ಸಂಚಲನ ಮೂಡಿಸಿದ ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ A9! ಅಬ್ಬಬ್ಬಾ ಏನ್ರಿ ಇದರ ಡಿಸೈನ್!
ಭಾರತದ ಮಾರುಕಟ್ಟೆಯಲ್ಲಿ ಸ್ಯಾಮ್‌ಸಂಗ್ ಕಂಪೆನಿ ತನ್ನದೇ ಆದ ಪ್ರಾಬಲ್ಯವನ್ನು ಹೊಂದಿದೆ. ತನ್ನ ವಿಭಿನ್ನ ಶ್ರೇಣಿಯ ಡಿವೈಸ್‌ಗಳಿಂದ ಮಾರುಕಟ್ಟೆಯಲ್ಲಿ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಸ್ಮಾರ್ಟ್‌ಫೋನ್ ಮಾತ್ರವಲ್ಲದೆ ಸ್ಮಾರ್ಟ್ ಟ್ಯಾಬ್‌ಗಳಲ್ಲಿಯೂ ಸೈ ಎನಿಸಿಕೊಂಡಿರುವ ಸ್ಯಾಮ್‌ಸಂಗ್ ಇದೀಗ ಸೈಲೆಂಟ್ ಆಗಿ ಎರಡು ಹೊಸ ಟ್ಯಾಬ್‌ಗಳನ್ನು ಪರಿಚಯಿಸಿದೆ.
ಹೌದು, ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ ಸರಣಿಯ ಟ್ಯಾಬ್ಲೆಟ್‌ಗಳನ್ನು ಭಾರತದಲ್ಲಿ ಸೈಲೆಂಟ್ ಆಗಿ ಬಿಡುಗಡೆ ಮಾಡಲಾಗಿದೆ. ಇವುಗಳನ್ನು ಗ್ಯಾಲಕ್ಸಿ ಟ್ಯಾಬ್ A9 ಮತ್ತು ಗ್ಯಾಲಕ್ಸಿ ಟ್ಯಾಬ್ A9+ ಎಂದು ಗುರುತಿಸಲಾಗಿದೆ. ಇನ್ನು ಈ ಎರಡೂ ಟ್ಯಾಬ್ಲೆಟ್‌ಗಳು ಕೂಡ ಆಂಡ್ರಾಯ್ಡ್ 13 ನಲ್ಲಿ OneUI 5.1.1 ಜೊತೆಗೆ ರನ್ ಆಗಲಿವೆ. ಇವುಗಳು ವೈಫೈ ಒನ್ಲಿ ಮತ್ತು ವೈಫೈ + 5G ರೂಪಾಂತರದ ಆಯ್ಕೆಗಳಲ್ಲಿ ಖರೀದಿಸಬಹುದಾಗಿದೆ. ಇನ್ನುಳಿದಂತೆ ಈ ಎರಡು ಟ್ಯಾಬ್‌ಗಳು ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿವೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ A9+ ಫೀಚರ್ಸ್ ಹೇಗಿದೆ?
ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ A9+ 11 ಇಂಚಿನ WQXGA LCD ಡಿಸ್‌ಪ್ಲೇ ಹೊಂದಿದೆ. ಇದು 1,200 x 1,920 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿದೆ. ಇನ್ನು ಡಿಸ್‌ಪ್ಲೇ 90Hz ರಿಫ್ರೆಶ್ ರೇಟ್‌ನೊಂದಿಗೆ ಬರಲಿದೆ. ಇದಲ್ಲದೆ ಈ ಸ್ಮಾರ್ಟ್ ಟ್ಯಾಬ್ ಆಕ್ಟಾ-ಕೋರ್ ಸ್ನಾಪ್‌ಡ್ರಾಗನ್ 695 SoC ಪ್ರೊಸೆಸರ್ ವೇಗವನ್ನು ಹೊಂದಿದೆ. ಇದು OneUI 5.1.1 ಜೊತೆಗೆ Android 13 ಕಾರ್ಯನಿರ್ವಹಿಸಲಿದೆ. ಹಾಗೆಯೇ 8GB ಯ RAM ಮತ್ತು 128GB ಇಂಟರ್ ಸ್ಟೋರೇಜ್ ಅನ್ನು ಪಡೆದಿದೆ. ಇದಲ್ಲದೆ ಮೆಮೊರಿ ಕಾರ್ಡ್ ಬೆಂಬಲದೊಂದಿಗೆ ಸಂಗ್ರಹ ಸಾಮರ್ಥ್ಯವನ್ನು ಇನ್ನಷ್ಟು ವಿಸ್ತರಿಸುವುದಕ್ಕೆ ಕೂಡ ಅವಕಾಶವನ್ನು ನೀಡಲಿದೆ.
