7,900 ರೂ.ಗೆ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 9 ಆದರೆ, ಖರೀದಿಸಲು ಸಾಧ್ಯವೇ?
ಅದ್ಯಾಕೋ ಗೊತ್ತಿಲ್ಲ ಸ್ಯಾಮ್ ಸಂಗ್ ಇತ್ತೀಚೆಗೆ ಭಾರೀ ಆಫರ್ ಗಳನ್ನು ಕರುಣಿಸುತ್ತಿದೆ.. ಒಮ್ಮೆಮ್ಮೊ ಅವರು ನೀಡುವ ಆಫರ್ ಗಳು ಅದ್ಯಾಕೆ ಇಷ್ಟು ದೊಡ್ಡ ಮಟ್ಟದ ಆಫರ್ ಇಟ್ಟಿದ್ದಾರೆ,, ಫೋನಿನಲ್ಲಿ ಏನಾದರೂ ಸಮಸ್ಯೆ ಇದಿಯಾ ಎಂಬ ಅನುಮಾನಕ್ಕೂ ಕಾರಣವಾಗುವಷ್ಟರ ಮಟ್ಟಿಗಿನ ದೊಡ್ಡ ಆಫರ್ ಗಳನ್ನು ಬಿಟ್ಟಿರುವುದಿದೆ. ಇದೆಂದೂ ಸಿಗದ ಅತ್ಯುದ್ಭುತ ಆಫರ್ ಗಳನ್ನು ಸ್ಯಾಮಸಂಗ್ ತನ್ನ ಅಧಿಕೃತ ವೆಬ್ ಸೈಟ್ ಗಳಲ್ಲಿ ನೀಡುತ್ತಿದೆ.
2018 ರ ಸ್ಯಾಮ್ ಸಂಗ್ ಫ್ಲ್ಯಾಗ್ ಶಿಪ್ ನಲ್ಲಿ ಅತೀ ಹೆಚ್ಚು ಬೆಲೆಯ ಪ್ರೀಮಿಯಂ ಹೈ ಎಂಡ್ ಡಿವೈಸ್ ಗಳನ್ನು ಭಾರೀ ರಿಯಾಯಿತಿಯಲ್ಲಿ ಈಗ ಖರೀದಿಸುವ ಅವಕಾಶವಿದೆ. ಹೌದು 57,900 ರುಪಾಯಿ ಮೊಬೈಲ್ ಕೇವಲ 7,990 ರೂಪಾಯಿಗೆ ಲಭ್ಯವಾಗುತ್ತಿದ್ದರೆ ನಿಮಗೆ ಆಶ್ಚರ್ಯವಾಗುವುದಿಲ್ಲವೇ? ಐಫೋನ್ ಎಕ್ಸ್ ಗೆ ಹೆಚ್ಚು ಕಡಿಮೆ ಸರಿಸಮನಾದ ಬೆಲೆಯನ್ನು ಹೊಂದಿದ್ದ ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್ 9 ಈ ಅತ್ಯಂತ ಕಡಿಮೆ ಬೆಲೆಗೆ ಲಭ್ಯವಿದೆ.

ಸ್ಯಾಮ್ ಸಂಗ್ ಆನ್ ಲೈನ್ ಸ್ಟೋರ್ ನಲ್ಲಿ ಎಲ್ಲಾ ಆಫರ್ ಗಳನ್ನು ಸೇರಿಸಿದಾಗ ಒಟ್ಟು 50,000 ರುಪಾಯಿ ರಿಯಾಯಿತಿ ಬೆಲೆಯನ್ನು ನೀಡುತ್ತಿದೆ. ಗ್ಯಾಲಕ್ಸಿ ಎಸ್ 9, ಗ್ಯಾಲಕ್ಸಿ ಎಸ್ 9+ ಮಾಡೆಲ್ ಗಳಿಗೆ ಆಫರ್ ಇದೆ. ಆದರೆ 64ಜಿಬಿ ಗ್ಯಾಲಕ್ಸಿ ಎಸ್ 9 ಮಾಡೆಲ್ ನ್ನು ಎಲ್ಲಾ ಆಫರ್ ಗಳನ್ನು ಸೇರಿಸಿ ಹೇಳಿದಾಗ ಅತೀ ಕಡಿಮೆ ಬೆಲೆಗೆ ಸಿಗುತ್ತದೆ.
