Subscribe to Gizbot

2013 ರ ಫೆಬ್ರವರಿಗೆ ಬರಲಿರುವ ಗ್ಯಾಲಾಕ್ಸಿ ಎಸ್‌4

Posted By: Vijeth

2013 ರ ಫೆಬ್ರವರಿಗೆ ಬರಲಿರುವ ಗ್ಯಾಲಾಕ್ಸಿ ಎಸ್‌4

ಆಂಡ್ರಾಯ್ಡ್‌ ಸ್ಮಾರ್ಟ್‌ಪೋನ್‌ಗಳ ತಯಾರಿಕೆಯ ದಿಗ್ಗಜ ಸಂಸ್ಥೆಯಾದಂತಹ ಸ್ಯಾಮ್ಸಂಗ್‌ ಎಲೆಕ್ಟ್ರಾನಿಕ್ಸ್‌ ಮಾರುಕಟ್ಟೆಯಲ್ಲಿನ ಐಓಎಸ್‌ ಚಾಲಿತ ಆಪಲ್‌ ಸ್ಮಾರ್ಟ್‌ಫೋನ್ಸ್‌, ನೋಕಿಯಾ ಸ್ಮಾರ್ಟ್‌ಫೋನ್ಸ್‌, ಸೋನಿ ಹಾಗೂ ಹೆಚ್‌ಟಿಸಿ ಸ್ಮಾರ್ಟ್‌ಫೋನ್ಸ್‌ಗಳಿಗೆ ಪೈಪೋಟಿ ನೀಡಲು ಈಗಾಗಲೇ ತನ್ನಯ ಸ್ಯಾಮ್ಸಂಗ್‌ ಗ್ಯಾಲಾಕ್ಸಿ ಎಸ್‌3 ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದೆ.

ಗ್ಯಾಲಾಕ್ಸಿ ಎಸ್‌3 ಸ್ಮಾರ್ಟ್‌ಫೋನ್‌ನ ಯಶಸ್ಸಿನ ನಂತರ ಬಾರೀ ಸುದ್ಧಿಯಲ್ಲಿದ್ದ ದಕ್ಷಿಣ ಕೊರಿಯಾ ಮೂಲದ ದಿಗ್ಗಜ ಸಂಸ್ಥೆ ಇದೀಗ ತನ್ನಯ ನೂತನ ಗ್ಯಾಲಾಕ್ಸಿ ಎಸ್‌ 4 ಸ್ಮಾರ್ಟ್‌ಫೋನ್‌ ತರುವ ಯೋಜನೆಯೊಂದಿಗೆ ಮತ್ತೊಮ್ಮೆ ಎಲ್ಲರ ಗಮನ ತನ್ನತ್ತ ಸೆಳೆಯುತ್ತಿದೆ. ಅಂದಹಾಗೆ ಸಂಸ್ಥೆಯು ತನ್ನಯ ನೂತನ ಸ್ಮಾರ್ಟ್‌ಫೋನ್‌ 2013 ಫೆಬ್ರವರಿಗೆ ಮಾರುಕಟ್ಟೆಗೆ ತರುವ ಯೋಜನೇ ರೂಪಿಸಿದ್ದು ಈಗಾಗಲೇ ನೂತನ ಸ್ಮಾರ್ಟ್‌ಫೋನ್‌ನ ಅಪ್ಲಿಕೇಷನ್‌ ಪ್ರೊಸೆಸರ್‌ ತಯಾರಿಕೆಯಲ್ಲಿ ತೊಡಗಿಸಿಕೊಂಡಿದೆ. ಅಂದಹಾಗೆ ಇತ್ತೀಚಿನ ವದಂತಿಗಳ ಪ್ರಕಾರ ಮುಂಬರುವ ಚಳಿಗಾಲದಲ್ಲಿ ನಡೆಯಲಿರುವ ಯೂರೋಪ್‌ ಟೆಕ್ನಾಲಜೀ ಎಕ್ಸಪೋನಲ್ಲಿ ಸ್ಯಾಮ್ಸಂಗ್‌ ತನ್ನಯ ನೂತನ ಸ್ಮಾರ್ಟ್‌ಫೋನ್‌ ಅನಾವರಣ ಗೊಳಿಸಲಿದೆ ಎಂದು ತಿಳಿಸಿವೆ.

