ಸ್ಯಾಮ್‌ಸಂಗ್‌ನ ಡ್ಯುಯಲ್ ರಿಯರ್ ಕ್ಯಾಮೆರಾ ಫೋನ್

By: Shwetha PS

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 8 ಡ್ಯುಯಲ್ ಕ್ಯಾಮೆರಾವನ್ನು ಹೊಂದಿರುವ ಡಿವೈಸ್ ಆಗಿ ಅನಾವರಣಗೊಂಡಿದೆ. ಫ್ಲ್ಯಾಗ್‌ಶಿಪ್ ಫ್ಯಾಬ್ಲೆಟ್ ಉತ್ತಮ ಕ್ಯಾಮೆರಾ ಸೆಟಪ್ ಅನ್ನು ಹೊಂದಿದ್ದು ತನ್ನ ಮುಂದಿನ ಸ್ಮಾರ್ಟ್‌ಫೋನ್‌ಗಳಲ್ಲಿ ಕೂಡ ಇದೇ ರೀತಿಯ ಕ್ಯಾಮೆರಾವನ್ನು ಕಂಪೆನಿ ಸಾದರಪಡಿಸಲಿದೆ ಎಂಬುದಾಗಿ ಕಾಣುತ್ತಿದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್9 2018 ರಲ್ಲಿ ಬಿಡುಗಡೆಯನ್ನು ಕಾಣಲಿದ್ದು ಗ್ಯಾಲಕ್ಸಿ ನೋಟ್ 8 ನಂತೆಯೇ ಡ್ಯುಯಲ್ ರಿಯರ್ ಕ್ಯಾಮೆರಾವನ್ನು ಪಡೆದುಕೊಳ್ಳಲಿದೆ.

ಸ್ಯಾಮ್‌ಸಂಗ್‌ನ ಡ್ಯುಯಲ್ ರಿಯರ್ ಕ್ಯಾಮೆರಾ ಫೋನ್

ಮುಂದಿನ ದಿನಗಳಲ್ಲಿ ಕಂಡುಬರುವ ಡಿವೈಸ್‌ಗಳಲ್ಲಿ ಸ್ಯಾಮ್‌ಸಂಗ್ ಇನ್ನಷ್ಟು ಉತ್ತಮ ಅಂಶಗಳನ್ನು ಅಳವಡಿಸಲಿದ್ದು ಆಪಲ್ ಕೂಡ ಇದೇ ರೀತಿಯ ವೈಶಿಷ್ಟ್ಯಗಳನ್ನು ತನ್ನ ಐ ಫೋನ್‌ಗಳಲ್ಲಿ ಪ್ರಸ್ತುತಪಡಿಸಲಿದೆ ಎಂಬುದಾಗಿ ಆರ್ಥಿಕ ತಜ್ಞ ರಾಕ್ ಹೊ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಗ್ಯಾಲಕ್ಸಿ ಎಸ್ 9 ಮತ್ತು ಎಸ್ 9 ಪ್ಲಸ್ ರಿಯರ್ ಮೌಂಟೆಡ್ ಫಿಂಗರ್ ಪ್ರಿಂಟ್ ಸೆನ್ಸಾರ್ ಅನ್ನು ಹೊಂದಲಿದ್ದು ಗ್ಯಾಲಕ್ಸಿ ಎಸ್ 8 ಮತ್ತು ಗ್ಯಾಲಕ್ಸಿ ಎಸ್ 8 ಪ್ಲಸ್‌ನಲ್ಲಿ ಕಂಡ ಅದೇ ಫೀಚರ್ ಈ ಡಿವೈಸ್‌ನಲ್ಲೂ ಬರಲಿದೆ. ಡ್ಯುಯಲ್ ಕ್ಯಾಮೆರಾ ಸೆನ್ಸಾರ್‌ಗಳ ನಡುವೆ ಎಲ್‌ಇಡಿ ಫ್ಲ್ಯಾಶ್ ಅನ್ನು ಡಿವೈಸ್‌ಗಳು ಹೊಂದುವ ಸಾಧ್ಯತೆ ಇದೆ.

ಇಂದಿರಾ ಕ್ಯಾಂಟೀನ್‌ನಲ್ಲಿ ಇಂದಿನ ಸ್ಪೆಷಲ್ ಏನು? ಆಪ್ ನಲ್ಲಿ ಫುಲ್ ಡಿಟೈಲ್ಸ್.!

ಇನ್ ಸ್ಕ್ರೀನ್ ಫಿಂಗರ್ ಪ್ರಿಂಟ್ ಸೆನ್ಸಾರ್ ಹೊಂದಿರುವ ಪ್ರಥಮ ಸ್ಮಾರ್ಟ್‌ಫೋನ್ ಗ್ಯಾಲಕ್ಸಿ ನೋಟ್ 9 ಆಗರಲಿದೆ ಎಂಬುದು ಸ್ಯಾಮ್‌ಸಂಗ್‌ನ ಹಿರಿಮೆಯ ಗರಿಯಾಗಿದೆ. ಇತ್ತೀಚೆಗೆ ತಾನೇ ಕ್ವಾಲ್‌ಕಾಮ್ 10 ಎನ್‌ಎಮ್ ಸ್ನ್ಯಾಪ್‌ಡ್ರ್ಯಾಗನ್ ಅನ್ನು 845 ಸಾಕ್ ಬದಲಿಗೆ ಅಳವಡಿಸಲಿದೆ. ಸ್ಯಾಮ್‌ಸಂಗ್ ತನ್ನದೇ ಆದ ಎಕ್ಸೋನಸ್ 9810 ಸಾಕ್ ಅನ್ನು ಗ್ಯಾಲಕ್ಸಿ ಎಸ್9 ಮತ್ತು ಎಸ್9 ಪ್ಲಸ್‌ನಲ್ಲಿ ಅಳವಡಿಸಲಿದೆ.Read more about:
English summary
Samsung Galaxy S9 and Galaxy S9+ are rumored to feature dual rear cameras as in the case of Galaxy S8 and Galaxy S8+.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot