Home
ಸುದ್ದಿಜಾಲ

ಭಾರತದಲ್ಲಿ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಟ್ಯಾಬ್ S7 FE ವೈ-ಫೈ ಲಾಂಚ್‌! ವಿಶೇಷತೆ ಏನು?

ಸ್ಯಾಮಸಂಗ್‌ ಕಂಪೆನಿ ಟೆಕ್‌ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಫೋನ್‌ ಮಾತ್ರವಲ್ಲದೆ ಟ್ಯಾಬ್‌ಗಳಿಗೂ ಸೈ ಎನಿಸಿಕೊಂಡಿದೆ. ಈಗಾಗಲೇ ಹಲವು ಮಾದರಿಯ ಟ್ಯಾಬ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಇದೀಗ ಹೊಸ ಗ್ಯಾಲಕ್ಸಿ ಟ್ಯಾಬ್ S7 FE ವೈ-ಫೈ ರೂಪಾಂತರವನ್ನು ಭಾರತದಲ್ಲಿ ಲಾಂಚ್‌ ಮಾಡಿದೆ. ಇದು ಅಮೆಜಾನ್ ಮತ್ತು ಸ್ಯಾಮ್‌ಸಂಗ್ ಅಧಿಕೃತ ಸೈಟ್‌ನಲ್ಲಿ ಲಭ್ಯವಿರುತ್ತದೆ. ಇನ್ನು ಈ ಗ್ಯಾಲಕ್ಸಿ ಟ್ಯಾಬ್ S7 FE ವೈ-ಫೈ ಮಾದರಿಯು ಎಲ್‌ಟಿಇ ಮಾದರಿಯ ಫೀಚರ್ಸ್‌ಗಳನ್ನು ಒಳಗೊಂಡಿದೆ.

ಸ್ಯಾಮ್‌ಸಂಗ್‌

ಹೌದು, ಸ್ಯಾಮ್‌ಸಂಗ್‌ ಕಂಪೆನಿ ಹೊಸ ಗ್ಯಾಲಕ್ಸಿ ಟ್ಯಾಬ್‌ S7 FE ವೈಫೈ ಮಾದರಿಯನ್ನು ಬಿಡುಗಡೆ ಮಾಡಿದೆ. ಇನ್ನು ಈ ಗ್ಯಾಲಕ್ಸಿ ಟ್ಯಾಬ್ S7 FE ವೈಫೈ ಮಾದರಿಯು 12.4-ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಸ್ನಾಪ್‌ಡ್ರಾಗನ್ 778G ಆಕ್ಟಾ-ಕೋರ್ ಪ್ರೊಸೆಸರ್ ಹೊಂದಿದ್ದು, ಆಂಡ್ರಾಯ್ಡ್ 11 ನಲ್ಲಿ ಕಾರ್ಯನಿರ್ವಹಿಸುತ್ತದೆ. ಜೊತೆಗೆ 10,090mAh ಬ್ಯಾಟರಿಯನ್ನು ಹೊಂದಿದೆ. ಇನ್ನುಳಿದಂತೆ ಈ ಹೊಸ ಗ್ಯಾಲಕ್ಸಿ ಟ್ಯಾಬ್‌ S7 FE ವೈಫೈ ಮಾದರಿಯು LTE ಮಾದರಿಗಿಂತ ವಿಭಿನ್ನವಾಗಿದೆ. ಹಾಗಾದ್ರೆ ಈ ಹೊಸ ಟ್ಯಾಬ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸ್ಯಾಮ್‌ಸಂಗ್

ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ S7 FE ವೈಫೈ ಮಾದರಿಯು 2,560x1,600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 12.4-ಇಂಚಿನ WQXGA TFT ಡಿಸ್‌ಪ್ಲೇ ಹೊಂದಿದೆ. ಇದು ಸ್ನಾಪ್‌ಡ್ರಾಗನ್ 778G ಆಕ್ಟಾ-ಕೋರ್ ಪ್ರೊಸೆಸರ್‌ ಹೊಂದಿದ್ದು, ಆಂಡ್ರಾಯ್ಡ್ 11 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇನ್ನು ಈ ಗ್ಯಾಲಕ್ಸಿ ಟ್ಯಾಬ್‌ 4GB RAM ಮತ್ತು 64GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಹಾಗೆಯೇ ಮೈಕ್ರೊ SD ಕಾರ್ಡ್ ಮೂಲಕ 1TBವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದು. ಆದರೆ ಇದರ LTE ಮಾದರಿಯು ಸ್ನಾಪ್‌ಡ್ರಾಗನ್ 750G SoC ನಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು 6GB RAM ಅನ್ನು ಒಳಗೊಂಡಿದೆ.