ಈ ಸ್ಮಾರ್ಟ್‌ಟ್ಯಾಬ್ ಡ್ಯುಯಲ್ ಸಿಮ್ (eSIM + ಫಿಸಿಕಲ್ ಸಿಮ್) ಅನ್ನು ಹೊಂದಿದೆ. ಇದಲ್ಲದೆ ಟ್ಯಾಬ್‌ನಲ್ಲಿ 8 ಮೆಗಾಪಿಕ್ಸೆಲ್ ಸಿಂಗಲ್ ರಿಯರ್ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಜೊತೆಗೆ 5 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಸಹ ನೀಡಲಾಗಿದೆ. ಇದು ಸರೌಂಡ್ ಸೌಂಡ್‌ಗೆ ಬೆಂಬಲದೊಂದಿಗೆ ಕ್ವಾಡ್-ಸ್ಪೀಕರ್ ಸೆಟಪ್ ಅನ್ನು ಒಳಗೊಂಡಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, Wi-Fi, ಬ್ಲೂಟೂತ್, ಮತ್ತು USB ಟೈಪ್-C ಪೋರ್ಟ್ ಬೆಂಬಲಿಸಲಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ A9 ಫೀಚರ್ಸ್ ಹೇಗಿದೆ?
ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ A9 8.7 ಇಂಚಿನ LCD WQXGA ಡಿಸ್‌ಪ್ಲೇಯನ್ನು ಹೊಂದಿದೆ. ಇದು 800x1,340 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿದೆ. ಈ ಸ್ಮಾರ್ಟ್ ಟ್ಯಾಬ್ ಮೀಡಿಯಾಟೆಕ್ ಹಿಲಿಯೋ G99 SoC ಪ್ರೊಸೆಸರ್ ಹೊಂದಿದ್ದು, OneUI 5.1.1 ಜೊತೆಗೆ Android 13 ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ 4GB RAM ಮತ್ತು 64GB ಸ್ಟೋರೇಜ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದಲ್ಲದೆ ಮೆಮೊರಿ ಕಾರ್ಡ್ ಮೂಲಕ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುವುದಕ್ಕೆ ಅವಕಾಶ ನೀಡಲಾಗಿದೆ.
ಇನ್ನು ಗ್ಯಾಲಕ್ಸಿ ಟ್ಯಾಬ್ A9 ಕೂಡ ಹಿಂಭಾಗದಲ್ಲಿ 8 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸಿಂಗಲ್ ಕ್ಯಾಮೆರಾ ಹೊಂದಿದ್ದು, ಆಟೋಫೋಕಸ್ ಬೆಂಬಲಿಸಲಿದೆ. ಜೊತೆಗೆ 2 ಮೆಗಾಪಿಕ್ಸೆಲ್ ಸೆನ್ಸಾರ್ ಸೆಲ್ಫಿ ಕ್ಯಾಮೆರಾವನ್ನು ಕೂಡ ಅಳವಡಿಸಲಾಗಿದೆ. ಈ ಸ್ಮಾರ್ಟ್ ಟ್ಯಾಬ್ Dolby Atmos ಬೆಂಬಲದೊಂದಿಗೆ AKG ಯಿಂದ ಡ್ಯುಯಲ್ ಸ್ಪೀಕರ್‌ಗಳನ್ನು ಹೊಂದಿದೆ. ಇದು 5,100mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸ ಟ್ಯಾಬ್ A9 ಸರಣಿಯ ಬೆಲೆ ಮತ್ತು ಲಭ್ಯತೆ
ಭಾರತದ ಸ್ಯಾಮ್‌ಸಂಗ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ A9 ಸರಣಿಯ ಬೆಲೆ ಮತ್ತು ಲಭ್ಯತೆಯ ವಿವರಗಳನ್ನು ಉಲ್ಲೇಖಿಸಿಲ್ಲ. ಆದರೆ ಪ್ರಸ್ತುತ ಅಮೆಜಾನ್ ಸೈಟ್‌ನಲ್ಲಿ ಗ್ಯಾಲಕ್ಸಿ A9 ಟ್ಯಾಬ್ ಬೆಲೆ 4GB RAM + 64GB ಸ್ಟೋರೇಜ್ Wi-Fi ಮಾತ್ರ ರೂಪಾಂತರಕ್ಕೆ 12,999ರೂ ಎಂದು ನಿಗದಿಪಡಿಸಲಾಗಿದೆ. ಇದರ Wi-Fi + 5G ರೂಪಾಂತರದ ಬೆಲೆ 15,999ರೂ ಎಂದು ಹೇಳಲಾಗಿದೆ.
ಇನ್ನು ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ A9+ 8GB RAM + 128GB ಸಂಗ್ರಹಣೆ ಸಾಮರ್ಥ್ಯದ Wi-Fi-ಮಾತ್ರ ರೂಪಾಂತರದ ಆಯ್ಕೆಗೆ 20,999ರೂ.ಬೆಲೆ ಹೊಂದಿದೆ. ಇದರ Wi-Fi + 5G ರೂಪಾಂತರದ ಬೆಲೆ ವಿವರಗಳು ಇನ್ನು ಕೂಡ ಬಹಿರಂಗವಾಗಿಲ್ಲ. ಈ ಸ್ಮಾರ್ಟ್ ಟ್ಯಾಬ್‌ಗಳನ್ನು ಡಾರ್ಕ್ ಬ್ಲೂ, ಗ್ರೇ ಮತ್ತು ಸಿಲ್ವರ್ ಬಣ್ಣದ ಆಯ್ಕೆಗಳಲ್ಲಿ ಖರೀದಿಸಬಹುದಾಗಿದೆ.


Click it and Unblock the Notifications