ಅದರಲ್ಲಿ ಅತೀ ಹೆಚ್ಚು ಅಂದರೆ 33,000 ರುಪಾಯಿಯ ಎಕ್ಸ್ ಚೇಂಜ್ ಆಫರ್ , 5000 ರುಪಾಯಿ ಕ್ಯಾಷ್ ಬ್ಯಾಕ್, 6000 ರುಪಾಯಿಯ ಹೆಚ್ ಡಿಎಫ್ ಸಿ ಕ್ರೆಡಿಟ್ ಕಾರ್ಡ್ ನಲ್ಲಿ ಎಕ್ಸ್ ಚೇಂಜ್ ಆಫರ್ ಮತ್ತು ಅರ್ಹ ಸ್ಯಾ ಮ್ ಸಂಗ್ ಫೋನ್ ಗಳ ಮೇಲೆ 6000 ರುಪಾಯಿ ಕ್ಯಾಷ್ ಬ್ಯಾಕ್ ಇದೆ. ಒಂದು ವೇಳೆ ನೀವು ಈ ಎಲ್ಲಾ ಆಫರ್ ಗಳನ್ನು ಒಟ್ಟಿಗೆ ಪಡೆದುಕೊಳ್ಳಲು ಅರ್ಹರಾಗಿದ್ದರೆ ನಿಮಗೆ ಸ್ಯಾಮ್ ಸಂಗ್ ಗ್ಯಾಲಕ್ಸಿ ಫೋನ್ ಕೇವಲ 7900 ರುಪಾಯಿಗೆ ಲಭ್ಯವಾಗುತ್ತೆ.
ಆದರೆ, ಇದೆಲ್ಲ ಆಪರ್ ಗಳನ್ನು ಏಕ ವ್ಯಕ್ತಿಗೆ ಪಡೆಯಲು ಅಸಾಧ್ಯ. ಯಾಕೆಂದರೆ ಎಲ್ಲರೂ ಹೆಚ್ ಡಿಎಫ್ ಸಿ ಕ್ರೆಡಿಟ್ ಕಾರ್ಡ್ ಹೊಂದಿರುವುದಿಲ ಮತ್ತು ಎಲ್ಲರ ಬಳಿಯೂ ಸ್ಯಾಮ್ ಸಂಗ್ ಪೋನ್ ಎಕ್ಸ್ ಚೇಂಜ್ ಗೆ ಲಭ್ಯವಿರುವುದಿಲ್ಲ. ನಾವು ಕೂಡ ಈ ರೀತಿ ಆಫರ್ ಪಡೆಯಲು ಸಾಧ್ಯವೇ ಎಂದು ಪರೀಕ್ಷಿಸಿದೆವು ಅದು ನಮಗೆ ಸಾಧ್ಯವಾಗಲಿಲ್ಲ. ಇದರ ಜೊತೆಗೆ ಐಫೋನ್ 8 ಪ್ಲಸ್ ಗೂ ಎಕ್ಸ್ ಚೇಂಜ್ ಆಫರ್ ಇದ್ದು, 22000 ರುಪಾಯಿಯ ಡಿಸ್ಕೌಂಟ್ ಲಭ್ಯವಾಗಲಿದೆ. ಡಿಸ್ಕೌಂಟ್ ಗೆ ನೀವು ಅರ್ಹರೇ ಆಗಿದ್ದರೂ ಸಂಪೂರ್ಣ ಡಿಸ್ಕೌಂಟ್ ಅಂದರೆ 7,900 ರುಪಾಯಿಗೆ ಫೋನ್ ಖರೀದಿಸುವುದು ಅಸಾಧ್ಯವೇ ಸರಿ.

ಗ್ಯಾಲಕ್ಸಿ ಎಸ್ 9 ನ್ನು ನೀವು ಖರೀದಿಸಬೇಕಾ?
ಗ್ಯಾಲಕ್ಸಿ ಎಸ್ 9 ಒಂದು ಆಕರ್ಷಕವಾಗಿರುವ ಪ್ರೀಮಿಯಂ ಹೈ ಎಂಡ್ ಫ್ಲಾಗ್ ಶಿಪ್ ಸ್ಮಾರ್ಟ್ ಫೋನ್. 2018 ರಲ್ಲಿ ನಾಚ್ ಡಿಸ್ಪ್ಲೇಯೊಂದಿಗೆ ಬಿಡುಗಡೆಗೊಂಡಿರುವ ಕೆಲವೇ ಕೆಲವು ಸ್ಮಾರ್ಟ್ ಫೋನ್ ಗಳಲ್ಲಿ ಇದೂ ಒಂದು. 50000 ರಿಯಾಯಿತಿ ಮತ್ತು ಉತ್ತಮ ವಿನಿಮಯದ ಕೊಡುಗೆಗಳಿದ್ದರೂ ಕೂಡ ಇದು ಸ್ಯಾಮ್ ಸಂಗ್ ಬೆಸ್ಟ್ ಫೋನ್ ಮತ್ತು ಉತ್ತಮ ಆಫರ್ ಎಂದು ಹೇಳಿಕೊಳ್ಳುವುದಕ್ಕೆ ಸಾಧ್ಯವಾಗದೇ ಇರಬಹುದು.
