Subscribe to Gizbot

ಸ್ಯಾಮ್‌ಸಂಗ್‌ ಬಿಡುಗಡೆ ಮಾಡಲಿದೆ 19 ಎಂಪಿ ಕ್ಯಾಮೆರಾ ಸ್ಮಾರ್ಟ್‌ಫೋನ್

Posted By:

ಸ್ಯಾಮ್‌ಸಂಗ್‌ ಸದ್ಯದಲ್ಲೇ 19 ಮೆಗಾಪಿಕ್ಸೆಲ್‌ ಹೊಂದಿರುವ ಕ್ಯಾಮೆರಾ ಸ್ಮಾರ್ಟ್‌ಫೋನ್‌ನ್ನು ಬಿಡುಗಡೆ ಮಾಡಲಿದೆ. ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌ 5 ಝೂಮ್‌ ವಿಶೇಷತೆ ಬೆಂಚ್‌ಮಾರ್ಕ್‌ ತಾಣದಲ್ಲಿ ಪ್ರಕಟಗೊಂಡಿದೆ.

ಕಳೆದ ವರ್ಷ ಸ್ಯಾಮ್‌ಸಂಗ್‌ ಬಿಡುಗಡೆ ಮಾಡಿದ ಗೆಲಾಕ್ಸಿ ಎಸ್‌ 4 ಝೂಮ್‌ 16 ಎಂಪಿ ಕ್ಯಾಮೆರಾದೊಂದಿಗೆ ಬಿಡುಗಡೆಯಾಗಿತ್ತು. ಆದರೆ ಈ ಸ್ಮಾರ್ಟ್‌ಫೋನ್‌ ಹಿಂದುಗಡೆ 19 ಎಂಪಿ ಕ್ಯಾಮೆರಾ ( 5184 x 3888 ಪಿಕ್ಸೆಲ್‌ ಚಿತ್ರ) ಹೊಂದಿದ್ದರೆ,2 ಎಂಪಿ ಕ್ಯಾಮೆರಾವನ್ನು ಹೊಂದಿದೆ. ಜೊತೆಗೆ ಕಿಟ್‌ಕ್ಯಾಟ್‌ ಓಎಸ್‌,1.3GHz ಸ್ಯಾಮ್‌ಸಂಗ್‌ Exynos ಹೆಕ್ಸಾ ಕೋರ್‌ ಪ್ರೊಸೆಸರ್‌ನೊಂದಿಗೆ ಬಿಡುಗಡೆಯಾಗಲಿದೆ ಎಂದು GFXBench ತಾಣ ತಿಳಿಸಿದೆ.

 ಸ್ಯಾಮ್‌ಸಂಗ್‌ ಬಿಡುಗಡೆ ಮಾಡಲಿದೆ 19 ಎಂಪಿ ಕ್ಯಾಮೆರಾ ಸ್ಮಾರ್ಟ್‌ಫೋನ್

ಸ್ಯಾಮ್‌ಸಂಗ್ ಗೆಲಾಕ್ಸಿ ಎಸ್‌ 5 ಝೂಮ್‌
ವಿಶೇಷತೆ:
4.8 ಇಂಚಿನ ಅಮೊಲೆಡ್‌ ಸ್ಕ್ರೀನ್‌(720x1280 ಪಿಕ್ಸೆಲ್‌)
ಆಂಡ್ರಾಯ್ಡ್ 4.4.2 ಕಿಟ್‌ಕ್ಯಾಟ್ ಓಎಸ್
1.3GHz ಹೆಕ್ಸಾ ಕೋರ್‌ ಪ್ರೊಸೆಸರ್‌
8 ಜಿಬಿ ಆಂತರಿಕ ಮೆಮೊರಿ
2ಜಿಬಿ ರ್‍ಯಾಮ್‌
19 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌4 ಝೂಮ್

ವಿಶೇಷತೆ:
ಸಿಂಗಲ್‌ ಸಿಮ್‌
4.3 ಇಂಚಿನ ಸುಪರ್‌ AMOLED qHD ಟಚ್‌ಸ್ಕ್ರೀನ್
ಆಂಡ್ರಾಯ್ಡ್‌ 4.2 ಜೆಲ್ಲಿ ಬೀನ್‌ ಓಎಸ್‌
1.5GHz ಡ್ಯುಯಲ್‌ ಕೋರ್‌ ಪ್ರೊಸೆಸರ್‍
8 GB ಆಂತರಿಕ ಮೆಮೊರಿ
1.5GB RAM
64GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ವೈಫೈ,ಬ್ಲೂಟೂತ್‌,ಎನ್‌ಎಫ್‌ಸಿ
16 ಎಂಪಿ ಹಿಂದುಗಡೆ ಕ್ಯಾಮೆರಾ(10X ಅಪ್ಟಿಕಲ್‌ ಝೂಮ್‌)
1.9 ಎಂಪಿ ಮುಂದುಗಡೆ ಕ್ಯಾಮೆರಾ
2,330mAh ಬ್ಯಾಟರಿ

ಇದನ್ನೂ ಓದಿ: 25 ಸಾವಿರದೊಳಗಿನ ಸ್ಯಾಮ್‌ಸಂಗ್‌ನ ಟಾಪ್ ಸ್ಮಾರ್ಟ್‌ಫೋನ್‌ಗಳು

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot