Home
ಸುದ್ದಿಜಾಲ

ಆಂಡ್ರಾಯ್ಡ್ ಓರಿಯೋ ಅಪ್‌ಡೇಟ್ ಪಡೆದ ಮೊದಲ 'ಸ್ಯಾಮ್‌ಸಂಗ್' ಫೋನ್ ಇದು!!

ಗ್ಯಾಲೆಕ್ಸಿ S8 ಮತ್ತು ಗ್ಯಾಲಾಕ್ಸಿ ಎಸ್‌8 ಪ್ಲಸ್ ಸ್ಮಾರ್ಟ್‌ಫೋನ್‌ಗಳು ಆಂಡ್ರಾಯ್ಡ್ ಓರಿಯೋ ಅಪ್‌ಡೇಟ್ ಪಡೆದ ಸ್ಯಾಮ್‌ಸಂಗ್ ಕಂಪೆನಿಯ ಮೊದಲ ಸ್ಮಾರ್ಟ್‌ಫೋನ್‌‌ಗಳಾಗಿ ಹೊರಹೊಮ್ಮಿವೆ.!!

By Bhaskar N J

ಭಾರತದಲ್ಲಿ ಬಿಡುಗಡೆಯಾದ ಒಂದು ತಿಂಗಳಿನಲ್ಲಿಯೇ 5 ಬಿಲಿಯನ್‌ಗಿಂತಲೂ ಹೆಚ್ಚು ಮಾರಾಟ ಕಂಡು ದಾಖಲೆ ಸೃಷ್ಟಿಸಿದ್ದ ಗ್ಯಾಲೆಕ್ಸಿ S8 ಮತ್ತು ಗ್ಯಾಲಾಕ್ಸಿ ಎಸ್‌8 ಪ್ಲಸ್ ಸ್ಮಾರ್ಟ್‌ಫೋನ್‌ಗಳು ಆಂಡ್ರಾಯ್ಡ್ ಓರಿಯೋ ಅಪ್‌ಡೇಟ್ ಪಡೆದ ಸ್ಯಾಮ್‌ಸಂಗ್ ಕಂಪೆನಿಯ ಮೊದಲ ಸ್ಮಾರ್ಟ್‌ಫೋನ್‌‌ಗಳಾಗಿ ಹೊರಹೊಮ್ಮಿವೆ.!!

ಸ್ಯಾಮ್‌ಸಂಗ್ ಈ ಬಗ್ಗೆ ಮಾಹಿತಿ ಬಿಡುಗಡೆ ಮಾಡಿದ್ದು, ಗ್ಯಾಲೆಕ್ಸಿ S8 ಮತ್ತು ಗ್ಯಾಲಾಕ್ಸಿ ಎಸ್‌8 ಪ್ಲಸ್ ಸ್ಮಾರ್ಟ್‌ಫೋನ್‌ಗಳಿಗೆ ಆಂಡ್ರಾಯ್ಡ್ ಓರಿಯೋ ಅಪ್‌ಡೇಟ್‌ಗಾಗಿ ಫರ್ಮವೇರ್ ವರ್ಷನ್ ''G955XXU1CARP'' ಜರ್ಮನಿಯಲ್ಲಿ ಲಭ್ಯವಿರುವುದಾಗಿ ತಿಳಿಸಿದೆ. ಮತ್ತು ಭಾರತ ಸೇರಿದಂತೆ ಇತರೆ ಎಲ್ಲಾ ಮಾರುಕಟ್ಟೆಗಳಲ್ಲಿ ಶೀಘ್ರದಲ್ಲಿಯೇ ಅಪ್‌ಡೇಟ್ ತರುವುದಾಗಿ ಹೇಳಿದೆ.!!

ಆಂಡ್ರಾಯ್ಡ್ ಓರಿಯೋ ಅಪ್‌ಡೇಟ್ ಪಡೆದ ಮೊದಲ 'ಸ್ಯಾಮ್‌ಸಂಗ್' ಫೋನ್ ಇದು!!

