy S25 ಸ್ಮಾರ್ಟ್‌ಪೋನ್ ಅತ್ಯಾಧುನಿಕ ವೈಶಿಷ್ಟ್ಯಗಳು ಮತ್ತು ಶಕ್ತಿಯುತ ಕಾರ್ಯಕ್ಷಮತೆಯಿಂದ ಕೂಡಿದೆ. ಇದು ಆಂಡ್ರಾಯ್ಡ್ 15 ಆಧಾರಿತ One UI 7 ನಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು 120Hz ರಿಫ್ರೆಶ್ ದರದೊಂದಿಗೆ 6.2-ಇಂಚಿನ ಪೂರ್ಣ-HD+ ಡೈನಾಮಿಕ್ AMOLED 2X ಡಿಸ್ಪ್ಲೇಯನ್ನು ಹೊಂದಿದೆ. ವೇಗದ ಮತ್ತು ದಕ್ಷ ಕಾರ್ಯಕ್ಷಮತೆಗಾಗಿ ಕಸ್ಟಮ್ ಆಕ್ಟಾ-ಕೋರ್ ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್ ಅನ್ನು 12GB RAM ನೊಂದಿಗೆ ಸಂಯೋಜಿಸಲಾಗಿದೆ. ಹಿಂಭಾಗದಲ್ಲಿ 50MP ಮುಖ್ಯ ಕ್ಯಾಮೆರಾ ಸೇರಿದಂತೆ ಟ್ರಿಪಲ್ ಕ್ಯಾಮೆರಾ ಸೆಟಪ್ ಮತ್ತು ಮುಂಭಾಗದಲ್ಲಿ 12MP ಸೆಲ್ಫಿ ಕ್ಯಾಮೆರಾವನ್ನು ಇದು ಒಳಗೊಂಡಿದೆ. 5G, Wi-Fi 6E, ಬ್ಲೂಟೂತ್ 5.3 ಮತ್ತು 25W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 4,000mAh ಬ್ಯಾಟರಿಯನ್ನು ಸಹ ಈ ಫೋನ್ ಹೊಂದಿದೆ. ಒಟ್ಟಾರೆಯಾಗಿ, 63,999 ರ ಪರಿಣಾಮಕಾರಿ ಬೆಲೆಯಲ್ಲಿ ಖರೀದಿಸಬಹುದಾದ ಅತ್ಯುತ್ತಮ ವೈಶಿಷ್ಟ್ಯಗಳು ಈ ಸಾಧನದಲ್ಲಿವೆ ಎಂದು ಹೇಳಬಹುದು.

Best Mobiles in India

English summary
Samsung Galaxy S25 phone is available for an effective price of Rs. 63,999, which includes all applicable offers.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+