ವದಂತಿಗಳಲ್ಲಿ ಹೇಳಿರುವಂತೆ ನೂತನ ಎಸ್‌4 ಸ್ಮಾರ್ಟ್‌ಫೋನ್‌ನಲ್ಲಿ ಕಾರ್ಟೆಕ್ಸ್‌ ಎ-15 ಪ್ರೊಸೆಸರ್‌ ಹೊಂದಿದೆ ಎಂದು ಡಿಜಿಟಲ್‌ ಡೈಲಿ ವರದಿ ಮಾಡಿದೆ. ಅಲ್ಲದೆ ನೂತನ ಪ್ರೊಸೆಸರ್‌ಗೆ ಅಡೋನಿಸ್‌ ಎಂದು ಹೆಸರಿಡಲಾಗಿದೆ.

ಸ್ಯಾಮ್ಸಂಗ್‌ ತನ್ನಯ ನೂತನ ಸ್ಮಾರ್ಟ್‌ಫೋನ್‌ ಗ್ಯಾಲಾಕ್ಸಿ ಎಸ್‌4 ಅನ್ನು 2013 ರಲ್ಲಿ ಸ್ಪೇಯ್ನ್‌ನ ಬಾರ್ಸಲೋನಾದಲ್ಲಿ ನಡೆಯಲಿರುವ ಮೊಬೈಲ್‌ ವರ್ಡ್‌ ಕಾಂಗ್ರೆಸ್‌ನಲ್ಲಿ ಬಿಡುಗಡೆ ಮಾಡಲಿದೆ ಎಂದು ಕೊರಿಯಾ ಸುದ್ಧಿ ಮೂಲಗಳು ತಿಳಿಸಿವೆ.

ಅಂದಹಾಗೆ ಗ್ಯಾಲಾಕ್ಸಿ ಎಸ್‌ 4 ನಲ್ಲಿ ಗ್ಯಾಲಾಕ್ಸಿ ಎಸ್‌3 ಗಿಂತಲೂ ಕೊಂಚ ದೊಡ್ಡದಾದ ಅಂದರೆ ಸುಮಾರು 5 ಇಂಚಿನ OLED ದರ್ಶಕ ಒಳಗೊಂಡಿದೆ ಎಂದು ವದಂತಿಗಳು ತಿಳಿಸಿವೆ. ಅಲ್ಲದೆ 16ಜಿಬಿ, 32 ಜಿಬಿ, 64ಜಿಬಿ ಅಲ್ಲದೆ 128 ಜಿಬಿ ಮಾದರಿಯಲ್ಲಿಯೂ ಕೂಡಾ ಲಭ್ಯವಾಗಲಿದ್ದು 3ಜಿಬಿ RAM, 3,200 mAh ಬ್ಯಾಟರಿಯೊಂದಿಗೆ ಸ್ಕೈಪ್‌ ರೆಡಿ ಹೊಂದಿರುವ ಮುಂಬದಿಯ 1.9 ಎಂಪಿ ಕ್ಯಾಮೆರಾ ಹೊಂದಿದೆ. ಅಂದಹಾಗೆ ನೂತನ ಸ್ಮಾರ್ಟ್‌ಫೋನ್‌ನ ದರ ಕುರಿತಾಗಿ ಯಾವುದೇ ಮಾಹಿತಿ ಲಭ್ಯವಿಲ್ಲ.

Read In English...

ಟಾಪ್‌ 5 ವೈರ್ಲೆಸ್‌ ಚಾರ್ಜಿಂಗ್‌ ಸ್ಮಾರ್ಟ್‌ಫೋನ್‌ಗಳು

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot