Home
ಸುದ್ದಿಜಾಲ

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಟ್ಯಾಬ್‌ S6 ಲೈಟ್‌ ಫೀಚರ್ಸ್‌ ಬಹಿರಂಗ!

ದಕ್ಷಿಣ ಕೋರಿಯಾದ ಟೆಕ್‌ ದೈತ್ಯ ಸ್ಯಾಮ್‌ಸಂಗ್ ಕಂಪೆನಿ ಟೆಕ್‌ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಫೋನ್‌ ಸೇರಿದಂತೆ ಇತರರೆ ಎಲೆಕ್ಟ್ರಾನಿಕ್ಸ್‌ ಆಕ್ಸಿಸರೀಸ್‌ಗಳನ್ನ ಪರಿಚಯಿಸಿ ಸೈ ಎನಿಸಿಕೊಂಡಿದೆ. ಅಲ್ಲದೆ ಸ್ಮಾರ್ಟ್‌ಫೋನ್‌ ವಲಯದಲ್ಲಿ ಹೊಸತನಕ್ಕೆ ಹೆಸರಾದಂತೆ ಟ್ಯಾಬ್ಲೆಟ್‌ ಮಾರುಕಟ್ಟೆಯಲ್ಲೂ ಹೊಸ ತನದ ಟ್ಯಾಬ್ಲೆಟ್‌ಗಳನ್ನ ಪರಿಚಯಿಸಿ ಗ್ರಾಹಕರ ನೆಚ್ಚಿನ ಬ್ರ್ಯಾಂಡ್‌ ಆಗಿ ಗುರುತಿಸಿಕೊಂಡಿದೆ. ಇದೀಗ ತನ್ನ ಹೊಸ ಆವೃತ್ತಿಯ ಸ್ಮಾರ್ಟ್‌ ಟ್ಯಾಬ್ಲೆಟ್ ಒಂದರ ಬಿಡುಗಡೆಗೆ ಸಿದ್ಧತೆ ನಡೆಸಿದೆ.

ಹೌದು

ಹೌದು, ಜನಪ್ರಿಯ ಸ್ಯಾಮ್‌ಸಂಗ್‌ ಕಂಪೆನಿ ತನ್ನ ಹೊಸ ಆವೃತ್ತಿಯ ಗ್ಯಾಲಕ್ಸಿ S6 ಟ್ಯಾಬ್‌ ಲೈಟ್‌ ಅನ್ನು ಬಿಡುಗಡೆ ಮಾಡುವುದಕ್ಕೆ ವೇದಿಕೆ ಸಿದ್ಧಪಡಿಸಿಕೊಂಡಿದೆ. ಇದಲ್ಲದೆ ಈ ಟ್ಯಾಬ್‌ ಕಳೆದ ವರ್ಷ ಸ್ಯಾಮ್‌ಸಂಗ್‌ ಬಿಡುಗಡೆ ಮಾಡಿದ್ದ ಗ್ಯಾಲಕ್ಸಿ S6 ಟ್ಯಾಬ್‌ನ ಮುಂದುವರಿದ ಆವೃತ್ತಿಯಾಗಿದ್ದು, ಹೊಸ ಮಾದರಿಯ ವಿನ್ಯಾಸವನ್ನ ಹೊಂದಿರಲಿದೆ ಎಂದು ಹೇಳಲಾಗ್ತಿದೆ. ಅಲ್ಲದೆ ಈ ಟ್ಯಾಬ್‌ ಯಾವೆಲ್ಲಾ ಫೀಚರ್ಸ್‌ಗಳನ್ನ ಒಳಗೊಂಡಿರಲಿದೆ ಅನ್ನೊದು ಆನ್‌ಲೈನ್‌ನಲ್ಲಿ ಲೀಕ್‌ ಆಗಿದೆ. ಲೀಕ್‌ ಮಾಹಿತಿ ಪ್ರಕಾರ ಈ ಟ್ಯಾಬ್‌ ಹೊಂದಿರುವ ಫೀಚರ್ಸ್‌ಗಳೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿ.

