ಮಾರುಕಟ್ಟೆಯಲ್ಲಿ ಸ್ಯಾಮ್ ಸಂಗ್ ಗ್ಯಾಲೆಕ್ಸಿ S8 ಮತ್ತು S8 ಪ್ಲಸ್ ಬೆಲೆಯಲ್ಲಿ ಭಾರೀ ಕಡಿತ..!
ಮಾರುಕಟ್ಟೆಯಲ್ಲಿ ಸ್ಯಾಮ್ ಸಂಗ್ ಗ್ಯಾಲೆಕ್ಸಿ S9 ಮತ್ತು ಸ್ಯಾಮ್ ಸಂಗ್ ಗ್ಯಾಲೆಕ್ಸಿ S9 ಪ್ಲಸ್ ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆ ಮಾಡಿರುವ ಹಿನ್ನಲೆಯಲ್ಲಿ ಹೆಚ್ಚಿನ ಗ್ರಾಹಕರು ಈ ಸ್ಮಾರ್ಟ್ ಫೋನ್ ಗಳನ್ನು ಕೊಳ್ಳಲು ಮುಗಿಬಿಳುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಸ್ಯಾಮ್ ಸಂಗ್ ಗ್ಯಾಲೆಕ್ಸಿ S8 ಮತ್ತು ಸ್ಯಾಮ್ ಸಂಗ್ ಗ್ಯಾಲೆಕ್ಸಿ S8 ಪ್ಲಸ್ ಸ್ಮಾರ್ಟ್ ಫೋನ್ ಬೇಡಿಕೆಯೂ ಕಡಿಮೆಯಾಗುತ್ತಿದೆ. ಈ ಹಿನ್ನಲೆಯಲ್ಲಿ ಸ್ಯಾಮ್ ಸಂಗ್ ಗ್ಯಾಲೆಕ್ಸಿ S8 ಮತ್ತು S8 ಬೆಲೆಯಲ್ಲಿ ಸ್ಯಾಮ್ ಸಂಗ್ ಕಡಿತವನ್ನು ಘೋಷಿಸಿದೆ.

ಈಗಾಗಲೇ ಸ್ಯಾಮ್ ಸಂಗ್ ಗ್ಯಾಲೆಕ್ಸಿ S8 ಸ್ಮಾರ್ಟ್ ಫೋನ್ ಗಳು ಸಹ ಆಂಡ್ರಾಯ್ಡ್ ಒರಿಯೋ ಆಪ್ ಡೇಟ್ ಪಡೆದುಕೊಳ್ಳುತ್ತಿದ್ದು, ಬೆಲೆ ಕೂಡ ಕಡಿಮೆ ಆಗಿರುವದರಿಂದ ಸ್ಯಾಮ್ ಸಂಗ್ ಗ್ಯಾಲೆಕ್ಸಿ S8 ಸ್ಮಾರ್ಟ್ ಫೋನ್ ಕೊಳ್ಳಲು ಇದೇ ಸರಿಯಾದ ಸಮಯ ಎನ್ನಲಾಗುತ್ತಿದೆ.
ಸ್ಯಾಮ್ ಸಂಗ್ ಗ್ಯಾಲೆಕ್ಸಿ S8 ಮತ್ತು ಸ್ಯಾಮ್ ಸಂಗ್ ಗ್ಯಾಲೆಕ್ಸಿ S8 ಪ್ಲಸ್ 128GB ಆವೃತ್ತಿಯ ಸ್ಮಾರ್ಟ್ ಫೋನ್ ಬೆಲೆಯಲ್ಲಿ ಕಡಿತವನ್ನು ಕಾಣಬಹುದಾಗಿದೆ. ಗ್ಯಾಲೆಕ್ಸಿ S8 64GB ಆವೃತ್ತಿಯೂ ರೂ.49,990 ಹಾಗೂ ಗ್ಯಾಲೆಕ್ಸಿ S8 ಪ್ಲಸ್ 64GB ಆವೃತ್ತಿಯೂ ರೂ.53,990ಕ್ಕೆ ಲಭ್ಯವಿದೆ. ಗ್ಯಾಲೆಕ್ಸಿ S8 ಪ್ಲಸ್ 128GB ಆವೃತ್ತಿ ರೂ.64,990ಕ್ಕೆ ಮಾರಾಟವಾಗಲಿದೆ.
