ಇಂದು Samsung Galaxy S25 ಸರಣಿ ಲಾಂಚ್; ಧೂಳೆಬ್ಬಿಸಲಿವೆ 3 ಹೊಸ ಫೋನ್.. ಬೆಲೆ, ವಿಶೇಷತೆಗಳೇನು ಗೊತ್ತಾ?
ಸ್ಮಾರ್ಟ್‌ಫೋನ್ ಪ್ರಿಯರ ಕಾಯುವಿಕೆ ಮುಗಿಯಿತು! ಬಹುನಿರೀಕ್ಷಿತ ಸ್ಯಾಮ್‌ಸಂಗ್ ಗ್ಯಾಲಕ್ಸಿ S25 (Samsung Galaxy S25) ಸರಣಿಯು ಗ್ರಾಹಕರ ಕೈ ಸೇರಲು ಸಜ್ಜಾಗಿದೆ. ಹೌದು, ಇಂದು (ಜನವರಿ 22) ಮೂರು ಸೊಗಸಾದ ಸ್ಮಾರ್ಟ್‌ಫೋನ್‌ಗಳು ದೇಶೀಯ ಮಾರುಕಟ್ಟೆಗೆ ಎಂಟ್ರಿ ಕೊಡಲಿವೆ. ಹೊಸ ಸರಣಿಯಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ S25 (Samsung Galaxy S25), ಸ್ಯಾಮ್‌ಸಂಗ್ ಗ್ಯಾಲಕ್ಸಿ S25+ (Samsung Galaxy S25+) ಮತ್ತು ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಅಲ್ಟ್ರಾ (Samsung Galaxy S25 Ultra) ಫೋನ್‌ಗಳು ಅಧಿಕೃತವಾಗಿ ಬಿಡುಗಡೆಯಾಗಲಿವೆ. ಬನ್ನಿ, ಈ ಫೋನ್‌ಗಳ ಬೆಲೆ ಮತ್ತು ವಿಶೇಷತೆಗಳನ್ನು ತಿಳಿಯೋಣ.
ಇಡೀ ಟೆಕ್ ಜಗತ್ತಿನ ಕಣ್ಣುಗಳು ಗ್ಯಾಲಕ್ಸಿ ಅನ್‌ಪ್ಯಾಕ್ಡ್ ಈವೆಂಟ್ (Galaxy Unpacked Event 2025) ಮೇಲೆ ನೆಟ್ಟಿದೆ. ಕಂಪನಿಯು ಇಂದು (ಜನವರಿ 22) ಭಾರತೀಯ ಕಾಲಮಾನ ರಾತ್ರಿ 11.30ಕ್ಕೆ ಅಮೇರಿಕಾದ ಕ್ಯಾಲಿಫೋರ್ನಿಯಾದಲ್ಲಿ ದೊಡ್ಡ ಸಮಾರಂಭ ಆಯೋಜಿಸಿದೆ. ಈ ಕಾರ್ಯಕ್ರಮದಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಸರಣಿ ಲೋಕಾರ್ಪಣೆಯಾಗಲಿದೆ. ಸ್ಯಾಮ್‌ಸಂಗ್ ಇಂಡಿಯಾ ವೆಬ್‌ಸೈಟ್ ಸೇರಿದಂತೆ ಕಂಪನಿಯ ಎಲ್ಲಾ ಸೋಶಿಯಲ್ ಮೀಡಿಯಾ ಜಾಲತಾಣಗಳಲ್ಲಿ ನೇರಪ್ರಸಾರ ಇರುತ್ತದೆ. ನೀವು, ಈ ಕೆಳಗಿನ ಲಿಂಕ್ ಮೂಲಕ ಈ ಸಮಾರಂಭವನ್ನು ಲೈವ್ ಆಗಿ ವೀಕ್ಷಿಸಬಹುದು.

ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಸರಣಿಯ ಬೆಲೆ
ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಬೆಲೆ
8GB RAM + 256GB ಸ್ಟೋರೇಜ್ = 60,000 ರೂ.
12GB RAM + 256GB ಸ್ಟೋರೇಜ್ = 68,800 ರೂ.
ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಮೊಬೈಲ್ 12GB RAM ಹೊಂದಿದೆ. ಈ ಫೋನಿನ ಆರಂಭಿಕ ಬೆಲೆ 80 ಸಾವಿರ ರೂ. ಆಗಿದೆ. ಈ ಫೋನಿನ ಟಾಪ್ ವೇರಿಯಂಟ್ 90 ಸಾವಿರ ರೂ.ಗೆ ಬಿಡುಗಡೆಯಾಗಲಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ S25+ ಬೆಲೆ
12GB RAM + 256GB ಸ್ಟೋರೇಜ್ = 84,250 ರೂ.
12GB RAM + 512GB ಸ್ಟೋರೇಜ್ = 94,350 ರೂ.
ಸ್ಯಾಮ್‌ಸಂಗ್ ಗ್ಯಾಲಕ್ಸಿ S25+ ಸ್ಮಾರ್ಟ್‌ಫೋನ್ 12GB RAM ಹೊಂದಿದೆ. ಈ ಫೋನಿನ 256GB ಸ್ಟೋರೇಜ್ ರೂಪಾಂತರದ ಬೆಲೆ 90 ಸಾವಿರ ರೂ. ಆಗಿದೆ. ಹಾಗೆಯೇ 512GB ಸ್ಟೋರೇಜ್ ರೂಪಾಂತರವು 1 ಲಕ್ಷ ರೂ.ಗೆ ಬಿಡುಗಡೆಯಾಗಲಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಅಲ್ಟ್ರಾ ಬೆಲೆ
12GB RAM + 256GB ಸ್ಟೋರೇಜ್ = 1,09,500 ರೂ.