ಈ ಸುದ್ದಿಯಿಂದ ಗ್ಯಾಲೆಕ್ಸಿ S8 ಮತ್ತು ಗ್ಯಾಲಾಕ್ಸಿ ಎಸ್‌8 ಪ್ಲಸ್ ಸ್ಮಾರ್ಟ್‌ಪೋನ್ ಬಳಕೆದಾರರು ಖುಷಿಯಲ್ಲಿದ್ದು, ಇನ್ನು ಕೆಲವೇ ದಿನಗಳಲ್ಲಿ ಆಂಡ್ರಾಯ್ಡ್ ಓರಿಯೋ ಅಪ್‌ಡೇಟ್ ಪಡೆಯಲಿದ್ದಾರೆ.! ಹಾಗಾದರೆ, ಆಂಡ್ರಾಯ್ಡ್ ಓರಿಯೋ ಅಪ್‌ಡೇಟ್ ಪಡೆಯುತ್ತಿರುವ ಗ್ಯಾಲೆಕ್ಸಿ S8 ಮತ್ತು ಗ್ಯಾಲಾಕ್ಸಿ ಎಸ್‌8 ಪ್ಲಸ್ ಸ್ಮಾರ್ಟ್‌ಪೋನ್‌ ಫೀಚರ್ಸ್‌ಗಳನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

5.8 ಇಂಚಿನ QHD ಡಿಸ್‌ಪ್ಲೇ!!

5.8 ಇಂಚಿನ QHD ಡಿಸ್‌ಪ್ಲೇ!!

ಸ್ಯಾಮ್‌ಸಂಗ್ ಗ್ಯಾಲೆಕ್ಸಿ ಎಸ್‌ 8 ಸ್ಮಾರ್ಟ್‌ಫೋನಿನಲ್ಲಿ 5.8 ಇಂಚಿನ QHD ರೆಸಲ್ಯೂಷನ್ ಹೊಂದಿರುವ ಸೂಪರ್ ಆಮೋಲೈಡ್ ಡಿಸ್‌ಪ್ಲೇಯನ್ನು ಅಳವಡಿಸಲಾಗಿದೆ. ಸ್ಯಾಮ್‌ಸಂಗ್ ಗ್ಯಾಲೆಕ್ಸಿ ಎಸ್‌ 8 ಪ್ಲಸ್ ಸ್ಮಾರ್ಟ್‌ಫೋನಿನಲ್ಲಿ 6.2 ಇಂಚಿನ QHD ರೆಸಲ್ಯೂಷನ್ ಹೊಂದಿರುವ ಸುಪರ್ ಆಮೋಲೈಡ್ ಡಿಸ್‌ಪ್ಲೇ ಕಾಣಬಹುದಾಗಿದೆ.!

ಕ್ವಾಲ್ಕಮ್ 835 ಪ್ರೋಸೆಸರ್!!

ಕ್ವಾಲ್ಕಮ್ 835 ಪ್ರೋಸೆಸರ್!!

ಸ್ಯಾಮ್‌ಸಂಗ್ ಗ್ಯಾಲೆಕ್ಸಿ ಎಸ್‌ 8 ಮತ್ತು ಗ್ಯಾಲೆಕ್ಸಿ ಎಸ್ 8 ಪ್ಲಸ್ ಸ್ಮಾರ್ಟ್‌ಫೋನುಗಳಲ್ಲಿ ವೇಗದ ಕಾರ್ಯನಿರ್ವಹಣೆಗಾಗಿ ಸದ್ಯದ ಟಾಪ್‌ ಎಂಡ್ ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 835 ಪ್ರೋಸೆಸರ್ ಅನ್ನು ಅಳವಡಿಸಲಾಗಿದೆ. ಆಂಡ್ರಾಯ್ಡ್ ಓರಿಯೋಗೆ ನೌಗಾಟ್‌ಗಿಂತಲೂ ಹೆಚ್ಚು ಸಪೋರ್ಟೆ ಆಗುವ ಪ್ರೊಸೆಸರ್ ಇದಾಗಿದೆ.!!

