Home
ಸುದ್ದಿಜಾಲ

Samsung: ಇಂದು ದೊಡ್ಡ ಈವೆಂಟ್: Galaxy Z Fold 6, Galaxy Z Flip 6 ಫೋನ್ ಬಿಡುಗಡೆ: ಎಲ್ಲಿ ವೀಕ್ಷಿಸಬೇಕು?

Galaxy Unpacked Event 2024: ದಿ ವೇಟ್ ಈಸ್ ಓವರ್..! ಟೆಕ್ ದೈತ್ಯ ಸ್ಯಾಮ್‌ಸಂಗ್‌ನ ಅತಿದೊಡ್ಡ ಈವೆಂಟ್ Galaxy Unpacked ಇಂದು (ಜುಲೈ 10) ನಡೆಯಲಿದೆ. ಈ ಟೆಕ್ ಈವೆಂಟ್ ಯಾವಾಗಲೂ ಟೆಕ್ ಪ್ರಿಯರಿಗೆ ವಿಶೇಷವಾಗಿರಲಿದೆ. ಏಕೆಂದರೆ ಹೊಸ ತಂತ್ರಜ್ಞಾನದ ಜೊತೆಗೆ, ಕಂಪನಿಯು ಈ ಈವೆಂಟ್‌ನಲ್ಲಿ ತನ್ನ ಹೊಸ ಗ್ಯಾಜೆಟ್‌ಗಳನ್ನು ಸಹ ಪ್ರಸ್ತುತಪಡಿಸುತ್ತದೆ. ಈ ಈವೆಂಟ್‌ನ ಮಾಹಿತಿಯ ಜೊತೆಗೆ, ಆನ್‌ಲೈನ್‌ನಲ್ಲಿ ಅನೇಕ ಮಾಹಿತಿಗಳು ಹೊರಹೊಮ್ಮಿವೆ. ಇದರಲ್ಲಿ Galaxy Z Fold 6 ಮತ್ತು Flip 6ನ ಫಿಚರ್ಸ್‌ಗಳ ಬಗ್ಗೆ ಮಾಹಿತಿಯನ್ನು ನೀಡಲಾಗಿದೆ.

ಸ್ಯಾಮ್‌ಸಂಗ್‌ನ ಈ Galaxy Unpacked ಈವೆಂಟ್-2024 ಈ ವರ್ಷ ಪ್ಯಾರಿಸ್‌ನಲ್ಲಿ ನಡೆಯಲಿದೆ. ಈ ಸಮಾರಂಭದಲ್ಲಿ Galaxy Z Fold 6 ಮತ್ತು Galaxy Z Flip 6 ಸ್ಮಾರ್ಟ್‌ಫೋನ್‌ಗಳು ಹಾಗೂ Galaxy Watch 7 ಮತ್ತು Buds 3 ಅನ್ನು ಲಾಂಚ್ ಮಾಡಲಾಗುತ್ತದೆ. ಈ ಈವೆಂಟ್‌ನ ಲೈವ್ ಸ್ಟ್ರೀಮ್ ಅನ್ನು ಎಲ್ಲಿ ವೀಕ್ಷಿಸಬೇಕು ಮತ್ತು ಈವೆಂಟ್‌ನಿಂದ ಏನನ್ನು ನಿರೀಕ್ಷಿಸಬಹುದು? ಎಂಬ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಮೂಡುವುದು ಸಹಜ. ನಿಮ್ಮ ಈ ಪ್ರಶ್ನೆಗೆ ಈ ಲೇಖನದಲ್ಲಿ ಸಂಪೂರ್ಣ ಮಾಹಿತಿ ನೀಡಲಾಗಿದೆ.

