Home
ಸುದ್ದಿಜಾಲ

Galaxy Tab S6 5G: ವಿಶ್ವದ ಮೊದಲ 5G ಟ್ಯಾಬ್‌ ಲಾಂಚ್‌ ಮಾಡಿದ ಸ್ಯಾಮ್‌ಸಂಗ್‌!

ಟೆಕ್‌ಲೋಕದ ದಿಗ್ಗಜ ಕಂಪೆನಿಗಳಲ್ಲಿ ಒಂದಾಗಿರುವ ಸ್ಯಾಮ್‌ಸಂಗ್‌ ಕಂಪೆನಿ ವಿಶ್ವದ ಮೊದಲ 5G ಟ್ಯಾಬ್ಲೆಟ್‌ ಬಿಡುಗಡೆ ಮಾಡಿದೆ. ಜಾಗತಿಕವಾಗಿ ಸ್ಮಾರ್ಟ್‌ಫೋನ್‌ ವಲಯದಲ್ಲಿ ಎರಡನೇ ಸ್ಥಾನವನ್ನ ಪಡೆದುಕೊಂಡಿರುವ ಸ್ಯಾಮ್‌ಸಂಗ್‌ ಕಂಪೆನಿ ತನ್ನ ಉತ್ಪನ್ನಗಳಲ್ಲಿ ವೈವಿದ್ಯತೆ ತರುವುದು ಇದೇ ಮೊದಲೇನಲ್ಲ. ಸದ್ಯ ಇದೀಗ 5G ಆಧಾರಿತ ಗ್ಯಾಲಕ್ಸಿ S 5G ಟ್ಯಾಬ್‌ ಅನ್ನು ದಕ್ಷಿಣ ಕೊರಿಯಾದಲ್ಲಿ ಬಿಡುಗಡೆ ಮಾಡಿದೆ.

ಹೌದು

ಹೌದು, ಜಾಗತಿಕವಾಗಿ ಮುಂಚೂಣಿ ಸ್ಥಾನದಲ್ಲಿ ಗುರ್ತಿಸಿಕೊಂಡಿರುವ ಸ್ಯಾಮ್‌ಸಂಗ್‌ ತನ್ನ ಹೊಸ ಮಾದರಿಯ ಗ್ಯಾಲಕ್ಸಿ ಟ್ಯಾಬ್‌ S6 5G ಅನ್ನು ದಕ್ಷಿಣ ಕೊರಿಯಾ ಮಾರುಕಟ್ಟೆಯಲ್ಲಿ ಲಾಂಚ್‌ ಮಾಡಿದ್ದು, ಮುಂದಿನದಿನಗಳಲ್ಲಿ ಜಾಗತಿಕವಾಗಿ ಎಲ್ಲಾ ಮಾರುಕಟ್ಟೆಗಳಲ್ಲೂ ಲಾಂಚ್‌ ಮಾಡುವುದಾಗಿ ಕಂಪೆನಿ ಹೇಳಿಕೊಂಡಿದೆ. ಈಗಾಗ್ಲೆ ವಿಶ್ವದ ಮೊದಲ 5G ಟ್ಯಾಬ್ಲೆಟ್‌ ಅನ್ನೋ ಖ್ಯಾತಿ ಪಡೆದಿರೋ ಟ್ಯಾಬ್‌ KRW 999,900 (ಸುಮಾರು 60,500 ರೂ.) ಗೆ ಮಾರಾಟವಾಗಲಿದೆ ಎಂದು ಹೇಳಲಾಗ್ತಿದೆ.

ಇನ್ನು

ಇನ್ನು ಈ ಟ್ಯಾಬ್‌ 1,600 ಎಕ್ಸ್ 2,560 ಪಿಕ್ಸೆಲ್ ರೆಸಲ್ಯೂಶನ್‌ ಹೊಂದಿರುವ 10.5 ಇಂಚಿನ ಸೂಪರ್ ಅಮೋಲೆಡ್ ಡಿಸ್‌ಪ್ಲೇಯನ್ನ ಹೊಂದಿದ್ದು ವಿಡಿಯೋ ವಿಕ್ಷಣೆಗೆ ಉತ್ತಮ ಅನುಭವವನ್ನು ನೀಡಲಿದೆ. ಜೊತೆಗೆ ಬಾಡಿ ಟು ರೇಶಿಯೋ 16:10 ಹೊಂದಿದೆ. ಅಲ್ಲದೆ ಗ್ಯಾಲಕ್ಸಿ ಟ್ಯಾಬ್ ಎಸ್ 6 ಡಿಸ್‌ಪ್ಲೇ ಮುಂಭಾಗದಲ್ಲಿ ಫಿಂಗರ್‌ಪ್ರಿಂಟ್ ಸೆನ್ಸಾರ್‌ ಅನ್ನ ಹೊಂದಿರಲಿದೆ. ಎಸ್ ಪೆನ್ ಸ್ಟೈಲಸ್ ಹೊರತುಪಡಿಸಿ ಡಾಲ್ಬಿ ಅಟ್ಮೋಸ್ ಬೆಂಬಲ ಹೊಂಡಿರುವ AKG ಟ್ಯೂನ್ಡ್ ಕ್ವಾಡ್ ಸ್ಪೀಕರ್‌ಗಳನ್ನ ಒಳಗೊಂಡಿದೆ.