RAM ಮತ್ತು ಮೆಮೊರಿ

RAM ಮತ್ತು ಮೆಮೊರಿ

ಗ್ಯಾಲೆಕ್ಸಿ ಎಸ್‌ 8 ಮತ್ತು ಗ್ಯಾಲೆಕ್ಸಿ ಎಸ್ 8 ಪ್ಲಸ್ ಸ್ಮಾರ್ಟ್‌ಫೋನ್ಗಗಳು 4GB RAM ಮತ್ತು 64GB ಆಂತರಿಕ ಮೆಮೊರಿ ಹೊಂದಿದೆ ಮೈಕ್ರೋ ಎಸ್‌ಡಿ ಕಾರ್ಡ್ ಹಾಕಿಕೊಳ್ಳುವ ಮೂಲಕ 256GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶವಿದೆ. ಮತ್ತು ಗ್ಯಾಲೆಕ್ಸಿ ಎಸ್‌8 ನಲ್ಲಿ 3,000mAh ಬ್ಯಾಟರಿ ಮತ್ತು ಗ್ಯಾಲೆಕ್ಸಿ ಎಸ್8 ಪ್ಲಸ್‌ ನಲ್ಲಿ 3,500mAh ಬ್ಯಾಟರಿಯನ್ನು ಅಳವಡಿಸಲಾಗಿದೆ.

ಕ್ಯಾಮೆರಾ ಹೇಗಿದೆ?

ಕ್ಯಾಮೆರಾ ಹೇಗಿದೆ?

ಉತ್ತಮ ಪೋಟೋಗ್ರಫಿಗಾಗಿಯೇ ಸ್ಯಾಮ್‌ಸಂಗ್ ಗ್ಯಾಲೆಕ್ಸಿ ಎಸ್‌8 ಮತ್ತು ಗ್ಯಾಲೆಕ್ಸಿ ಎಸ್8 ಪ್ಲಸ್ ಫೋನಿನಲ್ಲಿ ಗುಣಮಟ್ಟದ ಕ್ಯಾಮೆರಾವನ್ನು ನೀಡಲಾಗಿದ್ದು, ಮುಂಭಾಗದಲ್ಲಿ ಸೆಲ್ಫಿ ತೆಗೆಯುವ ಸಲುವಾಗಿ ಆಟೋ ಪೋಕಸ್ ಹೊಂದಿರುವ 8 MP ಕ್ಯಾಮೆರಾವನ್ನು ಹಿಂಭಾಗದಲ್ಲಿ 12 MP ಡ್ಯುಯಲ್ ಕ್ಯಾಮೆರಾವನ್ನು ಅಳವಡಿಸಲಾಗಿದ್ದು, ಒಳ್ಳೆಯ ಚಿತ್ರಗಳನ್ನು ಸೆರೆಹಿಡಿಯಲು ಇದು ಸಹಾಯಕಾರಿಯಾಗಿದೆ.

TEZ App : ಗೂಗಲ್ ಭಾರತೀಯರಿಗಾಗಿ ಗೂಗಲ್‌ನಿಂದ Tez ಪೇಮೆಂಟ್ ಆಪ್
ವಾಟರ್‌ಪ್ರೂಫ್-ಡಸ್ಟ್ ಫ್ರೂಪ್!!

ವಾಟರ್‌ಪ್ರೂಫ್-ಡಸ್ಟ್ ಫ್ರೂಪ್!!

ಸ್ಯಾಮ್‌ಸಂಗ್ ಗ್ಯಾಲೆಕ್ಸಿ ಎಸ್‌8 ಮತ್ತು ಗ್ಯಾಲೆಕ್ಸಿ ಎಸ್8 ಪ್ಲಸ್ ಫೋನುಗಳು IP68 ವಾಟರ್‌ಪ್ರೂಫ್ ಮತ್ತು ಡಸ್ಟ್ ಫ್ರೂಪ್ ಆಗಿದ್ದು, ನೀರಿನಲ್ಲಿ ಬಿದ್ದರು ತಲೆ ಕೆಡಿಸಿಕೊಳ್ಳಬೇಕಾಗಿಲ್ಲ, ಧೂಳಿನಲ್ಲಿ ಓಡಾಡಿದರು ಫೋನು ಏನು ಆಗುವುದಿಲ್ಲ. ಈ ಪೋನುಗಳು ಮಿಡ್‌ನೈಟ್ ಬ್ಲಾಕ್, ಆರ್ಕಿಡ್ ಗ್ರೇ, ಆರ್ಕ್ಟಿಕ್ ಸಿಲ್ವರ್, ಕೋರಲ್ ನೀಲಿ ಮತ್ತು ಮ್ಯಾಪಲ್ ಗೋಲ್ಡ್ ಬಣ್ಣಗಳಲ್ಲಿ ದೊರೆಯಲಿದೆ.

Best Mobiles in India

English summary
The update is rolling out to units in Germany.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+