ಇಂದು Samsungನ ದೊಡ್ಡ ಈವೆಂಟ್: Galaxy Z Fold 6, Galaxy Z Flip 6 ಲಾಂಚ್

Galaxy Unpacked Event 2024ನ ವಿಶೇಷತೆಗಳು

  • Samsungನ ಈ ವಿಶೇಷ ಕಾರ್ಯಕ್ರಮ ಇಂದು (ಜುಲೈ 10) ಸಂಜೆ 6.30ಕ್ಕೆ ನಡೆಯಲಿದೆ.
  • ಈವೆಂಟ್ ಅನ್ನು Samsung.com, Samsung Newsroom ಮತ್ತು Samsungನ YouTube ಚಾನಲ್‌ನಲ್ಲಿ ಲೈವ್ ಸ್ಟ್ರೀಮ್ ಮಾಡಲಾಗುತ್ತದೆ.
  • ಈವೆಂಟ್‌ನಲ್ಲಿ Galaxy Z Fold 6, Flip 6, Galaxy Ring ಮತ್ತು Galaxy Watch ಬಿಡುಗಡೆ ಮಾಡಲಾಗುವುದು.
  • ಸ್ಯಾಮ್‌ಸಂಗ್‌ನ ಅಧಿಕೃತ ವೆಬ್‌ಸೈಟ್, ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್‌ನಲ್ಲಿ ನೀವು Galaxy Z Fold 6 ಮತ್ತು Flip 6 ಫೋನ್ ಅನ್ನು ಮೊದಲೇ ಬುಕ್ಕಿಂಗ್ ಮಾಡಬಹುದು.

Galaxy Z Fold 6,Flip 6 ಲಾಂಚ್: ಸಮಯ, ಲೈವ್ ಸ್ಟ್ರೀಮ್

ಸ್ಯಾಮ್‌ಸಂಗ್‌ನ ಗ್ಯಾಲಕ್ಸಿ ಅನ್ಪ್ಯಾಕ್ಡ್ ಈವೆಂಟ್-2024 ಇಂದು ಪ್ಯಾರಿಸ್‌ನಲ್ಲಿ ಮಧ್ಯಾಹ್ನ 3 ಗಂಟೆಗೆ (ಸಂಜೆ 6.30) ಪ್ರಾರಂಭವಾಗುತ್ತದೆ. ಈವೆಂಟ್ ಅನ್ನು ಸ್ಯಾಮ್‌ಸಂಗ್‌ನ YouTube ಚಾನಲ್‌ನಲ್ಲಿ ಲೈವ್ ಸ್ಟ್ರೀಮ್ ಮಾಡಲಾಗುತ್ತದೆ. Samsung.com, Samsung Newsroom ಮತ್ತು Samsungನ YouTube ಚಾನಲ್‌ನಲ್ಲಿ ನೀವು ನೇರಪ್ರಸಾರವನ್ನು ವೀಕ್ಷಿಸಬಹುದು.

Galaxy Unpacked Eventನ ವಿಶೇಷತೆ ಏನು?

ಸ್ಯಾಮ್‌ಸಂಗ್ ಕಂಪನಿಯ ಪ್ರಕಾರ, ಗ್ಯಾಲಕ್ಸಿ ಅನ್ಪ್ಯಾಕ್ಡ್ ಈವೆಂಟ್‌ನಲ್ಲಿ ಅನೇಕ ಸಾಧನಗಳನ್ನು ಲೋಕಾರ್ಪಣೆ ಮಾಡಲಾಗುತ್ತದೆ. ಈ ಪಟ್ಟಿಯಲ್ಲಿ Galaxy Z Fold 6, Galaxy Z Flip 6, Galaxy Watch 7 ಸರಣಿ ಮತ್ತು ಬಡ್ಸ್ 3 ಕೂಡ ಒಳಗೊಂಡಿದೆ. ಇದರೊಂದಿಗೆ, ಈವೆಂಟ್‌ನಲ್ಲಿ ಕಂಪನಿಯು ಬಹುನಿರೀಕ್ಷಿತ ಗ್ಯಾಲಕ್ಸಿ ರಿಂಗ್ ಅನ್ನು ಸಹ ಲಾಂಚ್‌ ಮಾಡಬಹುದು.

