ಸ್ಯಾಮ್‌ಸಂಗ್ 'ಗ್ಯಾಲಾಕ್ಸಿ ಎಸ್ 9' ಅದ್ದೂರಿ ಬಿಡುಗಡೆ!!..ಫೀಚರ್ಸ್ ಯಾವುವು, ಬೆಲೆ ಎಷ್ಟು?!
ವಿಶಿಷ್ಟ ಹೈ ಎಂಡ್ ಫೀಚರ್‌ಗಳನ್ನು ಹೊಂದಿರುವ ಸ್ಯಾಮ್‌ಸಂಗ್ ಗ್ಯಾಲಾಕ್ಸಿ 9 ಮತ್ತು ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಎಸ್ 9 ಪ್ಲಸ್ ಸ್ಮಾರ್ಟ್‌ಫೋನ್‌ಗಳು ಇದೀಗ ಮಾರುಕಟ್ಟೆಗೆ ಕಾಲಿಟ್ಟಿದ್ದು ವಿಶ್ವ ಮೊಬೈಲ್ ಮಾರುಕಟ್ಟೆಯಲ್ಲಿ ಧೂಳೆಬ್ಬಿಸುತ್ತಿವೆ.!!
ಬಿಡುಗಡೆಗಿಂತಲೂ ಮುನ್ನವೇ ಭಾರೀ ಕುತೋಹಲ ಸೃಷ್ಟಿಸಿದ್ದ ಸ್ಯಾಮ್‌ಸಂಗ್ ''ಗ್ಯಾಲಾಕ್ಸಿ ಎಸ್ 9'' ಸರಣಿಯ ಎರಡು ಸ್ಮಾರ್ಟ್‌ಫೋನ್‌ಗಳು 2018ನೇ ವಿಶ್ವ ಮೊಬೈಲ್ ಕಾಂಗ್ರೆಸ್‌ನಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಿವೆ.! ಆಪಲ್ ಎಕ್ಸ್‌ಗೆ ಸೆಡ್ಡುಹೊಡೆಯುವ ಸಲುವಾಗಿಯೇ ಸ್ಯಾಮ್‌ಸಂಗ್ ಕಂಪೆನಿ ಸ್ಮಾರ್ಟ್‌ಪೋನ್‌ಗಳನ್ನು ರೂಪಿಸಲಾಗಿದೆ ಎಂದು ಹೇಳಲಾಗುತ್ತಿದೆ.!!
ಸ್ಟನ್ನಿಂಗ್ ಇನ್ಫಿನಿಟಿ ಡಿಸ್‌ಪ್ಲೇ, ಡ್ಯುಯಲ್ ಅಪಾರ್ಚರ್ ಕ್ಯಾಮೆರಾ, ಸೂಪರ್ ಸ್ಲೋ ಮೋಷನ್ ಕ್ಯಾಪ್ಚರ್‌ನಂತರ ವಿಶಿಷ್ಟ ಹೈ ಎಂಡ್ ಫೀಚರ್‌ಗಳನ್ನು ಹೊಂದಿರುವ ಸ್ಯಾಮ್‌ಸಂಗ್ ಗ್ಯಾಲಾಕ್ಸಿ 9 ಮತ್ತು ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಎಸ್ 9 ಪ್ಲಸ್ ಸ್ಮಾರ್ಟ್‌ಫೋನ್‌ಗಳು ಇದೀಗ ಮಾರುಕಟ್ಟೆಗೆ ಕಾಲಿಟ್ಟಿದ್ದು ವಿಶ್ವ ಮೊಬೈಲ್ ಮಾರುಕಟ್ಟೆಯಲ್ಲಿ ಧೂಳೆಬ್ಬಿಸುತ್ತಿವೆ.!!