ಗ್ಯಾಲಕ್ಸಿ

ಇನ್ನು ಗ್ಯಾಲಕ್ಸಿ ಟ್ಯಾಬ್ S7 FE ವೈಫೈ ಮಾದರಿಯು 8 ಮೆಗಾಪಿಕ್ಸೆಲ್ ಸೆನ್ಸರ್‌ ಸಾಮರ್ಥ್ಯದ ಸಿಂಗಲ್‌ ರಿಯರ್‌ ಕ್ಯಾಮೆರಾ ಹೊಂದಿದೆ. ಹಾಗೆಯೇ 5 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಸಹ ಒಳಗೊಂಡಿದೆ. ಈ ಟ್ಯಾಬ್‌ 10,090mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 45W ಸೂಪರ್ ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈಫೈ, ಬ್ಲೂಟೂತ್‌ v5.2, GPS, 2.4G+5GHz ಮತ್ತು ಒಂದು ಯುಎಸ್‌ಬಿ ಟೈಫ್‌-ಸಿ 3.2 Gen1 ಪೋರ್ಟ್‌ ಅನ್ನು ಬೆಂಬಲಿಸಲಿದೆ. ಇದರಲ್ಲಿ ಡಾಲ್ಬಿ ಅಟ್ಮೋಸ್ ಬೆಂಬಲದೊಂದಿಗೆ ನೀವು ಎಕೆಜಿಯಿಂದ ಡ್ಯೂಯಲ್ ಸ್ಟೀರಿಯೋ ಸ್ಪೀಕರ್‌ಗಳನ್ನು ನೀಡಲಾಗಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಹೊಸ ಸ್ಯಾಮ್‌ಸಂಗ್‌ S7 FE ವೈಫೈ ಟ್ಯಾಬ್ಲೆಟ್ ರೂಪಾಂತರವು ಭಾರತದಲ್ಲಿ 4GB RAM + 64GB ಸ್ಟೋರೇಜ್ ಆಯ್ಕೆಗೆ 41,999ರೂ ಬೆಲೆಯನ್ನು ಹೊಂದಿದೆ. ಇದು ಮಿಸ್ಟಿಕ್ ಬ್ಲ್ಯಾಕ್, ಮಿಸ್ಟಿಕ್ ಸಿಲ್ವರ್, ಮಿಸ್ಟಿಕ್ ಗ್ರೀನ್ ಮತ್ತು ಮಿಸ್ಟಿಕ್ ಪಿಂಕ್ ಕಲರ್ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಇನ್ನು ಈ ಟ್ಯಾಬ್ಲೆಟ್ ಅನ್ನು ಅಮೆಜಾನ್ ಇಂಡಿಯಾ ಮತ್ತು ಸ್ಯಾಮ್‌ಸಂಗ್ ಅಧಿಕೃತ ಆನ್‌ಲೈನ್ ಸ್ಟೋರ್‌ನಲ್ಲಿ ಪಟ್ಟಿ ಮಾಡಲಾಗಿದೆ. ಅಮೆಜಾನ್ ಮತ್ತು ಸ್ಯಾಮ್‌ಸಂಗ್ ಸೈಟ್‌ಗಳಲ್ಲಿ ಲಾಂಚ್‌ ಆಫರ್‌ನಲ್ಲಿ HDFC ಬ್ಯಾಂಕ್ ಕಾರ್ಡ್‌ಗಳ ಮೇಲೆ 4,000ರೂ,ಗಳ ಕ್ಯಾಶ್‌ಬ್ಯಾಕ್‌ ಕೂಡ ದೊರೆಯಲಿದೆ. ಅಲ್ಲದೆ 14,200ರೂ, ವರೆಗಿನ ಎಕ್ಸ್‌ಚೇಂಜ್‌ ಆಫರ್‌ ಅನ್ನು ಸಹ ನೀಡಲಾಗಿದೆ. ಇದರೊಂದಿಗೆ ಕೀಬೋರ್ಡ್ ಕವರ್ ಖರೀದಿಗೆ 10,000ರೂ ವರೆಗಿನ ರಿಯಾಯಿತಿ ಲಭ್ಯವಾಗಲಿದೆ.

Best Mobiles in India

English summary
Samsung Galaxy Tab S7 FE Wi-Fi variant has quietly launched in the Indian market. It is up for grabs on Amazon and the Samsung official site.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+