ಇಂದು Samsungನ ದೊಡ್ಡ ಈವೆಂಟ್: Galaxy Z Fold 6, Galaxy Z Flip 6 ಲಾಂಚ್

Galaxy Z Fold 6 ವಿಶೇಷತೆ: Samsung Galaxy Z Fold 6 ಡಿಸೈನ್‌ Fold 5 ಅನ್ನು ಹೋಲುತ್ತದೆ. ಆದರೂ, ಇದು ಅದಕ್ಕಿಂತ ಹಗುರವಾಗಿರುತ್ತದೆ. ಇದು 7.6-ಇಂಚಿನ QXGA+ ಡೈನಾಮಿಕ್ AMOLED 2X 120Hz ಮುಖ್ಯ ಡಿಸ್ಪ್ಲೇ ಮತ್ತು 6.3-ಇಂಚಿನ ಡೈನಾಮಿಕ್ AMOLED 2X ಕವರ್ ಡಿಸ್ಪ್ಲೇಯನ್ನು ಹೊಂದಿರುವ ನಿರೀಕ್ಷೆಯಿದೆ. ಇದು 4,400mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರಲಿದೆ.

ಈ ಫೋನ್ Snapdragon 8 Gen 3 SoC ಪ್ರೊಸೆಸರ್‌ ಹೊಂದಿದೆ. ಇದು ಆರ್ಮರ್ ಅಲ್ಯೂಮಿನಿಯಂ ಫ್ರೇಮ್, ಗೊರಿಲ್ಲಾ ಗ್ಲಾಸ್ ವಿಕ್ಟಸ್ 2, IP48 ನೀರಿನ ಪ್ರತಿರೋಧ ಮತ್ತು S ಪೆನ್ ಸಪೋರ್ಟ್ ಪಡೆದಿದೆ. Galaxy Z Fold 6 12MP ಅಲ್ಟ್ರಾ-ವೈಡ್ ಕ್ಯಾಮೆರಾ, 2x ಆಪ್ಟಿಕಲ್ ಜೂಮ್ ಜೊತೆಗೆ 50MP ವೈಡ್ ಕ್ಯಾಮೆರಾ, 10MP ಟೆಲಿಫೋಟೋ ಕ್ಯಾಮೆರಾ ಜೊತೆಗೆ 3x ಆಪ್ಟಿಕಲ್ ಜೂಮ್ ಅನ್ನು ಹಿಂಭಾಗದಲ್ಲಿ ಹೊಂದಿರುತ್ತದೆ. ಇದು 10MP ಫ್ರಂಟ್ ಕ್ಯಾಮೆರಾ ಮತ್ತು 4MP ಅಂಡರ್ ಡಿಸ್ಪ್ಲೇ ಕ್ಯಾಮೆರಾವನ್ನು ಪಡೆದಿದೆ.

ಈ ಫೋನ್ ಮೊದಲೇ ಬುಕ್‌ ಮಾಡಬಹುದು: ಹೇಗೆ?

ಈ ಫೋನ್‌ ಅನ್ನು ಆನ್‌ಲೈನ್‌ನಲ್ಲಿ ಮೊದಲೇ ಬುಕ್ಕಿಂಗ್ ಮಾಡಲು ಸ್ಯಾಮ್‌ಸಂಗ್ ನಿಮಗೆ ಅವಕಾಶವನ್ನು ನೀಡಿದೆ. ಕೇವಲ 2,000 ರೂ.ಗಳ ಟೋಕನ್ ಅಡ್ವಾನ್ಸ್‌ ಪಾವತಿಸಿ, ನೀವು Galaxy Z Fold 6 ಅನ್ನು ಬುಕ್ ಮಾಡಬಹುದು. ಈ ಮುಂಗಡ ಕಾಯ್ದಿರಿಸುವಿಕೆಯಲ್ಲಿ, ನೀವು ಫೋನ್ ಖರೀದಿಯ ಮೇಲೆ 7,000 ರೂ.ನ ವಿಶೇಷ ಪ್ರಯೋಜನಗಳನ್ನು ಮತ್ತು ಆಫರ್‌ಗಳನ್ನು ಪಡೆಯಬಹುದು. ಈ Z ಫೋಲ್ಡ್ 6 ಅನ್ನು ಗುಲಾಬಿ, ಕಡು ನೀಲಿ ಮತ್ತು ಬೆಳ್ಳಿಯ ಬಣ್ಣಗಳಲ್ಲಿ ನೀವು ಖರೀದಿಸಬಹುದು.