ಸ್ಯಾಮ್ಸಂಗ್ ಕಂಪೆನಿ ಕೇವಲ 2000 ರೂಪಾಯಿಗಳಿಗೆ ಸ್ಮಾರ್ಟ್‌ಪೋನ್‌ಗಳನ್ನು ಪ್ರೀ ಬುಕ್ ಮಾಡಬಹುದಾದ ಆಯ್ಕೆಯನ್ನು ಸಹ ಈಗಾಗಲೇ ಪ್ರಕಟಿಸಿದೆ.! ಹಾಗಾದರೆ, ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಎಸ್ 9 ಸ್ಯಾಮ್‌ಸಂಗ್ ಗ್ಯಾಲಾಕ್ಸಿ 9 ಮತ್ತು ಗ್ಯಾಲಾಕ್ಸಿ ಎಸ್ 9 ಪ್ಲಸ್ ಫೀಚರ್ಸ್ ಯಾವುವು? ಸ್ಮಾರ್ಟ್‌ಪೋನ್‌ಗಳ ವಿಶೇಷತೆಗಳೇನು? ಮತ್ತು ಬೆಲೆ ಎಷ್ಟು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಡಿಸ್‌ಪ್ಲೇ ಮತ್ತು ವಿನ್ಯಾಸ!!
ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಎಸ್ 9 ಸ್ಮಾರ್ಟ್‌ಪೋನ್ 5.8 ಇಂಚ್ ಕ್ವಾಡ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಹೊಂದಿದ್ದರೆ, ಗ್ಯಾಲಾಕ್ಸಿ ಎಸ್ 9 ಪ್ಲಸ್ 6.2 ಇಂಚ್ ಕ್ವಾಡ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಒಳಗೊಂಡಿದೆ. 18.5:9 ಅನುಪಾತದಲ್ಲಿ ಅತ್ಯುತ್ತಮ ವಿನ್ಯಾಸಹೊಂದಿರುಸ್ಮಾರ್ಟ್‌ಫೋನ್ ಹಿಂಬಾಗದಲ್ಲಿ ಎರಡು ರಿಯರ್ ಕ್ಯಾಮೆರಾ ಹಾಗೂ ಫಿಂಗರ್‌ಪ್ರಿಂಟ್ ಆಯ್ಕೆ ಹೊಂದಿದೆ.!!

ಪ್ರೊಸೆಸರ್ ಮತ್ತು ಒಎಸ್!!
ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಎಸ್ 9 ಮತ್ತು ಗ್ಯಾಲಾಕ್ಸಿ ಎಸ್ 9 ಪ್ಲಸ್ ಎರಡೂ ಸ್ಮಾರ್ಟ್‌ಫೋನ್‌ಗಳು ಭಾರತದಲ್ಲಿ ಸ್ಯಾಮ್ಸಂಗ್ ಎಕ್ಸಿನೋಸ್ 9810 SoC ಪ್ರೊಸೆಸರ್ ಅನ್ನು ಹೊಂದಿವೆ (ಕೆಲವು ಮಾರುಕಟ್ಟೆಗಳಲ್ಲಿ ಸ್ನ್ಯಾಪ್‌ಡ್ರಾಗನ್ 845soc ಪ್ರೊಸೆಸರ್). ಇನ್ನು ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ ಓರಿಯೋ ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಣೆ ನೀಡಲಿದೆ.!!

RAM ಮತ್ತು ಮೆಮೊರಿ!!
ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಎಸ್ 9 ಸ್ಮಾರ್ಟ್‌ಫೋನ್ 4GB RAM ಮತ್ತು 64 GB/256 GB ವೆರಿಯಂಟ್‌ಗಳಲ್ಲಿ ಬಿಡುಗಡೆಯಾಗಿದ್ದರೆ, ಗ್ಯಾಲಾಕ್ಸಿ ಎಸ್ 9 ಪ್ಲಸ್ 6GB RAM ಮತ್ತು 64 GB/256 GB ವೆರಿಯಂಟ್‌ಗಳಲ್ಲಿ ಬಿಡುಗಡೆಯಾಗಿದೆ. ಎಸ್‌ಡಿ ಕಾರ್ಡ್ ಮೂಲಕ ಎರಡೂ ಸ್ಮಾರ್ಟ್‌ಫೋನ್‌ಗಳ ಮೆಮೊರಿಯನ್ನು 400GB ವರೆಗೂ ವಿಸ್ತರಿಸಬಹುದಾದ ಆಯ್ಕೆಯನ್ನು ನೀಡಲಾಗಿದೆ.!!