ಒಂದು ವೇಳೆ ಗ್ಯಾಲಕ್ಸಿ ಎಸ್ 9 ನಿಮಗೆ ಒನ್ ಪ್ಲಸ್ 6 ಗಿಂತ ಕಡಿಮೆ ಬೆಲೆಗೆ ಲಭ್ಯವಾದರೆ ಅಥವಾ ಹೊಸದಾಗಿ ಬಿಡುಗಡೆಗೊಂಡಿರುವ ಆಸೂಸ್ ಝೆನ್ಫೋನೋ 5ಝಡ್ ಗಿಂತ ಕಡಿಮೆ ಬೆಲೆಗೆ ಸಿಕ್ಕಿದರೆ ಆಗ ಅದು ನಿಮಗೆ ಲಭದಾಯಕವಾಗುತ್ತದೆ.
ಗ್ಯಾಲಕ್ಸಿ ಎಸ್ 9 5.8-ಇಂಚಿನ ಇನ್ಫಿನಿಟಿ ಡಿಸ್ಪ್ಲೇ ಹೊಂದಿದ್ದು ಗ್ಯಾಲಕ್ಸಿ ಎಸ್ 8 ಗಿಂತ ಸಾಕಷ್ಟು ಚೆನ್ನಾಗಿದೆ.ಇದರ ಅನುಪಾತ 18.5:9 ಮತ್ತು ಕರ್ವ್ ಆಗಿರುವ AMOLED ಡಿಸ್ಪ್ಲೇ ಹೊಂದಿದೆ. ಫೋನ್ ಆಕ್ಟಾ ಕೋರ್ Exynos 9810 ಪ್ರೊಸೆಸರ್ ಜೊತೆಗೆ 4ಜಿಬಿ RAM ಇದೆ. ಗ್ಯಾಲಕ್ಸಿ ಎಸ್ 9 ಆಂಡ್ರಾಯ್ಡ್ 8.0 ಓರಿಯೋ-ಬೇಸ್ಡ್ ಎಂಟರ್ ಪ್ರೈಸಸ್ 9,0 ಆಗಿದ್ದು ಇದರ ಬ್ಯಾಟರಿ ಸಾಮರ್ಥ್ಯ 3,000mAh .
12-ಮೆಗಾಪಿಕ್ಸಲ್ ಡುಯಲ್ ಹಿಂಭಾಗದ ಕ್ಯಾಮರಾ ಜೊತೆಗೆ ಡುಯಲ್ ದ್ಯುತಿರಂಧ್ರವನ್ನು ಹೊಂದಿದ್ದು ಅದು ಕ್ರಮವಾಗಿ f/1.5 ಮತ್ತು f/2.4 ಇದೆ. ಹಗಲಿನಲ್ಲಿ ಮತ್ತು ರಾತ್ರಿಯಲ್ಲಿ ಬೇರೆಬೇರೆ ದ್ಯುತಿರಂದ್ರವು ಕೆಲಸ ನಿರ್ವಹಿಸಿ ಉತ್ತಮ ಫೋಟೋ ಕ್ಲಿಕ್ಕಿಸಲು ಅವಕಾಶ ನೀಡುತ್ತದೆ. ಸ್ಲೋಮೋಷನ್ ವೀಡಿಯೋ ಶೂಟ್ ಕೂಡ ಈ ಕ್ಯಾಮರಾಗಳು ಅವಕಾಶ ನೀಡುತ್ತದೆ. 8 ಮೆಗಾಪಿಕ್ಸಲ್ ನ ಸೆನ್ಸರ್ ಇದ್ದು AR ಎಮೋಜಿ ವೈಶಿಷ್ಟ್ಯಕ್ಕೆ ಈ ಫೋನ್ ಸಹಕಾರ ನೀಡುತ್ತದೆ.
ಇಷ್ಟೆಲ್ಲ ವಿಚಾರ ತಿಳಿದ ಮೇಲೆ ಈ ಫೋನ್ ಖರೀದಿಸಬೇಕಾ ಅಥವಾ ಬಿಡಬೇಕಾ ? ಖರೀದಿಸಲು ಸಾಧ್ಯವಾಗುತ್ತದೆ ಎಂಬುದು ನಿಮ್ಮ ಆಯ್ಕೆಗೆ ಬಿಟ್ಟದ್ದು... ಬೇಕಿದ್ದರೆ ನೀವೂ ಟ್ರೈ ಮಾಡಿ ನೋಡಿ. ಅದೃಷ್ಟ ನಿಮ್ಮ ಪರವಿದ್ದರೆ ಸಾಧ್ಯವಾದೀತು!!!


Click it and Unblock the Notifications








