Home
ಸುದ್ದಿಜಾಲ

ಹೊಸ ದಾಖಲೆ ಸೃಷ್ಟಿ! 4 ಲಕ್ಷಕ್ಕೂ ಅಧಿಕ ಪ್ರೀ-ಬುಕಿಂಗ್​.. Samsung ಫೋನ್‌ಗಳಿಗೆ ಮುಗಿಬಿದ್ದ ಗ್ರಾಹಕರು!

ವಾವ್..! ಇದಪ್ಪಾ ದಾಖಲೆ ಅಂದ್ರೆ.. ಸ್ಯಾಮ್‌ಸಂಗ್ ಗ್ಯಾಲಕ್ಸಿ S25 (Samsung Galaxy S25) ಸರಣಿಯು ಪ್ರೀ-ಬುಕಿಂಗ್‌ನಲ್ಲಿ ದಾಖಲೆ ಬರೆದಿದೆ. ಹೌದು, ಫೆಬ್ರವರಿ 7, ಶುಕ್ರವಾರದಿಂದ ಭಾರತದಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಸರಣಿಯು ಮಾರಾಟ ಪ್ರಾರಂಭವಾಗಿದೆ. ಕಂಪನಿಯು ಜನವರಿ 22 ರಂದು ಅಮೆರಿಕದಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಸರಣಿಯನ್ನು ಬಿಡುಗಡೆ ಮಾಡಿತ್ತು. ಈ ಸರಣಿಯಲ್ಲಿ Samsung Galaxy S25, Samsung Galaxy S25 Plus ಮತ್ತು Samsung Galaxy S25 Ultra ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಈ ಮೂರು ಫೋನ್‌ಗಳನ್ನು ಭಾರೀ ಆಫರ್‌ಗಳೊಂದಿಗೆ ಖರೀದಿಸಬಹುದಾಗಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಸರಣಿಯ ಪ್ರೀ-ಬುಕಿಂಗ್‌ ಆರಂಭವಾಗಿದೆ. ಭಾರತದಲ್ಲಿ ಮುಂಗಡ ಬುಕಿಂಗ್ ವಿಷಯದಲ್ಲಿ ಹೊಸ ದಾಖಲೆ ನಿರ್ಮಿಸಿದೆ. ಈ ಬಗ್ಗೆ ಸ್ಯಾಮ್‌ಸಂಗ್ ಮಾಹಿತಿ ನೀಡಿದೆ. ದೇಶದಲ್ಲಿ 4,30,000 ಪೀ-ಬುಕಿಂಗ್‌ಗಳನ್ನು ಸ್ವೀಕರಿಸಿವೆ ಎಂದು ಹೇಳಿದೆ. ಇದು ಕಳೆದ ವರ್ಷ ಬಿಡುಗಡೆಯಾದ ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಸರಣಿಯ ಪೀ-ಬುಕಿಂಗ್‌ಗಿಂದ ಶೇ. 20 ರಷ್ಟು ಹೆಚ್ಚಾಗಿದೆ. ಇನ್ನೂ ನೋಯ್ಡಾ ಮೂಲದ ಕಾರ್ಖಾನೆಯಲ್ಲಿ ಸ್ಯಾಮ್‌ಸಂಗ್ ತನ್ನ ಈ ಗ್ಯಾಲಕ್ಸಿ ಗ್ಯಾಲಕ್ಸಿ S25 ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು​ ತಯಾರಿಸುತ್ತಿದೆ.