ಅಲ್ಲದೆ

ಅಲ್ಲದೆ ಈ ಟ್ಯಾಬ್‌ ಡ್ಯುಯಲ್-ಕ್ಯಾಮೆರಾ ಸೆಟಪ್ ಅನ್ನು ಹೊಂದಿದ್ದು, ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿರಲಿದ್ದು, F/ 2.0 ಲೆನ್ಸ್‌ ಅನ್ನ ಒಳಗೊಂಡಿದೆ. ಇನ್ನು ಎರಡನೇ ಕ್ಯಾಮೆರಾ 5 ಮೆಗಾಪಿಕ್ಸೆಲ್ ಸೆನ್ಸಾರ್‌ ಜೊತೆಗೆ F/ 2.2 ಲೆನ್ಸ್‌ ಅನ್ನ ಒಳಗೊಂಡಿದೆ ಹಾಗೂ 123 ಡಿಗ್ರಿ ವೀಕ್ಷಣೆಯ ಕ್ಷೇತ್ರವನ್ನು ಹೊಂದಿದೆ. ಇನ್ನು ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ.

ಟ್ಯಾಬ್‌

ಈ ಟ್ಯಾಬ್‌ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 855 SoC, ಪ್ರೊಸೆಸರ್‌ ಹೊಂದಿದ್ದು, ಆಂಡ್ರಾಯ್ಡ್‌10 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಇದಲ್ಲದೆ ದಕ್ಷಿಣ ಕೊರಿಯಾದಲ್ಲಿ ಬಿಡುಗಡೆಯಾಗುವ ಟ್ಯಾಬ್‌ 6GB RAM ಮತ್ತು 128GB ಶೇಖರಣಾ ಸಾಮರ್ಥ್ಯವನ್ನು ಹೊಂದಿರಲಿದ್ದು, ಸಂಗ್ರಹ ಸಾಮರ್ಥ್ಯವನ್ನ ಮೆಮೊರಿ ಕಾರ್ಡ್‌ ಮೂಲಕ ವಿಸ್ತರಿಸಿಕೊಳ್ಳುವುದರ ಬಗ್ಗೆ ಯಾವುದೇ ಮಾಹಿತಿಯನ್ನ ಕಂಪೆನಿ ಹಂಚಿಕೊಂಡಿಲ್ಲ.

ಸ್ಯಾಮ್‌ಸಂಗ್

ಇದಲ್ಲದೆ ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ S6 5G, 7,040mAh ಬ್ಯಾಟರಿ ಪ್ಯಾಕ್‌ಆಪ್ ಹೊಂದಿದ್ದು,5W ವೇಗದ ಚಾರ್ಜಿಂಗ್‌ ಬೆಂಬಲವನ್ನು ನೀಡಲಿದೆ. ಇನ್ನು ಈ ಸ್ಮಾರ್ಟ್‌ ಟ್ಯಾಭ್‌ ಎಸ್‌ ಪೆನ್‌ಗೆ ಸಪೋರ್ಟ್‌ ನೀಡಲಿದ್ದು, ಬಳಕೆದಾರರಿಗೆ ಉತ್ತಮ ಅನುಭವ ನೀಡಲಿದೆ. ಸದ್ಯ ಈ ಸ್ಮಾರ್ಟ್‌ ಟ್ಯಾಬ್‌ನ ತೂಕ 420 ಗ್ರಾಂ ಇರಲಿದೆ ಎಂದು ಹೇಳಲಾಗ್ತಿದ್ದು, ಈ ಟ್ಯಾಬ್‌ ಮೌಂಟೇನ್ ಗ್ರೇ ಕಲರ್‌ನಲ್ಲಿ ಲಭ್ಯವಾಗಲಿದೆ.

5G

ಸದ್ಯ ಸ್ಯಾಮ್‌ಸಂಗ್‌ ತನ್ನ 5G ನೆಟ್‌ವರ್ಕ್‌ ಆಧಾರಿತ ಸ್ಮಾರ್ಟ್‌ ಪ್ರಾಡಕ್ಟ್‌ಗಳ ಆವೃತ್ತಿಯನ್ನ ಇನ್ನಷ್ಟು ವಿಸ್ತರಿಸಲು ಪ್ಲ್ಯಾನ್‌ ಮಾಡಿಕೊಂಡಿದ್ದು, ಕಂಪನಿಯು ಪ್ರಸ್ತುತ ಗ್ಯಾಲಕ್ಸಿ S10 5G, ನೋಟ್ 10 5G ಮತ್ತು A90 5G ಸ್ಮಾರ್ಟ್‌ಫೋನ್‌ಗಳನ್ನ ಬಿಡುಗಡೆ ಮಾಡಲಿದೆ ಎಂದು ಹೇಳಲಾಗ್ತಿದೆ. ಈಗಾಗ್ಲೆ 2019 ರಲ್ಲಿ, ಸ್ಯಾಮ್‌ಸಂಗ್ ಕಂಪೆನಿ ಜಾಗತಿಕ 5G ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಶೇಖಡಾ 35.8 ರಷ್ಟು ಪಾಲನ್ನು ಹೊಂದಿದ್ದು, ವಿಶ್ವಾದ್ಯಂತ 6.7 ಮಿಲಿಯನ್ 5G ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡುತ್ತಿದೆ ಎಂದು ಮಾರುಕಟ್ಟೆ ಸಂಶೋಧಕ ಸ್ಟ್ರಾಟಜಿ ಅನಾಲಿಟಿಕ್ಸ್‌ನ ಅಂಕಿ ಅಂಶಗಳು ತಿಳಿಸಿವೆ.

Best Mobiles in India

English summary
Samsung Galaxy Tab S6 5G has for now only been announced for South Korea, and there is indication of its launch in other countries.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+