ಈ ಆಫರ್ ಗಳು ಸ್ಯಾಮ್ ಸಂಗ್ ಅಧಿಕೃತ ವೆಬ್ ಸೈಟಿನಲ್ಲಿ ಮಾತ್ರವೇ ದೊರೆಯುತ್ತಿದೆ ಎನ್ನಲಾಗಿದ್ದು, ಇದರೊಂದಿಗೆ ಎಕ್ಸ್ ಚೇಂಜ್ ಡಿಸ್ಕೌಂಟ್, EMI ಆಯ್ಕೆಗಳನ್ನು ಹಾಗೂ ಹೆಚ್ಚುವರಿ ರಿಯಾಯಿತಿಗಳನ್ನು ಸ್ಯಾಮ್ ಸಂಗ್ ತನ್ನ ಬಳಕೆದಾರರಿಗೆ ನೀಡುತ್ತಿದೆ.
ಸ್ಯಾಮ್ ಸಂಗ್ ಗ್ಯಾಲೆಕ್ಸಿ S8 ಸ್ಮಾರ್ಟ್ ಫೋನಿನಲ್ಲಿ 5.8 ಇಂಚಿನ ಡಿಸ್ ಪ್ಲೇಯನ್ನು ನೋಡಬಹುದಾಗಿದ್ದು, ಇದೇ ಮಾದರಿಯಲ್ಲಿ ಸ್ಯಾಮ್ ಸಂಗ್ ಗ್ಯಾಲೆಕ್ಸಿ S8 ಪ್ಲಸ್ ಸ್ಮಾರ್ಟ್ ಪೋನಿನಲ್ಲಿ 6.2 ಇಂಚಿನ ಡಿಸ್ ಪ್ಲೇಯನ್ನು ನೋಡಬಹುದಾಗಿದೆ. 18.5:9 ಅನುಪಾತದ ಡಿಸ್ ಪ್ಲೇ ಇದಾಗಿದೆ. ಅಲ್ಲದೇ QHD+ ಗುಣಮಟ್ಟದ ಅಮೊಲೈಡ್ ಡಿಸ್ ಪ್ಲೇಗಳಾಗಿದೆ. ಈ ಎರಡು ಸ್ಮಾರ್ಟ್ ಫೋನ್ ಗಳು 4GB RAM ಮತ್ತು 6GB RAM ನೊಂದಿಗೆ 64GB, 128GB, 256GB ಇಂಟರ್ನಲ್ ಮೆಮೊರಿಯೊಂದಿಗೆ ಲಭ್ಯವಿರಲಿದೆ.
ಸ್ಯಾಮ್ ಸಂಗ್ ಗ್ಯಾಲೆಕ್ಸಿ S8 ಮತ್ತು S8 ಪ್ಲಸ್ ಸ್ಮಾರ್ಟ್ ಪೋನಿನಲ್ಲಿ 12MP ಡ್ಯುಯಲ್ ಕ್ಯಾಮೆರಾವನ್ನು ನೋಡಬಹುದಾಗಿದೆ. ಮುಂಭಾಗದಲ್ಲಿ 8 MP ಕ್ಯಾಮೆರಾವನ್ನು ನೋಡಬಹುದಾಗಿದೆ. ಕ್ರಮವಾಗಿ ಈ ಸ್ಮಾರ್ಟ್ ಫೋನ್ ಗಳಲ್ಲಿ 3000mAh ಮತ್ತು 3500mAh ಬ್ಯಾಟರಿಯನ್ನು ನೀಡಲಾಗಿದೆ.


Click it and Unblock the Notifications