ಡ್ಯುಯಲ್ ಕ್ಯಾಮೆರಾ !!
ಕ್ಯಾಮೆರಾ ವಿಷಯದಲ್ಲಿ ಗ್ಯಾಲಾಕ್ಸಿ ಎಸ್ 9 ಮತ್ತು ಗ್ಯಾಲಾಕ್ಸಿ ಎಸ್ 9 ಪ್ಲಸ್ ಎರಡೂ ಸ್ಮಾರ್ಟ್‌ಫೋನ್‌ಗಳು ಒಂದೇ ಫೀಚರ್ಸ್ ಹೊಂದಿವೆ.! ಸೂಪರ್ ಸ್ಪೀಡ್ ಡ್ಯುಯಲ್ ಪಿಕ್ಸೆಲ್‌ನ 12 (F1.5/F2.4) ಮೆಗಾಪಿಕ್ಸಲ್ ಇರುವ ಎರಡು ರಿಯರ್ ಕ್ಯಾಮೆರಾಗಳನ್ನು ಎರಡೂ ಸ್ಮಾರ್ಟ್‌ಫೋನುಗಳಲ್ಲಿ ನೀಡಲಾಗಿದ್ದು, 8MP AF (F1.7) ಸೆಲ್ಫಿ ಕ್ಯಾಮೆರಾವನ್ನು ಸ್ಮಾರ್ಟ್‌ಫೋನ್‌ಗಳಲ್ಲಿ ಕಾಣಬಹುದಾಗಿದೆ.!!

ಸೆಕ್ಯುರಿಟಿ ಮತ್ತು ಸೆನ್ಸಾರ್‌ಗಳು!!
ಐರಿಸ್ ಸ್ಕ್ಯಾನರ್, ಫಿಂಗರ್ಪ್ರಿಂಟ್ ಸ್ಕ್ಯಾನರ್, ಫೇಸ್ ಡಿಟೆಕ್ಷನ್ ಸೆಕ್ಯುರಿಟಿ ಆಯ್ಕೆಗಳನ್ನು ಎರಡೂ ಸ್ಮಾರ್ಟ್‌ಫೋನ್‌ಗಳಲ್ಲಿ ತರಲಾಗಿದೆ. ಅಕ್ಸೆಲೆರೊಮೀಟರ್, ಗೈರೋ ಸೆನ್ಸಾರ್, ಕಂಪಾಸ್ ಹಾಲ್ ಸೆನ್ಸಾರ್, ಪ್ರಾಕ್ಸಿಮಿಟಿ ಸೆನ್ಸಾರ್, RGB ಲೈಟ್ ಸೆನ್ಸಾರ್ ಮತ್ತು ಪ್ರೆಶರ್ ಸೆನ್ಸಾರ್‌ಗಳನ್ನು ಸ್ಮಾರ್ಟ್‌ಪೋನ್‌ಗಳು ಒಳಗೊಂಡಿವೆ.!!

ಬ್ಯಾಟರಿ ಶಕ್ತಿ ಮತ್ತು ಕನೆಕ್ಟಿವಿಟಿ!!
ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಎಸ್ 9 ಸ್ಮಾರ್ಟ್‌ಪೋನಿನಲ್ಲಿ 3,000 mAh ಬ್ಯಾಟರಿಯನ್ನು ನೀಡಲಾಗಿದೆ. ಅದೇ ಗ್ಯಾಲಾಕ್ಸಿ ಎಸ್ 9 ಪ್ಲಸ್ ಸ್ಮಾರ್ಟ್‌ಫೋನಿನಲ್ಲಿ 3,500 mAh ಬ್ಯಾಟರಿಯನ್ನು ನೀಡಲಾಗಿದೆ. ಬ್ಲೂಟೂತ್ ® ವಿ 5.0 (2 Mbps ವರೆಗೆ), ANT +, ಯುಎಸ್ಬಿ ಟೈಪ್ ಸಿ ಕನೆಕ್ಟಿವಿಟಿಯನ್ನು ಸ್ಮಾರ್ಟ್ಪೋನ್ ಹೊಂದಿದೆ.!!

ಸ್ಮಾರ್ಟ್‌ಫೋನುಗಳ ಬೆಲೆ ಎಷ್ಟು?
ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಎಸ್9 ಬೆಲೆ $719.99 (46,600 ರೂ.) ಡಾಲರ್‌ಗಳಿಂದ ಶುರುವಾಗಿದ್ದರೆ, ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಎಸ್9 ಪ್ಲಸ್ ಸ್ಮಾರ್ಟ್‌ಫೋನ್ ಬೆಲೆ $839.99 (54,400 ರೂ.) ಡಾಲರ್‌ಗಳಿಂದ ಶುರುವಾಗಿದೆ. ಇನ್ನು ಸ್ಯಾಮ್‌ಸಂಗ್ ಕಂಪೆನಿ 2000 ರೂಪಾಯಿಗಳಿಗೆ ಸ್ಮಾರ್ಟ್‌ಪೋನ್‌ಗಳನ್ನು ಪ್ರೀ ಬುಕ್ ಮಾಡಬಹುದಾದ ಆಯ್ಕೆಯನ್ನು ಈಗಲೇ ನೀಡಿದೆ.!!


Click it and Unblock the Notifications