12GB RAM + 512GB ಸ್ಟೋರೇಜ್ = 1,19,650 ರೂ.
16GB RAM + 1TB ಸ್ಟೋರೇಜ್ = 1,39,890 ರೂ.
ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಅಲ್ಟ್ರಾ ಫೋನ್ 12GB RAM ಮತ್ತು 16GB RAM ಹೊಂದಿದೆ. ಇದು 1 TB ಸ್ಟೋರೇಜ್ ಆಯ್ಕೆ ಹೊಂದಿರುತ್ತದೆ. ಇದರ ಬೆಲೆ 1 ಲಕ್ಷ ರೂ.ಗಿಂತ ಹೆಚ್ಚು ಇರುತ್ತದೆ. ಹಾಗೆಯೇ ಟಾಪ್ ವೇರಿಯಂಟ್ 1.5 ಲಕ್ಷ ರೂ.ಗೆ ಬಿಡುಗಡೆಯಾಗಲಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ S25: ಹೇಗಿವೆ ಫೀಚರ್ಸ್
ಗ್ಯಾಲಕ್ಸಿ S25 ಸರಣಿಯ ಡಿಸ್ಪ್ಲೇ
ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಸ್ಮಾರ್ಟ್‌ಫೋನ್ 6.2 ಇಂಚಿನ ಡಿಸ್ಪ್ಲೇ ಹೊಂದಿದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ S25+ ಫೋನಿನಲ್ಲಿ 6.7 ಇಂಚಿನ ಡಿಸ್ಪ್ಲೇ ಇದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಅಲ್ಟ್ರಾ ಸ್ಮಾರ್ಟ್‌ಫೋನ್ 6.86 ಇಂಚಿನ ಡಿಸ್ಪ್ಲೇಯೊಂದಿಗೆ ಬರುತ್ತದೆ. ಈ ಸ್ಮಾರ್ಟ್‌ಫೋನ್‌ಗಳು 120Hz ರಿಫ್ರೆಶ್ ದರ ಮತ್ತು ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕ ಹೊಂದಿವೆ.
ಗ್ಯಾಲಕ್ಸಿ S25 ಸರಣಿಯ ಪ್ರೊಸೆಸರ್
ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಮತ್ತು ಸ್ಯಾಮ್‌ಸಂಗ್ ಗ್ಯಾಲಕ್ಸಿ S25+ ಸ್ಮಾರ್ಟ್‌ಫೋನ್‌ಗಳು Exynos 2500 ಪ್ರೊಸೆಸರ್ ಹೊಂದಿವೆ. ಆದರೆ, ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಅಲ್ಟ್ರಾ ಮೊಬೈಲ್ ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್ ಹೊಂದಿರುತ್ತದೆ. ಈ ಸರಣಿಯ ಮೂರು ಫೋನ್‌ಗಳು 12GB RAM ಮತ್ತು 16GB RAM ಹೊಂದಿವೆ. ಮೂಲ ರೂಪಾಂತರವು 128GB ಸ್ಟೋರೇಜ್ ಮತ್ತು ಟಾಪ್ ವೇರಿಯಂಟ್ 1 TB ಸ್ಟೋರೇಜ್ ಹೊಂದಿದೆ.
ಗ್ಯಾಲಕ್ಸಿ S25 ಸರಣಿಯ ಕ್ಯಾಮೆರಾ ಸೆಟಪ್
ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಮತ್ತು ಸ್ಯಾಮ್‌ಸಂಗ್ ಗ್ಯಾಲಕ್ಸಿ S25+ ಮೊಬೈಲ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಮತ್ತು ಸ್ಯಾಮ್‌ಸಂಗ್ ಗ್ಯಾಲಕ್ಸಿ S25+ ಮೊಬೈಲ್ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, ಅಲ್ಟ್ರಾವೈಡ್ ಆಂಗಲ್ ಲೆನ್ಸ್ ಮತ್ತು ಟೆಲಿಫೋಟೋ ಕ್ಯಾಮೆರಾ ಹೊಂದಿದೆ. ಜೊತೆಗೆ 12 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಇದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಅಲ್ಟ್ರಾ ಸ್ಮಾರ್ಟ್‌ಫೋನ್ ಕ್ವಾಡ್ ರಿಯರ್ ಕ್ಯಾಮೆರಾ ಹೊಂದಿದೆ. ಈ ಫೋನಿನಲ್ಲಿ 200 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 50 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಆಂಗಲ್ ಲೆನ್ಸ್, 50 ಮೆಗಾಪಿಕ್ಸೆಲ್ ಪೆರಿಸ್ಕೋಪ್ ಲೆನ್ಸ್ ಮತ್ತು 10 ಮೆಗಾಪಿಕ್ಸೆಲ್ ಟೆಲಿಫೋಟೋ ಲೆನ್ಸ್ ಇದೆ. ಈ ಮೊಬೈಲ್ 12 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ.
ಗ್ಯಾಲಕ್ಸಿ S25 ಸರಣಿಯ ಬ್ಯಾಟರಿ
ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಅಲ್ಟ್ರಾ ಫೋನ್ 5,500mAh ಬ್ಯಾಟರಿ ಹೊಂದಿರುತ್ತದೆ. ಇದು ಸಿಲಿಕಾನ್ ಕಾರ್ಬನ್ ಬ್ಯಾಟರಿ ಆಗಿರಲಿದೆ. ಇದು 45W ವೇಗದ ಚಾರ್ಜಿಂಗ್ ತಂತ್ರಜ್ಞಾನವನ್ನು ಹೊಂದಿದೆ.


Click it and Unblock the Notifications