ಗ್ಯಾಲಕ್ಸಿ S6 ಟ್ಯಾಬ್‌ ಲೈಟ್‌

ಗ್ಯಾಲಕ್ಸಿ S6 ಟ್ಯಾಬ್‌ ಲೈಟ್‌

ಟ್ಯಾಬ್ S6ಲೈಟ್ ವಿನ್ಯಾಸ ಮತ್ತು ಗಾತ್ರದಲ್ಲಿ ಕಳೆದ ವರ್ಷವಷ್ಟೆ ಬಿಡುಗಡೆಯಾಗಿದ್ದ, ಟ್ಯಾಬ್ S6 ಅನ್ನು ಹೋಲುತ್ತದೆ. ಆದರೆ ಈ ಟ್ಯಾಬ್‌ ಮಿಡ್‌ರೇಂಜ್‌ ಚಿಪ್‌ ಅನ್ನು ಹೊಂದಿದೆ ಎಂದು ಹೇಳಲಾಗ್ತಿದೆ. ಅಲ್ಲದೆ ಈ ಟ್ಯಾಬ್‌ ಜೊತೆಗೆ S-ಪೆನ್ ಬರಲಿದ್ದು, ಟ್ಯಾಬ್ಲೆಟ್‌ ನಲ್ಲಿ ಸೂಕ್ಷ್ಮವಾಗಿ ಕಾರ್ಯನಿರ್ವಹಿಸಲು ಅನುಕೂಲಕರವಾಗಿರಲಿದೆ. ಆದರೆ ಈ ಪೆನ್‌ ಸ್ಟೈಲಸ್ ಟ್ಯಾಬ್ಲೆಟ್‌ ಪ್ಯಾಕಿಂಗ್‌ ಜೊತೆಗೆ ಬರೋದು ಅನುಮಾನ ಎನ್ನಲಾಗ್ತಿದೆ. ಅಲ್ಲದೆ ಇದಕ್ಕೆ ಪ್ರತ್ಯೇಕ ಚಾರ್ಜಿಂಗ್ ಸಹ ಅಗತ್ಯವಿರುವುದರಿಂದ ಸ್ಯಾಮ್ಸಂಗ್ ಎಸ್-ಪೆನ್ ಅನ್ನು ಹೆಚ್ಚುವರಿ ಆಯ್ಕಯಾಗಿ ಖರೀದಿದಾರರಿಗೆ ನೀಡುವ ಸಾಧ್ಯತೆ ಇದೆ.

ಟ್ಯಾಬ್‌ನ ಸಾಮರ್ಥ್ಯ

ಟ್ಯಾಬ್‌ನ ಸಾಮರ್ಥ್ಯ

ಇನ್ನು ಟ್ಯಾಬ್ S6ಲೈಟ್ Exynos9611 ಇಲ್ಲವೇ ಸ್ನಾಪ್ಡ್ರಾಗನ್ 600 ಸಿರೀಸ್‌ನ SoC ಪ್ರೊಸೆಸರ್‌ ಅನ್ನು ಹೊಂದಿದ್ದು, ಆಂಡ್ರಾಯ್ಡ್ 10 ನಲ್ಲಿ ಒನ್ UI 2.0 ಬೆಂಬಲದೊಂದಿಗೆ ಕಾರ್ಯನಿರ್ವಹಿಸಬಹುದು ಎಂದು ನಿರೀಕ್ಷಿಸಲಾಗಿದೆ. ಜೊತೆಗೆ ಗ್ಯಾಲಕ್ಸಿ S6 ಟ್ಯಾಬ್‌ ಲೈಟ್ 4GB RAM ಮತ್ತು 64 ಅಥವಾ 128GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನ ಹೊಂದಿರಲಿದೆ ಎಂದು ಅಂದಾಜಿಸಲಾಗಿದೆ.

