Samsung; ಜುಲೈ 10ರಂದು ಗ್ಯಾಲಕ್ಸಿ ಅನ್‌ಪ್ಯಾಕ್ಡ್ ಈವೆಂಟ್ ! ನಿರೀಕ್ಷೆಗಳೇನು ?
ಮಾರುಟ್ಟೆಯಲ್ಲಿ ತನ್ನದೇ ಆದ ವಿಶೇಷ ಬೇಡಿಕೆ ಹೊಂದಿರುವ ಟೆಕ್ ದೈತ್ಯ ಸ್ಯಾಮ್‌ಸಂಗ್ (Samsung) ತನ್ನ ಬಹುನಿರೀಕ್ಷಿತ ಗ್ಯಾಲಕ್ಸಿ ಅನ್‌ಪ್ಯಾಕ್ಡ್ (Galaxy Unpacked) ಈವೆಂಟ್‌ಗೆ ಸಜ್ಜಾಗಿದೆ. ಈ ಕಾರ್ಯಕ್ರಮವನ್ನು ಜುಲೈ 10ರಂದು ನಡೆಸಲಿದೆ ಎಂದು ಕೆಲವು ವದಂತಿಗಳು ಸುಳಿವು ನೀಡಿವೆ. ಈ ಅನ್‌ಪ್ಯಾಕ್ಡ್ ಈವೆಂಟ್‌ನಲ್ಲಿ ಸಂಸ್ಥೆ ತನ್ನ ಬಹು ನಿರೀಕ್ಷಿತ ಹೊಸ ಫೋಲ್ಡ್ ಸ್ಮಾರ್ಟ್‌ಫೋನ್‌ಗಳು, ಗ್ಯಾಲಕ್ಸಿ ರಿಂಗ್, ಪ್ರಮುಖ ವಾಚ್‌ಗಳ ಸರಣಿಯನ್ನು ಲಾಂಚ್ ಮಾಡುವ ಸಾಧ್ಯತೆಗಳಿವೆ ಎಂದು ಈಗಾಗಲೆ ವದಂತಿಗಳು ಸುಳಿವು ನೀಡಿವೆ. ಇದೀಗ ಗ್ಯಾಲಕ್ಸಿ ಅನ್‌ಪ್ಯಾಕ್ಡ್ ಈವೆಂಟ್ ಕುರಿತು ದಿನಾಂಕ ಸೇರಿ ಕೆಲವು ಅಂಶಗಳು ಸೋರಿಕೆಯಾಗಿವೆ.
ಟಿಪ್‌ಸ್ಟರ್ Evan Blass ಅವರು ತಮ್ಮ ಎಕ್ಸ್ ಖಾತೆಯಲ್ಲಿ ಗ್ಯಾಲಕ್ಸಿ ಅನ್‌ಪ್ಯಾಕ್ಡ್ ಈವೆಂಟ್ ಕುರಿತು ದಿನಾಂಕದ ಸುಳಿವನ್ನು ನೀಡಿದ್ದಾರೆ. ಈ ಕುರಿತು ಎಕ್ಸ್‌ನಲ್ಲಿ GIF ಅನ್ನು ಹಂಚಿಕೊಂಡಿದ್ದಾರೆ. ಹಿಂದಿನ ವದಂತಿಗಳಿಗೆ ಹೊಂದಿಕೆಯಾಗುವಂತೆ ಈ ಈವೆಂಟ್ ಪ್ಯಾರಿಸ್‌ನಲ್ಲಿ ನಡೆಯಲಿದೆ ಎಂದು ವರದಿಗಳು ಖಚಿತಪಡಿಸುತ್ತವೆ. ಕಳೆದ ವರ್ಷ Galaxy Unpacked ಈವೆಂಟ್ ಜುಲೈ 26 ರಂದು ನಡೆದಿತ್ತು.

ಮುಂಬರುವ ಈವೆಂಟ್‌ನಲ್ಲಿ ಪ್ರಮುಖವಾಗಿ Samsung Galaxy Z ಫೋಲ್ಡ್ 6, Galaxy Z ಫ್ಲಿಪ್ 6, Galaxy Watch 7, Galaxy Watch 7 Ultra, Galaxy Buds 6 ಸರಣಿ, Galaxy Ring ಮತ್ತು Galaxy Tab 10 ಸರಣಿಗಳನ್ನು ಲಾಂಚ್ ಮಾಡಲಿದೆ ಎಂಬ ವದಂತಿಗಳಿವೆ.
Samsung Galaxy ಅನ್‌ಪ್ಯಾಕ್ಡ್ ಈವೆಂಟ್ 2024ರ ದಿನಾಂಕ:
ಗ್ಯಾಲಕ್ಸಿ ಅನ್‌ಪ್ಯಾಕ್ ಈವೆಂಟ್ ಮುಂದಿನ ತಿಂಗಳು ನಡೆಯುವ ನಿರೀಕ್ಷೆಯಿದೆ. ಇತ್ತೀಚಿನ ಸೋರಿಕೆಯ ಪ್ರಕಾರ, ಮುಂಬರುವ ಅನ್‌ಪ್ಯಾಕ್ಡ್ ಈವೆಂಟ್ ಜುಲೈ 10-2024 ರಂದು ನಡೆಯಲಿದೆ ಎಂದು ಹೇಳಲಾಗುತ್ತಿದೆ. ಈ ಈವೆಂಟ್ ಪ್ಯಾರಿಸ್‌ನಲ್ಲಿ ಸಂಜೆ 6:30 ಕ್ಕೆ ಜರುಗಲಿದೆ ಎಂದು ಹೇಳಲಾಗುತ್ತಿದೆ.