ಇಂದು Samsungನ ದೊಡ್ಡ ಈವೆಂಟ್: Galaxy Z Fold 6, Galaxy Z Flip 6 ಲಾಂಚ್

Galaxy Z Flip 6 ಫೀಚರ್ಸ್‌: ಇದು 6.6-ಇಂಚಿನ FHD+ ಡೈನಾಮಿಕ್ AMOLED 2X 120Hz ಡಿಸ್ಪ್ಲೇ ಮತ್ತು 3.4-ಇಂಚಿನ FHD ಕವರ್ ಡಿಸ್ಪ್ಲೇಯನ್ನು ಹೊಂದಿರಲಿದೆ. ಇದು Snapdragon 8 Gen 3 ಪ್ರೊಸೆಸರ್ ಪಡೆದಿದೆ. Galaxy Z Flip 6 2X ಡಿಜಿಟಲ್ ಜೂಮ್‌ನೊಂದಿಗೆ 50MP ಮುಖ್ಯ ಕ್ಯಾಮೆರಾ, ಕವರ್ ಡಿಸ್ಪ್ಲೇನಲ್ಲಿ 12MP ಅಲ್ಟ್ರಾ-ವೈಡ್ ಕ್ಯಾಮೆರಾ ಮತ್ತು ಒಳಗೆ 10MP ಫ್ರಂಟ್ ಕ್ಯಾಮೆರಾವನ್ನು ಹೊಂದಿರಲಿದೆ. ಇದು 4,000mAh ಸಾಮರ್ಥ್ಯದ ಬ್ಯಾಟರಿಯನ್ನು ಪಡೆದಿರಲಿದೆ.

ಗ್ಯಾಲಕ್ಸಿ ವಾಚ್ ಅಲ್ಟ್ರಾ, Galaxy Buds 3, Galaxy Ring ಲಾಂಚ್

ಇದಲ್ಲದೆ, ಈ ಸಮಾರಂಭದಲ್ಲಿ ಗ್ಯಾಲಕ್ಸಿ ವಾಚ್ ಅಲ್ಟ್ರಾವನ್ನು ಸಹ ಬಿಡುಗಡೆ ಮಾಡುವ ಸಾಧ್ಯತೆಯಿದೆ. ಈ ಸ್ಮಾರ್ಟ್ ವಾಚ್ 590mAh ಬ್ಯಾಟರಿ ಮತ್ತು Wear OS ಜೊತೆಗೆ One UI ವಾಚ್ 6.0, IP6X ಧೂಳಿನ ರಕ್ಷಣೆ, 10 ATM ಜಲನಿರೋಧಕ ರೇಟಿಂಗ್ ಮತ್ತು IP68 ರೇಟಿಂಗ್ ಅನ್ನು ಹೊಂದಿರುತ್ತದೆ. ಇದೇ ವೇಳೆ Galaxy Watch 7, Galaxy Buds 3 Pro, Galaxy Buds 3, Galaxy Ring ಜೊತೆಗೆ Galaxy Watch FE ಅನ್ನು ಸಹ ಲೋಕಾರ್ಪಣೆಗೊಳಿಸಬಹುದು.

Best Mobiles in India

English summary
Samsung Galaxy Unpacked 2024 Is Happening Today. happening live in Paris, France. Here's everything you need to know about what Samsung has in store.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+