ಟ್ಯಾಬ್ ಮಾರುಕಟ್ಟೆಯಲ್ಲಿ ಹೊಸ ಸಂಚಲನ: ಬರಲಿದೆ ಸ್ಯಾಮ್ ಸಂಗ್ ಗ್ಯಾಲೆಕ್ಸಿ ಟ್ಯಾಬ್ S4!
ಟ್ಯಾಬ್ ಮಾರುಕಟ್ಟೆಯಲ್ಲಿ ಸಾಕಷ್ಟು ಖ್ಯಾತಿಯನ್ನು ಗಳಿಸಿಕೊಂಡಿರುವ ಸ್ಯಾಮ್ ಸಂಗ್, ಮತ್ತೊಂದು ಟಾಪ್ ಎಂಡ್ ಟ್ಯಾಬ್ ವೊಂದನ್ನು ಲಾಂಚ್ ಮಾಡಲು ಸದ್ದಿಲ್ಲದೇ ಸಿದ್ಧತೆಯನ್ನು ನಡೆಸಿದೆ ಎನ್ನುವ ಮಾಹಿತಿಯೂ ಲಭ್ಯವಾಗಿದೆ. ಈಗಾಗಲೇ ಗ್ಯಾಲೆಕ್ಸಿ ನೋಟ್ 9 ಸ್ಮಾರ್ಟ್ ಫೋನ್ ಲಾಂಚ್ ಮಾಡಲು ಸಿದ್ಧತೆ ನಡೆಸಿರುವ ಸ್ಯಾಮ್ ಸಂಗ್, ಅದರೊಂದಿಗೆ ಈ ಟ್ಯಾಬ್ ಅನ್ನು ಲಾಂಚ್ ಮಾಡುವ ಸಾಧ್ಯತೆ ಇದೆ.

ಆಗಸ್ಟ್ ನಲ್ಲಿ ಗ್ಯಾಲೆಕ್ಸಿ ನೋಟ್ 9 ಸ್ಮಾರ್ಟ್ ಫೋನ್ ಲಾಂಚ್ ಮಾಡಲಿದ್ದು, ಇದರೊಂದಿಗೆ ಸ್ಯಾಮ್ ಸಂಗ್ ಗ್ಯಾಲೆಕ್ಸಿ ಟ್ಯಾಬ್ S4 ಅನ್ನು ಲಾಂಚ್ ಮಾಡುವ ಯೋಜನೆಯನ್ನು ರೂಪಿಸಿದೆ ಎನ್ನಲಾಗಿದ್ದು, ಈಗಾಗಲೇ ಸ್ಯಾಮ್ ಸಂಗ್ ಗ್ಯಾಲೆಕ್ಸಿ ಟ್ಯಾಬ್ S4 ವಿಶೇಷತೆ ಕುರಿತ ಮಾಹಿತಿಯೂ ಲೀಕ್ ಆಗಿದೆ.

ದೊಡ್ಡ ಡಿಸ್ ಪ್ಲೇ:
ಸ್ಯಾಮ್ ಸಂಗ್ ಗ್ಯಾಲೆಕ್ಸಿ ಟ್ಯಾಬ್ S4 ಅತೀ ಡೊದ್ದ ಡಿಸ್ ಪ್ಲೇಯನ್ನು ಹೊಂದಿದ್ದು, ಬಳಕೆದಾರರಿಗೆ 10.5 ಇಂಚಿನ ದೊಡ್ಡದಾದ ಡಿಸ್ ಪ್ಲೇಯನ್ನು ಬಳಕೆಗೆ ನೀಡಲಿದೆ. ದು 16:10 ಅನುಪಾತ ದಿಂದ ಕೂಡಿದ್ದು, 1600X2560p ಗುಣಮಟ್ಟದಾಗಿದೆ. ಇದರಲ್ಲಿ ಪಿಚ್ಚರ್ ಕ್ವಾಲಿಟಿಯೂ ಉತ್ತಮವಾಗಿದೆ ಎನ್ನಲಾಗಿದೆ. ಗೇಮ್ ಆಡಲು ಹೆಚ್ಚಿನ ಸ್ಥಳಾವಕಾಶ ದೊರೆಯಲಿದೆ.

