Home
ಸುದ್ದಿಜಾಲ

Samsung ಗ್ಯಾಲಕ್ಸಿ ಅನ್‌ಪ್ಯಾಕ್ಡ್ 2025: ಇಂದು 3 ಫೋಲ್ಡಬಲ್ ಫೋನ್‌ಗಳ ಆಗಮನ!

ದಕ್ಷಿಣ ಕೊರಿಯಾದ ಟೆಕ್ ದೈತ್ಯ ಸಂಸ್ಥೆ Samsung ತನ್ನ ಬಹುನಿರೀಕ್ಷಿತ ಎರಡನೇ ಗ್ಯಾಲಕ್ಸಿ ಅನ್‌ಪ್ಯಾಕ್ಡ್ 2025 ಈವೆಂಟ್ ಅನ್ನು ಇಂದು (ಭಾರತೀಯ ಕಾಲಮಾನ ಸಂಜೆ 7:30 ಕ್ಕೆ IST ) ಆಯೋಜಿಸಲಿದೆ. ಈ ಬಿಡುಗಡೆಯ ಕಾರ್ಯಕ್ರಮದಲ್ಲಿ Samsung ತನ್ನ ಮುಂದಿನ ಪೀಳಿಗೆಯ ಫ್ಲ್ಯಾಗ್‌ಶಿಪ್ ಫೋಲ್ಡಬಲ್ ಸ್ಮಾರ್ಟ್‌ಫೋನ್‌ಗಳು ಮತ್ತು ಸ್ಮಾರ್ಟ್‌ವಾಚ್‌ಗಳನ್ನು ಅನಾವರಣಗೊಳಿಸಲು ಸಿದ್ಧವಾಗಿದ್ದು, ಈ ವರ್ಷದ ಅನ್‌ಪ್ಯಾಕ್ಡ್ ಈವೆಂಟ್‌ನಲ್ಲಿ Samsung‌ ಕಂಪೆನಿಯ ಮೂರು ಹೊಸ ಮಡಚಬಹುದಾದ ಮೂರು ಫೋನ್‌ಗಳನ್ನು ಹಾಗೂ ಎರಡು ಸ್ಮಾರ್ಟ್‌ವಾಚ್‌ಗಳನ್ನು ಬಿಡುಗಡೆ ಮಾಡುತ್ತಿರುವುದು ಖಚಿತವಾಗಿದೆ.

ಹೌದು, ಈ ವರ್ಷದ ಅನ್‌ಪ್ಯಾಕ್ಡ್ ಈವೆಂಟ್‌ನಲ್ಲಿ Samsung ಕಂಪೆನಿಯು ಹೊಸ Galaxy Z Fold 7, Galaxy Z Flip 7, ಮತ್ತು Galaxy Z Flip 7 FE ಎಂಬ ಮೂರು ಮಡುಚಬಹುದಾದ ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾಗುತ್ತಿರುವುದನ್ನು ಮಾಧ್ಯಮಗಳಿಗೆ ಈಗಾಗಲೇ ಖಚಿತಪಡಿಸಿದೆ. ಇವುಗಳಲ್ಲಿ Galaxy Z Fold 7 ವಿಶೇಷವಾಗಿ ಗಮನ ಸೆಳೆಯುತ್ತಿದೆ, ಇದು ತನ್ನ ಹಿಂದಿನ ಮಾದರಿಗಳಿಗಿಂತ ಗಮನಾರ್ಹವಾಗಿ ತೆಳ್ಳಗಿರಲಿದೆ ಎಂದು ನಿರೀಕ್ಷಿಸಲಾಗಿದೆ. ವರದಿಯ ಪ್ರಕಾರ, ಈ ಫೋನ್ ಮಡಚಿದಾಗ ಕೇವಲ 8.9 ಮಿಮೀ ದಪ್ಪವನ್ನು ಹೊಂದಿದ್ದು, ತೆರೆದಾಗ 4.2 ಮಿಮೀ ಗೆ ತೆಳ್ಳಗಾಗುತ್ತದೆ ಎಂದು ಹೇಳಲಾಗಿದೆ.