ಈ ಸೋರಿಕೆಯನ್ನು ಮೊದಲು ಟಿಪ್‌ಸ್ಟರ್ ಇವಾನ್ ಬ್ಲಾಸ್ ಗುರುತಿಸಿದ್ದು, ಮುಂಬರುವ ಈವೆಂಟ್‌ನ ಅಧಿಕೃತವಾಗಿ ಕಾಣುವ GIF ಅನ್ನು ಪೋಸ್ಟ್ ಮಾಡಿದ್ದಾರೆ. ಆದರೆ ಅವರ ಟ್ವೀಟ್‌ನಲ್ಲಿನ ಚಿತ್ರವನ್ನು ಕಾಪಿರೈಟ್ ಕಾರಣಕ್ಕೆ ತೆಗೆದುಹಾಕಲಾಗಿದೆ ಹಾಗಾಗಿ ಸೋರಿಕೆಯು ವಿಶ್ವಾಸಾರ್ಹವಾಗಿರಬಹುದು ಎಂದು ಹೇಳಲಾಗುತ್ತಿದೆ.
Samsung Galaxy Unpacked 2024 ಏನನ್ನು ನಿರೀಕ್ಷಿಸಬಹುದು:
ಮುಂಬರುವ ಅನ್‌ಪ್ಯಾಕ್ಡ್ ಈವೆಂಟ್‌ನಲ್ಲಿ ಸ್ಯಾಮ್‌ಸಂಗ್ ತನ್ನ ಹೊಸ Samsung Galaxy Z Fold 6 ಅನ್ನು US ನಲ್ಲಿ ಅಂದಾಜು ರೂ. 1,58,700 ರಿಂದ ಪ್ರಾರಂಭಿಸುವ ಸಾಧ್ಯತೆ ಇದೆ. ಈ ಬೆಲೆಯು ಅದರ ಹಿಂದಿನ ಸರಣಿಯಾದ Galaxy Z Fold 5 ಗಿಂತ $100 ಹೆಚ್ಚಿರಲಿದೆ ಎಂದು ಹೇಳಲಾಗುತ್ತಿದೆ.
ಯುಎಸ್ ನಲ್ಲಿ Galaxy Z Flip 6 ಇದರ 256GB ಮಾದರಿಗೆ $1,099 ಅಂದರೆ ಸುಮಾರು 92,000 ರೂ. ಬೆಲೆ ಇರಬಹುದು ಆದರೆ, ಭಾರತದಲ್ಲಿ ಇದು ರೂ. 1,09,999 ರಿಂದ ಪ್ರಾರಂಭವಾಗಬಹುದು ಎಂದು ಹೇಳಲಾಗುತ್ತಿದೆ. ಇದು Galaxy Z Flip 5 ಗಿಂತ $100 ದುಬಾರಿಯಾಗಿರಲಿದೆ.
ವದಂತಿಗಳ ಪ್ರಕಾರ Galaxy Watch 7 (40mm) ಬೆಲೆ USD 299 ರಿಂದ USD 310 ಇರಬಹುದು ಅಂದರೆ ಅಂದಾಜು 25,000 ರೂ. ಗಳಾಗಿವೆ ಇನ್ನು Galaxy Watch Ultra (40mm) ಇದರ ಬೆಲೆ USD 699 ಅದರೆ ಸುಮಾರು 58,400 ರೂ. ಗಳಿರಬಹುದು ಎಂದು ಹೇಳಲಾಗುತ್ತಿದೆ.
ಈ ವರ್ಷದ ಆರಂಭದಲ್ಲಿ ಲೇವಡಿ ಮಾಡಲಾದ ಸ್ಯಾಮ್‌ಸಂಗ್ ಗ್ಯಾಲಕ್ಸಿ ರಿಂಗ್ ಮುಂಬರುವ ಅನ್‌ಪ್ಯಾಕ್ಡ್ ಈವೆಂಟ್‌ನಲ್ಲಿ ಪೂರ್ಣವಾಗಿ ಪಾದಾರ್ಪಣೆ ಮಾಡುವ ನಿರೀಕ್ಷೆಯಿದೆ. ಹೆಚ್ಚುವರಿಯಾಗಿ ನಾವು ಮುಂಬರುವ ಈವೆಂಟ್‌ನಲ್ಲಿ Samsung Galaxy Tab S10, Tab S10 Plus, ಮತ್ತು Tab S10 Ultra ಮತ್ತು Galaxy Watch 7 ಸರಣಿಯನ್ನು ಸಹ ನೋಡುವ ಸಾಧ್ಯತೆಗಳಿವೆ.


Click it and Unblock the Notifications