ಟ್ಯಾಬ್‌ನ ವಿಶೇಷತೆ

ಟ್ಯಾಬ್‌ನ ವಿಶೇಷತೆ

ಈ ಟ್ಯಾಬ್‌ ಈಗಿನ ಜಮಾನಕ್ಕೆ ತಕ್ಕಂತೆ ವಿನ್ಯಾಸವನ್ನ ಹೊಂದಿದ್ದು, ವೇಗದ ಸಾಮರ್ಥ್ಯಕ್ಕೆ ತಕ್ಕುದಾದ ಫೀಚರ್ಸ್‌ಗಳನ್ನ ಒಳಗೊಂಡಿದೆ. ಅಲ್ಲದೆ ಇದರ ಡಿಸ್‌ಪ್ಲೇ ವಿನ್ಯಾಸ ಹಾಗೂ ಸ್ಕ್ರೀನ್‌ ರೆಸಲ್ಯೂಶನ್‌ ಉತ್ತಮವಾಗಿದ್ದು, ವಿಡಿಯೋ ವೀಕ್ಷಣೆಯಲ್ಲಿ ಉತ್ತಮ ಅನುಭವ ನೀಡಲಿದೆ. ಜೊತೆಗೆ ಇದರ ಸ್ಟೈಲಶ್‌ ಪೆನ್‌ ಟ್ಯಾಬ್‌ನ ಕಾರ್ಯನಿರ್ವಹಣೆಗೆ ತುಂಬಾನೆ ಸಹಕಾರಿಯಾಗಿದ್ದು, ಟ್ಯಾಬ್‌ S6 ಗಿಂತ ಟ್ಯಾಬ್‌ S6 ಲೈಟ್‌ ಉತ್ತಮ ಕಾರ್ಯದಕ್ಷತೆಯನ್ನ ಒಳಗೊಂಡಿದೆ.

ಇತರೆ

ಇತರೆ

ಇನ್ನು ಈ ಟ್ಯಾಬ್‌ ಉತ್ತಮ ಬ್ಯಾಟರಿ ಪ್ಯಾಕ್‌ಅಪ್‌ ಹೊಂದಿರಲಿದೆ ಎನ್ನಲಾಗ್ತಿದ್ದು, LTE ನೆಟ್‌ವರ್ಕ್‌ಗಳನ್ನು ಬೆಂಬಲಿಸುತ್ತದೆ. ಅಲ್ಲದೆ, ಈ ಟ್ಯಾಬ್‌ ವೈಫೈ-ಬಳಕೆಯಲ್ಲಿ ಮಾತ್ರ ಸಿಗಲಿದೆ ಎನ್ನುವ ಮಾಹಿತಿ ಕೂಡ ಇದ್ದು, ಇದರ ಬಗ್ಗೆ ಕಂಪೆನಿ ಇನ್ನು ಯಾವುದೇ ಮಾಹಿತಿ ಹೇಳಿಲ್ಲ. ಇನ್ನು ಈ ಟ್ಯಾಬ್‌ ಬ್ಲೂಟೂತ್‌ ಕನೆಕ್ಟಿವಿಟಿಯನ್ನು ಬೆಂಬಲಿಸಲಿದೆ. ಸದ್ಯ ಇದರ ಬೆಲೆ ಹಾಗೂ ಬಿಡುಗಡೆಯ ದಿನಾಂಕದ ಬಗ್ಗೆ ಕಂಪೆನಿ ಯಾವುದೇ ಮಾಹಿತಿಯನ್ನ ಬಿಟ್ಟುಕೊಟ್ಟಿಲ್ಲ.

Best Mobiles in India

English summary
The Samsung Galaxy Tab S6 Lite leak reveals a similar size and shape to the Galaxy Tab S6.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+