Samsung ಗ್ಯಾಲಕ್ಸಿ ಅನ್‌ಪ್ಯಾಕ್ಡ್ 2025: ಇಂದು 3 ಫೋಲ್ಡಬಲ್ ಫೋನ್‌ಗಳ ಆಗಮನ!

ಹಾಗೆಯೇ, Galaxy Z Flip 7 ಅನ್ನು ಬಹುತೇಕ ಸಂಪೂರ್ಣ ಬಾಹ್ಯ ಪ್ರದರ್ಶನದೊಂದಿಗೆ ಮರುವಿನ್ಯಾಸಗೊಳಿಸಲಾಗಿದೆ ಎಂದು ಹೇಳಲಾಗಿದೆ. ಇದು ಮುಚ್ಚಿದಾಗಲೂ ಅದರ ಬಳಕೆಯುವನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗಿದೆ. ಇದಲ್ಲದೆ, Samsung ತನ್ನ ಮೊದಲ ಟ್ರೈ-ಫೋಲ್ಡ್ ಫೋನಿನ ಕಿರುನೋಟವನ್ನು ಸಹ ಈ ಕಾರ್ಯಕ್ರಮದಲ್ಲಿ ಪ್ರಸ್ತುತಪಡಿಸಬಹುದು ಎಂದು ಅಂದಾಜಿಸಲಾಗಿದೆ. ಇದೀಗ ನಮಗೆ Galaxy Z Fold 7, Galaxy Z Flip 7, ಮತ್ತು Galaxy Z Flip 7 FE ಎಂಬ ಮೂರು ಮಡುಚಬಹುದಾದ ಸ್ಮಾರ್ಟ್‌ಫೋನ್‌ಗಳ ಬಿಡುಗಡೆ ಮಾಹಿತಿಯು ಖಚಿತವಾಗಿರುವುದು, ಈ ಮಾಹಿತಿಗೆಲ್ಲಾ ಪುಷ್ಠಿ ನೀಡಿದೆ.

ಇನ್ನು ಈ ಫೋನ್‌ಗಳ ಜೊತೆಗೆ, Samsung ತನ್ನ ಹೊಸ Galaxy Wach 8 ಸರಣಿಯನ್ನು ಸಹ ಬಿಡುಗಡೆ ಮಾಡಲಿದೆ. ಈ ಸರಣಿಯು Galaxy Wach 8 ಮತ್ತು Watch 8 Classic ಮಾದರಿಗಳನ್ನು ಒಳಗೊಂಡಿರುವ ಸಾಧ್ಯತೆಯಿದೆ. ಈ ಸರಣಿಯು ಜನಪ್ರಿಯ ತಿರುಗುವ ಬೆಜೆಲ್ ವೈಶಿಷ್ಟ್ಯವನ್ನು ಮರಳಿ ತರಬಹುದು ಮತ್ತು 'ಕ್ಲಾಸಿಕ್' ಬ್ರ್ಯಾಂಡಿಂಗ್ ಅನ್ನು ಪುನರುಜ್ಜೀವನಗೊಳಿಸಬಹುದು ಎಂದು ವರದಿಯಾಗಿದೆ. ಈ ಹೊಸ ಉತ್ಪನ್ನಗಳ ಅನಾವರಣದೊಂದಿಗೆ, Samsung ಮಡಚಬಹುದಾದ ತಂತ್ರಜ್ಞಾನ ಮತ್ತು ಧರಿಸಬಹುದಾದ ಸಾಧನಗಳ ವಿಭಾಗದಲ್ಲಿ ತನ್ನ ನಾಯಕತ್ವವನ್ನು ಮತ್ತಷ್ಟು ಬಲಪಡಿಸಲು ಮುಂದಾಗಿದೆ.