ದಾಖಲೆ ಸೃಷ್ಟಿ! 4 ಲಕ್ಷಕ್ಕೂ ಅಧಿಕ ಆರ್ಡರ್​.. Samsung ಫೋನ್‌ಗಳು ಸೋಲ್ಡ್ ಔಟ್

ದೇಶಾದ್ಯಂತ 17 ಸಾವಿರ ಮಳಿಗೆಗಳಲ್ಲಿ ಮಾರಾಟ

ಸ್ಯಾಮ್‌ಸಂಗ್‌ನ ಈ ಹೊಸ ಸರಣಿಯ ಫೋನ್‌ಗಳ ಮೊದಲ ಮಾರಾಟವು ಫೆಬ್ರವರಿ 7 ರಿಂದ ಪ್ರಾರಂಭವಾಗಿದೆ. ಕಂಪನಿಯು ಆನ್‌ಲೈನ್ ಶಾಪಿಂಗ್ ಸೈಟ್ ಅಮೆಜಾನ್ ಮತ್ತು ಸ್ಯಾಮ್‌ಸಂಗ್‌ನ ವೆಬ್‌ಸೈಟ್ ಸೇರಿದಂತೆ ಎಲ್ಲಾ ಆನ್‌ಲೈನ್ ಮತ್ತು ಆಫ್‌ಲೈನ್ ಅಂಗಡಿಗಳ ಮೂಲಕ ಮಾರಾಟ ಮಾಡುತ್ತಿದೆ. ಈ ವರ್ಷ ದೇಶಾದ್ಯಂತ 17 ಸಾವಿರ ಮಳಿಗೆಗಳಲ್ಲಿ ಈ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡುತ್ತಿದೆ. ಈ ಮೂಲಕ ಸಣ್ಣ ನಗರಗಳಲ್ಲಿನ ಗ್ರಾಹಕರ ಬೇಡಿಕೆಯ ಮೇಲೆ ಕೇಂದ್ರೀಕರಿಸಲಾಗಿದೆ. ಬನ್ನಿ, ಈ ಫೋನ್‌ಗಳ ಬೆಲೆ ಮತ್ತು ಕಂಪನಿಯು ಯಾವೆಲ್ಲಾ ಆಫರ್‌ಗಳನ್ನು ನೀಡುತ್ತಿದೆ ಎಂಬವುದನ್ನು ತಿಳಿಯೋಣ.

ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಸರಣಿಯ ಬೆಲೆ

ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಸರಣಿಯು 80,999 ರೂ.ಗಳ ಆರಂಭಿಕ ಬೆಲೆಯಲ್ಲಿ ಲಭ್ಯವಿರುತ್ತದೆ. ಕಂಪನಿಯು ಮೊದಲ ಮಾರಾಟದ ಪ್ರಯುಕ್ತ ತನ್ನ ಗ್ರಾಹಕರಿಗೆ ರಿಯಾಯಿತಿ ನೀಡುತ್ತಿದೆ. ಇನ್ನೂ ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಸರಣಿಯಲ್ಲಿ ಮೂರು ಫೋನ್‌ಗಳನ್ನು ಪರಿಚಯಿಸಲಾಗಿದೆ. ಅವುಗಳೇ, Samsung Galaxy S25, Samsung Galaxy S25 Plus ಮತ್ತು Samsung Galaxy S25 Ultra ಸ್ಮಾರ್ಟ್‌ಫೋನ್‌ಗಳು.

ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಬೆಲೆ

  • 12GB RAM + 256GB ಸ್ಟೋರೇಜ್ ಬೆಲೆ = 80,999 ರೂ.
  • 12GB RAM + 512GB ಸ್ಟೋರೇಜ್ ಬೆಲೆ = 92,999 ರೂ.

ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಪ್ಲಸ್ ಬೆಲೆ

  • 12GB RAM + 256GB ಸ್ಟೋರೇಜ್ ಬೆಲೆ = 99,999 ರೂ.
  • 12GB RAM + 512GB ಸ್ಟೋರೇಜ್ ಬೆಲೆ = 1,11,999 ರೂ.

ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಅಲ್ಟ್ರಾ ಬೆಲೆ

  • 12GB RAM + 256GB ಸ್ಟೋರೇಜ್ ಬೆಲೆ = 1,29,999 ರೂ.
  • 12GB RAM + 512GB ಸ್ಟೋರೇಜ್ ಬೆಲೆ = 1,41,999 ರೂ.
  • 12GB RAM + 1TB ಸ್ಟೋರೇಜ್ ಬೆಲೆ = 1,65,999 ರೂ.
ದಾಖಲೆ ಸೃಷ್ಟಿ! 4 ಲಕ್ಷಕ್ಕೂ ಅಧಿಕ ಆರ್ಡರ್​.. Samsung ಫೋನ್‌ಗಳು ಸೋಲ್ಡ್ ಔಟ್

ಸ್ಯಾಮ್‌ಸಂಗ್ ಯಾವೆಲ್ಲಾ ಆಫರ್ ನೀಡುತ್ತಿದೆ?