ವೇಗದ ಪ್ರೋಸೆಸರ್:
ಸದ್ಯ ಮಾರುಕಟ್ಟೆಯಲ್ಲಿ ಟಾಪ್ ಪ್ರೋಸೆಸರ್ ಎನ್ನುವ ಖ್ಯಾತಿಯನ್ನು ಪಡೆದುಕೊಂಡಿರುವ ಸ್ನಾಪ್ ಡ್ರಾಗನ್ 845 ಪ್ರೋಸೆಸರ್ ಅನ್ನು ಇದರಲ್ಲಿ ನೀಡಲಾಗಿದ್ದು, ಅತೀ ವೇಗದ ಕಾರ್ಯಚರಣೆಗೆ ಹೇಳಿ ಮಾಡಿಸಿದ ಹಾಗಿದೆ. ಅಲ್ಲದೇ ವೇಗದ ಗೇಮ್ ಗಳನ್ನು ಆಡಲು ಹೇಳಿ ಮಾಡಿಸಿದ ಟ್ಯಾಬ್ ಇದಾಗಲಿದೆ.

4GB RAM:
ಸ್ಯಾಮ್ ಸಂಗ್ ಗ್ಯಾಲೆಕ್ಸಿ ಟ್ಯಾಬ್ S4ನಲ್ಲಿ ಟಾಪ್ ಎಂಡ್ ಪ್ರೋಸೆಸರ್ ಅನ್ನು ನೀಡುವ ಜೊತೆಯಲ್ಲಿ 4GB RAM ಅನ್ನು ನೀಡಲಾಗಿದ್ದು, ಇದರೊಂದಿಗೆ 64 GB ಇಂಟರ್ನಲ್ ಮೆಮೊರಿಯನ್ನು ಕಾಣಬಹುದಾಗಿದೆ. ಅಲ್ಲದೇ ಮೆಮೊರಿಯನ್ನು ವಿಸ್ತರಿಸಿಕೊಳ್ಳುವ ಅವಕಾಶವನ್ನು ಇದರಲ್ಲಿ ನೀಡಲಾಗಿದೆ.

ಕ್ಯಾಮೆರಾ:
ಸ್ಯಾಮ್ ಸಂಗ್ ಗ್ಯಾಲೆಕ್ಸಿ ಟ್ಯಾಬ್ S4 ಹಿಂಭಾಗದಲ್ಲಿ 12MP ಕ್ಯಾಮೆರಾವನ್ನು ನೀಡಲಾಗಿದೆ. ಇದಲ್ಲದೇ ಮುಂಭಾಗದಲ್ಲಿ 7 MP ಕ್ಯಾಮೆರಾವನ್ನು ಅಳವಡಿಸಲಾಗಿದ್ದು, ಎರಡು ಕಡೆಗಳಲ್ಲಿಯೂ ಉತ್ತಮವಾದ ಚಿತ್ರಗಳನ್ನು ಸೆರೆಹಿಡಿಯುವಂತಹ ಅವಕಾಶವನ್ನು ಬಳಕೆದಾರರು ಪಡೆಯಬಹುದಾಗಿದೆ.

ಐಪ್ಯಾಡಿಗೆ ಸೆಡ್ಡು:
ಸ್ಯಾಮ್ ಸಂಗ್ ಗ್ಯಾಲೆಕ್ಸಿ ಟ್ಯಾಬ್ S4 ಅನ್ನು ಐಪ್ಯಾಡಿಗೆ ಸೆಡ್ಡು ಹೊಡೆಯುವಂತೆ ರೂಪಿಸಲಾಗಿದ್ದು, ಬಳಕೆದಾರರಿಗೆ ಅದಕ್ಕಿಂತಲೂ ಕಡಿಮೆ ಬೆಲೆಗೆ ನೀಡುವುದಲ್ಲದೇ, ಹೆಚ್ಚಿನ ವಿಶೇಷತೆಗಳನ್ನು ಇದರೊಂದಿಗೆ ನೀಡವ ಸಾಧ್ಯತೆಯೂ ಇದೇ ಎನ್ನಲಾಗಿದೆ. ಒಟ್ಟಿನಲ್ಲಿ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಹುಟ್ಟಿಸಲಿದೆ.


Click it and Unblock the Notifications