Samsung ಗ್ಯಾಲಕ್ಸಿ ಅನ್‌ಪ್ಯಾಕ್ಡ್ 2025: ಇಂದು 3 ಫೋಲ್ಡಬಲ್ ಫೋನ್‌ಗಳ ಆಗಮನ!

ಇಂದು ಸಂಜೆ 7:30 IST ಕ್ಕೆ (ಬೆಳಗ್ಗೆ 10:00 ET) ಪ್ರಾರಂಭವಾಗುವ Samsung ಗ್ಯಾಲಕ್ಸಿ ಅನ್‌ಪ್ಯಾಕ್ಡ್ ಈವೆಂಟ್ ಅನ್ನು Samsung‌ನ ಅಧಿಕೃತ YouTube ಚಾನೆಲ್‌ನಲ್ಲಿ ನೇರಪ್ರಸಾರ ವೀಕ್ಷಿಸಬಹುದು. ಈ ಕೆಳಗೆ ಕಾರ್ಯಕ್ರಮದ ನೇವ ವೀಕ್ಷಣೆಗಾಗಿ ಅಧಿಕೃತ ಚಾನಲ್ ಅನ್ನು ಎಂಬೆಡ್ ಮಾಡಲಾಗಿದೆ. ಒಂದು ವೇಳೆ ನಿಮಗೆ ಈ ಎಲ್ಲಾ ಸಾಧನಗಳ ಕುರಿತು ಸಂಪೂರ್ಣ ಮಾಹಿತಿಯನ್ನು ತಿಳಿಯಲು ಕುತೂಹಲ್ಲ ಇದ್ದರೆ, ಕನ್ನಡ ಗಿಜ್‌ಬಾಟ್‌ನಲ್ಲಿ ಲೈವ್ ಆಗಿರಿ. Samsung ಗ್ಯಾಲಕ್ಸಿ ಅನ್‌ಪ್ಯಾಕ್ಡ್ 2025 ಕುರಿತ ಸಂಪೂರ್ಣ ಮಾಹಿತಿಯನ್ನು ನಾವು ನಿಮಗಾಗಿ ಪ್ರಸ್ತುತಪಡಿಸುತ್ತೇವೆ. ಅದು ಕೂಡ ಯಾವುದೇ ಸಮಯ ವಿಳಂಬವಿಲ್ಲದೆ.

ಇದೀಗ ಬಂದ ಸುದ್ದಿ, Samsung ನ ಪ್ರಾಜೆಕ್ಟ್ ಮೂಹನ್ ಅಪ್‌ಡೇಟ್ ಸ್ಯಾಮ್‌ಸಂಗ್‌ನ ವದಂತಿಯಾಗಿರುವ XR (ವಿಸ್ತೃತ ರಿಯಾಲಿಟಿ) ಹೆಡ್‌ಸೆಟ್ ಪ್ರಾಜೆಕ್ಟ್ ಮೂಹನ್‌ಗಾಗಿ ಟೀಸರ್ ಬಗ್ಗೆ ಸ್ವಲ್ಪ ಚರ್ಚೆ ನಡೆಯುತ್ತಿದೆ. ಇದು ಪೂರ್ಣವಾಗಿ ಬಿಡುಗಡೆಯಾಗುವ ಸಾಧ್ಯತೆಯಿಲ್ಲ - ಆದರೆ ಒಂದು ಸಣ್ಣ ಟೀಸರ್ ಕೂಡ ಸ್ಯಾಮ್‌ಸಂಗ್ ಪ್ರಾದೇಶಿಕ ಕಂಪ್ಯೂಟಿಂಗ್ ರೇಸ್‌ನಿಂದ ಹೊರಗುಳಿದಿಲ್ಲ ಎಂದು ತೋರುತ್ತದೆ.

Best Mobiles in India

English summary
Samsung Galaxy Unpacked 2025: Launching Today - Galaxy Z Fold 7, Galaxy Z Flip 7, Watch 8, and More
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+