ಸ್ಯಾಮ್‌ಸಂಗ್ ಈ ಹೊಸ ಸರಣಿಯ ಸ್ಮಾರ್ಟ್​ಫೋನ್​ಗಳನ್ನು ಖರೀದಿಸುವ ಗ್ರಾಹಕರಿಗೆ ಹಲವು ಆಫರ್‌ಗಳನ್ನು ನೀಡುತ್ತಿದೆ. ಹಳೆಯ ಫೋನನ್ನು ಎಕ್ಸ್‌ಚೇಂಜ್ ಮಾಡಿಕೊಂಡರೆ, ನಿಮಗೆ 9 ಸಾವಿರ ರೂ.ಗಳ ಎಕ್ಸ್‌ಚೇಂಜ್ ಬೋನಸ್ ಸಿಗುತ್ತದೆ. ಇನ್ನು ಎಚ್‌ಡಿಎಫ್‌ಸಿ ಕ್ರೆಡಿಟ್ ಕಾರ್ಡ್ ಪಾವತಿ ಮೇಲೆ, 9 ಸಾವಿರ ರೂ.ವರೆಗೆ ಹೆಚ್ಚುವರಿ ಡಿಸ್ಕೌಂಟ್ ಲಭ್ಯವಿದೆ. ಎಚ್‌ಡಿಎಫ್‌ಸಿ ಕ್ರೆಡಿಟ್ ಕಾರ್ಡ್ ಸಂಪೂರ್ಣವಾಗಿ ಸ್ವೈಪ್ ಮಾಡಿದರೆ 8,000 ರೂ.ಗಳ ತ್ವರಿತ ರಿಯಾಯಿತಿ ಪಡೆಯಬಹುದು. ಈ ಫೋನ್‌ಗಳೊಂದಿಗೆ ಗ್ಯಾಲಕ್ಸಿ ವಾಚ್ 7, ಗ್ಯಾಲಕ್ಸಿ ವಾಚ್ ಅಲ್ಟ್ರಾ ಅಥವಾ ಗ್ಯಾಲಕ್ಸಿ ಬಡ್ಸ್ 3 ಅನ್ನು ಖರೀದಿಸಿದರೆ, 18 ಸಾವಿರ ರೂ. ರಿಯಾಯಿತಿ ಸಿಗುತ್ತದೆ.

ಯಾವ ಬಣ್ಣದಲ್ಲಿ ಖರೀದಿಸಬಹುದು

ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಫೋನ್ ಐಸಿಬ್ಲೂ, ಸಿಲ್ವರ್ ಶ್ಯಾಡೋ, ನೇವಿ ಮತ್ತು ಮಿಂಟ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ S25+ ಸ್ಮಾರ್ಟ್‌ಫೋನ್ ಸಿಲ್ವರ್ ಶ್ಯಾಡೋ ಮತ್ತು ಬ್ಲೂಬ್ಲಾಕ್, ಕೋರಲ್ರೆಡ್ ಮತ್ತು ಪಿಂಕ್‌ಗೋಲ್ಡ್ ಸೇರಿದಂತೆ ನೇವಿ ಬಣ್ಣಗಳ ಆಯ್ಕೆಯಲ್ಲಿ ಬರುತ್ತದೆ. ಹಾಗೆಯೇ ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಅಲ್ಟ್ರಾ ಮೊಬೈಲ್ ಟೈಟಾನಿಯಂ ಸಿಲ್ವರ್‌ಬ್ಲೂ, ಟೈಟಾನಿಯಂ ಬ್ಲಾಕ್, ಟೈಟಾನಿಯಂ ವೈಟ್‌ಸಿಲ್ವರ್ ಮತ್ತು ಟೈಟಾನಿಯಂ ಗ್ರೇ ಬಣ್ಣಗಳಲ್ಲಿ ಮಾರಾಟವಾಗಲಿದೆ.

Best Mobiles in India

English summary
Samsung Galaxy S25 series receives record 4.3 lakh pre-orders in India: know details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+